ನೂತನ, ಸನಾತನ ಶಿಕ್ಷಣ ನೀತಿ!

ನೂತನ ಶಿಕ್ಷಣ ನೀತಿಗೂ ಭಾರತೀಯ ಪರಂಪರೆಯ ಶಿಕ್ಷಣಕ್ಕೂ ಸಂಬಂಧ ಇದೆಯಾ? ಸನಾತನ ವಿದ್ಯಾಭ್ಯಾಸ ಪದ್ಧತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಹೊಸ ನೀತಿಯನ್ನು ಸಿದ್ಧಪಡಿಸಲಾಗಿದೆ ಎಂದು ಕೆಲವರು ತಜ್ಞರು ಹೇಳುತ್ತಿದ್ದಾರೆ. ಅದು ಹೇಗೆ? ಮಾಳವೀಯರ ತತ್ವ ಸಿದ್ಧಾಂತ ನೂತನ ಶಿಕ್ಷಣ ನೀತಿಯನ್ನು ಭಾರತದ ದೊಡ್ಡ ಪಂಡಿತ, ಮದನ ಮೋಹನ ಮಾಳವೀಯರ ತತ್ವ ಸಿದ್ಧಾಂತದಂತೆ ವೈದಿಕ ಜ್ಞಾನ ಹಾಗೂ ವಿಜ್ಞಾನಗಳೆರಡನ್ನೂ ಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಕ್ರಿಯಾಲ್‌ ಅವರು ಹಿಂದೆಯೇ ಹೇಳಿದ್ದರು. ಮಾಳವೀಯರು ಭಾರತೀಯ ಶಿಕ್ಷಣತಜ್ಞ, […]

Read More

ಶಿಕ್ಷಣ ನೀತಿಯ ನೂರೆಂಟು ಮುಖ

ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಯಾವ ದೇಶಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀತಿಯಿದೆ? ಭಾರತಕ್ಕೂ ಅವುಗಳಿಗೂ ಇರುವ ವ್ಯತ್ಯಾಸವೇನು? ಒಂದು ನೋಟ ಇಲ್ಲಿದೆ. ತಾಯಿನುಡಿಗೆ ಯುನೆಸ್ಕೊ ಒತ್ತು ನೂತನ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರಕಾರ ಮಾತೃಭಾಷೆಗೆ ನೀಡಿರುವ ಒತ್ತನ್ನು, ವಿಶ್ವ ಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಘಟಕ (ಯುನೆಸ್ಕೊ) ಕೂಡ ಒತ್ತಿ ಹೇಳಿದೆ. ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಬಹುಭಾಷಾ ಶಿಕ್ಷಣವನ್ನು ಒದಗಿಸಬೇಕು. ಇದರಿಂದ ಮಗುವಿನ ಕಲ್ಪನೆ, ವೈವಿಧ್ಯತೆಯ ಪರಿಕಲ್ಪನೆ ಹಾಗೂ ಸೃಜನಶೀಲತೆಗೆ ಇಂಬು […]

