ಕೃಷಿಯ ಮೇಲೆ ನಿರೀಕ್ಷೆ – ಎಲ್ಲ ವಲಯ ಸೋತಿರುವಾಗ ಕೃಷಿಗೆ ಅವಕಾಶ

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿಗೆ ನಮ್ಮ ದೇಶದ ಎಲ್ಲ ವಲಯಗಳೂ ಸ್ತಬ್ಧವಾಗಿವೆ. ಕೈಗಾರಿಕೆ, ಆಟೊಮೊಬೈಲ್‌, ಸಾರಿಗೆ, ರಿಯಲ್‌ ಎಸ್ಟೇಟ್‌ ವಲಯಗಳು ಮತ್ತು ಸೇವಾ ಕ್ಷೇತ್ರಗಳು ತತ್ತರಿಸಿದ್ದರೆ; ಉತ್ಪಾದನೆ, ಬೇಡಿಕೆ, ಪೂರೈಕೆ, ಅನುಭೋಗ, ಉಪಭೋಗ, ಹಣದುಬ್ಬರ… ಹೀಗೆ ಅರ್ಥಶಾಸ್ತ್ರದ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಭಾರತದ ಜಿಡಿಪಿ ಕೂಡ ಋುಣಾತ್ಮಕವಾಗಿ ಸಾಗಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ. ಹೀಗಿದ್ದೂ ಭಾರತೀಯರಾದ ನಾವು ಸ್ವಲ್ಪ ಮಟ್ಟಿಗೆ ಖುಷಿ ಕೊಡುವ ಸಂಗತಿಯೊಂದಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಇದು ಧನಾತ್ಮಕವಾದ ವಿಚಾರ. ಯಾಕೆಂದರೆ, ಕರ್ನಾಟಕದಲ್ಲಿ […]

Read More

ಆರ್ಥಿಕ ಸ್ವಾವಲಂಬನೆಗೆ ಸ್ವದೇಶಿ ಮಂತ್ರ

– ಎನ್‌.ರವಿಕುಮಾರ್‌. ಇಂದು ದೇಶಗಳ ಮಧ್ಯೆ ನಡೆಯುತ್ತಿರುವುದು ಆರ್ಥಿಕ ಯುದ್ಧ. ಭಾರತ ಮತ್ತು ಚೀನಾ ದೇಶಗಳ ಮಧ್ಯೆ ನಡೆಯುತ್ತಿರುವುದು ಕೂಡ ಭೌಗೋಳಿಕ ಯುದ್ಧವಲ್ಲ; ಈ ಆರ್ಥಿಕ ಯುದ್ಧವೇ. ಚೀನಾ ಮೌನವಾಗಿ ನಡೆಸಿರುವ ಆರ್ಥಿಕ ಅಕ್ರಮಣ ನಮ್ಮ ಜನರ ಗಮನಕ್ಕೆ ಬರುತ್ತಿಲ್ಲ. ಭಾರತದಂತೆ ಚೀನಾ ಕೂಡ ಕೃಷಿ ಪ್ರಧಾನವಾಗಿತ್ತು. 70ರ ದಶಕದ ನಂತರ ಅದು ಉತ್ಪಾದನಾ ಶಕ್ತಿಯಾಗಿ ಬದಲಾವಣೆಯಾಯಿತು. ಇಂದು ಜಗತ್ತಿನ ಆರ್ಥಿಕ ಶಕ್ತಿ ಅಮೆರಿಕ ನಂತರ ಸ್ಥಾನ ಚೀನಾದ್ದು. ಇಂದು ಚೀನಾದ ಜಿಡಿಪಿ ಭಾರತದ 3ರಷ್ಟಿದೆ. ಚೀನಾದ […]

