ಮೌನ ಮುರಿದ ಕುಮಾರಸ್ವಾಮಿ – ಮುಂದಿನ ಚುನಾವಣೆಗಾಗಿ ಅಸ್ತಿತ್ವದ ಹುಡುಕಾಟಕ್ಕಿಳಿದ ಮಾಜಿ ಸಿಎಂ

– ಶಶಿಧರ ಹೆಗಡೆ. ಮೌನಕ್ಕೆ ಅಪೂರ್ವವಾದ ಶಕ್ತಿಯಿದೆ. ಮೌನ ವ್ರತಧಾರಣೆ ಮಾಡಿದವ ದಿವ್ಯಾನುಭೂತಿಗೆ ಒಳಗಾಗುತ್ತಾನೆ. ಮೌನ ಹೃದಯದ ಭಾಷೆ. ಅದು ಮರ್ಕಟ ಮನಸ್ಸನ್ನು ನಿಯಂತ್ರಿಸುತ್ತದೆ ಎನ್ನುವ ಹಾಗೆ ವ್ಯಾಖ್ಯಾನಗಳಿವೆ. ಮೌನವಾಗಿದ್ದು ಆತ್ಮಾವಲೋಕನ ಮಾಡಿಕೊಂಡವರ ಎದುರು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಹಿಂದಿನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ದೊರಕುತ್ತದೆ. ಮೌನದ ಗವಿಯಿಂದ ಹೊರಬಂದು ಆಡುವ ಮಾತುಗಳಿಗೂ ಅಷ್ಟೇ ಮಹತ್ವವಿರುತ್ತದೆ. ಚತುರರಾದವರು ಮೌನ ಮತ್ತು ಮೌನೋತ್ತರ ಸಂದರ್ಭವನ್ನು ಭವಿಷ್ಯದ ದಾರಿ ಸುಗಮಗೊಳಿಸಲು ಬಳಸುತ್ತಾರೆ. ಅದರಲ್ಲೂ ರಾಜಕಾರಣಿಗಳಿಗೆ ತಂತ್ರಗಾರಿಕೆಯೇ ಜೀವದ್ರವ್ಯ. ರಾಜಕೀಯದ ಜಂಜಾಟದಲ್ಲಿ […]

Read More

ಕಾಂಗ್ರೆಸ್‌ಗೊಂದು ಕರ್ನಾಟಕ ಮಾದರಿ

ಡಿಕೆಶಿ ಪಟ್ಟಾಭಿಷೇಕದ ಹುರುಪು, ರಾಷ್ಟ್ರೀಯ ಕಾಂಗ್ರೆಸ್‌ನಲ್ಲೂ ಪುನಶ್ಚೇತನದ ಮಿಂಚು. – ಶಶಿಧರ ಹೆಗಡೆ. ‘ಕೃಷ್ಣ ಸಾರಥ್ಯ’ದೊಂದಿಗೆ 1999ರ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ವರಿಷ್ಠ ಮಂಡಳಿಯಲ್ಲಿ ಸಹಮತ ಮೂಡಿತ್ತು. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರೂ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್‌.ಎಂ.ಕೃಷ್ಣ) ಅವರಿಗೊಂದು ಅವಕಾಶ ನೀಡಲು ಒಲವು ತೋರಿದ್ದರು. ಆದರೆ, ಕೃಷ್ಣ ಹೆಸರು ಪ್ರಕಟವಾಗುವ ಹಂತದಲ್ಲಿ ಯಾರೋ ಪಿನ್‌ ಇಟ್ಟಿದ್ದರು. ಅಖಾಡದ ರಾಜಕಾರಣ ಕೃಷ್ಣ ಅವರಿಗೆ ಒಗ್ಗಿ ಬರುವುದಿಲ್ಲ. ಅವರದ್ದು ಹೈಫೈ ಶೈಲಿ. ಸದಾ ಟೆನ್ನಿಸ್‌ ಆಡುತ್ತ […]

Read More

ಚೀನಾ ಗಡಿಯಲ್ಲಿ ಗುಂಡು ಹಾರಲಿಲ್ಲವೇಕೆ?

