ಮೌನ ಮುರಿದ ಕುಮಾರಸ್ವಾಮಿ – ಮುಂದಿನ ಚುನಾವಣೆಗಾಗಿ ಅಸ್ತಿತ್ವದ ಹುಡುಕಾಟಕ್ಕಿಳಿದ ಮಾಜಿ ಸಿಎಂ

– ಶಶಿಧರ ಹೆಗಡೆ. ಮೌನಕ್ಕೆ ಅಪೂರ್ವವಾದ ಶಕ್ತಿಯಿದೆ. ಮೌನ ವ್ರತಧಾರಣೆ ಮಾಡಿದವ ದಿವ್ಯಾನುಭೂತಿಗೆ ಒಳಗಾಗುತ್ತಾನೆ. ಮೌನ ಹೃದಯದ ಭಾಷೆ. ಅದು ಮರ್ಕಟ ಮನಸ್ಸನ್ನು ನಿಯಂತ್ರಿಸುತ್ತದೆ ಎನ್ನುವ ಹಾಗೆ ವ್ಯಾಖ್ಯಾನಗಳಿವೆ. ಮೌನವಾಗಿದ್ದು ಆತ್ಮಾವಲೋಕನ ಮಾಡಿಕೊಂಡವರ ಎದುರು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಹಿಂದಿನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ದೊರಕುತ್ತದೆ. ಮೌನದ ಗವಿಯಿಂದ ಹೊರಬಂದು ಆಡುವ ಮಾತುಗಳಿಗೂ ಅಷ್ಟೇ ಮಹತ್ವವಿರುತ್ತದೆ. ಚತುರರಾದವರು ಮೌನ ಮತ್ತು ಮೌನೋತ್ತರ ಸಂದರ್ಭವನ್ನು ಭವಿಷ್ಯದ ದಾರಿ ಸುಗಮಗೊಳಿಸಲು ಬಳಸುತ್ತಾರೆ. ಅದರಲ್ಲೂ ರಾಜಕಾರಣಿಗಳಿಗೆ ತಂತ್ರಗಾರಿಕೆಯೇ ಜೀವದ್ರವ್ಯ. ರಾಜಕೀಯದ ಜಂಜಾಟದಲ್ಲಿ […]

Read More

ಅಂತ್ಯಕ್ರಿಯೆ ಮಾನವೀಯ ಆಗಿರಲಿ

– ಕೊರೊನಾ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಅನಗತ್ಯ ಭಯ ಬೇಡ – ಸುರಕ್ಷಿತ ಕ್ರಮದೊಂದಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರೆ ಅಪಾಯವಿಲ್ಲ. ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಸೋಂಕಿನಿಂದ ದಾರುಣವಾಗಿ ಮೃತಪಡುವವರ ಅಂತಿಮ ಸಂಸ್ಕಾರ ಪ್ರಕ್ರಿಯೆ ಮತ್ತಷ್ಟು ದಯನೀಯವಾಗುತ್ತಿದೆ. ಶವ ಸಂಸ್ಕಾರದಿಂದ ರೋಗ ಹರಡಬಹುದೆಂಬ ಅನಗತ್ಯ ಭೀತಿ ಜನರಲ್ಲಿ ಆವರಿಸಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಅಂತ್ಯಸಂಸ್ಕಾರದ ವೇಳೆ ಸಮೀಪದ ಬಂಧುಗಳು ಸುರಕ್ಷಿತ ಕ್ರಮಗಳೊಂದಿಗೆ ಭಾಗವಹಿಸಬಹುದು ಎಂಬ ಅಂಶ ಕೇಂದ್ರ ಸರಕಾರದ ಮಾರ್ಗಸೂಚಿಯಲ್ಲೇ ಇದೆ. ಸುರಕ್ಷಿತ ವಿಧಾನ ಅನುಸರಿಸಿ ಸಮೀಪದ ಬಂಧುಗಳು […]

Read More

ರಾಜ್ಯಸಭೆ ಚುನಾವಣೆ ನೆಪದಲ್ಲಿ ಕಣ್‌ಕಣ್ಣ ಸಲಿಗೆ – ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮರು ಮೈತ್ರಿಗಿದು ಮೇಲ್ಮನೆಯ ರಹದಾರಿಯೇ?

