
ಲಾಕ್ಡೌನ್ನಿಂದಾಗಿ ಅನಿವಾರ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಂಪ್ರದಾಯಿಕ ತರಗತಿಗಳು ಬಂದ್ ಆಗಿದ್ದು ಆನ್ಲೈನ್ ಪಾಠ ಪ್ರವಚನಗಳತ್ತ ಶಿಕ್ಷಕರು-ವಿದ್ಯಾರ್ಥಿಗಳು ತಿರುಗಬೇಕಾಗಿ ಬಂದಿದೆ. ಕ್ಲಾಸ್ಗಳು ಆರಂಭವಾಗುವ ಲಕ್ಷಣ ಸದ್ಯಕ್ಕಿಲ್ಲ. ಆರಂಭವಾದರೂ, ದೈಹಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಹೆಚ್ಚಿನ ಮಕ್ಕಳನ್ನು ಒಂದೆಡೆ ಕೂಡಿಹಾಕುವಂತಿಲ್ಲ. ಆದರೆ ಮಕ್ಕಳ ಶಿಕ್ಷಣವನ್ನಂತೂ ಕೈಬಿಡುವಂತಿಲ್ಲವಲ್ಲ. ಹೀಗಾಗಿ ಆನ್ಲೈನ್ ತರಗತಿ, ಉಪನ್ಯಾಸ, ಸಂವಾದ, ಸೆಮಿನಾರ್ಗಳು ಭವಿಷ್ಯದಲ್ಲಿ ಅನಿವಾರ್ಯವಾಗಲಿವೆ. ನಾವು ಸಾಂಪ್ರದಾಯಿಕ ಗುರುಪರಂಪರೆಯ ಎಷ್ಟೇ ಅಭಿಮಾನಿಗಳಾಗಿದ್ದರೂ, ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಇಂದು ವರ್ಚುವಲ್ ತರಗತಿಗಳತ್ತ ಹೊರಳಿಕೊಳ್ಳಬೇಕಾಗಿದೆ. ಇದಕ್ಕಾಗಿ ಕೇಂದ್ರ ಸರಕಾರ ಹಲವು ಪೂರಕ […]