ರಫೇಲ್ ಬಲ

ಫ್ರಾನ್ಸ್‌ನಿಂದ ಹೊರಟಿರುವ ರಫೇಲ್ ಯುದ್ಧವಿಮಾನಗಳು ಯುಎಇನಲ್ಲಿ ಸಿಂಗಲ್ ಸ್ಟಾಪ್ ನೀಡಿ, ಬುಧವಾರ ಭಾರತಕ್ಕೆ ತಲುಪಲಿವೆ. ರಫೇಲ್ ಫೈಟರ್‌ ಜೆಟ್‌ಗಳ ಫುಲ್ ಡಿಟೇಲ್ಸ್ ಇಲ್ಲಿದೆ. ಬಹುದಿನಗಳ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ. ಭಾರತೀಯ ವಾಯು ಪಡೆಗೆ ‘ಪವನಶಕ್ತಿ’ ನೀಡಲಿರುವ, ಅತ್ಯಾಧುನಿಕ ‘ರಫೇಲ್ ಯುದ್ಧವಿಮಾನ’ಗಳು ಬುಧವಾರ(ಜು.29) ಭಾರತಕ್ಕೆ ಬರಲಿವೆ. ವಿಶೇಷ ಎಂದರೆ, ಈ ರಫೇಲ್‌ಗಳನ್ನು ಲಡಾಕ್ ಸೆಕ್ಟರ್‌ನಲ್ಲಿ ನಿಯೋಜನೆ ಮಾಡಲು ಯೋಜಿಸಲಾಗಿದೆ! ಎಲ್ಎಸಿ(ವಾಸ್ತವಿಕ ಗಡಿ ರೇಖೆ)ಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಇಂಥ ಹೊತ್ತಿನಲ್ಲಿ ರಫೇಲ್‌ಗಳು […]

Read More

ಪ್ರಮಾದಗಳ ಸುಳಿಯಲ್ಲಿ ಕಾಂಗ್ರೆಸ್

– ಇಂದಿರಾ-ನೆಹರು ಕುಟುಂಬದ ಪ್ರಭುತ್ವವನ್ನು ಧಿಕ್ಕರಿಸುವ ಧೈರ್ಯ ಮೂಡಿದಾಗ ಮಾತ್ರ ಕಾಂಗ್ರೆಸಿಗೆ ಭವಿಷ್ಯ. – ಮಹದೇವ್ ಪ್ರಕಾಶ್. ಎಪ್ಪತ್ತರ ದಶಕದಲ್ಲಿಅ ಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೇವಕಾಂತ ಬರುವಾ, ‘ಕಾಂಗ್ರೆಸ್ ಎಂದರೆ ಇಂದಿರಾ, ಇಂದಿರಾ ಎಂದರೆ ಕಾಂಗ್ರೆಸ್’ ಎಂದಿದ್ದರು. ಇಂತಹ ಭಟ್ಟಂಗಿಗಳ ಉದ್ಘೋಷಗಳು ನಿರಂತರವಾಗಿ ಮುಂದುವರಿದ ಕಾರಣ ಕಾಂಗ್ರೆಸಿನಲ್ಲಿ ವಂಶ ಪಾರಂಪರ್ಯ ಆಡಳಿತ ಬಲವಾಗಿ ಬೇರೂರಿತು. ದೇವಕಾಂತ ಬರುವಾ ಅವರಂತಹ ಭಟ್ಟಂಗಿಗಳು ಕಾಂಗ್ರೆಸ್ ಎಂದರೆ ರಾಹುಲ್ ಗಾಂಧಿ, ರಾಹುಲ್ ಗಾಂಧಿ ಎಂದರೆ ಕಾಂಗ್ರೆಸ್ ಎಂದು ಈಗಲೂ ಜಪ […]

