ಬಡತನದಲ್ಲೂ ಅರಳಿದ “ಕಲೆ’

ದ್ವಿತೀಯ ಪಿಯು 61.80% ರಿಸಲ್ಟ್ | ಕಲಾ ವಿಭಾಗದಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ ಸಾರ್ವಕಾಲಿಕ ಗರಿಷ್ಠ ಫಲಿತಾಂಶ | ಕೊರೊನಾ ಅವಧಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ನಪಾಸು. ವಿಕ ಸುದ್ದಿಲೋಕ ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಸರಾಸರಿ ಶೇ.61.80ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಸಾರ್ವಕಾಲಿಕ ದಾಖಲೆ ಫಲಿತಾಂಶ ಪ್ರಕಟವಾಗಿದೆ. ಈ ನಡುವೆ ಕಷ್ಟನಷ್ಟ, ಸೌಕರ್ಯ ಕೊರತೆಗಳನ್ನೂ ಮೀರಿ ಹಲವಾರು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಮುಖ್ಯವಾಗಿ ಕಲಾ ವಿಭಾಗದಲ್ಲಿ ಟಾಪ್ ಸ್ಥಾನ ಪಡೆದಿರುವ ಬಹುತೇಕ […]

Read More

ಆನ್‌ಲೈನ್‌ನಿಂದ ಪಾಠ ಸಿಗಬಹುದು, ಆದರೆ ಸಾಮಾಜೀಕರಣ ಸಾಧ್ಯವಾಗಲಾರದು

ಡಾ. ರೋಹಿಣಾಕ್ಷ ಶಿರ್ಲಾಲು. The class room with all its limitations, remains a location of great possibility ಎನ್ನುವ ಮಾತಿದೆ. ಇಂದಿಗೂ ತರಗತಿ ಕೊಠಡಿಗಳ ಬೋಧನೆಗೆ ಪರ್ಯಾಯವಿಲ್ಲ. ಜಗತ್ತಿನಾದ್ಯಂತ ಮಕ್ಕಳ ಶಿಕ್ಷಣ ಎನ್ನುವುದು ತರಗತಿ ಕೊಠಡಿಗಳ ಮೂಲಕವೇ ಸಾಕಾರಗೊಳ್ಳುವುದು. ಅದಕ್ಕೆ ಪೂರಕವಾಗಿ ಬೇರೆ ಬೇರೆ ತಂತ್ರಜ್ಞಾನ, ಮಾಧ್ಯಮಗಳ ಬಳಕೆಯಾಗುತ್ತಿದೆಯೇ ಹೊರತು ಪರ್ಯಾಯ ಮಾರ್ಗವೇನು ಆಗಿಲ್ಲ. ಆದರೆ ಇತ್ತೀಚಿನ ಕೋವಿಡ್‌ ಸಾಂಕ್ರಾಮಿಕ ರೋಗಭೀತಿಯು ಪರ್ಯಾಯದ ಹುಡುಕಾಟವನ್ನು ಒತ್ತಾಯಿಸಿದೆ. ಕೋವಿಡ್‌ ಕಾರಣದಿಂದ ಕಳೆದ ಮಾರ್ಚ್‌ನಿಂದ ಅನಿರ್ದಿಷ್ಟ […]

Read More

ಅತಿಥಿ ಉಪನ್ಯಾಸಕರು ಅತಂತ್ರ

ಪ್ರಮೋದ ಹರಿಕಾಂತ ಬೆಳಗಾವಿ/ಎನ್‌.ಡಿ.ತಿಪ್ಪೇಸ್ವಾಮಿ ಬಳ್ಳಾರಿ. ಹಲವು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಂಡಿದ್ದ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರಕಾರ ಕೊರೊನಾ ಕಾರಣಕ್ಕೆ ಕೈ ಬಿಟ್ಟಿದ್ದರಿಂದ ಸಾವಿರಾರು ಅತಿಥಿ ಉಪನ್ಯಾಸಕರು ಅತಂತ್ರರಾಗಿದ್ದಾರೆ. ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದಿಂದ ಸುಮಾರು ಎಂಟು ಅತಿಥಿ ಉಪನ್ಯಾಸಕರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಕೂಲಿ ಕೆಲಸಕ್ಕೆ ಇಳಿದಿದ್ದಾರೆ. ಹೀಗಿರುವಾಗಲೇ ಈ ವರ್ಷ ಅತಿಥಿ ಉಪನ್ಯಾಸಕರ ಸೇವೆಯನ್ನೇ ಕಡಿತ ಮಾಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಅತಿಥಿ ಉಪನ್ಯಾಸಕರನ್ನು ಇನ್ನಷ್ಟು […]

