ಕೋವಿಡ್‌ ಟೆಸ್ಟ್‌ ಕಡ್ಡಾಯವಲ್ಲ – ರೋಗದ ತೀವ್ರತೆ ಅನುಸರಿಸಿ ಚಿಕಿತ್ಸೆ ದೊರೆಯಲಿ

ಕಾರವಾರದಲ್ಲಿ ವೃದ್ಧರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ತೆರಳಿದಾಗ, ಕೋವಿಡ್‌ ಟೆಸ್ಟ್‌ನ ನೆಪ ಒಡ್ಡಿ ಚಿಕಿತ್ಸೆ ನಿರಾಕರಿಸಿದ, ಆಸ್ಪತ್ರೆಗಳಿಗೆ ಅಲೆದಾಡಿದ ಹಾಗೂ ಅವರು ಇದರಿಂದಾಗಿ ಉಂಟಾದ ವಿಳಂಬದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಇಂಥ ಹಲವಾರು ಘಟನೆಗಳು ನಡೆದಿದ್ದವು. ಹೆಚ್ಚಾಗಿ ಖಾಸಗಿ ಅಸ್ಪತ್ರೆಗಳವರು, ಗಂಭೀರ ಆರೋಗ್ಯ ಸ್ಥಿತಿಯಿಟ್ಟುಕೊಂಡು ಬರುತ್ತಿದ್ದ ರೋಗಿಗಳನ್ನು ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡು ಬನ್ನಿ ಎಂಬ ನೆಪ ನೀಡಿ ಮರಳಿ ಕಳುಹಿಸುತ್ತಿದ್ದರು ಹಾಗೂ ಅಂಥ ರೋಗಿಗಳು ದಾರಿಮಧ್ಯೆ ಅಸುನೀಗಿದ ಪ್ರಕರಣಗಳು ನಡೆದಿದ್ದವು. ಇದನ್ನು ಅನುಸರಿಸಿ […]

Read More

ಮನ ಕಲಕುವ ಕೊರೊನೇತರರ ಸಂಕಟ

ಕೊರೊನಾ ಅಬ್ಬರದ ಮಧ್ಯೆ ಕೊರೊನೇತರ ರೋಗಿಗಳ ಗೋಳನ್ನು ಯಾರೂ ಕೇಳುತ್ತಿಲ್ಲ. ಬಹುತೇಕ ಆಸ್ಪತ್ರೆಗಳು ಇಂಥ ರೋಗಿಗಳನ್ನು ಅನುಮಾನದಿಂದ ನೋಡುತ್ತಿವೆ; ಆಸ್ಪತ್ರೆಗಳಿಗೂ ಸೇರಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಕೆಲವರು ಬೀದಿಯಲ್ಲಿ ನರಳಾಡುತ್ತ ಬಿದ್ದರೆ, ಮತ್ತೆ ಕೆಲವರು ಸೂಕ್ತ ಚಿಕಿತ್ಸೆ ಸಿಗದೇ ಸತ್ತೇ ಹೋಗುತ್ತಿದ್ದಾರೆ. ಅಂಥ ಹೃದಯವಿದ್ರಾವಕ ಇತ್ತೀಚಿನ ಕೆಲವು ಘಟನೆಗಳು ಇಲ್ಲಿವೆ. ರಕ್ತಸ್ರಾವದಿಂದ ಮಹಿಳೆ ಸಾವು ಕನಕಪುರ ತಾಲೂಕಿನ ಟಿ.ಹೊಸಹಳ್ಳಿ ಗ್ರಾಮದ 40 ವರ್ಷದ ಮಹಿಳೆಗೆ ರಕ್ತಸ್ತ್ರಾವ ಉಂಟಾಗಿತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆಯೂ ಎದುರಾಗಿತ್ತು. ಆದರೆ, ಕನಕಪುರ, ರಾಮನಗರ, ಬೆಂಗಳೂರಿನ ಜಯದೇವ, […]

