ನಿಮ್ಮ‌ ಜಿಯೋ ಡಾಟಾ ಫೇಸ್‌ಬುಕ್‌ ಪಾಲಾಗುತ್ತಿದೆಯೇ? ಸಿಸಿಐ/ಟ್ರಾಯ್ ಮುಂದಿನ ಹೆಜ್ಜೆ ಏನು?

ಏಜೆನ್ಸೀಸ್ ಹೊಸದಿಲ್ಲಿ/ಬೆಂಗಳೂರು ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊದ ಶೇ.10ರಷ್ಟು ಷೇರುಗಳನ್ನು ಜುಕರ್‌ಬರ್ಗ್ ಒಡೆತನದ ಫೇಸ್‌ಬುಕ್‌  ಖರೀದಿಸುವುದು ಕೇವಲ 43,574 ಕೋಟಿ ರೂ.ಗಳ ಡೀಲ್ ಆಗಿ ಉಳಿದಿಲ್ಲ. ಷೇರುಗಳ ಮಾರಾಟ ಮಾತ್ರ ಇದಲ್ಲ, ಇದಕ್ಕೂ ಆಚೆ ಸಾರ್ವಜನಿಕರ ಅಮೂಲ್ಯ ಡೇಟಾದ ಸಂಗತಿ ಈಗ ಮುಂಚೂಣಿಗೆ ಬಂದಿದೆ. ಉಭಯ ಕಂಪನಿಗಳು ಕೋಟ್ಯಂತರ ಗ್ರಾಹಕರು ಅಥವಾ ಬಳಕೆದಾರರ ಖಾಸಗಿ ವಿವರಗಳನ್ನು (ಡೇಟಾ) ಒಳಗೊಂಡಿವೆ. ಮುಂಬರುವ ದಿನಗಳಲ್ಲಿ‌ ಇನ್ನೂ ಕೋಟ್ಯಂತರ ಗ್ರಾಹಕರ ಮಾಹಿತಿಗಳು ಉಭಯ ಕಂಪನಿಗಳ ಕೈಸೇರುವ ನಿರೀಕ್ಷೆ ಇದೆ. ವಿಶ್ವಾದ್ಯಂತ ನಾನಾ […]

Read More

ನವೋದ್ಯಮಿಗಳ e-ಲೋಕ – ಎನ್‌. ರವಿಶಂಕರ್‌

ರವಿ ಕಾಣದ್ದನ್ನು ಕವಿ ಕಾಣುತ್ತಾನೆ! ತನ್ನ ಕಲ್ಪನಾಶಕ್ತಿಯಿಂದ. ಹಾಗೆಯೇ ಕವಿ ಕಾಣದ್ದನ್ನು ನಮ್ಮ ದೇಶದ ನವೋದ್ಯಮಿಗಳು ಕಂಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಅವರು ಹುಟ್ಟಿಹಾಕಿರುವ ಸಾವಿರಾರು ಉದ್ಯಮಗಳು ಈ ಕೊರೊನಾ ಕಾಲದಲ್ಲಿ ನಮ್ಮನ್ನು ಕಾಯುತ್ತಿವೆ. ಕವಿಗೆ ಕಲ್ಪನೆ ಹೇಗೋ, ನವೋದ್ಯಮಿ / ಆಂತ್ರಪ್ರನರ್‌ಗೆ ‘ವಿಷನ್‌’ ಅಂದರೆ ಹಾಗೆ! ಸಣ್ಣ ಕಿಚ್ಚಿನ ಕಿಡಿಯಿಂದ ಆರಂಭಗೊಂಡು ಇಂದು ಬೃಹತ್‌ ಉದ್ಯಮಗಳಾಗಿ ಬೆಳೆದಿರುವ ಅದೆಷ್ಟೋ ನವೋದ್ಯಮಗಳೊಂದಿಗೆ ಅವುಗಳ ಆರಂಭಾವಸ್ಥೆಯಿಂದಲೇ ಸಲಹೆಗಾರನಾಗಿ ಕೆಲಸ ಮಾಡುವ ಸೌಭಾಗ್ಯ ನನಗೂ ನನ್ನ ಸಂವಹನ ಸಲಹಾ ಸಂಸ್ಥೆಗೂ […]

