ಚೀನಾ ವೈರಸ್‌ಗೆ ಈಕೆ ಕನ್ನಡಿ

ಕೊರೊನಾ ವೈರಸ್‌ ಚೀನಾದ್ದೇ ಸೃಷ್ಟಿ ಎಂದು ದಿಟ್ಟವಾಗಿ ಹೇಳುತ್ತಿದ್ದಾರೆ ಈ ವೈರಾಲಜಿಸ್ಟ್‌. – ಕೇಶವಪ್ರಸಾದ್‌ ಬಿ. ಚೀನಾದ ಕಮ್ಯುನಿಸ್ಟ್‌ ಪಕ್ಷದ ಉಸ್ತುವಾರಿಯಲ್ಲಿಯೇ, ಮಿಲಿಟರಿ ಪ್ರಯೋಗಾಲಯದಲ್ಲಿ ಕೋವಿಡ್‌-19 ವೈರಸ್‌ ಅನ್ನು ಸೃಷ್ಟಿಸಲಾಗಿದೆಯೇ ಹೊರತು, ವುಹಾನ್‌ನ ಮಾರುಕಟ್ಟೆಯಲ್ಲಿ ಅಲ್ಲ ಎಂದು ಸ್ವತಃ ಚೀನಾದ ಹಾಂಕಾಂಗ್‌ ಯೂನಿವರ್ಸಿಟಿಯಲ್ಲಿ ವೈರಾಲಜಿಸ್ಟ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಲಿ-ಮೆಂಗ್‌ ಯಾನ್‌ ಗಂಭೀರವಾಗಿ ಆರೋಪಿಸಿದ್ದಾರೆ. ಇದರೊಂದಿಗೆ ಅಮೆರಿಕ, ಯುರೋಪ್‌ ಇತ್ಯಾದಿ ಪಾಶ್ಚಿಮಾತ್ಯ ರಾಷ್ಟ್ರಗಳ ಗುಮಾನಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಚೀನಾದ ಕಮ್ಯುನಿಸ್ಟ್‌ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ […]

Read More

ಚೀನಾದಲ್ಲಿ ಇನ್ನೊಂದು ಮಾರಕ ವೈರಸ್‌ – ಜಗತ್ತಿನ ಮೇಲೆ ವೈರಾಣು ಯುದ್ಧ ಸಾರುತ್ತಿದೆಯಾ ಚೀನಾ?

ಚೀನಾದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ವೈರಸ್‌ ಈಗಾಗಲೇ 7 ಜನರ ಬಲಿ ಪಡೆದಿದೆ. ಯಾವುದೀ ಹೊಸ ವೈರಸ್‌? ಚೀನಾ ಏಕೆ ಕೊರೊನಾ ಸೇರಿದಂತೆ ಅನೇಕ ಮಾರಕ ವೈರಾಣುಗಳ ಆಡುಂಬೊಲವಾಗಿದೆ? ಉಣ್ಣಿಯಿಂದ ಹರಡುವ ಜ್ವರ ಕೊರೊನಾವನ್ನು ಹುಟ್ಟಿಸಿ ನಿರ್ಲಕ್ಷ್ಯದಿಂದ ಜಗತ್ತಿನಾದ್ಯಂತ ಹರಿಬಿಟ್ಟು ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಚೀನಾದಲ್ಲಿ ಇನ್ನೊಂದು ಮಾರಕ ವೈರಸ್‌ ಹರಡಲು ಆರಂಭವಾಗಿದೆ. ಇದರ ಮರಣ ಪ್ರಮಾಣ ಶೇ.30. ಅಂದರೆ ನೂರು ಮಂದಿಗೆ ಸೋಂಕು ತಾಕಿದರೆ ಮೂವತ್ತು ಮಂದಿ ಸಾಯುತ್ತಾರೆ. ವೈರಸ್ಸನ್ನು ಸಿವಿಯರ್‌ ಫಿವರ್‌ ವಿದ್‌ ತ್ರೋಂಬೋಸೈಟೋಪೇನಿಯಾ ಸಿಂಡ್ರೋಮ್‌ […]

