ಮಾಜಿ‌ ಸಿಎಂ ಗುಂಡೂರಾಯರ ಕುರಿತು ತಿಳಿಯೋದು ಎಷ್ಟಿದೆ ಗೊತ್ತಾ?

ಫಸಲ್ ಬೀಮಾ ಯೋಜನೆ ರೈತರ ಹಿತ ಕಾಯೋ ಬದಲು,ಖಾಸಗಿ ವಿಮಾ ಕಂಪೆನಿಗಳ ಹೊಟ್ಟೆತುಂಬ್ತಾ ಇದೆ. ರಾಷ್ಟ್ರೀಯ ಬಿಜೆಪಿಯಲ್ಲಿ ಕರ್ನಾಟಕದ ಪಾರುಪತ್ಯ! ಕೋರ್ಟ್ ಶುಲ್ಕ ಕಟ್ಟೋದಕ್ಕೆ ಮನೆಯಲ್ಲಿದ್ದ ಒಡವೇನೆಲ್ಲಾ ಮಾರೀದೀನಿ ಅಂತ ಹೇಳಿದ ಉದ್ಯಮಿ ಯಾರು? ಮಾಜಿದೋಸ್ತಿಗಳ ಪುನರಪಿ ಭೇಟಿ ಒಳಸುಳಿ ಏನು?

Read More

ರಸಗೊಬ್ಬರ ಅಭಾವ – ರೈತರಲ್ಲಿ ಹಾಹಾಕಾರ ನಿವಾರಿಸಿ

ಮಾರುಕಟ್ಟೆಯಲ್ಲಿ ರಸಗೊಬ್ಬರದ ತೀವ್ರ ಅಭಾವ ಉಂಟಾಗಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳೂ ಗರಿಗೆದರಿ ನಡೆಯುತ್ತಿವೆ. ಹೀಗಾಗಿ ರಸಗೊಬ್ಬರ ಕೃಷಿ ವಲಯದ ತಕ್ಷಣದ ಬೇಡಿಕೆಯಾಗಿದೆ. ಒಂದು ತಿಂಗಳಿನಿಂದಲೂ ಮಾರುಕಟ್ಟೆಯಲ್ಲಿ ರಸಗೊಬ್ಬರದ ಅಭಾವ ಉಂಟಾಗಿದ್ದು, ರೈತರಲ್ಲಿ ಹಾಹಾಕಾರವೇ ಕಂಡುಬಂದಿದೆ. ಮುಖ್ಯವಾಗಿ ಯೂರಿಯಾದ ಕೊರತೆ ತಲೆದೋರಿದೆ. ಬಯಲುಸೀಮೆಯಲ್ಲಿ ಬೆಳೆಯುವ ಎಲ್ಲ ಬೆಳೆಗಳಿಗೂ ಸಾರಜನಕವನ್ನು ಪೂರೈಸುವ ಏಕೈಕ ರಸಗೊಬ್ಬರ ಎಂದರೆ ಯೂರಿಯಾ. ಮಳೆ ಚೆನ್ನಾಗಿ ಹನಿಯುತ್ತಿರುವ ಈ ಸಂದರ್ಭದಲ್ಲಿಯೇ ಬೆಳೆಗಳಿಗೆ ತಕ್ಕ ಯೂರಿಯಾ ಕೊಡುವುದು ರೈತರ ರೂಢಿ. ಅದನ್ನು ಸಿಂಪಡಿಸದಿದ್ದರೆ ವ್ಯತಿರಿಕ್ತವಾದ […]

Read More

ಯೂರಿಯಾಗೆ ಹಾಹಾಕಾರ

ಹಲವು ಜಿಲ್ಲೆಗಳಲ್ಲಿ ರಸಗೊಬ್ಬರ ಸಿಗದೆ ರೈತರು ಕಂಗಾಲು ಅಗತ್ಯಕ್ಕಿಂತ ಹೆಚ್ಚು ಪೂರೈಕೆ ಎನ್ನುವ ಸರಕಾರ | ಅಂಗಡಿಗಳಲ್ಲಿನೋ ಸ್ಟಾಕ್.‌ ಮಲ್ಲಪ್ಪ ಸಂಕೀನ್‌, ಯಾದಗಿರಿ. ಜಗನ್ನಾಥ್‌ ದೇಸಾಯಿ, ರಾಯಚೂರು. ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಗೊಬ್ಬರದ ಅಲಭ್ಯತೆ ಆತಂಕ ಮೂಡಿಸಿದೆ. ಜಿಲ್ಲೆಗಳಿಗೆ ಹಂಚಿಕೆ ಕಡಿತ, ನಿಧಾನಗತಿಯ ಪೂರೈಕೆಯಿಂದ ತೊಂದರೆಯಾಗಿದೆ ಎನ್ನುವುದು ರೈತರ ಆರೋಪ. ಆದರೆ, ಸರಕಾರ ಮಾತ್ರ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಪೂರೈಸಲಾಗಿದೆ […]