Read More

ಕಾಂಗ್ರೆಸ್‌ಗೆ ಕಿರಿಯರ ಬೈ : ಪಕ್ಷ ಒಡೆಯುತ್ತಿರುವ ಹಿರಿತಲೆ- ಕಿರಿತಲೆ ಸಂಘರ್ಷ

ಒಂದೆಡೆ ಬಿಜೆಪಿ ಹೊಸ ಹೊಸ ಮುಖಗಳಿಗೆ ಮನ್ನಣೆ ಕೊಡುತ್ತಾ ಮುನ್ನಡೆದಿದ್ದರೆ, ಅದರ ಎದುರು ತಕ್ಕ ಹೋರಾಟ ನೀಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್‌ ತನ್ನ ಯುವ ನಾಯಕರನ್ನೆಲ್ಲ ಕಳೆದುಕೊಳ್ಳುತ್ತಾ ಸಾಗಿದೆ. ಈ ವಿದ್ಯಮಾನದ ಬಗ್ಗೆ ಒಂದು ನೋಟ ಇಲ್ಲಿದೆ. ರಾಜಸ್ಥಾನದಲ್ಲಿ ಬಿರುಗಾಳಿ: ರಾಜಸ್ಥಾನದ ರಾಜಕಾರಣದಲ್ಲಿ ಎದ್ದಿರುವ ಬಿರುಗಾಳಿ, ಕಾಂಗ್ರೆಸ್‌ನ ಒಳಗಿನ ವಿದ್ಯಮಾನಗಳನ್ನು ಅವಲೋಕಿಸುವಂತೆ ಮಾಡಿದೆ. ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್‌ ಪೈಲಟ್‌ ಅವರು ಶಾಸಕರನ್ನು ಕರೆದುಕೊಂಡು ಪಕ್ಷದೊಳಗೆ ಬಂಡಾಯ ಎದ್ದಿದ್ದಾರೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಹೈಕಮಾಂಡ್‌ನ ಹಿರಿಯ ನಾಯಕರ ಮೇಲಿನ […]

Read More

ನೆಹರೂ ಕುಟುಂಬಕ್ಕೆ ಮತ್ತೆ ತನಿಖೆಯ ಸಂಕಟ

ನೆಹರೂ ಕುಟುಂಬದ ಒಡೆತನದಲ್ಲಿರುವ ಮೂರು ಟ್ರಸ್ಟ್‌ಗಳ ಹಣಕಾಸಿನ ವ್ಯವಹಾರದ ಬಗೆಗೆ ತನಿಖೆ ನಡೆಸಲು ಗೃಹ ಇಲಾಖೆ ನಿರ್ದೇಶನ ನೀಡಿದೆ. ಯಾವುವೀ ಟ್ರಸ್ಟ್‌ಗಳು? ಇದರ ಹಿನ್ನೆಲೆಯೇನು? ಯಾರ ತನಿಖೆ? ನೆಹರೂ ಕುಟುಂಬದ ಒಡೆತನದಲ್ಲಿರುವ ಮೂರು ಟ್ರಸ್ಟ್‌ಗಳ ಹಣದ ವ್ಯವಹಾರ- ಅವ್ಯವಹಾರದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ್‌-ಸಚಿವಾಲಯ ಸಮಿತಿಯನ್ನು ರಚಿಸಿದೆ. ಹವಾಲಾ ವ್ಯವಹಾರ ತಡೆ ತಡೆ ಕಾಯಿದೆ (ಪಿಎಂಎಲ್‌ಎ), ಆದಾಯ ತೆರಿಗೆ ಕಾಯಿದೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ)ಗಳ ಅಡಿಯಲ್ಲಿ ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯದ […]

Read More

ಕೈ ಸರಕಾರ ಪ್ರತಿಷ್ಠಾಪನೆಗೆ ಚಪ್ಪಡಿ ಕಲ್ಲಾಗುವೆ

– ಕೇಡರ್ ಬೇಸ್ ಪಕ್ಷ ಕಟ್ಟುವೆ | ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಪ್ರತಿಜ್ಞೆ. ವಿಕ ಸುದ್ದಿಲೋಕ ಬೆಂಗಳೂರು ನಾನು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ. ಬಳಿಕ ಅಧ್ಯಕ್ಷ . ನನಗೆ ಜೈ ಎನ್ನುವ ಬೆಂಬಲಿಗರು ಬೇಡ. ಕಾಂಗ್ರೆಸ್‌ಗೆ ಜೈ ಎನ್ನುವ ಕಾರ್ಯಕರ್ತರು ಬೇಕು. ಕಾಂಗ್ರೆಸ್ ಅನ್ನು ಅಧಿಕಾರದಲ್ಲಿ ಪ್ರತಿಷ್ಠಾಪನೆ ಮಾಡಲು ಪಕ್ಷ ದ ಪಾಲಿಗೆ ವಿಧಾನಸೌಧ ಮೆಟ್ಟಿಲುಗಳಿಗೆ ಚಪ್ಪಡಿಯಾಗುವೆ…: ಕೆಪಿಸಿಸಿ ನೂತನ ಅಧ್ಯಕ್ಷ ರಾಗಿ ಗುರುವಾರ ಪದಗ್ರಹಣ ಮಾಡಿದ ಡಿ.ಕೆ. ಶಿವಕುಮಾರ್ ಮಾತಿದು. ‘‘ಎಲ್ಲ ಐದು […]

