ಕೈಗಾರಿಕೆಗಳಿಗೆ ಉತ್ತೇಜನ ನೀಡಿ – ಆರ್ಥಿಕತೆ ಚುರುಕಾಗಲು ಉದ್ಯಮ ಅಗತ್ಯ

ಹಂತಹಂತವಾಗಿ ಲಾಕ್‌ಡೌನ್ ಸಡಿಲಿಸುತ್ತಿರುವ ಸರಕಾರ, ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡಿದೆ. ನಿಗದಿತ ಸಿಬ್ಬಂದಿಯಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದೆ. ಆದರೆ ಕೈಗಾರಿಕೆಗಳು ಈ ಎರಡು ತಿಂಗಳ ಲಾಕ್‌ಡೌನ್ ಸೃಷ್ಟಿಸಿದ ಬಹಳ ಆಳವಾದ ಸಮಸ್ಯೆಗಳಿಂದ ನರಳುತ್ತಿವೆ. ಈ ಅವಧಿಯಲ್ಲಿ ಕೆಲಸ ನಿರ್ವಹಿಸದ ಕಾರಣದಿಂದ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಿದೆ. ತಮ್ಮ ಉತ್ಪನ್ನಗಳಿಗೆ ಹೊರಗೆ ಬೇಡಿಕೆ ಯಾವ ಪ್ರಮಾಣದಲ್ಲಿದೆ ಎಂಬುದು ಗೊತ್ತಿಲ್ಲದ ಸನ್ನಿವೇಶದಲ್ಲಿ ಕೈಗಾರಿಕೆಗಳು ಕೆಲಸ ಆರಂಭಿಸಬೇಕಿದೆ. ಕಾರ್ಮಿಕರ ಕೊರತೆ ತೀವ್ರವಾಗಿದೆ. ಸಾರಿಗೆ ಸಂಪರ್ಕದ ನಿರ್ಬಂಧದಿಂದ ಕಚ್ಚಾವಸ್ತುಗಳ ಕೊರತೆ ಕಾಡುತ್ತಿದೆ. ಕಳೆದೆರಡು ತಿಂಗಳಿನಿಂದ […]

Read More

ಆರ್ಥಿಕತೆಗೆ ಕೊರೊನಾಘಾತ

 ಕೊರೊನಾ ವೈರಸ್‌ ಜಗತ್ತಿನಾದ್ಯಂತ ವಲಸಿಗ ಕಾರ್ಮಿಕರ ಸಂಕಷ್ಟಗಳನ್ನು ಹೆಚ್ಚಿಸಿದೆ. ಒಂದು ಕಡೆ ರೋಗವಾಹಕರಾಗುವ ಅಪಾಯ, ಮತ್ತೊಂದು ಕಡೆ ಸಾಮಾಜಿಕ ಭದ್ರತೆಯ ಅಭಾವಕ್ಕೀಡಾಗಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳು ವಲಸಿಗರ ಸೇವೆಯನ್ನು ಬಯಸುತ್ತವೆ. ಮಹಾ ನಗರಗಳ ನಿರ್ಮಾಣದಲ್ಲಿ ಅವರಿಲ್ಲದೆ ಆಗುವುದಿಲ್ಲ. ವಲಸಿಗರಿಗೂ ಜೀವನೋಪಾಯಕ್ಕೆ ಇದು ಅನಿವಾರ್ಯ. ಆದರೆ ಕೊರೊನಾ ವೈರಸ್‌ ವಿಶ್ವಾದ್ಯಂತ ಅಸಂಘಟಿತ ವಲಯದ ಕೋಟ್ಯಂತರ ಬಡ ವಲಸಿಗರನ್ನು ನಾನಾ ಸಂಕಟಕ್ಕೆ ತಳ್ಳಿದೆ. ಒಂದು ಕಡೆ ಕೆಲಸವಿಲ್ಲ, ಸಾಮಾಜಿಕ ಭದ್ರತೆಯಂತೂ ಮೊದಲೇ ಇಲ್ಲ. ಸರಕಾರದ ನೆರವಿನ ಪ್ಯಾಕೇಜ್‌ನ ಕೊರತೆ ಅವರನ್ನು […]

