ಆರ್ಥಿಕತೆ ಚೇತರಿಕೆಗೆ ಸಾಕ್ಷಿ – ಗೂಗಲ್‌ನಿಂದ 75 ಸಾವಿರ ಕೋಟಿ ರೂ. ಹೂಡಿಕೆ

ಗಡಿಯಲ್ಲಿ ಚೀನಾ ಬೆದರಿಕೆ, ಗಡಿಯೊಳಕ್ಕೆ ಕೊರೊನಾ ವೈರಸ್ ಹಾವಳಿ ಉಂಟು ಮಾಡಿರುವ ನಕಾರಾತ್ಮಕ ಪರಿಣಾಮಗಳ ನಡುವೆಯೇ ಭಾರತದ ಆರ್ಥಿಕತೆಗೆ ಹೊಸ ಹುಮ್ಮಸ್ಸು ತರುವ ಬೆಳವಣಿಗೆ ಕಂಡು ಬಂದಿದೆ. ಜಗತ್ತಿನ ಅತಿದೊಡ್ಡ ಟೆಕ್ ಕಂಪನಿ ಗೂಗಲ್ ಮುಂಬರುವ 5ರಿಂದ 7 ವರ್ಷಗಳಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಘೋಷಣೆ ಮಾಡಿದೆ. ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದವರೇ ಆದ ಗೂಗಲ್ ಸಿಇಒ ಸುಂದರ್ ಪಿಚೈ ಜೊತೆ ನಡೆಸಿದ ಮಾತುಕತೆಯ ಬೆನ್ನೆಲ್ಲೇ ಆ […]

Read More

ಎನ್‌ಕೌಂಟರ್ ಬಗ್ಗೆ ಪ್ರಶ್ನೆಗಳು – ನ್ಯಾಯಾಂಗ ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿ

ಕಳೆದ ವಾರ ಉತ್ತರ ಪ್ರದೇಶದಲ್ಲಿ ಎಂಟು ಪೊಲೀಸರನ್ನು ಹತ್ಯೆಗೈದಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಶುಕ್ರವಾರ ಬೆಳಗ್ಗೆ ಹೊಡೆದುರುಳಿಸಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಿಕ್ಕಿಬಿದ್ದ ದುಬೆಯನ್ನು ಕಾನ್ಪುರಕ್ಕೆ ಕರೆತರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರಿನಿಂದ ತಪ್ಪಿಸಿಕೊಂಡು ಪೊಲೀಸರ ಗನ್ ಸೆಳೆದು ಅವರ ಮೇಲೆ ಗುಂಡಿಕ್ಕಿ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಗುಂಡಿಕ್ಕಿ ಕೊಂದುಹಾಕಿದ್ದಾರೆ. ಪೊಲೀಸರ ಈ ನಡೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದೊಂದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ನಿಗಾದಲ್ಲಿ […]

Read More

ಚೀನಾದ ದಾಹ ಮಣಿಸಿದ ಭಾರತದ ವ್ಯೂಹ

– ಡ್ರ್ಯಾಗನ್ ದೇಶದ ಕ್ಷುದ್ರತನಕ್ಕೆ ಎದುರೇಟು ನೀಡಲು ಮುಂದಾಗಿದೆ ಅಂತಾರಾಷ್ಟ್ರೀಯ ಸಮುದಾಯ. – ಹರಿಪ್ರಕಾಶ್ ಕೋಣೆಮನೆ. ಇದುವರೆಗೆ ಭಾರತದ ಪಾಲಿಗೆ ಗಡಿಯಲ್ಲಿ ಮತ್ತು ಉಡಿಯಲ್ಲಿ ಕಟ್ಟಿಕೊಂಡ ಕೆಂಡದಂತಿದ್ದ ಚೀನಾ, ಈಗ ಕರಕಲಾದ ಇದ್ದಿಲಿನಂತಾಗಿದೆ ಎಂದರೆ ಉತ್ಪ್ರೇಕ್ಷೆ ಆಗದು. ಅಮೆರಿಕಾಗೆ ಸಡ್ಡು ಹೊಡೆದು ಜಾಗತಿಕ ಪರ್ಯಾಯ ಶಕ್ತಿಯಾಗುವೆ ಎಂದು ಜಗತ್ತಿನ ಎದುರು ಬೀಗುತ್ತಿದ್ದ ಆ ರಾಷ್ಟ್ರ ಸದ್ಯಕ್ಕಂತೂ ಏಕಾಂಗಿಯಾಗಿದೆ. ಸ್ವಾರಸ್ಯ ಎಂದರೆ, ಚೀನಾ ವಿರುದ್ಧವೇ ಜಾಗತಿಕ ಒಕ್ಕೂಟ ರಚನೆಯಾಗುವ ಮುನ್ಸೂಚನೆಗಳು ಕಾಣುತ್ತಿವೆ. ನಿಜವಾಗಿಯೂ ಚೀನಾಗೆ ಜಾಗತಿಕ ಶಕ್ತಿಯಾಗುವ ಅರ್ಹತೆ […]

