ಪುರಿ ಜಗನ್ನಾಥನ ಜಾಗತಿಕ ರಥಯಾತ್ರೆ

– ಡಾ.ಆರತೀ ವಿ.ಬಿ. ಓಡಿಶಾದ ಪುರಿ ಕ್ಷೇತ್ರದ ಜಗನ್ನಾಥ ರಥಯಾತ್ರೆಯು ಜಗದ್ವಿಖ್ಯಾತ. ಭವ್ಯ ಸಾಂಸ್ಕೃತಿಕ ಇತಿಹಾಸವಿರುವ ಈ ರಥಯಾತ್ರೆಯಲ್ಲಿ ನೆರೆಯುವ ಭಕ್ತಸ್ತೋಮದ ಭಕ್ತಿಕ್ತ್ಯುತ್ಸಾಹಗಳಿಗಂತೂ ಎಲ್ಲೆಯೇ ಇರದು! ಯಾವುದೇ ಔಪಚಾರಿಕ ಆಹ್ವಾನವಿಲ್ಲದೆ ಬಂದು ನೆರೆಯುವ ದೇಶವಿದೇಶದ ಲಕ್ಷಗಟ್ಟಲೆ ಜನ ಶ್ರದ್ಧೆಯು ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ರಥಯಾತ್ರೆಯ ಸಂದರ್ಭದಲ್ಲಿ ಓಡಿಶಾದ ಪ್ರಾದೇಶಿಕ ಸಾಹಿತ್ಯ- ಕಲೆ- ಕ್ರೀಡೆಗಳೂ, ಧಾರ್ಮಿಕ ಕಲಾಪಗಳೂ, ವ್ಯಾಪಾರ- ಪ್ರವಾಸೋದ್ಯಮಗಳೂ ಗರಿಗೆದರಿ ನಿಲ್ಲುತ್ತವೆ! ಭಾರತದ ಪ್ರಾಚೀನ ರಥೋತ್ಸವಗಳ ಪೈಕಿ ಒಂದಾದ ಇದು, ವಿಶೇಷವೂ ವಿಭಿನ್ನವೂ ಆದದ್ದು. ಪುರಿ ಕ್ಷೇತ್ರವು ಭಾರತೀಯರು […]

Read More

ಜೋಹ್ರಾಳ ಈ ಚಿತ್ರಕ್ಕೆ ಯಾವ ಪ್ರಶಸ್ತಿ?

ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆಗಳನ್ನಷ್ಟೇ ತೋರಿಸುವ ಫೋಟೊಗಳನ್ನು ತೆಗೆದ ಮೂವರಿಗೆ ಈ ಬಾರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಕೊಡಮಾಡಲಾಗಿದೆ. ಅಲ್ಲಿ ಉಗ್ರರ ದಾಳಿಗೆ ಬಲಿಯಾದ ಯೋಧರ ಕುಟುಂಬಗಳ ಕಣ್ಣೀರು ಅವರ ಕ್ಯಾಮೆರಾದ ಕಣ್ಣಿಗೆ ಬೀಳಲೇ ಇಲ್ಲ. – ರಮೇಶ್‌ ಕುಮಾರ್ ನಾಯಕ್. ‘ಪ್ರತಿಷ್ಠಿತ’ ಎಂಬ ಲೇಬಲ್ ಅಂಟಿಸಿಕೊಂಡಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೇಶ ವಿರೋಧಿ, ದೇಶವಾಸಿಗಳ ಭಾವನೆ ವಿರೋಧಿ ಸರಕುಗಳ ಸರದಾರರನ್ನು ಹುಡುಕಿಕೊಂಡು ಬರುವುದು ಹೊಸ ಸಂಗತಿಯೇನಲ್ಲ. ಭಾರತದ ಉನ್ನತ ಸಂಸ್ಕೃತಿ, ಆದರ್ಶ, ಆಚಾರ-ವಿಚಾರ, ಉದಾತ್ತ ಮನೋಭಾವ, ಮಾನವೀಯ […]

Read More

ಕ್ಯಾಪ್ಟನ್ ಒಬ್ಬರೇ ಬ್ಯಾಟಿಂಗ್ ಮಾಡಿದ್ರೆ ಸಾಕೆ?