Read More

ಆರ್ಥಿಕತೆಯಲ್ಲಿ ಚೇತರಿಕೆ ಲಕ್ಷಣ – ಸಹಜ ಬದುಕಿನತ್ತ ಹೆಜ್ಜೆಯಿಡುತ್ತಿದೆ ಜನಜೀವನ

ಕೊರೊನಾ ಕಾರಣದಿಂದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಮಂಕಾಗಿದ್ದ ದೇಶದ ಆರ್ಥಿಕತೆ, ಚೇತರಿಕೆ ಹಾಗೂ ಉತ್ಸಾಹದ ಎಲ್ಲ ಸುಳಿವುಗಳನ್ನೂ ತೋರಿಸುತ್ತಿದೆ. ಉದಾಹರಣೆಗೆ, ಕಳೆದ ಒಂದು ವಾರದಿಂದ ಷೇರು ಮಾರುಕಟ್ಟೆಯಲ್ಲಿ ತುಂಬು ಉತ್ಸಾಹ ಕಾಣಿಸುತ್ತಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಸತತ ಏರಿಕೆ ತೋರಿಸುತ್ತಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ದೇಶದಲ್ಲಿ ಜೂನ್ ಮೊದಲ ವಾರದಲ್ಲಿ 22,000 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಸಂಪೂರ್ಣ ಕುಸಿದಿದ್ದ ಉದ್ಯೋಗ ಮಾರುಕಟ್ಟೆಯಲ್ಲಿ, ಮೇ ತಿಂಗಳ ಮೊದಲ ವಾರದಲ್ಲಿ 21 ದಶಲಕ್ಷ ಉದ್ಯೋಗಗಳು […]

Read More

ಆತ್ಮನಿರ್ಭರತೆಯ ದಾರಿ ದೀರ್ಘವಿದೆ!

– ವಿನುತಾ ಗೌಡ. ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದರು ಆತ್ಮನಿರ್ಭರತೆಯ ಬಗೆಗಿನ ವೆಬಿನಾರ್‌ ಒಂದರಲ್ಲಿ ಮಾತನಾಡುತ್ತಾ ಅಪರೂಪದ ಸಂಗತಿಯೊಂದನ್ನು ಪ್ರಸ್ಥಾಪಿಸಿದ್ದರು. ಕೃಷಿ, ಕೈಗಾರಿಕೆ, ಉದ್ದಿಮೆ ಮತ್ತು ರಕ್ಷ ಣಾ ಬಲಗಳಲ್ಲಿ ಆತ್ಮನಿರ್ಭರತೆಯ ಅನುಷ್ಠಾನ ಹೇಗೆ, ಎತ್ತ ಮುಂತಾದ ಚರ್ಚೆಗಳ ನಡುವೆಯೂ ಆತ್ಮನಿರ್ಭರಕ್ಕೆ ಒಂದು ವಿಭಿನ್ನ ದೃಷ್ಟಿಕೋನವಿದೆ ಎಂಬುದನ್ನು ಅವರು ತಿಳಿಸಿದ್ದರು. ಸ್ವಾವಲಂಬನೆ ಮತ್ತು ಆತ್ಮನಿರ್ಭರ ಪದಗಳಿಗಿರುವ ತೀರಾ ಹತ್ತಿರದ ಸಂಬಂಧಗಳನ್ನು ವಿವರಿಸುತ್ತಾ, ‘‘ಆತ್ಮನಿರ್ಭರ- ಸ್ವಾವಲಂಬನೆ ಎನ್ನುವುದು ಕೇವಲ ಆರ್ಥಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಅದಕ್ಕೂ […]

Read More

ಜಿ7 – ಅಮೆರಿಕದ ಕರೆ – ಚೀನಾದ ಕರಕರೆ – ಚೀನಾಗೆ ಮುಸುಕಿನ ಗುದ್ದು

ಜಾಗತಿಕ ವಾಣಿಜ್ಯ, ಆರ್ಥಿಕ ಸಮೀಕರಣವನ್ನು ತಿದ್ದಿ ಬರೆಯುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಜಿ7 ಗಂಪಿನಲ್ಲಿ ಭಾರತವನ್ನೂ ಸೇರಿಸಿಕೊಳ್ಳಬೇಕು ಎಂಬುದು ಅವರ ವಾದ. ಇದು ಯಾಕೆ ಹಾಗೂ ಇದರ ಪರಿಣಾಮಗಳೇನು? ಜಿ7 ದೇಶಗಳ ಈ ವರ್ಷದ (46ನೇ) ಶೃಂಗಸಭೆ ಜೂನ್‌ 10- 12ರಂದು ಅಮೆರಿಕದ ಕ್ಯಾಂಪ್‌ ಡೇವಿಡ್‌ನಲ್ಲಿ ನಡೆಯಬೇಕಿತ್ತು. ಆದರೆ ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದೂಡಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ: ‘‘ಹೊಸ ಜಾಗತಿಕ ಸನ್ನಿವೇಶದಲ್ಲಿ ಜಿ7 ಎಂಬುದು ಅಪ್ರಸ್ತುತ ಸಂಘಟನೆಯಾಗಿದೆ. ಭಾರತ, […]