Read More

ಕೃಷಿಯ ಮೇಲೆ ನಿರೀಕ್ಷೆ – ಎಲ್ಲ ವಲಯ ಸೋತಿರುವಾಗ ಕೃಷಿಗೆ ಅವಕಾಶ

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿಗೆ ನಮ್ಮ ದೇಶದ ಎಲ್ಲ ವಲಯಗಳೂ ಸ್ತಬ್ಧವಾಗಿವೆ. ಕೈಗಾರಿಕೆ, ಆಟೊಮೊಬೈಲ್‌, ಸಾರಿಗೆ, ರಿಯಲ್‌ ಎಸ್ಟೇಟ್‌ ವಲಯಗಳು ಮತ್ತು ಸೇವಾ ಕ್ಷೇತ್ರಗಳು ತತ್ತರಿಸಿದ್ದರೆ; ಉತ್ಪಾದನೆ, ಬೇಡಿಕೆ, ಪೂರೈಕೆ, ಅನುಭೋಗ, ಉಪಭೋಗ, ಹಣದುಬ್ಬರ… ಹೀಗೆ ಅರ್ಥಶಾಸ್ತ್ರದ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಭಾರತದ ಜಿಡಿಪಿ ಕೂಡ ಋುಣಾತ್ಮಕವಾಗಿ ಸಾಗಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ. ಹೀಗಿದ್ದೂ ಭಾರತೀಯರಾದ ನಾವು ಸ್ವಲ್ಪ ಮಟ್ಟಿಗೆ ಖುಷಿ ಕೊಡುವ ಸಂಗತಿಯೊಂದಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಇದು ಧನಾತ್ಮಕವಾದ ವಿಚಾರ. ಯಾಕೆಂದರೆ, ಕರ್ನಾಟಕದಲ್ಲಿ […]

Read More

ದೇವ- ದಾನವ ದೇಶಗಳ ಆಧುನಿಕ ಸಮುದ್ರ ಮಥನ

– ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ ದೇವರೆಂಬವರೆತ್ತ ಹೋದರೇನಿಂ ಭೋ? ಅಂದೊಮ್ಮೆ ಓಡಿಹೋಗಿ ಆ ಶಿವನ ಮೊರೆಯ ಹೊಗುವಂದು ದೇವರೆಂಬವರೆತ್ತ ಹೋದರೇನಿಂ ಭೋ? ಪುರಾಣ ಪ್ರಸಿದ್ಧವಾದ ಈ ಸಮುದ್ರಮಥನ ಕಥಾಪ್ರಸಂಗವನ್ನು ಉಲ್ಲೇಖಿಸಿ ಬಸವಣ್ಣನವರು ಈ ವಚನದಲ್ಲಿ ವಿಡಂಬನೆ ಮಾಡಿದ್ದಾರೆ. ದೇವತೆಗಳು ಮತ್ತು ರಾಕ್ಷಸರು ಸಮುದ್ರದ ಒಡಲಿನಲ್ಲಿದ್ದ ಅಮೃತವನ್ನು ಪಡೆಯಲು ಒಟ್ಟುಗೂಡಿ ಪ್ರಯತ್ನ ಮಾಡಿದರು ಎಂಬುದು ಪುರಾಣ ಪ್ರಸಿದ್ಧವಾದ ಕಥೆ. ಇದಕ್ಕಾಗಿ ಮಂದರಗಿರಿಯನ್ನೇ ಕಡೆಗೋಲನ್ನಾಗಿ ಮಾಡಿಕೊಂಡರು. ಸರ್ಪರಾಜನಾದ […]