Read More

ಕೋವಿಡ್‌ ಟೆಸ್ಟ್‌ ಕಡ್ಡಾಯವಲ್ಲ – ರೋಗದ ತೀವ್ರತೆ ಅನುಸರಿಸಿ ಚಿಕಿತ್ಸೆ ದೊರೆಯಲಿ

ಕಾರವಾರದಲ್ಲಿ ವೃದ್ಧರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ತೆರಳಿದಾಗ, ಕೋವಿಡ್‌ ಟೆಸ್ಟ್‌ನ ನೆಪ ಒಡ್ಡಿ ಚಿಕಿತ್ಸೆ ನಿರಾಕರಿಸಿದ, ಆಸ್ಪತ್ರೆಗಳಿಗೆ ಅಲೆದಾಡಿದ ಹಾಗೂ ಅವರು ಇದರಿಂದಾಗಿ ಉಂಟಾದ ವಿಳಂಬದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಇಂಥ ಹಲವಾರು ಘಟನೆಗಳು ನಡೆದಿದ್ದವು. ಹೆಚ್ಚಾಗಿ ಖಾಸಗಿ ಅಸ್ಪತ್ರೆಗಳವರು, ಗಂಭೀರ ಆರೋಗ್ಯ ಸ್ಥಿತಿಯಿಟ್ಟುಕೊಂಡು ಬರುತ್ತಿದ್ದ ರೋಗಿಗಳನ್ನು ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡು ಬನ್ನಿ ಎಂಬ ನೆಪ ನೀಡಿ ಮರಳಿ ಕಳುಹಿಸುತ್ತಿದ್ದರು ಹಾಗೂ ಅಂಥ ರೋಗಿಗಳು ದಾರಿಮಧ್ಯೆ ಅಸುನೀಗಿದ ಪ್ರಕರಣಗಳು ನಡೆದಿದ್ದವು. ಇದನ್ನು ಅನುಸರಿಸಿ […]

Read More

ಶವಸಂಸ್ಕಾರದ ಯೋಧರು – ಕೊರೊನಾ ಸಾವಿನ ಭೀತಿ ತೊಲಗಲಿ

ಕೋವಿಡ್‌ ಸೋಂಕಿನಿಂದ ಮೃತಪಟ್ಟ ಕನಕಪುರದ ವ್ಯಕ್ತಿರೊಬ್ಬರ ಅಂತ್ಯ ಸಂಸ್ಕಾರವನ್ನು ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತರಬೇತಿ ಪಡೆದು ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ನಡೆಸುತ್ತಿದ್ದು, ಭಾನುವಾರ ಕೂಡ ಮೂವರ ಶವಸಂಸ್ಕಾರ ನಡೆಸಿದ್ದಾರೆ. ಕೋವಿಡ್‌ನಿಂದ ಯಾರೇ ಮೃತಪಟ್ಟರೂ, ಅವರ ಅಂತ್ಯಸಂಸ್ಕಾರ ನಡೆಸಲು ಪ್ರತಿ […]

Read More

ಸೋಂಕದಿರಲು ತೆರೆದ ಬಾಗಿಲು

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಸಮಯದಲ್ಲಿಯೇ ಕೆಲವು ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗಾಳಿಸುದ್ದಿಗಳೂ ಹರಡುತ್ತಿವೆ. ಒಮ್ಮೊಮ್ಮೆ ಇಂಥ ಸುದ್ದಿಗಳು ಹಗ್ಗಕ್ಕೇ ಹೆದರುವವರ ಮೇಲೆ ಹಾವು ಎಸೆದಂತಾಗುತ್ತಿದೆ. ಕೋವಿಡ್‌-19 ವೈರಸ್‌ ಅನ್ನು ಇದುವರೆಗೂ ನಾವು ವರ್ಗೀಕರಿಸಿಕೊಂಡಿದ್ದು, ಮನುಷ್ಯ-ಮನುಷ್ಯರ ನಡುವಿನ ಸಂಪರ್ಕದಿಂದ ಹರಡಬಲ್ಲದ್ದೆಂದು. ಅದು ಗಾಳಿಯ ಮೂಲಕವೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯಿದೆಯೆಂದು ಆಸ್ಪ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿಯ ಪ್ರಾಧ್ಯಾಪಕರಾದ ಲಿಡಿಯಾ ಮೊರಾಸ್ಕಾ ಹಾಗೂ ಅಮೆರಿಕದ ಯೂನಿವರ್ಸಿಟಿ ಆಫ್‌ ಮೇರಿಲ್ಯಾಂಡ್‌ನ ಪ್ರಾಧ್ಯಾಪಕರಾದ ಡೊನಾಲ್ಡ್‌ ಮಿಲ್ಟನ್‌ ಜತೆಯಾಗಿ […]

