51422 ಒಟ್ಟು ಸೋಂಕಿತರು
35995 ಸೋಂಕುರಹಿತರು
1032 ಸಾವಿಗೀಡಾದವರು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ನಿಜವಾದರೂ ಅದೇ ಹೊತ್ತಿಗೆ ಸೋಂಕುರಹಿತರ ಪ್ರಮಾಣವೂ ಹೆಚ್ಚಿರುವುದು ಸ್ವಲ್ಪ ನೆಮ್ಮದಿ ನೀಡಿದೆ. ರಾಜ್ಯದ 51422 ಸೋಂಕಿತರ ಪೈಕಿ 37,280 ಮಂದಿಯಲ್ಲಿ ಯಾವ ಕನಿಷ್ಠ ಲಕ್ಷಣಗಳೂ ಇಲ್ಲ. ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಲಕ್ಷಣರಹಿತರು ಹೆಚ್ಚಾದಷ್ಟೂ ಅವರ ಚಿಕಿತ್ಸೆ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತು ಲಕ್ಷಣ ಇರುವವರ ಚಿಕಿತ್ಸೆಗೆ ಹೆಚ್ಚು ಅವಕಾಶ ದೊರೆಯುತ್ತದೆ. ಕೆಲವು ಜಿಲ್ಲೆಗಳಲ್ಲಂತೂ ಶೇ. 98 ಮಂದಿಗೆ ಲಕ್ಷಣಗಳೇ ಇಲ್ಲ.