Read More

ಮನೋಬಲವೇ ಮಹಾಬಲ

– ಕೊರೊನಾಗಿಂತಲೂ ಆತಂಕ, ಆಘಾತದಿಂದಲೇ ಹೆಚ್ಚುತ್ತಿದೆ ಸಾವು – ವೈರಸ್ ಎದುರಿಸಲು ಬೇಕಿರುವುದು ಬರೀ ಆಸ್ಪತ್ರೆಗಳಲ್ಲ, ಮಾನಸಿಕ ದೃಢತೆ ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯದಲ್ಲಿ ಕೊರೊನಾಗಿಂತಲೂ ಅದರ ಕುರಿತ ಭಯವೇ ಹೆಚ್ಚು ಹೆಚ್ಚು ಸಾವಿಗೆ ಕಾರಣವಾಗುತ್ತಿದೆ. ಸಣ್ಣಗೆ ಜ್ವರ ಬಂದರೂ ಕೊರೊನಾ ಇರಬಹುದು ಎಂಬ ಭಯ, ಸ್ವಾಬ್ ಟೆಸ್ಟ್‌ನ ಫಲಿತಾಂಶದ ನಿರೀಕ್ಷೆಯಲ್ಲೇ ಹೆಚ್ಚುವ ಆತಂಕ, ಪಾಸಿಟಿವ್ ಎಂದು ಪ್ರಕಟಿಸಿದ ಬಳಿಕದ ಉದ್ವೇಗಗಳಿಂದ ರಾಜ್ಯದಲ್ಲಿ ಈಗಾಗಲೇ 20ಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. 10ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. […]

Read More

ಬನ್ನಿ, ನಮಗಿದು ಯೋಧರಾಗುವ ಯೋಗ

ಇಡೀ ಮಾನವ ಕುಲಕ್ಕೆ ಕಂಟಕವಾಗುತ್ತಿರುವ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಬಹಳಷ್ಟು ವೈದ್ಯರು ತಮ್ಮ ಕುಟುಂಬ, ಪ್ರೀತಿ ಪಾತ್ರರನ್ನು ತೊರೆದು ನಾಲ್ಕು ತಿಂಗಳಿಂದ ರೋಗಿಗಳ ಆರೈಕೆಯಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಭಯಗ್ರಸ್ಥ ಸೋಂಕಿತರಲ್ಲಿ ಧೈರ್ಯ ತುಂಬಿ, ಆತ್ಮಸ್ಥೈರ್ಯವನ್ನೇ ಮದ್ದಾಗಿಸುತ್ತಿದ್ದಾರೆ. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಕಾಲಿಟ್ಟಿರೆ ಇವರ ಮನದಲ್ಲಿ ಸಾರ್ಥಕ್ಯದ ಭಾವ. ಸ್ವತಃ ಸೋಂಕಿಗೆ ತೆರೆದುಕೊಳ್ಳುವ ಅಪಾಯವಿದ್ದರೂ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸೇವಾ ಮನೋಭಾವ, ಕಾರ್ಯತತ್ವರತೆ ನಾಡಿನ ಎಲ್ಲವೈದ್ಯ ಸಮೂಹಕ್ಕೆ ಸ್ಫೂರ್ತಿಯಾಗಲಿ… ಟೆಲಿ ಮೆಡಿಸಿನ್ […]