Read More

ಸಣ್ಣ ಉದ್ದಿಮೆಗಳ ಬೆಳವಣಿಗೆಗೆ ಹೊಸ ವ್ಯಾಖ್ಯಾನದ ಲಾಭ

ಸಣ್ಣ ಮತ್ತು ಮಧ್ಯಮ ಉದ್ದಿಮೆ ಎನಿಸಿಕೊಳ್ಳಲು ಹೂಡಿಕೆ ಮತ್ತು ವಹಿವಾಟು ಅರ್ಹತೆಯ ಮಿತಿಯನ್ನು ಗಮನಾರ್ಹವಾಗಿ ವಿಸ್ತರಿಸುವ ಮೂಲಕ ‘ಆತ್ಮನಿರ್ಭರ ಭಾರತ್ ಪ್ಯಾಕೇಜ್’ನಲ್ಲಿ ಇಂಡಸ್ಟ್ರಿಯ ಭವಿಷ್ಯದ ವಿಕಾಸಕ್ಕೆ ಉತ್ತೇಜನ ನೀಡಲಾಗಿದೆ. ಹೀಗಿದ್ದರೂ, ವರ್ತಮಾನದ ಕೊರೊನಾ ಬಿಕ್ಕಟ್ಟು ಎದುರಿಸಲು ನೇರ ನೆರವನ್ನೂ ಹೆಚ್ಚಿಸಬಹುದಿತ್ತು ಎನ್ನುತ್ತಾರೆ ತಜ್ಞರು. – ಶೇ.30.54 ಜಿಡಿಪಿಯಲ್ಲಿ ಎಂಎಸ್ಎಂಇ ಪಾಲು – 11 ಕೋಟಿ ಎಂಎಸ್ಎಂಇ ವಲಯ ಸೃಷ್ಟಿಸಿರುವ ಉದ್ಯೋಗ (ಆತ್ಮ ನಿರ್ಭರ್ ಭಾರತ್- ಭಾಗ 2) ‘ಸಣ್ಣದಾಗಿರುವುದು ಚೆಂದ’ ನುಡಿಗಟ್ಟು ಸಣ್ಣ ಉದ್ದಿಮೆಗಳ ಬೆಳವಣಿಗೆಯ ದೃಷ್ಟಿಯಿಂದ […]

Read More

ಕೊರೊನಾ ಸಂಕಷ್ಟದಲ್ಲಿರುವವರಿಗೆ ಭರವಸೆ ಬಾಗಿಲು‌..

ಡೋಂಟ್ ವರಿ, ಎಲ್ಲ ಬಾಗಿಲುಗಳೂ ಮುಚ್ಚಿಲ್ಲ! ಲಾಕ್‌ಡೌನ್ ನಡುವೆಯೂ ಹಲವು ವಲಯಗಳಲ್ಲಿ ಚುರುಕಿನ ವಹಿವಾಟು ಕೊರೊನಾಘಾತದ ನಡುವೆಯೂ ಆಶಾಕಿರಣ ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ದಿನ ಬಳಕೆ ವಸ್ತು ತಯಾರಿ ಕಂಪನಿಗಳ ಷೇರು ವೌಲ್ಯ ವೃದ್ಧಿ, ಔಷಧ ರಫ್ತಿನಿಂದ ಭಾರಿ ಲಾಭ – ಕೇಶವ ಪ್ರಸಾದ್ ಬಿ. ಬೆಂಗಳೂರು ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ಭಾರಿ ಪ್ರಹಾರ ಮಾಡಿದೆ. ಸುದೀರ್ಘ ಲಾಕ್‌ಡೌನ್‌ನಿಂದಾಗಿ ಕೈಗಾರಿಕೋದ್ಯಮಕ್ಕೆ ಗರ ಬಡಿದಂತಾಗಿರುವುದು ನಿಜ. ಹಾಗಂತ ಪೂರ್ಣ ನಿರಾಶರಾಗಬೇಕಿಲ್ಲ. ಕೊರೊನಾ ಬಿಕ್ಕಟ್ಟು ಹಲವು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top