Read More

ಕೊರೊನಾ ಯೋಧರ ಕೊರತೆ – ವೈದ್ಯರೇ, ಸಮಾಜ ನಿಮ್ಮನ್ನೇ ನಂಬಿದೆ

ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಕೆಯಿಂದ ಆಗಿರುವ ಹಲವು ದುಷ್ಪರಿಣಾಮಗಳ ನಡುವೆ, ವೈದ್ಯರ ಕೊರತೆಯೂ ಒಂದು ಹಾಗೂ ಹೆಚ್ಚು ಗಂಭೀರವಾದುದು. ಸರಕಾರಿ ಆಸ್ಪತ್ರೆಗಳಲ್ಲಿ ಮೊದಲೇ ವೈದ್ಯರ ಕೊರತೆಯಿದೆ. ನಿಗದಿತ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೇವೆ ಕಡ್ಡಾಯಗೊಂಡಿರುವ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಒಂದು ವಾರ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಎರಡು ವಾರ ಐಸೋಲೇಶನ್‌ ಆಗಬೇಕಿರುವುದರಿಂದ ವೈದ್ಯರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗುತ್ತದೆ. ಅದರಲ್ಲೂ ಕೆಲವು ವೈದ್ಯರಿಗೆ ಸೋಂಕು ತಗುಲಿರುವುದರಿಂದ ಕ್ವಾರಂಟೈನ್‌ ಆಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವೇ ಆಸ್ಪತ್ರೆಗಳು ಮಾತ್ರ […]

Read More

ಆನ್‌ಲೈನ್‌ ಕ್ಲಾಸ್‌ಗೆ ಸವಾಲುಗಳು : ಉಳ್ಳವರ – ಇಲ್ಲದವರ ಅಂತರ ಹೆಚ್ಚಾಗದಿರಲಿ

ಖಾಸಗಿ ಶಾಲೆಗಳು ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸುವುದಕ್ಕೆ ಸರಕಾರ ವಿಧಿಸಿರುವ ನಿರ್ಬಂಧಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ‘ಇದು ಸಂವಿಧಾನದ 21 ಹಾಗೂ 21ಎ ವಿಧಿಯಯನ್ವಯ ಪ್ರಜೆಗಳಿಗೆ ದತ್ತವಾಗಿರುವ ಬದುಕಿನ ಹಾಗೂ ಶಿಕ್ಷಣದ ಹಕ್ಕನ್ನು ನಿರಾಕರಿಸಿದಂತಾಗಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರಿಂದ, ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಲು ಮುಂದಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ರಹದಾರಿ ದೊರೆತಂತಾಗಿದೆ. ಆದರೆ ಈ ಆದೇಶ, ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ಅಥವಾ ಆನ್‌ಲೈನ್‌ ಕ್ಲಾಸುಗಳನ್ನು ಕಡ್ಡಾಯ ಮಾಡಲು […]

