ಪ್ರಯತ್ನ ಪರಿಶ್ರಮ ಅಭ್ಯಾಸ – ಯುಪಿಎಸ್‌ಸಿ ಟಾಪರ್ಸ್ ಯಶಸ್ಸಿನ ಕೀಲಿಕೈ

– ಪರೀಕ್ಷೆ ಆಕಾಂಕ್ಷಿಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ. ವಿಕ ಸುದ್ದಿಲೋಕ ಬೆಂಗಳೂರು. ‘‘ಸತತ ಪ್ರಯತ್ನ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಿಂದಾಗಿ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್‌ಎಸ್‌ ಸೇರಿದಂತೆ ಇತರ ಹುದ್ದೆಗಳ ಭರ್ತಿಗೆ ‘ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)’ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಬಹುದೇ ಹೊರತು, ಬಡತನ, ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶ ಹಾಗೂ ಇತರೆ ಯಾವುದೇ ಸಮಸ್ಯೆಗಳು ಸಾಧನೆಗೆ ಅಡ್ಡಿ ಬರುವುದಿಲ್ಲ,’’ ಎಂಬುದು ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವ ರಾಜ್ಯದ ಅಗ್ರ ಶ್ರೇಯಾಂಕಿತರ […]

Read More

ಮಂದಿರವೆಂಬುದು ಸ್ಥಾವರವಲ್ಲ, ಮೌಲ್ಯಗಳ ಪ್ರತೀಕ

ಪ್ರತಿಪಕ್ಷದಲ್ಲೂ ಕೇಳಿಬಂತು ರಾಮನೇ ರಾಷ್ಟ್ರೀಯ ಏಕತೆಯ ಸಂಕೇತ ಎಂಬ ಒಕ್ಕೊರಲ ದನಿ – ಹರಿಪ್ರಕಾಶ್‌ ಕೋಣೆಮನೆ. ‘‘ಶ್ರೀ ರಾಮನ ಗುಣಸಂಪನ್ನತೆಯು ಇಡೀ ಭರತ ಖಂಡಕ್ಕೆ ಏಕತೆಯ ಸಂದೇಶವನ್ನು ಸಾರಿತ್ತು. ಭಾರತವಷ್ಟೇ ಏಕೆ, ಇಡೀ ವಿಶ್ವದ ನಾಗರಿಕತೆಯಲ್ಲಿ ರಾಮನ ಹೆಜ್ಜೆಗುರುತುಗಳನ್ನು ಅಳಿಸಲಾಗದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತ ಮರ್ಯಾದಾ ಪುರುಷೋತ್ತಮನೇ ಹೌದು…,’’ -ಕಾಂಗ್ರೆಸ್‌ನ ವರಿಷ್ಠ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಮಭಜನೆ ಮಾಡುತ್ತಿರುವ ಪರಿ ಇದು. ನಿಸ್ಸಂದೇಹವಾಗಿ ಇದೊಂದು ಒಳ್ಳೆಯ ಬೆಳವಣಿಗೆ. ಅಜಮಾಸು ಮೂವತ್ತು ವರ್ಷಗಳ ನಂತರ ಕಾಂಗ್ರೆಸ್‌ನ […]

Read More

ಶ್ರೀರಾಮನ ಆದರ್ಶಗಳ ತಾಣ – ಆಧ್ಯಾತ್ಮಿಕ ಜಾಗೃತಿಯ ಕೇಂದ್ರಕ್ಕೆ ಅಡಿಗಲ್ಲು

ಕೋಟ್ಯಂತರ ಭಾರತೀಯರ ಶ್ರದ್ಧೆ- ನಂಬಿಕೆಗಳ ನೆಲೆಯಾಗಿ, ಆಸ್ತಿಕತೆಯ ಅಸ್ತಿಭಾರವಾಗಿ ರೂಪುಗೊಳ್ಳಲಿರುವ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಕಾರ್ಯಕ್ರಮ ಇಂದು ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಳೆದ ವರ್ಷ ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೂ ಈ ಜಾಗ ದಾಖಲೆಗಳಲ್ಲಿ ವಿವಾದಿತವಾಗಿಯೇ ಉಳಿದಿತ್ತು; ಆದರೆ ಭಾರತೀಯರ ಭಾವಕೋಶದಲ್ಲಿ ಅದು ಯಾವತ್ತಿಗೂ ಶ್ರೀ ರಾಮಚಂದ್ರನಿಗೆ ಸೇರಿದ್ದಾಗಿತ್ತು. ಪುರಾತತ್ವ ಇಲಾಖೆಯ ಉತ್ಖನನ ಸಾಕ್ಷ್ಯಗಳು, ಸುಪ್ರೀಂ ಕೋರ್ಟ್‌ನ ತೀರ್ಪು ನಿಸ್ಸಂಶಯವಾಗಿ ಅದನ್ನು ದೃಢಪಡಿಸಿದವು. ಈಗ ಭವ್ಯ […]