Read More

ಅಗ್ನಿ ‘ಪರೀಕ್ಷೆ’ಯಲ್ಲಿ ಮೊದಲ ಯಶಸ್ಸು

ಕೊರೊನಾ ಒಡ್ಡಿದ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ದಾಟಲಾಗುತ್ತಿದೆ. ರಾಜ್ಯಾದ್ಯಂತ ಗುರುವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಸರಕಾರಿ ಯಂತ್ರಾಂಗದ ಕಾಳಜಿ, ಯೋಜನಾಬದ್ಧತೆ, ಕಾರ್ಯ ಸಮನ್ವಯದಿಂದ ವಿದ್ಯಾರ್ಥಿಗಳು ನಿರಾತಂಕವಾಗಿ ಮೊದಲನೇ ದಿನ ಪರೀಕ್ಷೆ ಬರೆದಿದ್ದಾರೆ. ಎಲ್ಲೆಡೆ ‘ಕೋವಿಡ್ ಸಂಹಿತೆ’ಯನ್ನು ಚಾಚೂ ತಪ್ಪದೆ ಪಾಲಿಸಿದ್ದರಿಂದ ಭಯದ ವಾತಾವರಣವಿರಲಿಲ್ಲ. ಸಣ್ಣ ಪುಟ್ಟ ಗೊಂದಲಗಳು, ಒಂದೆರಡು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲೂ ಕೂಡ ವ್ಯವಸ್ಥೆ ಹಳಿ ತಪ್ಪಿಲ್ಲ. ರಾಜ್ಯ ವ್ಯಾಪಿ ನೋಟ ಇಲ್ಲಿದೆ. ವಿಕ ಬ್ಯೂರೊ ಬೆಂಗಳೂರು ಕೋವಿಡ್-19 ಆತಂಕದ ನಡುವೆ ರಾಜ್ಯಾದ್ಯಂತ […]

Read More

ಎಸ್ಸೆಸ್ಸೆಲ್ಸಿಗೂ ಮಾದರಿ – ಯಶಸ್ವಿಯಾದ ಪಿಯುಸಿ ಪರೀಕ್ಷೆ

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಯಾವುದೇ ಆತಂಕವಿಲ್ಲದೆ, ಸುಸಜ್ಜಿತವಾಗಿ ಹಾಗೂ ಅಹಿತಕರ ಘಟನೆಗಳಿಲ್ಲದೆ ನೆರವೇರಿದೆ. ಪರೀಕ್ಷಾ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರ, ಆರೋಗ್ಯ ನಿಗಾಕ್ಕೆ ವ್ಯವಸ್ಥೆ, ಪರೀಕ್ಷಾ ಕೇಂದ್ರದ ಗೇಟ್‌ಗಳ ಬಳಿಯೇ ವಿದ್ಯಾರ್ಥಿಗಳಿಗೆ ದೇಹದ ಉಷ್ಣಾಂಶ ಪರೀಕ್ಷೆ, ಸ್ಯಾನಿಟೈಸರ್‌ನಿಂದ ಸ್ವಚ್ಛತೆ, ಪ್ರತಿ ವಿದ್ಯಾರ್ಥಿಗೂ ಮಾಸ್ಕ್‌ ಕಡ್ಡಾಯ, ಎಲ್ಲಾ ಕೊಠಡಿಗಳು ಮತ್ತು ಪೀಠೋಪಕರಣಗಳ ಸಂಪೂರ್ಣ ಸ್ಯಾನಿಟೈಸೇಷನ್‌, ಕಂಟೈನ್ಮೆಂಟ್‌ ವಲಯದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದವರಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ […]

Read More

ಬೇಕು ಹೊಸ ಆನ್‌ಲೈನ್‌ ಪ್ಲ್ಯಾನ್‌ – ಶಾಲೆ ಇಲ್ಲ, ಆನ್‌ಲೈನ್‌ ಒಲ್ಲದಿದ್ದರೆ ಮತ್ತೇನು? ಹುಡುಕಿದರೆ ಹೊಸ ದಾರಿ ಸಿಗದೇನು?

