ವೈದ್ಯಕೀಯ ಸನ್ನದ್ಧತೆ ಅಗತ್ಯ: ಆರೋಗ್ಯ ಸೇವೆಯ ಗುಣಮಟ್ಟ ಪರೀಕ್ಷೆಯಾಗಲಿದೆ

ನಮ್ಮ ವೈದ್ಯಕೀಯ ವ್ಯವಸ್ಥೆ ಎಷ್ಟು ದೃಢವಾಗಿದೆ ಎಂಬ ಪರೀಕ್ಷೆಗೆ ರಂಗ ಸಜ್ಜಾಗುತ್ತಿರುವಂತಿದೆ. ಕಳೆದೆರಡು ದಿನಗಳಲ್ಲಿ ದಿನವಹಿ ಆರುನೂರಕ್ಕೂ ಹೆಚ್ಚು ಕೋವಿಡ್‌-19 ಕೇಸುಗಳು ದಾಖಲಾಗಿವೆ. ಮಾರ್ಚ್‌ 24ರಿಂದಲೇ ಲಾಕ್‌ಡೌನ್‌ ಘೋಷಿಸಿದ್ದರೂ ಈಗಾಗಲೇ ವೈರಸ್‌ ಅಜ್ಞಾತ ದಾರಿಗಳಲ್ಲಿ ಹಲವರನ್ನು ತಲುಪಿರುವ ಶಂಕೆ ಇದ್ದು, ಮುಂದಿನ ವಾರದಲ್ಲಿ ಅದರ ನಿಜಸಂಖ್ಯೆ ಗೊತ್ತಾಗಲಿದೆ. ದೇಶದಲ್ಲಿ ವೈರಸ್‌ ಹರಡುವಿಕೆ ಈ ವಾರದಲ್ಲಿ ಇಳಿಯಬಹುದೆಂಬ ಭರವಸೆ ನಮಗೆ ಅಗತ್ಯ; ಆದರೆ ಲಕ್ಷಾಂತರ ರೋಗಿಗಳ ಸಂಖ್ಯೆ ಹಾಗೂ ಅವರಿಂದ ನಮ್ಮ ಆರೋಗ್ಯ ಸೇವೆಯ ಮೇಲೆ ಆಗಬಹುದಾದ ಒತ್ತಡದ […]

Read More

ವೈದ್ಯರ ಮೇಲೆ ಹಲ್ಲೆ ಖಂಡನೀಯ: ಸಮುದಾಯಕ್ಕೆ ಹಾನಿ ಮಾಡಲಿರುವ ವರ್ತನೆ

ಕೊರೊನಾ ವೈರಸ್ ಶಂಕಿತರ ಆರೋಗ್ಯ ತಪಾಸಣೆಗಾಗಿ ತೆರಳುತ್ತಿರುವ ವೈದ್ಯಕೀಯ ಸಿಬ್ಬಂದಿಯ ಮೇಲೆ ಕೆಲವರು ಗುಂಪುಗೂಡಿ ಹಲ್ಲೆ ನಡೆಸುತ್ತಿರುವ ಘಟನೆ ದೇಶದ ಕೆಲವು ಕಡೆಗಳಲ್ಲಿ ವರದಿಯಾಗಿದೆ. ಬೆಂಗಳೂರಿನ ಒಂದು ಬಡಾವಣೆಯಲ್ಲಿ ವೈದ್ಯಕೀಯ ತಪಾಸಣೆಗೆ ಹೋದ ಆಶಾ ಕಾರ್ಯಕರ್ತರ ಮೇಲೆ ಸ್ಥಳೀಯ ನಿವಾಸಿಗಳ ಗುಂಪು ಹಲ್ಲೆ ನಡೆಸಿದೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಿವಾಸಿಗಳ ತಪಾಸಣೆಗೆ ಬಂದಿದ್ದ ಆರೋಗ್ಯ ಸೇವೆ ಸಿಬ್ಬಂದಿಯನ್ನು ಸ್ಥಳೀಯರ ಗುಂಪು ಹಿಗ್ಗಾಮುಗ್ಗಾ ಥಳಿಸಿ ಓಡಿಸಿದೆ. ಮಧ್ಯಪ್ರದೇಶದ ಸಿಲಾವತ್‌ಪುರದಲ್ಲಿ, ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ, ಉತ್ತರ ಪ್ರದೇಶದ ಮೀರತ್‌ನಲ್ಲೂ ಹೀಗೆ […]