Read More

ಸಿಇಟಿ ಪರೀಕ್ಷೆಯೂ ಸುಗಮ – ಶಾಲಾರಂಭಕ್ಕೆ ಇದು ಸ್ಫೂರ್ತಿಯಾಗಲಿ

ಕರ್ನಾಟಕ ಸರಕಾರ ಇಂಜಿನಿಯರಿಂಗ್‌ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುವ ಸಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಗುರುವಾರ ಹಾಗೂ ಶುಕ್ರವಾರ ಸುಮಾರು 497 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪಿಯುಸಿ ಇಂಗ್ಲಿಷ್‌ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಲಾಕ್‌ಡೌನ್‌ ಸಂದರ್ಭದಲ್ಲಿಯೇ ಯಶಸ್ವಿಯಾಗಿ ನಡೆಸಿದ್ದ ಸರಕಾರ, ಈಗ ಸಿಇಟಿಯನ್ನೂ ನೆರವೇರಿಸಿ ಸೈ ಎನ್ನಿಸಿಕೊಂಡಿದೆ. ಇದರಲ್ಲಿ 63 ಮಂದಿ ಕೋವಿಡ್‌ ಸೋಂಕಿತರೂ ಇದ್ದುದು ವಿಶೇಷ. ಈ ವಿದ್ಯಾರ್ಥಿಗಳು ಪರೀಕ್ಷೆಗಳಿಂದ ವಂಚಿತರಾಗದಂತೆ ನೋಡಿಕೊಂಡ ಪರೀಕ್ಷಾ ಪ್ರಾಧಿಕಾರದ […]

Read More

ಹೊಸ ಭಾರತಕ್ಕೆ ಹೊಸ ಶಿಕ್ಷಣ ನೀತಿ ದಿಕ್ಸೂಚಿ

‘2020ರ ಹೊಸ ಶಿಕ್ಷಣ ನೀತಿ’ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 34 ವರ್ಷಗಳ ಬಳಿಕ ಹೊಸ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ, ಉನ್ನತ ಶಿಕ್ಷಣವನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸುವ ಅಂಶಗಳು ಈ ನೀತಿಯಲ್ಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ‘ಭಾರತ ಕೇಂದ್ರಿತ ಶಿಕ್ಷಣ ನೀತಿ’ಯಾಗಿದ್ದು, ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಹೊಸ ಭಾರತದಲ್ಲಿ ಹೊಸ ಶಿಕ್ಷಣ ನೀತಿಯು ‘ಹೊಸ ಯುಗ’ಕ್ಕೆ ದಾರಿ ದೀಪವಾಗಲಿದೆ. – ಉನ್ನತ ಶಿಕ್ಷಣದಲ್ಲಿ ಭರ್ಜರಿ ಬದಲಾವಣೆ […]

Read More

ಬದುಕಲು ಕಲಿಯಿರಿ

ರಾಷ್ಟ್ರೀಯ ಶಿಕ್ಷಣ ನೀತಿ 2020ಗೆ ಅಸ್ತು | ಜ್ಞಾನದ ಜತೆಗೆ ವೃತ್ತಿಪರ ಕೌಶಲಕ್ಕೆ ಒತ್ತು 3ನೇ ವರ್ಷದಿಂದಲೇ ಸ್ಕೂಲಿಂಗ್ | 5ನೇ ಕ್ಲಾಸಿನವರೆಗೆ ಮಾತೃಭಾಷಾ ಶಿಕ್ಷಣ ಶಿಕ್ಷಣವನ್ನು ಕೇವಲ ಜ್ಞಾನಕ್ಕೆ ಸೀಮಿತಗೊಳಿಸದೆ ಕೌಶಲಕ್ಕೂ ಒತ್ತು ನೀಡಿ ಬದುಕಿಗೆ ಪೂರಕಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. 18 ವರ್ಷದವರೆಗೆ ಕಡ್ಡಾಯ ಶಿಕ್ಷಣ, ಪದವಿಯನ್ನು ಯಾವ ಹಂತದಲ್ಲಿ ನಿಲ್ಲಿಸಿದರೂ ಪ್ರಮಾಣಪತ್ರ ನೀಡುವ ವ್ಯವಸ್ಥೆ, ವಿದ್ಯಾರ್ಥಿಗಳನ್ನು ತಂತ್ರಜ್ಞಾನದಲ್ಲಿ ಸಶಕ್ತಗೊಳಿಸಿ ವೃತ್ತಿಗೆ ಸಿದ್ಧಗೊಳಿಸುವುದು […]