  – ಶಶಿಧರ ಹೆಗಡೆ.   ‘‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ…,’’ ಎಂಬ ಆಡುಭಾಷೆಯ ಮಾತೊಂದಿದೆ. ಯಾರದ್ದಾದರೂ ತಪ್ಪು ಎತ್ತಿ ತೋರಿಸಲು ಹೀಗೆ ಹೇಳುವುದುಂಟು. ಆದರೆ, ಇದರ ಅರ್ಥವನ್ನು ಸರಳವಾಗಿ ಹಾಗೂ ಸಕಾರಾತ್ಮಕ ದೃಷ್ಟಿಯಿಂದಲೇ ಗ್ರಹಿಸೋಣ. ಅಂದರೆ ಮನೆಯ ಹಿರಿಯರು ಸಂಸ್ಕಾರವಂತರಾದರೆ ಅದು ಇತರರಿಗೂ ಬಳುವಳಿಯಾಗಿ ಹೋಗುತ್ತದೆ. ಹಿರಿಯರು ತಪ್ಪು ಹೆಜ್ಜೆಯಿಟ್ಟರೆ ಕಿರಿಯರು ಅದನ್ನು ಬಹುಬೇಗ ಕಲಿತುಕೊಂಡು ಬಿಡುತ್ತಾರೆ. ಹಾಗಾಗಿ ಕುಟುಂಬದ ಎಲ್ಲ ಸದಸ್ಯರ ಮೇಲೆ ಪ್ರಭಾವ ಬೀರಿ ಅವರನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಛಾತಿ ಮನೆಯ ಯಜಮಾನ/ ಯಜಮಾನತಿಗೆ […]

Read More

ದುರಂತಗಳ ಸರಣಿ ತಪ್ಪಲಿ – ಕಾರ್ಮಿಕರ ಬದುಕಿಗೆ ಬೇಕು ಮಾನವೀಯ ಸ್ಪರ್ಶ

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ರೈಲ್ವೆ ಹಳಿಯ ಹಾದಿ ಹಿಡಿದು ಕಾಲ್ನಡಿಗೆಯಲ್ಲಿ ತಮ್ಮೂರಿಗೆ ವಾಪಸ್ ಹೊರಟಿದ್ದ ವಲಸೆ ಕಾರ್ಮಿಕರಲ್ಲಿ 16 ಮಂದಿ, ರೈಲಿಗೆ ಸಿಕ್ಕಿ ಸತ್ತು ಹೋಗಿದ್ದಾರೆ. ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡ ಕಾರ್ಮಿಕರು ಔರಂಗಾಬಾದ್ ಜಿಲ್ಲೆಯ ಜಲ್ನಾದಿಂದ ತಮ್ಮ ತವರು ರಾಜ್ಯ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದರು. ನಡೆದು ದಣಿದು ರೈಲು ಹಳಿಗೆ ತಲೆ ಆನಿಸಿ ಮಲಗಿದ್ದವರು ರೈಲು ಹರಿದು ಸತ್ತಿದ್ದಾರೆ. ವಿಪರ್ಯಾಸ ಎಂದರೆ, ಇವರು ರಸ್ತೆಯ ಮೂಲಕ ನಡೆದು ಹೋದರೆ ಪೊಲೀಸರು ತಡೆಯುತ್ತಾರೆಂಬ ಭಯದಿಂದ ರೈಲು ಹಳಿಯಲ್ಲಿ […]

Read More

ಆಯುರ್ವೇದವೇ ಮುಂದಿನ ದಾರಿ?

– ರಾಮಸ್ವಾಮಿ ಹುಲಕೋಡು. ಇತ್ತೀಚೆಗಷ್ಟೇ ಬೆಂಗಳೂರಿನ ಸಂಸ್ಥೆಯೊಂದು ದೇಶದಲ್ಲಿಯೇ ಮೊತ್ತಮೊದಲ ಆಯುರ್ವೇದದ ಟೆಲಿಮೆಡಿಸಿನ್ ಸರ್ವಿಸ್ ಆರಂಭಿಸಿದೆ. ಜರ್ಮನಿ, ರಷ್ಯಾ, ಅಮೆರಿಕ, ಉತ್ತರ ಐರೋಪ್ಯ ರಾಷ್ಟ್ರಗಳಿಂದ ಒಂದರ ಹಿಂದೊಂದರಂತೆ ಕರೆಗಳು ಬರುತ್ತಿದ್ದು, ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ, ಕೆಲವರು ಚಿಕಿತ್ಸೆಯನ್ನೂ ಪಡೆಯಲಾರಂಭಿಸಿದ್ದಾರೆ. ಆನ್‌ಲೈನ್‌ನಲ್ಲಿ  ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳಿಗೆ ಬೇಡಿಕೆ ದುಪ್ಪಟ್ಟು ಹೆಚ್ಚಾಗಿದೆ. ಮಾರುಕಟ್ಟೆ ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೆಲವು ಆನ್‌ಲೈನ್‌ ಔಷಧ ಮಾರಾಟ ಕಂಪನಿಗಳ ವಕ್ತಾರರು. ಕೊರೊನಾ ಕಾಣಿಸಿಕೊಂಡ ನಂತರ […]