Read More

ಸಂಕಷ್ಟವಷ್ಟೇ ಅಲ್ಲ, ಭರವಸೆ ಉಂಟು – ಭವಿಷ್ಯದ ಸವಾಲಿಗೊಂದು ಹಾಲಿ ರಿಹರ್ಸಲ್

ಎಲ್ಲ ಸರಾಗವಾಗಿ ನಡೆದುಕೊಂಡು ಹೋಗುತ್ತಿರುವಾಗ ದಿಢೀರ್ ಎದುರಾಗುವ ಸವಾಲುಗಳು ನಮ್ಮ ಮನೋಬಲವನ್ನು ಕುಂದಿಸಿ, ನಾವು ಋಣಾತ್ಮಕವಾಗಿ ಚಿಂತಿಸುವಂತೆ ಮಾಡುವುದು ಸಹಜ. ಕೊರೊನಾ ಸೃಷ್ಟಿಸಿರುವ ಆವಾಂತರವೂ ಇದಕ್ಕೆ ಹೊರತಲ್ಲ. ಈ ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಯಿಂದಾಗಿ ನಾವು ಎಲ್ಲವನ್ನು ಕಳೆದುಕೊಂಡು ಬಿಟ್ಟೆವು; ಎಲ್ಲವೂ ಮುಗಿದೇ ಹೋಯಿತು; ಬದುಕು ಹಾಳಾಯಿತು ಎಂದು ಭಾವಿಸಲು ಕಾರಣವಿಲ್ಲ. ನಮ್ಮನ್ನು ನಾವು ಮತ್ತು ನಮ್ಮ ಶಕ್ತಿಯನ್ನು ಮರುಪೂರಣಗೊಳಿಸಿಕೊಳ್ಳಲು ಸೃಷ್ಟಿಯಾಗಿರುವ ಅವಕಾಶ ಎಂದು ಏಕೆ ತಿಳಿಯಬಾರದು. ಸಕಾರಾತ್ಮಕ ದೃಷ್ಟಿಕೋನದಿಂದ ಈಗಿನ ಪರಿಸ್ಥಿತಿಯನ್ನು ನೋಡಿದರೆ, ಮುಂಬರುವ ದಿನಗಳು […]

Read More

ಕೊರೊನಾ ಸಂಕಷ್ಟದಲ್ಲಿರುವವರಿಗೆ ಭರವಸೆ ಬಾಗಿಲು‌..

ಡೋಂಟ್ ವರಿ, ಎಲ್ಲ ಬಾಗಿಲುಗಳೂ ಮುಚ್ಚಿಲ್ಲ! ಲಾಕ್‌ಡೌನ್ ನಡುವೆಯೂ ಹಲವು ವಲಯಗಳಲ್ಲಿ ಚುರುಕಿನ ವಹಿವಾಟು ಕೊರೊನಾಘಾತದ ನಡುವೆಯೂ ಆಶಾಕಿರಣ ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ದಿನ ಬಳಕೆ ವಸ್ತು ತಯಾರಿ ಕಂಪನಿಗಳ ಷೇರು ವೌಲ್ಯ ವೃದ್ಧಿ, ಔಷಧ ರಫ್ತಿನಿಂದ ಭಾರಿ ಲಾಭ – ಕೇಶವ ಪ್ರಸಾದ್ ಬಿ. ಬೆಂಗಳೂರು ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ಭಾರಿ ಪ್ರಹಾರ ಮಾಡಿದೆ. ಸುದೀರ್ಘ ಲಾಕ್‌ಡೌನ್‌ನಿಂದಾಗಿ ಕೈಗಾರಿಕೋದ್ಯಮಕ್ಕೆ ಗರ ಬಡಿದಂತಾಗಿರುವುದು ನಿಜ. ಹಾಗಂತ ಪೂರ್ಣ ನಿರಾಶರಾಗಬೇಕಿಲ್ಲ. ಕೊರೊನಾ ಬಿಕ್ಕಟ್ಟು ಹಲವು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top