Read More

ಕೃಷಿಕರಿಗೆ ಬೇಡ ಆತಂಕ – ಉಳ್ಳವರಿಗಲ್ಲ, ಉಳುವವರಿಗೆ ಭೂಮಿ

ಕೃಷಿಕರಿಗೆ ಬೇಡ ಆತಂಕ – ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ. – ರಾಘವೇಂದ್ರ ಭಟ್, ಬೆಂಗಳೂರು. ‘‘ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಇಂಥ ಕಾಯಿದೆ ಅಸ್ತಿತ್ವದಲ್ಲೇ ಇಲ್ಲ. ಆದರೆ ಅಲ್ಲಿ ಕೃಷಿ ಭೂಮಿ ಹಾಗೂ ಕೃಷಿಕರು ಇದ್ದಾರೆ. ಮಿತಿ ಸಡಿಲಿಕೆಯಿಂದ ಕೃಷಿ ಭೂಮಿ ಕಾರ್ಪೋರೇಟ್ ಕುಳಗಳ ಪಾಲಾಗುತ್ತದೆ ಎಂಬ ವಾದದಲ್ಲಿ ಅರ್ಥವೇ ಇಲ್ಲ. ನಾವು ಕೃಷಿ ಭೂಮಿ ಖರೀದಿಸುವುದಕ್ಕೆ ಇದ್ದ ಆರ್ಥಿಕ ಮಿತಿ ರದ್ದುಗೊಳಿಸಿದ್ದೇವೆಯೇ ಹೊರತು ಮಿತಿ ಮೀರಿ ಖರೀದಿಸುವುದಕ್ಕೆ ಅವಕಾಶ ನೀಡಿಲ್ಲ. ಒಂದು ಕುಟುಂಬ […]

Read More

ಕೃಷಿ, ಉದ್ಯಮ ಜಂಟಿ ಹೆಜ್ಜೆ

– ಭೂಸುಧಾರಣೆ ಕಾಯಿದೆ ತಿದ್ದುಪಡಿಯ ಒಳಿತು-ಕೆಡುಕಿನ ವಾದ ತಾರಕಕ್ಕೆ – ಕೃಷಿ ಕೃಶವಾಗದಿರಲಿ, ಕೈಗಾರಿಕೆಗಳಿಗೂ ಅವಕಾಶ ಸಿಗಲಿ ಎಂಬ ಆಶಯ. ವಿಕ ಸುದ್ದಿಲೋಕ, ಬೆಂಗಳೂರು. ರಾಜ್ಯ ಸರಕಾರದ ಉದ್ದೇಶಿತ ಭೂಸುಧಾರಣೆ ಕಾಯಿದೆ ತಿದ್ದುಪಡಿ ಪ್ರಸ್ತಾಪದ ಪರ ವಿರೋಧ ಚರ್ಚೆ ತೀವ್ರವಾಗಿದೆ. ಕಾಯಿದೆ ತಿದ್ದುಪಡಿಯಿಂದ ಕರ್ನಾಟಕದಲ್ಲಿ ರೈತರಿಗೆ, ಕೃಷಿ ವಲಯಕ್ಕೆ ಯಾವುದೇ ಹಿನ್ನಡೆ ಆಗದೆ ಕೈಗಾರಿಕಾ ಕ್ರಾಂತಿಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಸರಕಾರದ ನಿಲುವು. ಇದೇ ವೇಳೆ ಈ ತಿದ್ದುಪಡಿ ರಾಜ್ಯದ ರೈತರಿಗೆ ಮಾರಕ ಎಂಬ ವಾದವನ್ನು ಪ್ರತಿಪಕ್ಷ […]