Read More

ನಿರ್ಧಾರ ಅಚಲವಾಗಿರಲಿ – ಶಾಲೆ ಆರಂಭದ ಬಗ್ಗೆ ಸಚಿವರ ವಿಶಿಷ್ಟ ಕ್ರಮ

ಕೊರೊನಾದಿಂದ ಅಸ್ತವ್ಯಸ್ತಗೊಂಡಿರುವ ಜನಜೀವನವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಸಂಬಂಧ ‘ಅನ್‌ಲಾಕ್‌’ ಪ್ರಕ್ರಿಯೆ ಜಾರಿಯಲ್ಲಿದೆ. ಅದೇ ರೀತಿ, ಶಾಲೆಗಳನ್ನು ಆರಂಭಿಸಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಶಾಲೆ ಆರಂಭದ ವಿಷಯದಲ್ಲಿ ಪೋಷಕರ ಆತಂಕವೂ ಸಹಜವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಸಮಾಜದ ಎಲ್ಲವರ್ಗದ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅದರಂತೆ, ಸೋಮವಾರ ಸಚಿವರು ‘ವಿಜಯ ಕರ್ನಾಟಕ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರ ಜತೆ ಚರ್ಚಿಸಿದ್ದಾರೆ. ಕೊರೊನಾ ಮಧ್ಯೆಯೂ […]

Read More

ಶೈಕ್ಷಣಿಕ ಚಟುವಟಿಕೆ ಶೀಘ್ರ ಆರಂಭಿಸಿ – ಪತ್ರಿಕಾ ಸಂಪಾದಕರ ಜತೆಗಿನ ವೆಬಿನಾರ್‌ನಲ್ಲಿ ಸಚಿವರಿಗೆ ಸಲಹೆ

ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಸಂಕಷ್ಟ ಸಮಯದಲ್ಲೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ತಂತ್ರಜ್ಞಾನ ಸೇರಿದಂತೆ ಲಭ್ಯ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ ಚಟುವಟಿಕೆಯನ್ನು ಶೀಘ್ರದಲ್ಲೇ ಆರಂಭಿಸಬೇಕು. ಈ ಸಂಬಂಧ ರಾಜ್ಯ ಸರಕಾರ ಸರಕಾರ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರು ಸರಕಾರಕ್ಕೆ ಸಲಹೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷ ಣ ಮತ್ತು ಶಾಲಾ ಚಟುವಟಿಕೆಗಳನ್ನು ಯಾವಾಗ ಪ್ರಾರಂಭಿಸಬೇಕು ಕುರಿತು ಅಭಿಪ್ರಾಯ ಸಂಗ್ರಹಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಣ ಸಚಿವ ಎಸ್. […]