Read More

ನಿರ್ಧಾರ ಅಚಲವಾಗಿರಲಿ – ಶಾಲೆ ಆರಂಭದ ಬಗ್ಗೆ ಸಚಿವರ ವಿಶಿಷ್ಟ ಕ್ರಮ

ಕೊರೊನಾದಿಂದ ಅಸ್ತವ್ಯಸ್ತಗೊಂಡಿರುವ ಜನಜೀವನವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಸಂಬಂಧ ‘ಅನ್‌ಲಾಕ್‌’ ಪ್ರಕ್ರಿಯೆ ಜಾರಿಯಲ್ಲಿದೆ. ಅದೇ ರೀತಿ, ಶಾಲೆಗಳನ್ನು ಆರಂಭಿಸಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಶಾಲೆ ಆರಂಭದ ವಿಷಯದಲ್ಲಿ ಪೋಷಕರ ಆತಂಕವೂ ಸಹಜವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಸಮಾಜದ ಎಲ್ಲವರ್ಗದ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅದರಂತೆ, ಸೋಮವಾರ ಸಚಿವರು ‘ವಿಜಯ ಕರ್ನಾಟಕ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರ ಜತೆ ಚರ್ಚಿಸಿದ್ದಾರೆ. ಕೊರೊನಾ ಮಧ್ಯೆಯೂ […]

Read More

ಸಮಗ್ರ ಶಿಕ್ಷಣದ ಅಗತ್ಯ – ಆನ್‌ಲೈನ್‌-ಆಫ್‌ಲೈನ್‌ ಜೊತೆಗೂಡಿಸಬೇಕು

ಕೊರೊನಾ ಸೋಂಕಿನ ಆತಂಕದಿಂದ ಸ್ಥಗಿತಗೊಂಡಿರುವ ಶೈಕ್ಷಣಿಕ ರಂಗಕ್ಕೆ ಮರುಜೀವ ತುಂಬುದು ನಿಜಕ್ಕೂ ಒಂದು ಸವಾಲಿನ ಕೆಲಸ. ಈ ಬಗ್ಗೆ ‘ವಿಜಯ ಕರ್ನಾಟಕ’ ನಡೆಸಿದ ವೆಬಿನಾರ್‌ನಲ್ಲಿ ಮಹತ್ವದ ಅಭಿಪ್ರಾಯಗಳು ಹಾಗೂ ಭರವಸೆಯ ಆಶಾಕಿರಣಗಳು ಮೂಡಿಬಂದಿವೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಸೆದ ಸಂಯೋಜಿತ ಶಿಕ್ಷಣ ಭವಿಷ್ಯದ ದೃಷ್ಟಿಯಿಂದಲೂ ಅನಿವಾರ್ಯವಾಗಿರುವುದರಿಂದ ಎರಡಕ್ಕೂ ಒತ್ತು ನೀಡುವ ಹೊಸ ಸಂಯೋಜನೆಯನ್ನು ರೂಪಿಸಬೇಕು ಎಂಬುದು ಈ ಕಾರ್ಯಕ್ರಮದಲ್ಲಿ ಮೂಡಿಬಂದ ಮುನ್ನೋಟ. ಆನ್‌ಲೈನ್‌ ಶಿಕ್ಷಣ ಹಳ್ಳಿ ಹಳ್ಳಿಗೆ ತಲುಪಬೇಕೆಂದರೆ, ಇನ್ನಷ್ಟು ಇಂಟರ್ನೆಟ್‌ ಕ್ರಾಂತಿ ಆಗಬೇಕಾದುದು ಅಗತ್ಯ. ಅದಕ್ಕೆ […]