Read More

ದುಷ್ಟ ಪ್ರವೃತ್ತಿಯ ಅನಾವರಣ – ದಿಲ್ಲಿಯ ಘಟನೆ ಮರುಕಳಿಸದಿರಲಿ

ಸಾಮಾಜಿಕ ಜಾಲತಾಣ ಇನ್ಸ್‌ಟಾಗ್ರಾಂನಲ್ಲಿ ರಹಸ್ಯ ಗ್ರೂಪ್ ರಚಿಸಿಕೊಂಡು ಸಹಪಾಠಿ ವಿದ್ಯಾರ್ಥಿನಿಯರನ್ನು ಗ್ಯಾಂಗ್ ರೇಪ್ ಮಾಡುವ ಬಗ್ಗೆ ಹೊಂಚು ಹಾಕುತ್ತಿದ್ದ ದಿಲ್ಲಿಯ ಪ್ರತಿಷ್ಠಿತ ವರ್ಗದ ವಿದ್ಯಾರ್ಥಿಗಳ ಬಳಗವೊಂದನ್ನು ದಿಲ್ಲಿ ಪೊಲೀಸರು ಭೇದಿಸಿದ್ದಾರೆ. ಇದರ ಅಡ್ಮಿನ್‌ನನ್ನು ಬಂಧಿಸಿದ್ದು, ಆತ ಸೇರಿದಂತೆ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 18ರ ಹರೆಯದ ಈ ಅಡ್ಮಿನ್‌ನ್ನ ಗ್ರೂಪ್‌ನಲ್ಲಿ ಹಲವು ಅಪ್ರಾಪ್ತ ವಯಸ್ಕರೂ ಇದ್ದಾರೆ. ಈ ಪ್ರಕರಣವನ್ನು ಒಬ್ಬಾಕೆ ವಿದ್ಯಾರ್ಥಿನಿ ಬಯಲಿಗೆಳೆದಿದ್ದಳು. ಈ ವಿದ್ಯಾರ್ಥಿನಿಯ ಫೋಟೋವನ್ನೂ ತಿದ್ದಿ ನಗ್ನಚಿತ್ರಕ್ಕೆ ಜೋಡಿಸಿ ಈ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಈ […]

Read More

ಸವಾಲಿನ ನಡುವೆ ಉತ್ಪಾದನೆಗೆ ಕೈಗಾರಿಕೆಗಳು ರೆಡಿ

ಲಾಕ್‌ಡೌನ್‌ ಎರಡು ವಾರಗಳ ತನಕ ಮುಂದುವರಿದಿದ್ದರೂ, ಹಸಿರು ಮತ್ತು ಕೇಸರಿ ವಲಯಗಳಲ್ಲಿ ಗಣನೀಯ ಸಡಿಲವಾಗಿರುವುದರಿಂದ ರಾಜ್ಯದಲ್ಲಿ ಉದ್ದಿಮೆಗಳ ಚಟುವಟಿಕೆಗಳನ್ನು ಪುನರಾರಂಭಿಸಲು ನಾನಾ ಇಂಡಸ್ಟ್ರಿಗಳು ಪೂರ್ವ ಸಿದ್ಧತೆ ನಡೆಸುತ್ತಿವೆ. ಹಾಗಿದ್ದೂ, ರಾಜ್ಯವೂ ಸೇರಿದಂತೆ ದೇಶದ ಹಲವು ಉದ್ದಿಮೆಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದೂ ಸುಳ್ಳಲ್ಲ. ವಾಣಿಜ್ಯ ಪರ ಸಂಘಟನೆಗಳು ಶೀಘ್ರದಲ್ಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೂ, ಉದ್ಯಮಿಗಳು ಹಿಂದೆಂದೂ ಕಂಡರಿಯದ ಸವಾಲುಗಳು ಮತ್ತು ಅನಿಶ್ಚಿತತೆಯ ನಿರೀಕ್ಷೆಯಲ್ಲಿದ್ದಾರೆ. ಕೋವಿಡ್-19 ಬಿಕ್ಕಟ್ಟು ಮತ್ತು ಅನಿಶ್ಚಿತತೆಯ ಪರಿಣಾಮ ಗ್ರಾಹಕರ ಬೇಡಿಕೆ […]