Read More

ಸರಕಾರಿ ಆಸ್ಪತ್ರೆ ಬಲಪಡಿಸಿ – ಕೋವಿಡ್‌ ಕಾಲದಲ್ಲಿ ಸರಕಾರವೇ ಆಶಾಕಿರಣ

ದುಡ್ಡಿದ್ದವರಿಗೆ ಖಾಸಗಿ ಆಸ್ಪತ್ರೆ, ಬಡವರಿಗೆ ಸರಕಾರಿ ಆಸ್ಪತ್ರೆ ಎಂಬ ಸಮೀಕರಣ ಇದುವರೆಗೂ ನಮ್ಮ ದೇಶದಲ್ಲಿತ್ತು. ಯಾವಾಗ ಕೊರೊನಾ ಬಂದು ಎಲ್ಲ ಕಡೆಯೂ ಹಬ್ಬಿ ರೋಗಿಗಳ ಸಂಖ್ಯೆ ಊಹಿಸಲಾಗದಷ್ಟು ಹೆಚ್ಚಾಯಿತೋ, ಆಗ ಸರಕಾರಿ ಆಸ್ಪತ್ರೆಗಳ ಮಹತ್ವ ಮತ್ತು ಕಾರ್ಯಭಾರ ಎಲ್ಲರಿಗೆ ಅರ್ಥವಾಗತೊಡಗಿದೆ. ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಾಗಿ ರಾಜಧಾನಿಯ ದೊಡ್ಡ ಸರಕಾರಿ ಆಸ್ಪತ್ರೆಗಳು ತುಂಬಿವೆ; ಜಿಲ್ಲಾಸ್ಪತ್ರೆಗಳೂ ತುಂಬಿ ತುಳುಕುತ್ತಿವೆ. ಸರಕಾರ ಎಷ್ಟೇ ಕಾಯಿದೆ ಕಾನೂನು ರೂಪಿಸಿದರೂ ಎಚ್ಚರಿಕೆ ನೀಡಿದರೂ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿವೆ. ಹತ್ತಾರು […]

Read More

ಸಮಗ್ರ ಶಿಕ್ಷಣದ ಅಗತ್ಯ – ಆನ್‌ಲೈನ್‌-ಆಫ್‌ಲೈನ್‌ ಜೊತೆಗೂಡಿಸಬೇಕು

ಕೊರೊನಾ ಸೋಂಕಿನ ಆತಂಕದಿಂದ ಸ್ಥಗಿತಗೊಂಡಿರುವ ಶೈಕ್ಷಣಿಕ ರಂಗಕ್ಕೆ ಮರುಜೀವ ತುಂಬುದು ನಿಜಕ್ಕೂ ಒಂದು ಸವಾಲಿನ ಕೆಲಸ. ಈ ಬಗ್ಗೆ ‘ವಿಜಯ ಕರ್ನಾಟಕ’ ನಡೆಸಿದ ವೆಬಿನಾರ್‌ನಲ್ಲಿ ಮಹತ್ವದ ಅಭಿಪ್ರಾಯಗಳು ಹಾಗೂ ಭರವಸೆಯ ಆಶಾಕಿರಣಗಳು ಮೂಡಿಬಂದಿವೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಸೆದ ಸಂಯೋಜಿತ ಶಿಕ್ಷಣ ಭವಿಷ್ಯದ ದೃಷ್ಟಿಯಿಂದಲೂ ಅನಿವಾರ್ಯವಾಗಿರುವುದರಿಂದ ಎರಡಕ್ಕೂ ಒತ್ತು ನೀಡುವ ಹೊಸ ಸಂಯೋಜನೆಯನ್ನು ರೂಪಿಸಬೇಕು ಎಂಬುದು ಈ ಕಾರ್ಯಕ್ರಮದಲ್ಲಿ ಮೂಡಿಬಂದ ಮುನ್ನೋಟ. ಆನ್‌ಲೈನ್‌ ಶಿಕ್ಷಣ ಹಳ್ಳಿ ಹಳ್ಳಿಗೆ ತಲುಪಬೇಕೆಂದರೆ, ಇನ್ನಷ್ಟು ಇಂಟರ್ನೆಟ್‌ ಕ್ರಾಂತಿ ಆಗಬೇಕಾದುದು ಅಗತ್ಯ. ಅದಕ್ಕೆ […]