– ಶಶಿಧರ ಹೆಗಡೆ.  ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ’ ಎನ್ನುವ ಮಾತಿಗೆ ಪದೇ ಪದೆ ಮೌಲ್ಯ ದೊರಕುತ್ತದೆ. ಈ ಮೌಲ್ಯವರ್ಧನೆಯ ಕೀರ್ತಿಯೂ ರಾಜಕಾರಣಿಗಳಿಗೇ ಸಲ್ಲಬೇಕು. ರಾಜಕಾರಣಿಗಳು ಮನಸ್ಸು ಮಾಡಿದರೆ ಹಳೆಯ ಅಂಗಿ ಕಳಚಿಟ್ಟು ಹೊಸ ಶರ್ಟ್ ಧರಿಸಿದಷ್ಟೇ ಸುಲಭವಾಗಿ ಪಕ್ಷ ಬದಲಿಸುತ್ತಾರೆ. ಚುನಾವಣಾ ಅಖಾಡದಲ್ಲಿ ಶರಂಪರ ಜಗಳವಾಡಿಕೊಂಡವರು ‘ಅಧಿಕಾರದ ಅನಿವಾರ್ಯತೆ’ ಬಂದೊದಗಿದಾಗ ಗಾಢಾಲಿಂಗನ ಮಾಡಿಕೊಳ್ಳಬಲ್ಲರು. ಅಧಿಕಾರದ ಮೋಹ ಪಾಶದ ಬಲೆಗೆ ಸಿಲುಕಿದವರು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರೂ ರಭಸದಿಂದ ಬಂದು ಒಂದೇ ಬಿಂದುವಿನಲ್ಲಿ ಸಂಧಿಸಬಲ್ಲರು. ಅಂತರಂಗದ ರಾಗ, ದ್ವೇಷವನ್ನು […]

Read More

ಸಾವರ್ಕರ್ ಫ್ಲೈಓವರ್ ಫೈಟ್

– ಸ್ವಾತಂತ್ರ್ಯವೀರನ ನಾಮಕರಣಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧ – ಕ್ಯಾಂಟೀನ್‌ಗೆ ಇಂದಿರಾ ಗಾಂಧಿ ಹೆಸರಿಟ್ಟಿರಲಿಲ್ಲವೇ ಎಂದ ಬಿಜೆಪಿ. ವಿಕ ಸುದ್ದಿಲೋಕ ಬೆಂಗಳೂರು : ಬೆಂಗಳೂರಿನ ಯಶವಂತಪುರ ಮಾರ್ಗವಾಗಿ ಯಲಹಂಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಫ್ಲೈಓವರ್‌ಗೆ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಹೆಸರಿಡುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ತೀವ್ರ ಜಟಾಪಟಿ ನಡೆದಿದೆ. ಈ ವಾದ-ವಿವಾದದ ನಡುವೆಯೇ, ಮೇಲ್ಸೇತುವೆ ಉದ್ಘಾಟನೆ ಸಮಾರಂಭವನ್ನು ರಾಜ್ಯ ಸರಕಾರ ಮುಂದೂಡಿದೆ.ಫ್ಲೈಓವರ್‌ಗೆ ವೀರ ಸಾವರ್ಕರ್ ಹೆಸರಿಡಲು ಫೆಬ್ರವರಿಯಲ್ಲಿ ಬಿಬಿಎಂಪಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು. […]

Read More

ರೈತರ ವಿರೋಧಕ್ಕೆ ಡೋಂಟ್‌ಕೇರ್‌ – ಜನಾಕ್ರೋಶ ಧಿಕ್ಕರಿಸಿ ಎಪಿಎಂಸಿ ತಿದ್ದುಪಡಿ ಕಾಯಿದೆಗೆ ಸಂಪುಟ ಅಸ್ತು

– ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬಾಕಿ, ಪ್ರತಿಪಕ್ಷಗಳಿಂದ ಹೋರಾಟದ ಎಚ್ಚರಿಕೆ  ವಿಕ ಸುದ್ದಿಲೋಕ ಬೆಂಗಳೂರು : ರೈತರು, ರೈತ ಸಂಘಟನೆಗಳು, ಪ್ರತಿಪಕ್ಷಗಳು ಹಾಗೂ ಇನ್ನಿತರ ಬಳಕೆದಾರರ ರಾಜ್ಯವಾಪಿ ತೀವ್ರ ವಿರೋಧದ ನಡುವೆಯೂ ವಿವಾದಿತ ಎಪಿಎಂಸಿ ಕಾಯಿದೆ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತ ಬೀಳುವುದೊಂದು ಬಾಕಿಯಿದೆ. ಈ ಸಂಬಂಧ ಒತ್ತಡ ತಂದಿದ್ದ ಕೇಂದ್ರ ಸರಕಾರ ‘ಮಾದರಿ ಕಾಯಿದೆ’ಯ ಪ್ರತಿಯನ್ನೂ ಕಳುಹಿಸಿಕೊಟ್ಟಿತ್ತು. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top