Read More

ಉದ್ಯೋಗ ನಷ್ಟ ಬದುಕು ಕಷ್ಟ

ಕೊರೊನಾ ವೈರಸ್‌ನಿಂದ ಹೆಚ್ಚಿನ ಎಲ್ಲ ದೇಶಗಳು ಲಾಕ್‌ಡೌನ್, ಭಾಗಶಃ ಲಾಕ್‌ಡೌನ್ ಘೋಷಿಸಿವೆ. ಇದರಿಂದಾಗಿ ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಎಲ್ಲ ಉದ್ಯಮಗಳು ಮುಚ್ಚಿದ್ದು, ಇದರಿಂದ ಕೋಟ್ಯಂತರ ಮಂದಿ ಭವಿಷ್ಯದ ಕಡೆಗೆ ಶೂನ್ಯ ದೃಷ್ಟಿ ಬೀರುವಂತಾಗಿದೆ. ಯಾವ ದೇಶದಲ್ಲಿ ಏನು ಪರಿಣಾಮವಾಗಿದೆ? ಇಲ್ಲೊಂದು ನೋಟವಿದೆ. ಭಾರತದ ಸ್ಥಿತಿಗತಿ ಗಂಭೀರ ಭಾರತದಲ್ಲಿ ಸಂಸತ್ ಸದಸ್ಯರ ವಾರ್ಷಿಕ ವೇತನ, ಭತ್ಯೆ ಹಾಗೂ ಪಿಂಚಣಿಯಲ್ಲಿ ಶೇ.30ರಷ್ಟು ಕಡಿತ ಮಾಡುವ ನಿರ್ದೇಶನವನ್ನು ಸಚಿವ ಪ್ರಕಾಶ್ ಜಾವಡೇಕರ್ ನೀಡಿದ್ದಾರೆ. 2010-21 ಹಾಗೂ 2021-22ರಲ್ಲಿ ಎಂಪಿಗಳು ಬಳಸಿಕೊಳ್ಳಬೇಕಿದ್ದ […]

Read More

ರೈತರೇ ನಿಮಗೆ ನ್ಯಾಯಸಿಗಬೇಕು ಆದರೆ ಈ ಸಂದರ್ಭದಲ್ಲಿ‌ ತುಸು ತಾಳ್ಮೆಯೂ ಬೇಕು!

ರೈತರನ್ನು ಕಾಡದಿರಲಿ ಲಾಕ್‌ಡೌನ್‌: ಬೆಲೆ ರೈತನಿಗೆ, ಬೆಳೆ ಗ್ರಾಹಕನಿಗೆ ತಲುಪಲಿ ದೇಶಾದ್ಯಂತ ಕೊರೊನಾ ಲಾಕ್‌ಡೌನ್‌ನಿಂದ ಕೃಷಿಕರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರಲು ಪಟ್ಟಣಗಳನ್ನು, ಮಾರುಕಟ್ಟೆಗಳನ್ನು ಅವಲಂಬಿಸಿದ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಹೆಚ್ಚಿನ ಸಂಕಟ ಅನುಭವಿಸುತ್ತಿರುವವರು ಹಣ್ಣುಗಳು ಹಾಗೂ ತರಕಾರಿಯಂಥ ಬೇಗನೆ ಹಾಳಾಗಬಲ್ಲ ಪದಾರ್ಥಗಳನ್ನು ಬೆಳೆದ ತೋಟಗಾರಿಕೆ ರೈತರು. ಕಲ್ಲಂಗಡಿ ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು, ಕೆಲವು ರೈತರು ಕಲ್ಲಂಗಡಿ, ದ್ರಾಕ್ಷಿ , ಟೊಮೇಟೊ ಮುಂತಾದ ಬೆಳೆಗಳನ್ನು ರಸ್ತೆಯಲ್ಲಿ ಸುರಿದು ಹೋಗಿರುವುದು ಪರಿಸ್ಥಿತಿಯ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. […]