ಕೊರೊನಾ ಹಿನ್ನೆಲೆಯಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ವ್ಯವಸ್ಥೆಗಳಲ್ಲಿ ಶಿಕ್ಷಣವೂ ಪ್ರಮುಖವಾಗಿದೆ. ಮಕ್ಕಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ ಸ್ವತಃ ಸರಕಾರವೂ ಶಿಕ್ಷಣದ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಲು ಹೆಣಗಾಡುತ್ತಿದೆ. ಏರುತ್ತಿರುವ ಸೋಂಕಿನಿಂದಾಗಿ ಶಾಲೆಗಳನ್ನು ಸದ್ಯೋಭವಿಷ್ಯದಲ್ಲಿ ತೆರೆಯುವ ಸ್ಥಿತಿ ಇಲ್ಲ. ಸರಕಾರವೇ ಶಾಲೆ ತೆರೆಯಲು ಮುಂದಾದರೂ ಪೋಷಕರು ಕಳುಹಿಸಿಕೊಡುವ ಮನೋಸ್ಥಿತಿಯಲ್ಲಿಲ್ಲ. ಈ ನಡುವೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಪಾಠದ ಮೂಲಕ ತಮ್ಮ ವ್ಯವಸ್ಥೆಯನ್ನು ಮುಂದುವರಿಸಲು ಪ್ರಯತ್ನಿಸಿದವು. ಆದರೆ, ಸರಕಾರ ಅದಕ್ಕೂ ಕಡಿವಾಣ ಹಾಕಿದೆ. ಎಲ್‌ಕೆಜಿಯಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್‌ […]

Read More

ಎಲ್ಲರೂ ಬರಲಿ ಆನ್‌ಲೈನ್‌ಗೆ

– 8ರಿಂದ 10ನೇ ಕ್ಲಾಸ್‌ಗೆ ಅಂತರ್ಜಾಲ ಶಿಕ್ಷಣ ಓಕೆ ಎಂಬ ಅಭಿಮತ – ಖಾಸಗಿಯಂತೆ ಸರಕಾರಿ ಶಾಲೆ ಮಕ್ಕಳಿಗೂ ಸಿಗಲಿ ಆನ್‌ಲೈನ್‌ ಶಿಕ್ಷಣ. – ವಿಕ ಫೋಕಸ್‌. ಜಯಂತ್‌ ಗಂಗವಾಡಿ, ಬೆಂಗಳೂರು. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನೀಡುವುದಕ್ಕೆ ಸರಕಾರ ನಿರ್ಬಂಧ ವಿಧಿಸಿರುವ ಬಗ್ಗೆ ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿರುವ ನಡುವೆಯೇ, ಎಂಟರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಮಾದರಿಯಲ್ಲಿ ಶಿಕ್ಷಣ ನೀಡಲು ತಕ್ಷಣ ವ್ಯವಸ್ಥೆ ರೂಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಶಿಕ್ಷಣ ಕೇವಲ ಖಾಸಗಿ […]