Read More

ಕೈ ಬಲವರ್ಧನೆ ಪ್ರತಿಜ್ಞೆ

– ಕೇಡರ್ ಬೇಸ್ ಆಗಿ ಪಕ್ಷ ಕಟ್ಟಿ ಬಿಜೆಪಿಗೆ ಸಡ್ಡು ಹೊಡೆಯುವ ಪಣ – ಕೆಪಿಸಿಸಿ ಸಾರಥಿಯಾಗಿ ಡಿಕೆಶಿ | ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ. ವಿಕ ಸುದ್ದಿಲೋಕ ಬೆಂಗಳೂರು. ಕಾರ್ಯಕರ್ತರನ್ನೇ ಆಧಾರವಾಗಿಟ್ಟುಕೊಂಡು ಪಕ್ಷ ಕಟ್ಟುವ ಪ್ರತಿಜ್ಞೆಯೊಂದಿಗೆ ಡಿ.ಕೆ. ಶಿವಕುಮಾರ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವ ಅವರ ಪಣಕ್ಕೆ ಇಡೀ ಕಾಂಗ್ರೆಸ್ ಪಕ್ಷ ಒಮ್ಮತದ ಬೆಂಬಲದ ಭರವಸೆ ನೀಡಿದೆ. ಕೆಪಿಸಿಸಿ ನೂತನ ಕಚೇರಿಯಲ್ಲಿ ಗುರುವಾರ ಡಿ.ಕೆ.ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಸತೀಶ್ […]

Read More

ರೊಮ್ಯಾಂಟಿಕ್‌ ಯುಗ ಪುರುಷ

ರಿಷಿ ಕಪೂರ್ ನಿಧನ, ಕಂಬನಿ ಮಿಡಿದ ಭಾರತ ಮೂರು ದಶಕಗಳ ಕಾಲ ಬಾಲಿವುಡ್‌ನ ‘ರೊಮ್ಯಾಂಟಿಕ್‌ ಹೀರೋ’ ಆಗಿ ಮೆರೆದ ರಿಷಿ ಕಪೂರ್‌ ಗುರುವಾರ ಬೆಳಗ್ಗೆ ನಿಧನರಾದರು. ಎರಡು ವರ್ಷಗಳಿಂದ ರಕ್ತದ ಕ್ಯಾನ್ಸರ್(ಲುಕೇಮಿಯಾ)ನಿಂದ ಬಳಲುತ್ತಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಅವರನ್ನು ಮುಂಬಯಿನ ಎಚ್.ಎನ್.ರಿಲಯನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದರು. ಭಾರತೀಯ ಸಿನಿಮಾಕ್ಕೆ ಅನನ್ಯ ಕೊಡುಗೆ ನೀಡಿರುವ ಕಪೂರ್‌ ಕುಟುಂಬದ ಮೂರನೇ ತಲೆಮಾರಿನ ನಟರಾಗಿದ್ದ ರಿಷಿ […]

Read More

ಹಿಂದುತ್ವವಲ್ಲ ದ್ವಂದ್ವತ್ವದತ್ತ ಕಾಂಗ್ರೆಸ್ ರಾಗಾ!