Read More

ನೆಮ್ಮದಿಗೆ ಮದ್ಯ ಕೊಳ್ಳಿ

– ಹಣಕ್ಕಾಗಿ ಪತ್ನಿಯ ಕೊಲೆ, ಸ್ನೇಹಿತನ ಮರ್ಡರ್ ವಿಕ ಸುದ್ದಿಲೋಕ ಬೆಂಗಳೂರು ಲಾಕ್‌ಡೌನ್‌ ಅವಧಿಯಲ್ಲಿ ಕುಡಿತದಿಂದಾಗುವ ಕೌಟುಂಬಿಕ ಹಿಂಸೆ ಪ್ರಕರಣಗಳು ಮತ್ತು ಅಪರಾಧಗಳ ಸಂಖ್ಯೆ ತಳ ಮುಟ್ಟಿತ್ತು. ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕ ಎರಡೇ ದಿನದಲ್ಲಿ ಕುಡುಕರ ಹಾವಳಿ ಮಿತಿಮೀರಿದೆ. ‘ಮದ್ಯಾಸುರ’ ಕುಟುಂಬಗಳ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದಾನೆ. ಮೈಸೂರು ಮತ್ತು ಇಳಕಲ್‌ನಲ್ಲಿ ಮದ್ಯದ ಅಮಲಿನಿಂದಾದ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ಮತ್ತೊಂದು ಕಡೆ, ಕೋಲಾರ ಜಿಲ್ಲೆಯಲ್ಲಿ ಭೂಪನೊಬ್ಬ ಎಣ್ಣೆ ಮತ್ತಿನಲ್ಲಿ ಹಾವನ್ನೇ ಕಚ್ಚಿ ಬಿಸಾಡಿದ್ದಾನೆ! ಇಳಕಲ್‌ನಲ್ಲಿ […]

Read More

ಮತ್ತೆ ಕೊರೊನಾಘಾತದ ಆತಂಕ – ವಿದೇಶದಿಂದ ಕರೆ ತರುವ ಮುನ್ನ ಯೋಚಿಸಿ

ಕೊರೊನಾ ವೈರಸ್(ಕೋವಿಡ್ 19) ಹರಡುವುದನ್ನು ತಡೆಯಲು ಹೇರಲಾಗಿದ್ದ ಲಾಕ್‌ಡೌನ್‌ ಭಾಗಶಃ ತರೆವಿನೊಂದಿಗೆ ದೇಶ ಸಹಜ ಸ್ಥಿತಿಯತ್ತ ಮರಳುವ ಯತ್ನದಲ್ಲಿದೆ. ಇಷ್ಟೆಲ್ಲ ಬಿಗಿ ಕ್ರಮಗಳ ನಂತರವೂ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿಯನ್ನು ತಲುಪುತ್ತಿದೆ. ಕೊರೊನಾದಿಂದ 1500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸೋಂಕಿತರ ಪ್ರಮಾಣ ಏರುಗತಿಯಲ್ಲಿರುವಾಗಲೇ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಪ್ರಯತ್ನಕ್ಕೆ ಸರಕಾರ ಮುಂದಾಗಿರುವುದು ಎಲ್ಲೆಡೆ ಮತ್ತೊಂದು ಸುತ್ತಿನ ಆತಂಕ ಸೃಷ್ಟಿಸಿದೆ. ಸರಕಾರ ನೀಡಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ 14,800 ಜನರನ್ನು […]

Read More

ಗಿಲ್ಗಿಟ್-ಬಾಲ್ಟಿಸ್ತಾನ್ ಪಾಕ್ ಆಟಕ್ಕೆ, ಭಾರತ ಪಾಠ

ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಪಾಕಿಸ್ತಾನದ ಕ್ರಮಕ್ಕೆ ಭಾರತ ತೀವ್ರ ವಿರೋಧ ಒಡ್ಡಿದೆ. ಆಕ್ರಮಿತ ಪ್ರದೇಶವನ್ನು ತಕ್ಷಣವೇ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಭಾರತ ಇಷ್ಟು ನೇರ ಸಂದೇಶ ನೀಡಿರುವುದು ಇದೇ ಮೊದಲು. ಇತ್ತೀಚೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿ, ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಬಹುದು ಎಂದು 2018ರಲ್ಲಿ ಸರಕಾರ ಮಾಡಿದ್ದ ಸಂವಿಧಾನ ತಿದ್ದುಪಡಿಯನ್ನು ಅನುಮೋದಿಸಿದೆ. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗಿಲ್ಗಿಟ್ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top