Read More

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಬೈ

ಕೊರೊನಾ ಸೋಂಕು ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಫಲವಾಗಿದೆ; ಅದು ಚೀನಾ ಪಕ್ಷಪಾತಿಯಾಗಿದೆ ಎಂದು ಆರೋಪಿಸಿ ಅಮೆರಿಕ ಸಂಸ್ಥೆಯಿಂದ ಹೊರಬರಲು ಮುಂದಾಗಿದೆ. ಏನೀ ವಿವಾದ? ಅಮೆರಿಕದ ವಾದವೇನು? ಡಬ್ಲ್ಯುಎಚ್‌ಒ ಯಾಕೆ ಅನಿವಾರ್ಯ? ಅಮೆರಿಕದ ವಾದವೇನು? ಡಬ್ಲ್ಯುಎಚ್‌ಒ ಅದರ ನೀತಿ ನಿಯಮಾವಳಿಯ ಪ್ರಕಾರ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಚೀನಾದ ಪಕ್ಷಪಾತಿಯಾಗಿ ವರ್ತಿಸುತ್ತಿದೆ. ಕಳೆದ ಡಿಸೆಂಬರ್‌ನಲ್ಲೇ ಚೀನಾದ ವುಹಾನ್‌ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಅದನ್ನು ಡಬ್ಲ್ಯುಎಚ್‌ಒಗೆ ತಿಳಿಸಲು ತಡ ಮಾಡಿತು. ನಂತರವೂ ಡಬ್ಲ್ಯುಎಚ್‌ಒ ವಿಶ್ವ ಸಮುದಾಯದ ಮುಂದೆ […]

Read More

ಗಾಳಿಯಲ್ಲಿ ಕೋವಿಡ್‌ ವೈರಸ್‌ ಪಸರಿಸುವ ಸಾಧ್ಯತೆ ಕಡಿಮೆ

-ಸುಧೀಂದ್ರ ಹಾಲ್ದೊಡ್ಡೇರಿ.  ಕೊರೊನಾ ವೈರಸ್‌ ಗಾಳಿಯಿಂದಲೂ ಹರಡಬಹುದೆಂಬ ಮುನ್ನೆಚ್ಚರಿಕೆಯನ್ನು ನೂರಾರು ವಿಜ್ಞಾನಿಗಳು ವಿಶ್ವ ಸ್ವಾಸ್ಥ್ಯ ಸಂಸ್ಥೆಗೆ ನೀಡಿದ್ದಾರೆಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ. ಈ ಬಗ್ಗೆ ನಾವು ತೀರಾ ಭಯಭೀತರಾಗಬೇಕಿಲ್ಲ. ಆ ಹೇಳಿಕೆಯೇ ನಿಜವಾಗಿದ್ದಲ್ಲಿ, ಇಷ್ಟು ಹೊತ್ತಿಗೆ ಈ ಜಗತ್ತಿನ ಮುಕ್ಕಾಲು ಮಂದಿ ಕೋವಿಡ್‌-19 ಸೋಂಕಿತರಾಗುತ್ತಿದ್ದರು. ಕೋಟಿಗಟ್ಟಲೆ ಜನ ಸಾವಿಗೀಡಾಗುತ್ತಿದ್ದರು. ಹಾಗಿದ್ದರೆ, ಈ ಸುದ್ದಿಯ ಹಿನ್ನೆಲೆಯೇನು? ವಿದ್ವಜ್ಜನರು ವೈರಸ್‌ ಸೋಂಕಿತರ ಉಗುಳು, ಸಿಂಬಳದ ಹನಿಗಳ ಸಿಂಚನ ನಮಗೆ ತಾಕಿದರೆ, ಅದರಲ್ಲಿರಬಹುದಾದ ವೈರಸ್‌ಗಳು ನಮ್ಮ ಮೂಗು, ಬಾಯಿ, ಕಣ್ಣುಗಳ ಮೂಲಕ […]