ನಟ ಪ್ರಕಾಶ್ ರೈ ಮುಂದಿಡುತ್ತಿರುವ ವಾದಗಳ ಕುರಿತು ತದನಂತರದಲ್ಲಿ ಚರ್ಚೆ ಮಾಡೋಣ. ಅದಕ್ಕೂ ಮೊದಲು ಗಮನಿಸಲೇಬೇಕಾದ ಕೆಲ ಸಂಗತಿಗಳಿವೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗ್ರಪ್ರಾಶಸ್ತ್ಯ ಇರುವುದು ನಿಜ. ಆದರೆ ಅದರ ಅರ್ಥ ಯಾರು ಬೇಕಾದರೂ, ಯಾರ ವಿರುದ್ಧ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ಅಂತಲ್ಲ. ಬಾಯಿಗೆ ಬಂದಂತೆ ಮಾತನಾಡಿದರೆ ಟಿವಿ ಚಾನೆಲ್​ಗಳಿಗೆ ಆಹಾರ ಆಗಬಹುದೇ ಹೊರತು ಆಡಿದವನ ವ್ಯಕ್ತಿತ್ವವೇನೂ ಅರೆಕ್ಷಣದಲ್ಲಿ ಹಿಮಾಲಯದ ಎತ್ತರಕ್ಕೆ ಏರುವುದಿಲ್ಲ. ಇತಿಹಾಸ, ಪರಂಪರೆ ಬದಲಾಗಿಹೋಗುವುದಿಲ್ಲ. ಜನರು ನಂಬಿ ಅನುಸರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು […]

Read More

ಕಾಂಗ್ರೆಸ್ ಗೆ ಹೊಡೆತ ನೀಡಿದ ಮೋದಿ ಸರ್ಕಾರದ ಕಠಿಣ ನಿರ್ಧಾರಗಳು

ಬಹುನಿರೀಕ್ಷಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಿಮಾಚಲದಲ್ಲಿ ಗರಿಷ್ಠ ಸ್ಥಾನ ಗಳಿಸಿ, ಗುಜರಾತಿನಲ್ಲಿ ಪ್ರಯಾಸ ಪಟ್ಟು ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಇಲ್ಲಿ ಆರಂಭವಾಗುವ ಮೊದಲ ಲೆಕ್ಕಾಚಾರ ಈ ಜಿದ್ದಾಜಿದ್ದಿನಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದು.   ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನಗಳನ್ನು ಗೆದ್ದು ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದು ನಿಜ. ಆದರೂ ಶತಾಯಗತಾಯ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ತನ್ನೆಲ್ಲ ಪ್ರತಿಷ್ಠೆಯನ್ನು ಪಣಕ್ಕಿಟ್ಟು, ತರಹೇವಾರಿ ಹೊಂದಾಣಿಕೆಗಳನ್ನು ಮಾಡಿಕೊಂಡು ಸೆಣೆಸಿದರೂ ಅಧಿಕಾರದ ಕನಸು ಕೈಗೂಡಲಿಲ್ಲ ಎಂಬುದೂ […]

Read More

ದೇಶದ ಘನತೆ ಕಾಯದವರು ಆಳಲು ಅರ್ಹರೆ? (16 .09.2017)

ಕೆಲವು ಎನ್​ಜಿಒಗಳು ಭಾರತದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಕಾರ್ಯನಿರ್ವಹಿಸುತ್ತಿವೆ. ಈ ಘನಂದಾರಿ ಕೆಲಸಕ್ಕಾಗಿ ಅವಕ್ಕೆ ಅಪಾರ ಪ್ರಮಾಣದ ಧನ ಸಹಾಯವೂ ಬರುತ್ತದೆ. ಈ ಹುನ್ನಾರವನ್ನು ಅರಿಯದೆ ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಕ್ಕೆ ಏನೆನ್ನಬೇಕೋ ತಿಳಿಯದು. ರಾಹುಲ್ ಗಾಂಧಿ ಕೊನೆಗೂ ಕಾಂಗ್ರೆಸ್ ಗಾಡಿಯ ನೊಗಕ್ಕೆ ಹೆಗಲು ಕೊಡಲು ಮನಸ್ಸು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದ ಪ್ರಧಾನಮಂತ್ರಿಯೂ ಆಗುತ್ತೇನೆಂದು ಹೇಳುವ ಧೈರ್ಯ ತೋರಿದ್ದಾರೆ. ಅದು ಒಳ್ಳೆಯದೇ ಅಂತಿಟ್ಟುಕೊಳ್ಳೋಣ. ಈ ಘೊಷಣೆಯಿಂದ ಯಾರಿಗೆ ಎಷ್ಟು ಸಮಾಧಾನ, ಖುಷಿಯಾಗಿದೆಯೋ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top