
ಒಂದೆಡೆ ಕೋವಿಡ್ ಕೇಸುಗಳು ಅನಿಯಂತ್ರತವಾಗಿ ಏರುತ್ತಿರುವಂತೆಯೇ, ಇನ್ನೊದೆಡೆ ಕೊರೊನೋತ್ತರ ಬದುಕಿನಲ್ಲಿ ಚೈತನ್ಯವನ್ನು ಇಮ್ಮಡಿಸುವ ಪ್ರಕ್ರಿಯೆಗಳು ಆರಂಭಗೊಂಡಿವೆ. ಆಗಸ್ಟ 1ರಿಂದ ಕೊರೊನಾ ಲಾಕ್‌ಡೌನ್ ನಿರ್ಬಂಧಗಳು ಇನ್ನಷ್ಟು ಸಡಿಲಿಕೆಯಾಗುವ ನಿರೀಕ್ಷೆ ಇದ್ದು ಥಿಯಟರ್ ಹಾಗೂ ಜಿಮ್‌ಗಳ ಕಾರ್ಯಾರಂಭಕ್ಕೆ ಷರತ್ತು ಬದ್ಧ ಅನುಮತಿ ಸಿಗುವ ನಿರೀಕ್ಷೆ ಇದೆ. ಗುಣಮುಖರ ಪ್ರಮಾಣ ಏರುಗತಿಯಲ್ಲಿರುವುದು ಹಾಗೂ ಅದರೊಟ್ಟಿಗೆ ಬದುಕುವುದು ಜನರಿಗೆ ಅಭ್ಯಾಸವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ರಾಜ್ಯದಲ್ಲಿ, ಶಾಲೆಗಳ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ಬಾರಿ 1ರಿಂದ […]