ಪ್ರತಿರೋಧ ವೃದ್ಧಿಗೆ ವಿಶ್ರಾಂತಿ ಸಮಯ ಘೋಷಿಸಿ

ರಾತ್ರಿ 8ರಿಂದ ಬೆಳಗ್ಗೆ 4ರವರೆಗೆ ನಿದ್ದೆಗೆ ಅವಕಾಶ * ರಾತ್ರಿ ಟಿವಿ ಇರಬಾರದು * ಪುತ್ತಿಗೆ ಶ್ರೀ ಸಲಹೆ. ವಿಕ ಸುದ್ದಿಲೋಕ ಉಡುಪಿ. ಮನುಷ್ಯನ ಪ್ರತಿರೋಧ ಶಕ್ತಿ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ರಾತ್ರಿ 8ರಿಂದ ಬೆಳಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಲು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಸಲಹೆ ನೀಡಿದ್ದಾರೆ. ಸೋಂಕಿನಿಂದ ಗುಣಮುಖರಾದ ಅವರು ಪ್ರಕಟಣೆಯಲ್ಲಿ ಸಂದೇಶ ನೀಡಿದ್ದು ಈ ಬಗ್ಗೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಆರೋಗ್ಯ ವ್ಯವಸ್ಥೆಯನ್ನು ಪುನರ್ ನವೀಕರಿಸುವ ಯೋಗ, ಪ್ರಾಣಾಯಾಮ, […]

Read More

ಉಡುಪಿ ಫಸ್ಟ್, ವಿಜಯಪುರ ಲಾಸ್ಟ್

– ದಕ್ಷಿಣ ಕನ್ನಡ 2, ಕೊಡಗು ಜಿಲ್ಲೆಗೆ 3ನೇ ಸ್ಥಾನ – 88 ಕಾಲೇಜುಗಳು ಝೀರೋ, 92 ಕಾಲೇಜು ಶತಕ ಸಾಧನೆ – ಕೊರೊನಾ ಭಯದ ಮಧ್ಯೆಯೇ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ವಿಕ ಸುದ್ದಿಲೋಕ ಬೆಂಗಳೂರು ಪಿಯು ದ್ವಿತೀಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿಯೂ ಉಡುಪಿ ಶೇ.90.71 ರಿಸಲ್ಟ್ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ವಿಜಯಪುರ(ಶೇ.54.22) ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ(ಶೇ.90.71) ಇದ್ದರೆ ಮೂರನೇ ಸ್ಥಾನದಲ್ಲಿ ಕೊಡಗು ಜಿಲ್ಲೆ(ಶೇ.81.53) ಇದೆ. […]

Read More

ಬಡತನದಲ್ಲೂ ಅರಳಿದ “ಕಲೆ’

ದ್ವಿತೀಯ ಪಿಯು 61.80% ರಿಸಲ್ಟ್ | ಕಲಾ ವಿಭಾಗದಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ ಸಾರ್ವಕಾಲಿಕ ಗರಿಷ್ಠ ಫಲಿತಾಂಶ | ಕೊರೊನಾ ಅವಧಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ನಪಾಸು. ವಿಕ ಸುದ್ದಿಲೋಕ ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಸರಾಸರಿ ಶೇ.61.80ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಸಾರ್ವಕಾಲಿಕ ದಾಖಲೆ ಫಲಿತಾಂಶ ಪ್ರಕಟವಾಗಿದೆ. ಈ ನಡುವೆ ಕಷ್ಟನಷ್ಟ, ಸೌಕರ್ಯ ಕೊರತೆಗಳನ್ನೂ ಮೀರಿ ಹಲವಾರು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಮುಖ್ಯವಾಗಿ ಕಲಾ ವಿಭಾಗದಲ್ಲಿ ಟಾಪ್ ಸ್ಥಾನ ಪಡೆದಿರುವ ಬಹುತೇಕ […]

Read More

ಅವನು ಉಚ್ಚಿಲ ಅಬ್ದುಲ್‌ಖಾದರ್‌ – ಕ್ಯಾಬಿನ್‌ ಒಳಗಿತ್ತು ಬೆಳ್ಳಿ ಖದರ್‌!

ಅದು 1993ರ ಮಾರ್ಚ್‌ 8. ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ದೊಡ್ಡ ಕಾರ್ಯಾಚರಣೆಯೊಂದಕ್ಕೆ ಸಿದ್ಧವಾಗಿದ್ದರು. ಬೆಳ್ಳಿಯ ಕಳ್ಳ ಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದಿದ್ದ ಅವರು ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ (ಈಗ ಉಡುಪಿ ಜಿಲ್ಲೆ) ಪಡುಬಿದ್ರಿ ಜಂಕ್ಷನ್‌ನಲ್ಲಿ ಕಾದು ಕುಳಿತಿದ್ದರು. ಮಂಗಳೂರಿನಿಂದ ಉತ್ತರ ಕನ್ನಡದ ಕಾರವಾರದವರೆಗಿನ ಸುಮಾರು 110 ಕಿ.ಮೀ. ಉದ್ದದ ಕರಾವಳಿ ಅದಾಗಲೇ ಚಿನ್ನ ಮತ್ತು ಇತರ ವಸ್ತುಗಳ ಕಳ್ಳ ಸಾಗಾಣಿಕೆಗೆ ಫೇಮಸ್‌ ಆಗಿತ್ತು. ಸುಂದರವಾದ ಕಡಲ ತೀರಗಳು ಅಕ್ರಮ ಸಾಗಾಟಕ್ಕೆ ರಾಜಮಾರ್ಗವನ್ನೇ […]