Read More

ಮಾನವೀಯ ಅಂತ್ಯಸಂಸ್ಕಾರದ ಅಗತ್ಯ – ಕೋವಿಡ್‌ ಮೃತರನ್ನು ಗೌರವದಿಂದ ಕಳಿಸಿಕೊಡೋಣ

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಪರಿಸ್ಥಿತಿ ಗೋಜಲಾಗಿದೆ. ಕೆಲವು ಕಡೆ ಶವಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಕೆಲವು ಕಡೆ ಅಮಾನವೀಯವಾಗಿ ನಾಲ್ಕಾರು ಹೆಣಗಳನ್ನು ಒಟ್ಟಿಗೇ ಗುಂಡಿಗೆಸೆದಿರುವುದು ವಿಡಿಯೋ ಚಿತ್ರೀಕೃತಗೊಂಡು ವೈರಲ್‌ ಆದ ಬಳಿಕ, ಜನರಲ್ಲಿ ಭೀತಿಯೂ ತಲೆದೋರಿದೆ. ಕೋವಿಡ್‌ ಪೀಡಿತರನ್ನು ದೂರವಿಟ್ಟು ನಡೆಸಿಕೊಳ್ಳುವುದು ಸಹಜ, ಯಾಕೆಂದರೆ ಸೋಂಕು ಹರಡುವ ಭಯವಿದೆ. ಆದರೆ ಶವಸಂಸ್ಕಾರ ಕನಿಷ್ಠ ಗೌರವಯುತವಾಗಿ ನಡೆಸಬೇಕು ಎಂಬುದು ಮಾನವೀಯ ಸಮಾಜದಲ್ಲಿ ನಂಬಿಕೆಯಿಟ್ಟಿರುವ ಎಲ್ಲರ ಕಳಕಳಿ. ಸತ್ತವರನ್ನು ಸರಿಯಾಗಿ ಕಳಿಸಿಕೊಡಲಿಲ್ಲವಲ್ಲ ಎಂಬುದು ಬಂಧುಗಳಿಗೆ ನಿರಂತರ ಶೋಕವಾಗಬಾರದು. ಕೋವಿಡ್‌ನಿಂದ ಮೃತರಾದವರನ್ನು ಮಣ್ಣು ಮಾಡುತ್ತಿರುವ […]

Read More

ರೋಗ ಲಕ್ಷಣವಿಲ್ಲದವರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ! – ಡಬ್ಲ್ಯೂಎಚ್ಒ ಹೇಳಿಕೆಯಿಂದ ಜಗತ್ತಿನಾದ್ಯಂತ ಚರ್ಚೆ ಶುರು

ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್-19 ವೈರಸ್‌ನ ಯಾವುದೇ ಲಕ್ಷ ಣಗಳು ತೋರದವರಿಂದ (ಅಸಿಮ್ಟಮ್ಯಾಟಿಕ್) ಸೋಂಕು ಪ್ರಸರಣ ಸಾಧ್ಯತೆ ಕಡಿಮೆ ಎಂಬ ಹೊಸ ಪ್ರತಿಪಾದನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದುವರೆಗೆ ಸೋಂಕು ಲಕ್ಷಣವಿಲ್ಲದ ವ್ಯಕ್ತಿ ಯಾರ ಅರಿವಿಗೂ ಬಾರದಂತೆ ಹಲವರನ್ನು ಸೋಂಕಿನ ಸುಳಿಗೆ ಸಿಲುಕಿಸುವ ಅಪಾಯವಿದೆ ಎಂಬ ಆತಂಕವಿತ್ತು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್-19ಗೆ ಸಂಬಂಧಿಸಿದ ತಾಂತ್ರಿಕ ತಂಡದ ಮುಖ್ಯಸ್ಥೆಯಾಗಿರುವ ಡಾ. ಮಾರಿಯಾ ವ್ಯಾನ್ ಕೆರ್ಕೋವ್ ಅವರು, ‘‘ಲಭ್ಯವಿರುವ ಕೆಲವು ಅಧ್ಯಯನಗಳ ವರದಿಯಾಧಾರ ಮೇಲೆ ಹೇಳುವುದಾದರೆ ಅಸಿಮ್ಟಮ್ಯಾಟಿಕ್ […]

Read More

ಜೀವನ ಉಳಿಸಲು ಜೀವವೈವಿಧ್ಯ

ಮೇ 22 ವಿಶ್ವ ಜೀವವೈವಿಧ್ಯ ದಿನ. ಜೀವ ವೈವಿಧ್ಯತೆಯ ಮಹತ್ವವನ್ನು ಅರ್ಥ ಮಾಡಿಸಲು ವಿಶ್ವ ಸಂಸ್ಥೆ ಈ ದಿನವನ್ನು ಮುಡಿಪಾಗಿಟ್ಟಿದೆ. ಕೊರೊನಾ ಕಾಡುತ್ತಿರುವ ಹೊತ್ತಿನಲ್ಲಿಈ ದಿನ ಪ್ರಸ್ತುತ. ‘‘ಇನ್ನಾದರೂ ನಮ್ಮ ಜೀವವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದನ್ನ ಉಳಿಸಲು ಪಣ ತೊಡದಿದ್ದರೆ ಮಾನವನೂ ಸರ್ವನಾಶವಾಗುವ ದಿನ ದೂರವಿಲ್ಲ,’’ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹೆಚ್ಚುತ್ತಿರುವ ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿಈ ಮಾತು. ಭೂಮಿಯಲ್ಲಿ ಗಿಡಮೂಲಿಕೆ, ಕ್ರಿಮಿಕೀಟಗಳೂ ಸೇರಿದಂತೆ ಕೋಟ್ಯಂತರ ಜೀವಿಗಳಿವೆ. ಇವುಗಳ ಜೀವನ ಒಂದಕ್ಕೊಂದು ಹೆಣೆದುಕೊಂಡಿವೆ. ಆಹಾರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top