Read More

ಮಾನವೀಯ ಅಂತ್ಯಸಂಸ್ಕಾರದ ಅಗತ್ಯ – ಕೋವಿಡ್‌ ಮೃತರನ್ನು ಗೌರವದಿಂದ ಕಳಿಸಿಕೊಡೋಣ

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಪರಿಸ್ಥಿತಿ ಗೋಜಲಾಗಿದೆ. ಕೆಲವು ಕಡೆ ಶವಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಕೆಲವು ಕಡೆ ಅಮಾನವೀಯವಾಗಿ ನಾಲ್ಕಾರು ಹೆಣಗಳನ್ನು ಒಟ್ಟಿಗೇ ಗುಂಡಿಗೆಸೆದಿರುವುದು ವಿಡಿಯೋ ಚಿತ್ರೀಕೃತಗೊಂಡು ವೈರಲ್‌ ಆದ ಬಳಿಕ, ಜನರಲ್ಲಿ ಭೀತಿಯೂ ತಲೆದೋರಿದೆ. ಕೋವಿಡ್‌ ಪೀಡಿತರನ್ನು ದೂರವಿಟ್ಟು ನಡೆಸಿಕೊಳ್ಳುವುದು ಸಹಜ, ಯಾಕೆಂದರೆ ಸೋಂಕು ಹರಡುವ ಭಯವಿದೆ. ಆದರೆ ಶವಸಂಸ್ಕಾರ ಕನಿಷ್ಠ ಗೌರವಯುತವಾಗಿ ನಡೆಸಬೇಕು ಎಂಬುದು ಮಾನವೀಯ ಸಮಾಜದಲ್ಲಿ ನಂಬಿಕೆಯಿಟ್ಟಿರುವ ಎಲ್ಲರ ಕಳಕಳಿ. ಸತ್ತವರನ್ನು ಸರಿಯಾಗಿ ಕಳಿಸಿಕೊಡಲಿಲ್ಲವಲ್ಲ ಎಂಬುದು ಬಂಧುಗಳಿಗೆ ನಿರಂತರ ಶೋಕವಾಗಬಾರದು. ಕೋವಿಡ್‌ನಿಂದ ಮೃತರಾದವರನ್ನು ಮಣ್ಣು ಮಾಡುತ್ತಿರುವ […]

Read More

ಚೀನಾಗೆ ಮರೆಯಲಾಗದ ಪಾಠ – ವಿಸ್ತರಣಾಕಾಂಕ್ಷಿ ಚೀನಾವನ್ನು ನಂಬಲಾಗದು

ಇತರ ಸಣ್ಣ ದೇಶಗಳನ್ನು ಸಾಲ ನೀಡಿ ವಶೀಕರಿಸಿಕೊಂಡಂತೆ ಭಾರತವನ್ನು ವಸಾಹತು ಮಾಡಿಕೊಳ್ಳಲು ಸಾಧ್ಯವಾಗದು ಎಂದು ಅರಿತಿರುವ ಚೀನಾ, ಗಡಿ ತಂಟೆಗಳ ಮೂಲಕ ಭಾರತವನ್ನು ಆಗಾಗ ಬೆದರಿಸಲು ಹಾಗೂ ವಶದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಕಳೆದ ತಿಂಗಳು ಲೇಹ್‌ ಸಮೀಪದ ಗಲ್ವಾನ್‌ ಕಣಿವೆಯಲ್ಲಿ ನಡೆದದ್ದು ಚೀನಾದ ಇಂತದೇ ಒಂದು ಪ್ರಯತ್ನ. ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಯೋಧರನ್ನು ಕಳೆದುಕೊಂಡ ಭಾರತ, ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ತೋರಿತು. ಉಲ್ಬಣಿಸಿದ ಸನ್ನಿವೇಶವನ್ನು ಸರಿಪಡಿಸಲು ಉಭಯ ಕಡೆಗಳ ಕಮಾಂಡರ್‌ ಮಟ್ಟದ ಹಾಗೂ ರಾಜತಾಂತ್ರಿಕ ಪ್ರತಿನಿಧಿಗಳ ಮಟ್ಟದ […]

Read More

ಕೊರೊನಾ ತುರ್ತು ಪರಿಸ್ಥಿತಿ – ಕೈ ಮೀರಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ

ಕಳೆದ ಒಂದು ವಾರದಿಂದ ರಾಜ್ಯದಲ್ಲಿ, ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಾಬರಿಯಾಗುವಷ್ಟು ಏರುತ್ತಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲೇ ಹೊಸ ರೋಗಿಗಳ ಸಂಖ್ಯೆ ಪ್ರತಿದಿನ ಒಂದು ಸಾವಿರಕ್ಕಿಂತಲೂ ಹೆಚ್ಚು ವರದಿಯಾಗುತ್ತಿದೆ. ಭಾನುವಾರ ರಾಜ್ಯದಲ್ಲಿ ಕೋವಿಡ್‌ನಿಂದ 37 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 20 ಸಾವಿರದ ಗಡಿ ದಾಟಿದೆ. ಇದು ಆರೋಗ್ಯ ತುರ್ತು ಪರಿಸ್ಥತಿಯೇ ಸರಿ. ಇತ್ತೀಚೆಗೆ ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರದಿಂದ ಶ್ಲಾಘನೆ ಪಡೆದ ರಾಜ್ಯದಲ್ಲಿ, ವಾಸ್ತವ ಸ್ಥಿತಿ ಹಾಗಿಲ್ಲ ಎಂಬುದು ರುಜುವಾತಾಗಿದೆ. ಕೊರೊನಾದ ರುದ್ರ […]

Read More

ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ – ಸುರಕ್ಷಿತ ಕ್ರಮಗಳೊಂದಿಗೆ ಮಾದರಿ

ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಕೊರೊನಾ ವೈರಸ್‌ನ ಆತಂಕಕಾರಿ ಹಬ್ಬುವಿಕೆಯ ನಡುವೆಯೂ ಜೂನ್‌ 25ರಿಂದ ಆರಂಭಗೊಂಡಿದ್ದ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದೆ. ಸುಮಾರು 8.50 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.98.10ರಷ್ಟಿತ್ತು. ಪ್ರತಿ ಪರೀಕ್ಷೆಗೂ ಶೇ.98 ವಿದ್ಯಾರ್ಥಿಗಳು ವೈರಾಣುವಿನ ಭಯ ಮೀರಿ ಹಾಜರಾಗಿದ್ದರು. 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದು ಪರೀಕ್ಷಾ ಕೇಂದ್ರಗಳಿಂದ ಬಂದದ್ದಲ್ಲ ಎಂದು ಸರಕಾರ ಹೇಳಿದೆ. ಇವರೂ ಸೇರಿದಂತೆ, ಕ್ವಾರಂಟೈನ್‌ನಲ್ಲಿರುವ […]

Read More

ನಿರ್ಬಂಧ ಮೊದಲ ಹೆಜ್ಜೆ – ಇದು ಸ್ವಾವಲಂಬನೆಯ ಪಾಠವಾಗಲಿ

ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ಸರಕಾರ ನಿರ್ಬಂಧಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ಚೀನಾ ಮೂಲದ ವೀಬೋ ಸಾಮಾಜಿಕ ಜಾಲತಾಣದಿಂದ ಹೊರಬಂದಿದ್ದು, ಅದರಲ್ಲಿದ್ದ ತಮ್ಮ ಖಾತೆಯನ್ನು ಅಳಿಸಿಹಾಕಿದ್ದಾರೆ. ದೇಶದ ಭದ್ರತೆ, ಸಾರ್ವಭೌಮತೆ, ಸಂಸ್ಕೃತಿಗಳಿಗೆ ಹಾನಿಕಾರಕವಾದ ಅಂಶಗಳನ್ನು ಹೊಂದಿರುವುದರಿಂದ ಈ ಆ್ಯಪ್‌ಗಳನ್ನು ನಿಷೇಧಿಸುತ್ತಿರುವುದಾಗಿ ಸರಕಾರ ತಿಳಿಸಿದೆ. ಈ 59 ಆ್ಯಪ್‌ಗಳಲ್ಲಿ ಟಿಕ್‌ಟಾಕ್‌ನಂಥ ಜನಪ್ರಿಯ ವಿಡಿಯೋ ಬ್ಲಾಗಿಂಗ್‌ ಆ್ಯಪ್‌ಗಳೂ ಇದ್ದು, ಇದನ್ನು ದೇಶದಲ್ಲಿ 20 ಲಕ್ಷಕ್ಕಿಂತಲೂ ಅಧಿಕ ಮಂದಿ ಡೌನ್‌ಲೋಡ್‌ ಮಾಡಿಕೊಂಡು ಬಳಸುತ್ತಿದ್ದರು. ಕಳೆದ ತಿಂಗಳು ಭಾರತದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top