Read More

ಕೊರೊನಾ ಯೋಧರ ಕೊರತೆ – ವೈದ್ಯರೇ, ಸಮಾಜ ನಿಮ್ಮನ್ನೇ ನಂಬಿದೆ

ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಕೆಯಿಂದ ಆಗಿರುವ ಹಲವು ದುಷ್ಪರಿಣಾಮಗಳ ನಡುವೆ, ವೈದ್ಯರ ಕೊರತೆಯೂ ಒಂದು ಹಾಗೂ ಹೆಚ್ಚು ಗಂಭೀರವಾದುದು. ಸರಕಾರಿ ಆಸ್ಪತ್ರೆಗಳಲ್ಲಿ ಮೊದಲೇ ವೈದ್ಯರ ಕೊರತೆಯಿದೆ. ನಿಗದಿತ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೇವೆ ಕಡ್ಡಾಯಗೊಂಡಿರುವ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಒಂದು ವಾರ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಎರಡು ವಾರ ಐಸೋಲೇಶನ್‌ ಆಗಬೇಕಿರುವುದರಿಂದ ವೈದ್ಯರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗುತ್ತದೆ. ಅದರಲ್ಲೂ ಕೆಲವು ವೈದ್ಯರಿಗೆ ಸೋಂಕು ತಗುಲಿರುವುದರಿಂದ ಕ್ವಾರಂಟೈನ್‌ ಆಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವೇ ಆಸ್ಪತ್ರೆಗಳು ಮಾತ್ರ […]

Read More

ಮನೆ ಮದ್ದು, ಕೊರೊನಾಗೆ ಗುದ್ದು – ಕಷಾಯ ಮಾಡಿ ಕುಡಿಯಿರಿ, ಆರೋಗ್ಯವಾಗಿರಿ…

ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯದಲ್ಲಿ ಸಮುದಾಯದ ಮಟ್ಟದಲ್ಲಿ ಸೋಂಕು ಹರಡುತ್ತಿರುವುದು ಮತ್ತು ಲಕ್ಷ ಣರಹಿತ ಸೋಂಕಿತರು ಹೆಚ್ಚುತ್ತಿರುವುದರಿಂದ ‘ಮನೆ ಆರೈಕೆ ಕ್ರಮ’ ಜಾರಿಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಅಂದರೆ ಜನರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಸೋಂಕಿತರು ‘ಮನೆ ಆರೈಕೆ’ಗೆ ಒಳಪಟ್ಟರೆ ಆರೋಗ್ಯ ವೃದ್ಧಿಗೆ ಕೆಲ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗೆಯೇ ಉಳಿದವರೂ ಕೂಡ ಸೋಂಕಿಗೆ ಒಳಗಾಗದಂತೆ ದೂರ ಇರಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾಗುತ್ತದೆ.   ಮನೆ ಮದ್ದು ಬಳಸಿ ಅಮೃತಬಳ್ಳಿ, ಅಶ್ವಗಂಧ, ಬೇವು, ತುಳಸಿ, […]

Read More

ಬೆಂಗಳೂರು ಹೈ ಅಲರ್ಟ್

6 ಕಡೆ ಸೀಲ್ಡೌನ್ | ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ. ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್ ನಿಯಂತ್ರಣ ಸಂಬಂಧದಲ್ಲಿ ಬಿಬಿಎಂಪಿ ಪ್ರಮಾದವೆಸಗಿದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಬೆಂಗಳೂರಿನ ಕೆಆರ್ ಮಾರ್ಕೆಟ್, ವಿವಿ ಪುರ, ಸಿದ್ದಾಪುರ, ಕಲಾಸಿಪಾಳ್ಯ, ಚಾಮರಾಜಪೇಟೆ, ಚಿಕ್ಕಪೇಟೆ ಸೇರಿದಂತೆ ಕೊರೊನಾ ವಿಪರೀತವಾಗಿ ಪ್ರಸರಣವಾಗುತ್ತಿರುವ ಪ್ರದೇಶದಲ್ಲಿ ಸೀಲ್‌ಡೌನ್‌ ಮಾಡಲು ಆದೇಶಿಸಿದೆ. ಹಾಗೆಯೇ ಕೊರೊನಾ ವ್ಯಾಪಿಸುತ್ತಿರುವ ಕಡೆ ಲಾಕ್‌ಡೌನ್‌ ಕ್ರಮ ಅನುಸರಿಸಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top