Read More

ಶಿಕ್ಷಣ ಕ್ಷೇತ್ರ ಲೈನ್‌ಗೆ ಬರುವ ಭರವಸೆ

ಕೊರೊನಾ ಕಾಲದಲ್ಲಿ ಶಿಕ್ಷಣರಂಗದ ಪುನಃಶ್ಚೇತನ, ವರ್ತಮಾನ, ಭವಿಷ್ಯದ ಸವಾಲುಗಳ ಹಾಗೂ ಆನ್‌ಲೈನ್‌ ಶಿಕ್ಷಣದ ಸಾಧಕ, ಬಾಧಕಗಳ ಕುರಿತು ವಿಜಯ ಕರ್ನಾಟಕ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಸರಕಾರದ ಇಬ್ಬರು ಸಚಿವರು, ಶೈಕ್ಷಣಿಕ ತಜ್ಞರು, ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ ಸುಮಾರು ಎರಡೂ ಕಾಲು ಗಂಟೆ ಸಮಾಲೋಚಿಸಿದರು. ಸರಕಾರ, ಶಿಕ್ಷಣ ಸಂಸ್ಥೆಗಳು, ಪಾಲಕರು ನಿರ್ವಹಿಸಬೇಕಾದ ಪಾತ್ರ, ವಿದ್ಯಾರ್ಥಿಗಳ ಭವಿಷ್ಯದ ಚಿಂತನ ಮಂಥನ ನಡೆಯಿತು. ಆನ್‌ಲೈನ್‌ ಶಿಕ್ಷಣದ ಸಾರ್ವತ್ರೀಕರಣಕ್ಕೆ ಎದುರಾಗಿರುವ ಸವಾಲು ಮತ್ತು ಅದನ್ನು ಎದುರಿಸುವ ಬಗೆ, ಶಾಲೆ, ಕಾಲೇಜು ಆರಂಭದ ಗೊಂದಲ, ಸಿಇಟಿ, […]

Read More

ಉಡುಪಿ ಫಸ್ಟ್, ವಿಜಯಪುರ ಲಾಸ್ಟ್

– ದಕ್ಷಿಣ ಕನ್ನಡ 2, ಕೊಡಗು ಜಿಲ್ಲೆಗೆ 3ನೇ ಸ್ಥಾನ – 88 ಕಾಲೇಜುಗಳು ಝೀರೋ, 92 ಕಾಲೇಜು ಶತಕ ಸಾಧನೆ – ಕೊರೊನಾ ಭಯದ ಮಧ್ಯೆಯೇ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ವಿಕ ಸುದ್ದಿಲೋಕ ಬೆಂಗಳೂರು ಪಿಯು ದ್ವಿತೀಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿಯೂ ಉಡುಪಿ ಶೇ.90.71 ರಿಸಲ್ಟ್ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ವಿಜಯಪುರ(ಶೇ.54.22) ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ(ಶೇ.90.71) ಇದ್ದರೆ ಮೂರನೇ ಸ್ಥಾನದಲ್ಲಿ ಕೊಡಗು ಜಿಲ್ಲೆ(ಶೇ.81.53) ಇದೆ. […]

Read More

ಬಡತನದಲ್ಲೂ ಅರಳಿದ “ಕಲೆ’

ದ್ವಿತೀಯ ಪಿಯು 61.80% ರಿಸಲ್ಟ್ | ಕಲಾ ವಿಭಾಗದಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ ಸಾರ್ವಕಾಲಿಕ ಗರಿಷ್ಠ ಫಲಿತಾಂಶ | ಕೊರೊನಾ ಅವಧಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ನಪಾಸು. ವಿಕ ಸುದ್ದಿಲೋಕ ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಸರಾಸರಿ ಶೇ.61.80ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಸಾರ್ವಕಾಲಿಕ ದಾಖಲೆ ಫಲಿತಾಂಶ ಪ್ರಕಟವಾಗಿದೆ. ಈ ನಡುವೆ ಕಷ್ಟನಷ್ಟ, ಸೌಕರ್ಯ ಕೊರತೆಗಳನ್ನೂ ಮೀರಿ ಹಲವಾರು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಮುಖ್ಯವಾಗಿ ಕಲಾ ವಿಭಾಗದಲ್ಲಿ ಟಾಪ್ ಸ್ಥಾನ ಪಡೆದಿರುವ ಬಹುತೇಕ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top