ಬಾಜಿ ಲೋಕದಲ್ಲಿ ಚೀನಾ ಆ್ಯಪ್‌ಗಳ ಕರಾಮತ್ತು

ಆನ್‌ಲೈನ್ ಪೋಕರ್‌ಗಳಲ್ಲಿ ಡ್ರ್ಯಾಗನ್‌ನದ್ದೇ ಪ್ರಾಬಲ್ಯ ಕಪ್ಪು ಹಣ ದಂಧೆಗೂ ರಹದಾರಿ.

ಗಿರೀಶ್ ಕೋಟೆ ಬೆಂಗಳೂರು.

ಚೀನಾದ ಟಿಕ್‌ಟಾಕ್ ಸೇರಿದಂತೆ 56 ಆ್ಯಪ್‌ಗಳನ್ನು ಕೇಂದ್ರ ಸರಕಾರ ನಿಷೇಧಿಸಿದ್ದರೂ ಆನ್‌ಲೈನ್ ಪೋಕರ್‌ನಲ್ಲಿ ಇವತ್ತಿಗೂ ಚೀನಾ ಆ್ಯಪ್‌ಗಳ ಪ್ರಾಬಲ್ಯವೇ ಮುಂದುವರಿದಿದೆ.

ವಿಶ್ವದಾದ್ಯಂತ ಆನ್‌ಲೈನ್‌ನಲ್ಲಿ ಬಾಜಿ ಕಟ್ಟಿ ಜೂಜಾಡುವವರು ಕೋಟ್ಯಂತರ ಮಂದಿ ಇದ್ದಾರೆ. ಬೆಂಗಳೂರಿನಲ್ಲೂ ಸಾವಿರಾರು ಮಂದಿ ಆನ್‌ಲೈನ್ ಪೋಕರ್‌ನ ಚಟಕ್ಕೆ ಬಿದ್ದು ಬೀದಿಗೆ ಬಿದ್ದವರಿದ್ದಾರೆ.
ಚಿಕ್ಕಪೇಟೆಯೊಂದರಲ್ಲೇ ನೂರಾರು ವ್ಯಾಪಾರಿಗಳು ನಿತ್ಯ ಆನ್‌ಲೈನ್ ಪೋಕರ್‌ಗೆ ಲಕ್ಷಗಟ್ಟಲೆ ಬಾಜಿ ಕಟ್ಟುವವರಿದ್ದಾರೆ.

ಕಾನೂನುಬಾಹಿರ ಆ್ಯಪ್‌ಗಳು
ಪೋಕರ್‌ಬಾಜಿ, ಸ್ಪಾರ್ಥನ್, ಅಡ್ಡಾ 62 ಸೇರಿದಂತೆ ಹತ್ತಾರು ಕಾನೂನುಬದ್ಧ ಪೋಕರ್ ಆ್ಯಪ್‌ಗಳಿವೆ. ಇವುಗಳ ಮೂಲಕ ಬಾಜಿ ಕಟ್ಟವವರು ಯಾವುದೇ ದೇಶದಲ್ಲಿದ್ದರೂ ಹಣ ಗೆದ್ದರೆ ಟಿಡಿಎಸ್ ಮತ್ತು ಆದಾಯ ತೆರಿಗೆ ಎರಡೂ ಕಡಿತಗೊಳ್ಳುತ್ತದೆ. ಸರಕಾರಕ್ಕೆ ಇದರಿಂದ ಆದಾಯವೂ ಬರುತ್ತದೆ. ಆದರೆ, ಕಾನೂನುಬದ್ಧವಲ್ಲದ ಚೀನಾ ಆ್ಯಪ್‌ಗಳು ಇನ್ನೂ ರಾಜಾರೋಷವಾಗಿ ಬಳಕೆಯಲ್ಲಿದ್ದು, ಪೋಕರ್ ಜಗತ್ತಿನಲ್ಲಿ ಪ್ರಾಬಲ್ಯ ಸಾಸಿವೆ.
ಪಿಪಿ ಪೋಕರ್, ಬೆಟ್ ಪೋಕರ್, ಟೋನಿ ಬೆಟ್, ಪಾಕೆಟ್ ಕೌ ಬಾಯ್ಸ್, ಓಪನ್ ಸ್ಪೇಸ್ ಸೇರಿದಂತೆ ಹಲವು ಆ್ಯಪ್‌ಗಳು ಚೀನಾ ಮೂಲದ್ದಾಗಿದ್ದು, ಯಾವುದೇ ತಡೆ ಇಲ್ಲದೆ ಚಾಲ್ತಿಯಲ್ಲಿವೆ.

