
ಆನ್‌ಲೈನ್ ಪೋಕರ್‌ಗಳಲ್ಲಿ ಡ್ರ್ಯಾಗನ್‌ನದ್ದೇ ಪ್ರಾಬಲ್ಯ ಕಪ್ಪು ಹಣ ದಂಧೆಗೂ ರಹದಾರಿ. ಗಿರೀಶ್ ಕೋಟೆ ಬೆಂಗಳೂರು. ಚೀನಾದ ಟಿಕ್‌ಟಾಕ್ ಸೇರಿದಂತೆ 56 ಆ್ಯಪ್‌ಗಳನ್ನು ಕೇಂದ್ರ ಸರಕಾರ ನಿಷೇಧಿಸಿದ್ದರೂ ಆನ್‌ಲೈನ್ ಪೋಕರ್‌ನಲ್ಲಿ ಇವತ್ತಿಗೂ ಚೀನಾ ಆ್ಯಪ್‌ಗಳ ಪ್ರಾಬಲ್ಯವೇ ಮುಂದುವರಿದಿದೆ. ವಿಶ್ವದಾದ್ಯಂತ ಆನ್‌ಲೈನ್‌ನಲ್ಲಿ ಬಾಜಿ ಕಟ್ಟಿ ಜೂಜಾಡುವವರು ಕೋಟ್ಯಂತರ ಮಂದಿ ಇದ್ದಾರೆ. ಬೆಂಗಳೂರಿನಲ್ಲೂ ಸಾವಿರಾರು ಮಂದಿ ಆನ್‌ಲೈನ್ ಪೋಕರ್‌ನ ಚಟಕ್ಕೆ ಬಿದ್ದು ಬೀದಿಗೆ ಬಿದ್ದವರಿದ್ದಾರೆ. ಚಿಕ್ಕಪೇಟೆಯೊಂದರಲ್ಲೇ ನೂರಾರು ವ್ಯಾಪಾರಿಗಳು ನಿತ್ಯ ಆನ್‌ಲೈನ್ ಪೋಕರ್‌ಗೆ ಲಕ್ಷಗಟ್ಟಲೆ ಬಾಜಿ ಕಟ್ಟುವವರಿದ್ದಾರೆ. ಕಾನೂನುಬಾಹಿರ ಆ್ಯಪ್‌ಗಳು ಪೋಕರ್‌ಬಾಜಿ, […]