ನಲವತ್ತು ವರ್ಷಗಳಿಂದ ಈಚೆಗೆ ಗಲ್ವಾನ್‌ ಪ್ರಕರಣ ನಡೆಯುವವರೆಗೆ ಭಾರತ- ಚೀನಾ ಗಡಿಯಲ್ಲಿ ಒಂದೇ ಒಂದು ಗುಂಡು ಹಾರಿಲ್ಲ, ಒಬ್ಬನೇ ಒಬ್ಬ ಯೋಧ ಮೃತಪಟ್ಟಿಲ್ಲ. ಇದಕ್ಕೆ ಕಾರಣವಾಗಿರುವುದು ಮೂರು ಒಪ್ಪಂದಗಳು. ಚೀನಾ ಈಗ ಈ ಮೂರೂ ಒಪ್ಪಂದಗಳನ್ನು ಸಾರಾ ಸಗಟಾಗಿ ಉಲ್ಲಂಘಿಸಿದೆ. ಯಾವುವೀ ಮೂರು ಒಪ್ಪಂದ? 1993ರ ಒಪ್ಪಂದ ಭಾರತ ಹಾಗೂ ಚೀನಾದ ಗಡಿ ಭದ್ರತೆಯ ವಿಚಾರದಲ್ಲಿ ಮೊದಲ ಬಾರಿ ಏರ್ಪಟ್ಟ ಒಪ್ಪಂದ 1993ರದ್ದು. ಈ ಒಪ್ಪಂದಕ್ಕೆ ಸಹಿ ಹಾಕಿದವರು ಆಗಿನ ಭಾರತ ಪ್ರಧಾನಿ ಪಿ.ವಿ. ನರಸಿಂಹರಾವ್‌. ಇದಕ್ಕೂ […]

Read More

ಮೌಲ್ಯಗಳಿಗೆ ಬಿಜೆಪಿ ಮಣೆ ನಿಷ್ಠೆ, ಸೇವೆಯೇ ಆದರ್ಶ ಎಂದ ಹೈಕಮಾಂಡ್

ರಾಜ್ಯದಿಂದ ತೆರವಾಗಿರುವ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮಗೊಂಡಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಎಚ್‌.ಡಿ.ದೇವೇಗೌಡರು ಅಭ್ಯರ್ಥಿಗಳಾಗಿರುವುದರಲ್ಲಿ ಏನೂ ಅಚ್ಚರಿಯಿಲ್ಲ. ಈಗಾಗಲೇ ಇವರ ಪ್ರಾತಿನಿಧ್ಯವನ್ನು ಜನ ದಶಕಗಳಿಂದ ಕಂಡಿದ್ದಾರೆ. ಬಿಜೆಪಿಯಿಂದಲೂ ಬಲಾಢ್ಯರಾದ ಹಲವು ವ್ಯಕ್ತಿಗಳ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು. ಆದರೆ ಅಚ್ಚರಿ ಎನ್ನುವಂತೆ ಅನಾಮಿಕರಾದ ಇಬ್ಬರ ಆಯ್ಕೆಯಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸಿ ಬಿಜೆಪಿ […]

Read More

ರಾಜ್ಯಸಭೆ ಚುನಾವಣೆ ನೆಪದಲ್ಲಿ ಕಣ್‌ಕಣ್ಣ ಸಲಿಗೆ – ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮರು ಮೈತ್ರಿಗಿದು ಮೇಲ್ಮನೆಯ ರಹದಾರಿಯೇ?

– ಶಶಿಧರ ಹೆಗಡೆ.  ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ’ ಎನ್ನುವ ಮಾತಿಗೆ ಪದೇ ಪದೆ ಮೌಲ್ಯ ದೊರಕುತ್ತದೆ. ಈ ಮೌಲ್ಯವರ್ಧನೆಯ ಕೀರ್ತಿಯೂ ರಾಜಕಾರಣಿಗಳಿಗೇ ಸಲ್ಲಬೇಕು. ರಾಜಕಾರಣಿಗಳು ಮನಸ್ಸು ಮಾಡಿದರೆ ಹಳೆಯ ಅಂಗಿ ಕಳಚಿಟ್ಟು ಹೊಸ ಶರ್ಟ್ ಧರಿಸಿದಷ್ಟೇ ಸುಲಭವಾಗಿ ಪಕ್ಷ ಬದಲಿಸುತ್ತಾರೆ. ಚುನಾವಣಾ ಅಖಾಡದಲ್ಲಿ ಶರಂಪರ ಜಗಳವಾಡಿಕೊಂಡವರು ‘ಅಧಿಕಾರದ ಅನಿವಾರ್ಯತೆ’ ಬಂದೊದಗಿದಾಗ ಗಾಢಾಲಿಂಗನ ಮಾಡಿಕೊಳ್ಳಬಲ್ಲರು. ಅಧಿಕಾರದ ಮೋಹ ಪಾಶದ ಬಲೆಗೆ ಸಿಲುಕಿದವರು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರೂ ರಭಸದಿಂದ ಬಂದು ಒಂದೇ ಬಿಂದುವಿನಲ್ಲಿ ಸಂಧಿಸಬಲ್ಲರು. ಅಂತರಂಗದ ರಾಗ, ದ್ವೇಷವನ್ನು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top