Read More

ಕೋವಿಡ್‌ ಜ್ಞಾನವೇ ಆಯುಧ – ಆತಂಕರಹಿತ ರೋಗನಿರೋಧಕ ವ್ಯವಸ್ಥೆಯ ಅಗತ್ಯ

ದಿನ ಕಳೆದಂತೆ ಕೊರೊನಾ ಸೋಂಕಿನ ಬಗ್ಗೆ ಹೊಸ ಹೊಸ ಮಾಹಿತಿಗಳು ದೊರೆಯುತ್ತಿವೆ. ದೊರೆಯುತ್ತಿರುವ ಅಂಕಿ- ಅಂಶ, ಮಾಹಿತಿಗಳನ್ನು ಬಗೆದು ನೋಡಿದರೆ ನಾವು ಇದುವರೆಗೆ ಕೋವಿಡ್‌ ಬಗ್ಗೆ ನಂಬಿಕೊಂಡು ಬಂದಿರುವ ಹಲವು ಸಂಗತಿಗಳನ್ನೇ ನಿರಾಕರಿಸಬಹುದಾದ ಹಾಗಿದೆ. ಉದಾಹರಣೆಗೆ, ಕೋವಿಡ್‌ ಪಾಸಿಟಿವ್‌ ಬಂದ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಈಗ ನಮ್ಮ ರಾಜ್ಯ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಕೂಡ, ಲಕ್ಷಣಗಳಿಲ್ಲದ ಸೋಂಕಿತರು ಅಷ್ಟೇನೂ ಅಪಾಯದ ಅಂಚಿನಲ್ಲಿರುವವರಲ್ಲ, ಹಾಗಾಗಿ ಅವರು ಮನೆ ಕ್ವಾರಂಟೈನ್‌ನಲ್ಲಿದ್ದರೆ […]

Read More

ಇವೆಲ್ಲವೂ ಕೋವಿಡ್‌ ಸಾವುಗಳಲ್ಲ – ಕೊರೊನಾ ಸೋಂಕಿನ ಬಗ್ಗೆ ಅತಿಯಾದ ಭಯ ಸಲ್ಲ

ಕೊರೊನಾ ಸೋಂಕು ಪತ್ತೆ ಹಾಗೂ ಸಾವಿನ ಪ್ರಕರಣಗಳಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರತಿದಿನವೂ ಒಂದೊಂದು ಹೊಸ ದಾಖಲೆ ಸೃಷ್ಟಿಯಾಗುತ್ತಲೇ ಇದೆ. ಬುಧವಾರ ರಾಜ್ಯದಲ್ಲಿ ಒಟ್ಟಾರೆ 87 ಸಾವು ಹಾಗೂ ರಾಜಧಾನಿಯಲ್ಲೇ 60 ಮಂದಿ ಸತ್ತಿರುವುದು ವರದಿಯಾಗಿದೆ. ಈ ಸಾವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇವರಲ್ಲಿ ಎಲ್ಲರೂ ಒಂದಲ್ಲ ಒಂದು ಕೋಮೋರ್ಬಿಡಿಟೀಸ್‌ ಅಥವಾ ಪೂರ್ವಕಾಯಿಲೆಗಳಿಂದ ನರಳುತ್ತಿದ್ದುದು ಖಚಿತವಾಗಿದೆ. ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದವರಿಗೆ ಕೊರೊನಾ ಸೋಂಕಿನ ಪರಿಣಾಮ ಈ ಕಾಯಿಲೆಗಳು ಉಲ್ಬಣಾವಸ್ಥೆಗೇರಿ […]

Read More

ಆರ್ಥಿಕತೆ ಚೇತರಿಕೆಗೆ ಸಾಕ್ಷಿ – ಗೂಗಲ್‌ನಿಂದ 75 ಸಾವಿರ ಕೋಟಿ ರೂ. ಹೂಡಿಕೆ

ಗಡಿಯಲ್ಲಿ ಚೀನಾ ಬೆದರಿಕೆ, ಗಡಿಯೊಳಕ್ಕೆ ಕೊರೊನಾ ವೈರಸ್ ಹಾವಳಿ ಉಂಟು ಮಾಡಿರುವ ನಕಾರಾತ್ಮಕ ಪರಿಣಾಮಗಳ ನಡುವೆಯೇ ಭಾರತದ ಆರ್ಥಿಕತೆಗೆ ಹೊಸ ಹುಮ್ಮಸ್ಸು ತರುವ ಬೆಳವಣಿಗೆ ಕಂಡು ಬಂದಿದೆ. ಜಗತ್ತಿನ ಅತಿದೊಡ್ಡ ಟೆಕ್ ಕಂಪನಿ ಗೂಗಲ್ ಮುಂಬರುವ 5ರಿಂದ 7 ವರ್ಷಗಳಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಘೋಷಣೆ ಮಾಡಿದೆ. ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದವರೇ ಆದ ಗೂಗಲ್ ಸಿಇಒ ಸುಂದರ್ ಪಿಚೈ ಜೊತೆ ನಡೆಸಿದ ಮಾತುಕತೆಯ ಬೆನ್ನೆಲ್ಲೇ ಆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter

[subscribe2 hide="unsubscribe"]
 

Back To Top