Read More

ಮಕ್ಕಳ ಲೋಕದಲ್ಲಿ ಕೊರೊನಾ ಕೋಲಾಹಲ

ಕೊರೊನಾ ವೈರಾಣು ಹಾಗೂ ಅದನ್ನು ತಡೆಯಲು ಜಗತ್ತಿನಾದ್ಯಂತ ಹೇರಲಾದ ಲಾಕ್‌ಡೌನ್‌ಗಳ ಪರಿಣಾಮ ಕೋಟ್ಯಂತರ ಮಕ್ಕಳು ವಿಚಿತ್ರ ರೀತಿಯ ಬವಣೆ ಅನುಭವಿಸುತ್ತಿದ್ದಾರೆ. ಎಷ್ಟು ಮಕ್ಕಳು, ಏನೇನು ಸಂಕಷ್ಟ ಅನುಭವಿಸುತ್ತಿದ್ದಾರೆ? ಒಂದು ನೋಟ ಇಲ್ಲಿದೆ. ಆಟ ಹಾಗೂ ಪಾಠಗಳಲ್ಲಿ ಮಗ್ನರಾಗಿರಬೇಕಿದ್ದ ಮಕ್ಕಳು ಸುಮ್ಮನೆ ಮನೆಗಳಲ್ಲಿ ಬಂಧಿಯಾಗಿರುವುದನ್ನು ನೋಡುವುದೇ ಒಂದು ಹಿಂಸೆ. ಕೊರೊನಾ ವೈರಸ್‌ ತಡೆಯಲು ತೆಗೆದುಕೊಳ್ಳಲಾದ ಕ್ರಮಗಳ ಪರಿಣಾಮ ಪ್ರಪಂಚದಾದ್ಯಂತ ಸುಮಾರು 160 ಕೋಟಿ ಮಕ್ಕಳು ಶಾಲೆಯಿಂದ ಆಚೆ ಬಿದ್ದಿದ್ದಾರೆ. ಇವರಲ್ಲಿ ಕೆಲವೇ ಮಕ್ಕಳು ಮಾತ್ರ ಮನೆಯಲ್ಲೂ ಅಧ್ಯಯನ ಮುಂದುವರಿಸಬಹುದಾದ […]

Read More

ಎಸ್ಸೆಸ್ಸೆಲ್ಸಿ ಪರೀಕ್ಷೆ ಖಚಿತ

– ಸುರಕ್ಷತಾ ಕ್ರಮಗಳೊಂದಿಗೆ ಎಕ್ಸಾಮ್: ಸುರೇಶ್ ಕುಮಾರ್. – ತಮಿಳುನಾಡು, ಪುದುಚೆರಿ, ತೆಲಂಗಾಣದಲ್ಲಿ ಪರೀಕ್ಷೆ ರದ್ದು. ವಿಕ ಸುದ್ದಿಲೋಕ ಉಡುಪಿ/ಬೆಂಗಳೂರು. ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಸುರಕ್ಷತಾ ಕ್ರಮಗಳೊಂದಿಗೆ ಖಚಿತವಾಗಿ ನಡೆಸುತ್ತೇವೆ, ಈ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಬಾರದು ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿ ಸುಳ್ಳು ವದಂತಿ ಹರಡುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಈ ನಡುವೆ ತಮಿಳುನಾಡು, ಪುದುಚೆರಿ ಮತ್ತು ತೆಲಂಗಾಣ […]

Read More

ಕಲಿತ ಶಾಲೆಯಲ್ಲೇ ಪರೀಕ್ಷೆ

– ಎಸ್ಸೆಸ್ಸೆಲ್ಸಿ ಎಕ್ಸಾಂ ರದ್ದತಿ, ಮಂದೂಡಿಕೆ ಬೇಡ: ತಜ್ಞರ ಅಭಿಮತ – ಸೆಂಟರ್‌ಗೆ ಹೋಗುವ ಬದಲು ಸ್ಕೂಲಲ್ಲೇ ಬರೆಸುವುದು ಸೂಕ್ತ. ವಿಕ ಸುದ್ದಿಲೋಕ ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಕೇ ಬೇಡವೇ ಎಂಬ ಚರ್ಚೆ ಜೋರಾಗಿರುವ ನಡುವೆಯೇ, ವಿದ್ಯಾರ್ಥಿಗಳಿಗೆ ಅವರು ಕಲಿತ ಶಾಲೆಯಲ್ಲೇ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆ ನಡೆಸಿದರೆ ಯಾವುದೇ ಸಮಸ್ಯೆ ಇಲ್ಲ ಎಂಬ ‘ಮಧ್ಯಮ ಸಲಹೆ’ಯೊಂದು ಕೇಳಿಬಂದಿದ್ದು, ಇದನ್ನು ಶಿಕ್ಷಣ ವಲಯವೂ ಬೆಂಬಲಿಸಿದೆ. ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಎಲ್ಲರನ್ನೂ ಉತ್ತೀರ್ಣಗೊಳಿಸುವುದು ಸಮಂಜಸವಲ್ಲ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top