ಬೆಂಗಳೂರು- ಗೋವಾದ ಜೂಜುಕೋರರು ಹೆಚ್ಚಾಗಿ ಪಿಪಿ ಪೋಕರ್‌ನಲ್ಲಿ ಆಡುತ್ತಾರೆ. ಚೀನಾ ಆ್ಯಪ್‌ಗಳಲ್ಲಿ ಪೋಕರ್ ಕಟ್ಟುವ ಬಾಜಿ ಮತ್ತು ಗೆಲ್ಲುವ ಹಣ ಎರಡಕ್ಕೂ ಲೆಕ್ಕ ಇಲ್ಲ. ಹೀಗಾಗಿ, ಇದೆಲ್ಲಾ ಕಪ್ಪು ಹಣದ ವಹಿವಾಟಿಗೆ ದಾರಿ ಮಾಡಿಕೊಟ್ಟಿದೆ ಎನ್ನುವ ಮಾತು ಗ್ಯಾಂಬ್ಲರ್‌ಗಳ ಬಾಯಲ್ಲೇ ಬರುತ್ತಿದೆ.

ಬಾಜಿಗಾರರ ಪತ್ತೆ ಕಷ್ಟ

ಕಾನೂನುಬಾಹಿರ ಆ್ಯಪ್‌ಗಳನ್ನು ನಿಷೇಧಿಸಬೇಕೇ ಹೊರತು ಜೂಜುಕೋರರು ಯಾವ ಆ್ಯಪ್‌ಗಳಲ್ಲಿ ಯಾವ ಹೆಸರಲ್ಲಿ ಕ್ಲಬ್‌ಗಳನ್ನು ರಚಿಸಿ ಜೂಜಾಡುತ್ತಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಹಲವರು ತಮ್ಮ ನಕಲಿ ಹೆಸರುಗಳಲ್ಲಿ ಸದಸ್ಯರಾಗಿರುತ್ತಾರೆ. ಆದ್ದರಿಂದ ಇವರನ್ನು ಪತ್ತೆ ಹಚ್ಚುವುದು ಕಷ್ಟ ಎನ್ನುತ್ತಾರೆ ಸೈಬರ್ ಪೊಲೀಸರು.

ಹೇಗೆ ನಡೆಯುತ್ತಿದೆ ಜೂಜು?
ಗೂಗಲ್ ಪ್ಲೇ ಸ್ಟೋರ್ ಅಥವಾ ಕೆಲವೊಂದು ಲಿಂಕ್‌ಗಳ ಮೂಲಕ ಚೀನಾ ಆ್ಯಪ್‌ಗಳು ಡೌನ್‌ಲೋಡ್ ಆಗುತ್ತವೆ. ಬಳಿಕ ಈ ಆ್ಯಪ್‌ಗಳಲ್ಲೇ ಹಲವರು ಸೇರಿ ಕ್ಲಬ್‌ಗಳನ್ನು ರಚಿಸಿಕೊಳ್ಳುತ್ತಾರೆ. ಜೂಜು ಕಟ್ಟಿ ಆಟ ಆಡುತ್ತಾರೆ. ಸ್ಥಳೀಯರೇ ರಚಿಸಿಕೊಂಡಿರುವ ಕ್ಲಬ್‌ಗಳಲ್ಲಾದರೆ ನಗದಿನ ರೂಪದಲ್ಲೇ ಹಣ ಕೈ ಬದಲಾಗುತ್ತದೆ. ಕ್ಲಬ್‌ನಲ್ಲಿ ಬೇರೆ ಬೇರೆ ದೇಶಗಳಲ್ಲಿನ ಜೂಜುಕೋರರು ಸದಸ್ಯರಾಗಿ ಆಡಿದರೆ ಬಿಟ್ ಕಾಯಿನ್ ಮತ್ತಿತರ ಕ್ರಿಪ್ಟೋ ಕರೆನ್ಸಿಗಳ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ, ಇದು ಕಳ್ಳ ಮಾರ್ಗದಲ್ಲಿ ಕಪ್ಪು ಹಣ ವರ್ಗಾವಣೆಗೂ ಅವಕಾಶ ಆಗುತ್ತದೆ ಎನ್ನುತ್ತಾರೆ ಅಪರಾಧ
ವಿಭಾಗದ ಪೊಲೀಸರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top