
ಸೇವೆಗಳನ್ನು ಎಲ್ಲರೂ ಡಿಜಿಟಲೀಕರಣ ಮಾಡುತ್ತ ಕಾಲದಲ್ಲಿ ಮುಂದೆ ಹೋಗುತ್ತಿದ್ದರೆ, ಕರ್ನಾಟಕ ರಾಜ್ಯ ಸರಕಾರ ಮಾತ್ರ ಹಿಂದಕ್ಕೆ ಹೋಗಲು ಹೊರಟಿದೆ! ಕಂದಾಯ ದಾಖಲೆಗಳನ್ನು ಆನ್‌ಲೈನ್ ಮೂಲಕ ನೀಡುತ್ತಿದ್ದ ‘ಕಾವೇರಿ’ ಸೇವೆಯನ್ನು ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಋುಣಭಾರ ಪ್ರಮಾಣ ಪತ್ರ (ಇಸಿ) ಹಾಗೂ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು(ಆರ್‌ಟಿಸಿ)ಗಳನ್ನು ಈ ಕಾವೇರಿ ಸೇವೆಯ ಮೂಲಕವೇ ಹೆಚ್ಚಿನ ಗ್ರಾಹಕರು ಸುಲಭವಾಗಿ ಪಡೆಯುತ್ತಿದ್ದರು. ಹಲವೊಮ್ಮೆ ಇದು ಸರ್ವರ್ ಡೌನ್ ಸಮಸ್ಯೆಯಿಂದ ಬಳಲುತ್ತಿತ್ತು. ನೆಗಡಿಯಾದರೆ ಮೂಗು ಕೊಯ್ದರು ಎಂಬಂತೆ, ಆನ್‌ಲೈನ್ ಸೇವೆಯನ್ನೇ ನಿಲ್ಲಿಸುವುದು ಸರಿಯಲ್ಲ. […]