Read More

ಜನಜೀವನ ಇನ್ನಷ್ಟು ಮುಕ್ತ

ಇಂದಿನಿಂದ ಟೆಂಪಲ್‌, ಮಾಲ್‌, ಹೋಟೆಲ್‌ ಓಪನ್‌ | ಷರತ್ತುಗಳು ಅನ್ವಯ. ಎರಡೂವರೆ ತಿಂಗಳ ಬಳಿಕ ಸೃಷ್ಟಿಯಾಗಲಿದೆ ಸಂಚಲನ | ಪ್ರವಾಸಿ ತಾಣಗಳೂ ರೆಡಿ.  ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಾಣಿಜ್ಯ ಕ್ಷೇತ್ರ ಮತ್ತು ಜನಜೀವನವನ್ನು ಮರಳಿ ಹಳಿಗೆ ತರುವ ಅತಿ ದೊಡ್ಡ ಕ್ರಮವಾಗಿ ಸೋಮವಾರದಿಂದ ರಾಜ್ಯಾದ್ಯಂತ ದೇವಾಲಯಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಮಾಲ್‌ಗಳನ್ನು ಮತ್ತೆ ತೆರೆಯಲಾಗುತ್ತಿದೆ. ಇದರೊಂದಿಗೆ ಸುಮಾರು ಎರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಆತಿಥ್ಯ ಕ್ಷೇತ್ರ, ಧಾರ್ಮಿಕ ಮತ್ತು ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. […]

Read More

ದರ್ಶನಕ್ಕೆ ಬೇಡ ಆತುರ

– ಸೋಮವಾರ ದೇಗುಲ ತೆರೆದರೂ ಹೆಚ್ಚಿನೆಡೆ ದರುಶನಕ್ಕೆ ಸೀಮಿತ – ಸೇವೆ ಆರಂಭ ಸ್ವಲ್ಪ ವಿಳಂಬ | ಜನದಟ್ಟಣೆ ತಪ್ಪಿಸುವುದು ಉತ್ತಮ ವಿಕ ಸುದ್ದಿಲೋಕ ಬೆಂಗಳೂರು. ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ರಾಜ್ಯದ ಹೆಚ್ಚಿನ ದೇವಾಲಯಗಳಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಆದರೆ, ಬಹುತೇಕ ದೇವಾಲಯಗಳಲ್ಲಿ ಸದ್ಯಕ್ಕೆ ದರ್ಶನಕ್ಕೆ ಮಾತ್ರ ಅವಕಾಶ ನೀಡುವ ಚಿಂತನೆ ನಡೆದಿದ್ದು, ದೇವರ ಸೇವೆಗಳು ಕೆಲವು ದಿನ ಬಿಟ್ಟು ಆರಂಭಗೊಳ್ಳಲಿವೆ. ಕೇಂದ್ರ ಸರಕಾರ ವಿಧಿಸಿರುವ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ದೇವಾಲಯಗಳು ಭಕ್ತರಿಗೆ ಅವಕಾಶ […]

Read More

ಕ್ವಾರಂಟೈನ್ ಮೇಲೆ ನಿಂತಿದೆ ನಾಡಿನ ಆರೋಗ್ಯ ಭವಿಷ್ಯ

ಪರೀಕ್ಷೆಯೇ ಸವಾಲು | ಆಸ್ಪತ್ರೆಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸುವ ತುರ್ತು | ಕೆಲವೆಡೆ ಲಾಕ್‌ಡೌನ್‌ ಅನಿವಾರ್ಯ. ವಿಕ ಬ್ಯೂರೊ, ಬೆಂಗಳೂರು. ವಲಸೆ ಕಾರ್ಮಿಕರ ಆಗಮನದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಿದೆ. ಬಂದವರೆಲ್ಲ ಕ್ವಾರಂಟೈನ್‌ನಲ್ಲಿದ್ದಾರೆ ನಿಜ. ಆದರೆ ಈ ವ್ಯವಸ್ಥೆ ಅಷ್ಟೇನು ಪ್ರಬಲವಾಗಿಲ್ಲ. ಇದನ್ನು ಸಬಲಗೊಳಿಸದೆ ಇದ್ದರೆ ಇಡೀ ರಾಜ್ಯ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಸೋಂಕು ಸಮುದಾಯದ ಹಂತಕ್ಕೆ ಹಬ್ಬಿಕೊಳ್ಳುತ್ತದೆ. ಇಲ್ಲಿರುವ ವಿವರಗಳು ರಾಜ್ಯ ಇನ್ನಷ್ಟು ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುವ ತುರ್ತನ್ನು ಹೇಳುತ್ತಿವೆ. ಪರೀಕ್ಷಾ ಪ್ರಕ್ರಿಯೆ ಮತ್ತು ವರದಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top