Read More

ಬಡವರ ಮರುವಲಸೆ ಸಮಸ್ಯೆ ನೀಗಿಸುವುದು‌ ತುರ್ತು ಆದ್ಯತೆಯಾಗಲಿ

ಉತ್ತರ ಭಾರತದ ನಾನಾ ಮೆಟ್ರೋ ನಗರಗಳಿಂದ ಹಳ್ಳಿಗಳ ಕಡೆಗೆ ದೊಡ್ಡ ಪ್ರಮಾಣದ ಮರು ವಲಸೆ ಆರಂಭವಾಗಿದೆ. ದಿನದ ಕೂಳು ಸಂಪಾದಿಸಲೆಂದು ನಗರಗಳಿಗೆ ಬಂದು ಕೂಲಿ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದವರು, ನಾನಾ ಬಗೆಯಲ್ಲಿ ದಿನದ ಸಂಪಾದನೆಯನ್ನೇ ನೆಚ್ಚಿಕೊಂಡು ಇದ್ದವರು ಈಗ ಲಾಕ್‌ಡೌನ್‌ ಪರಿಣಾಮ ಸಂಪಾದನೆಗೆ ದಾರಿ ಕಾಣದೆ, ತಮ್ಮ ಹಳ್ಳಿಗಳ ದಾರಿ ಹಿಡಿದಿದ್ದಾರೆ. ರೈಲ್ವೆ ಸೇರಿದಂತೆ ಸಾರಿಗೆ ಸಂಪರ್ಕಗಳನ್ನು ರದ್ದುಪಡಿಸಿರುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಕಾರ್ಮಿಕರು ನಡೆದೇ ಹೊರಟಿದ್ದಾರೆ. ಇಂಥದೊಂದು ಅಡ್ಡ ಪರಿಣಾಮವನ್ನು ಊಹಿಸಿರದ ಸರಕಾರ ಥಟ್ಟನೆ ಎಚ್ಚೆತ್ತುಕೊಂಡು […]

Read More

ಗುಡ್‌ ಗವರ್ನೆನ್ಸ್‌ ಅಂದರೆ ಗ್ರಾಮವಾಸ್ತವ್ಯ ಮಾತ್ರವಾ? ತೆರಿಗೆ ಹಣದ ಬಳಕೆಯಲ್ಲಿ ವೃತ್ತಿಪರತೆ ಕಾಣಬೇಕಾದರೆ ತಮಿಳುನಾಡಿನ ರಸ್ತೆಗಳನ್ನು ನೋಡಬೇಕು

ಭಾರತದ ಮಟ್ಟಿಗೆ ಗುಡ್‌ ಗವರ್ನನ್ಸ್‌ ಪದಪ್ರಯೋಗವನ್ನು ಅಧಿಕೃತವಾಗಿ ಪರಿಚಯ ಮಾಡಿ ಆರು ವರ್ಷ ಕಳೆದಿದೆ. 2014ರ ಡಿಸೆಂಬರ್‌ 23ರಂದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-1 ಸರಕಾರ ಪಂಡಿತ್‌ ಮದನಮೋಹನ ಮಾಳವೀಯ ಹಾಗೂ ಮಾಜಿ ಪ್ರಧಾನಿ, ಮಹಾನ್‌ ಮುತ್ಸದ್ದಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿ ಘೋಷಿಸಿತು. ಅದೇ ವೇಳೆ ಸರಕಾರ ಇನ್ನೊಂದು ಮಹತ್ವದ ತೀರ್ಮಾನ ಪ್ರಕಟಿಸಿತು. ಅದೇ ಗುಡ್‌ ಗವರ್ನನ್ಸ್‌ ಡೇ. ಎ.ಬಿ.ವಾಜಪೇಯಿ ಅವರ ಹುಟ್ಟಿದ ದಿನವಾದ ಡಿ.25ನ್ನು ಗುಡ್‌ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top