Read More

ಸಾಮಾಜಿಕ ಹೊಣೆಗಾರಿಕೆ ಇರಲಿ: ಸಮುದಾಯ ಕಾಯಿಲೆ ಹರಡುವಿಕೆ ತಡೆಯಬೇಕು

ದಿಲ್ಲಿಯ ನಿಜಾಮುದ್ದೀನ್‌ ತಬ್ಲಿಘ್‌-ಇ-ಜಮಾತ್‌ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿರುವುದು ದೇಶದ ಆತಂಕಕ್ಕೆ ಕಾರಣವಾಗಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಇತರ ರಾಜ್ಯಗಳಿಗೆ ಸೇರಿದ ಸಾವಿರಾರು ಮಂದಿ ಜಮಾತ್‌ ಸಭೆಯಲ್ಲಿ ಭಾಗವಹಿಸಿ ವಾಪಸಾಗಿ ನಾನಾ ಕಡೆ ಸಂಚರಿಸಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ತಬ್ಲಿಘ್‌-ಇ-ಜಮಾತ್‌ ಸಭೆಯಲ್ಲಿ ಭಾಗವಹಿಸಿ ವಾಪಸಾದ ಕರ್ನಾಟಕದ ಸಿರಾದ ವೃದ್ಧ, ಆಂಧ್ರ ಮತ್ತು ತೆಲಂಗಾಣದ ತಲಾ ಓರ್ವರು ಸೇರಿ ಒಟ್ಟು ಹತ್ತಕ್ಕೂ […]

Read More

ಬಡವರ ಮರುವಲಸೆ ಸಮಸ್ಯೆ ನೀಗಿಸುವುದು‌ ತುರ್ತು ಆದ್ಯತೆಯಾಗಲಿ

ಉತ್ತರ ಭಾರತದ ನಾನಾ ಮೆಟ್ರೋ ನಗರಗಳಿಂದ ಹಳ್ಳಿಗಳ ಕಡೆಗೆ ದೊಡ್ಡ ಪ್ರಮಾಣದ ಮರು ವಲಸೆ ಆರಂಭವಾಗಿದೆ. ದಿನದ ಕೂಳು ಸಂಪಾದಿಸಲೆಂದು ನಗರಗಳಿಗೆ ಬಂದು ಕೂಲಿ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದವರು, ನಾನಾ ಬಗೆಯಲ್ಲಿ ದಿನದ ಸಂಪಾದನೆಯನ್ನೇ ನೆಚ್ಚಿಕೊಂಡು ಇದ್ದವರು ಈಗ ಲಾಕ್‌ಡೌನ್‌ ಪರಿಣಾಮ ಸಂಪಾದನೆಗೆ ದಾರಿ ಕಾಣದೆ, ತಮ್ಮ ಹಳ್ಳಿಗಳ ದಾರಿ ಹಿಡಿದಿದ್ದಾರೆ. ರೈಲ್ವೆ ಸೇರಿದಂತೆ ಸಾರಿಗೆ ಸಂಪರ್ಕಗಳನ್ನು ರದ್ದುಪಡಿಸಿರುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಕಾರ್ಮಿಕರು ನಡೆದೇ ಹೊರಟಿದ್ದಾರೆ. ಇಂಥದೊಂದು ಅಡ್ಡ ಪರಿಣಾಮವನ್ನು ಊಹಿಸಿರದ ಸರಕಾರ ಥಟ್ಟನೆ ಎಚ್ಚೆತ್ತುಕೊಂಡು […]

Read More

ಸಂಯಮ ಅರಿಯುವ ಕಾಲ: ಕೊರೊನಾ ವಿರುದ್ಧ ಒಗ್ಗೂಡಿ ಹೋರಾಡೋಣ

ಕೊರೊನಾ ವೈರಸ್‌ನಿಂದಾಗಿ ನಾವೀಗ ಒಂದು ರೀತಿಯ ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ. ಕಣ್ಣಿಗೆ ಕಾಣುವ ವೈರಿಯ ವಿರುದ್ಧದ ಹೋರಾಟ ಸುಲಭ. ಆದರೆ, ಅದೃಶ್ಯ ವೈರಿ ವಿರುದ್ಧದ ಹೋರಾಟ ಕಷ್ಟ. ಹಾಗಂತ, ಮೈಮರೆತು ಕೂರುವಂತಿಲ್ಲ. ಇಡೀ ಮನುಕುಲಕ್ಕೆ ಕಂಟಕವಾಗುತ್ತಿರುವ ಈ ಕೊರೊನಾ ವಿರುದ್ಧ ಸರಕಾರಗಳ ಜೊತೆಗೆ ಕೈಜೋಡಿಸುತ್ತಲೇ ನಮ್ಮ ನೆಲೆಯಲ್ಲಿನಾವು ಮಾಡಬೇಕಾದ ಕರ್ತವ್ಯಗಳನ್ನು ಚಾಚೂ ತಪ್ಪದೆ ನೆರವೇರಿಸಬೇಕಿದೆ. ಸೋಂಕು ಮತ್ತಷ್ಟು ವಿಸ್ತರಿಸದಂತೆ ನೋಡಿಕೊಳ್ಳಬೇಕಿದೆ. ಕೊರೊನಾ ವೈರಾಣು ಸೃಷ್ಟಿಸಿರುವ ಈ ಸಂದಿಗ್ಧ ಪರಿಸ್ಥಿತಿಯು ನಮ್ಮ ಶಿಸ್ತು, ಸಂಯಮ, ಸ್ವಯಂ ನಿಯಂತ್ರಣ, ಸಾಮಾಜಿಕ ಕಾಳಜಿ, […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top