Read More

ಕೃಷಿಭೂಮಿ ಸದ್ಬಳಕೆಯಾಗಲಿ -ಷರತ್ತುಗಳೊಂದಿಗೆ ಸುಧಾರಣೆ ಜಾರಿ ಅವಶ್ಯ

ಕರ್ನಾಟಕ ಭೂಸುಧಾರಣಾ ಕಾಯಿದೆ-1974ನ್ನು ತಿದ್ದುಪಡಿ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು, ಸಂಪುಟ ಸಭೆ ಈ ಕುರಿತು ತೀರ್ಮಾನ ಕೈಗೊಂಡಿದೆ. ಇದರ ಮುಖ್ಯಾಂಶವೆಂದರೆ, ಕೃಷಿಕರಲ್ಲದವರೂ ಇನ್ನು ಮುಂದೆ ಕೃಷಿ ಭೂಮಿ ಖರೀದಿಸಬಹುದು. ಇದುವರೆಗೆ ಕೃಷಿಕ ಕುಟುಂಬದ ಹಿನ್ನೆಲೆ ಹೊಂದಿದವರು ಮಾತ್ರ ಕೃಷಿಭೂಮಿ ಖರೀದಿಸುವ ಅವಕಾಶವಿತ್ತು. ಈಗ ಕೃಷಿಯಲ್ಲಿ ಆಸಕ್ತಿ ಹೊಂದಿರುವ, ಆದರೆ ಕೃಷಿಭೂಮಿ ದಾಖಲೆಗಳನ್ನು ಹೊಂದಿಲ್ಲದವರು ಕೂಡ ಜಮೀನು ಖರೀದಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಮತ್ತು ಉದ್ಯಮಿಗಳೂ ಖರೀದಿಸಬಹುದು ಎಂಬುದು ಈ ಕಾಯಿದೆಯ ಅತ್ಯಂತ ಧನಾತ್ಮಕ ಅಂಶ. ಯಾಕೆಂದರೆ, […]

Read More

ಹೊಣೆ ಮರೆತ ವರ್ತನೆ – ಜನಪ್ರತಿನಿಧಿಗಳು ಸಂಯಮದಿಂದ ವರ್ತಿಸಲಿ

ರಾಜ್ಯ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಕೋಲಾರದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ರೈತ ಮಹಿಳೆಯರಿಗೆ ಅವಾಚ್ಯ ಪದ ಬಳಸಿ ನಿಂದಿಸಿ ಸುದ್ದಿಯಾಗಿದ್ದಾರೆ. ಇದು ರಾಜ್ಯ ರೈತ ಸಂಘದವರ ಪ್ರತಿಭಟನೆ, ಪ್ರತಿಪಕ್ಷಗಳ ತೀವ್ರ ಟೀಕೆಗಳಿಗೂ ಕಾರಣವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಮಾಧುಸ್ವಾಮಿಯವರ ನಡೆಯನ್ನು ಖಂಡಿಸಿದ್ದಾರೆ. ತದನಂತರ ಮಾಧುಸ್ವಾಮಿ ಅವರು ಕ್ಷಮೆ ಕೇಳಿದ್ದು, ಅಲ್ಲೂಕೂಡ ತಮ್ಮ ವರ್ತನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಅವರು ಕೆಲವು ಒರಟು ಮಾತನಾಡಿದ ಉದಾಹರಣೆ ಇವೆ. ಒಟ್ಟಾರೆಯಾಗಿ ಇದು ಜವಾಬ್ದಾರಿಯುತ ಜನ ಪ್ರತಿನಿಧಿಯೊಬ್ಬರು ನಡೆದುಕೊಳ್ಳಬೇಕಾದ […]

Read More

ರೈತರ ವಿರೋಧಕ್ಕೆ ಡೋಂಟ್‌ಕೇರ್‌ – ಜನಾಕ್ರೋಶ ಧಿಕ್ಕರಿಸಿ ಎಪಿಎಂಸಿ ತಿದ್ದುಪಡಿ ಕಾಯಿದೆಗೆ ಸಂಪುಟ ಅಸ್ತು

– ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬಾಕಿ, ಪ್ರತಿಪಕ್ಷಗಳಿಂದ ಹೋರಾಟದ ಎಚ್ಚರಿಕೆ ವಿಕ ಸುದ್ದಿಲೋಕ ಬೆಂಗಳೂರು : ರೈತರು, ರೈತ ಸಂಘಟನೆಗಳು, ಪ್ರತಿಪಕ್ಷಗಳು ಹಾಗೂ ಇನ್ನಿತರ ಬಳಕೆದಾರರ ರಾಜ್ಯವಾಪಿ ತೀವ್ರ ವಿರೋಧದ ನಡುವೆಯೂ ವಿವಾದಿತ ಎಪಿಎಂಸಿ ಕಾಯಿದೆ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತ ಬೀಳುವುದೊಂದು ಬಾಕಿಯಿದೆ. ಈ ಸಂಬಂಧ ಒತ್ತಡ ತಂದಿದ್ದ ಕೇಂದ್ರ ಸರಕಾರ ‘ಮಾದರಿ ಕಾಯಿದೆ’ಯ ಪ್ರತಿಯನ್ನೂ ಕಳುಹಿಸಿಕೊಟ್ಟಿತ್ತು. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top