ಆರೋಗ್ಯ ಸೇವೆಯೇ ಗಂಭೀರ – ತುರ್ತುಸ್ಥಿತಿ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗಲಿ

ಹಿಂದೆಂದೂ ವೈದ್ಯಲೋಕ ಇಂಥದೊಂದು ಕಠೋರ, ನಿರ್ದಯಿ ವ್ಯವಸ್ಥೆಗೆ ಸಾಕ್ಷಿಯಾಗಿರಲಿಲ್ಲ. ಬೆಂಗಳೂರಿನಲ್ಲಿ ಈಗ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಹೊತ್ತುಕೊಂಡು ಆಸ್ಪತ್ರೆಗೆ ಹೋದರೂ, ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬನ್ನಿ, ಇಲ್ಲವೇ ಸಾಯಿರಿ ಎಂಬರ್ಥದ ಉತ್ತರಗಳೇ ಸಿಗುತ್ತಿವೆ. ರಾಜ್ಯದ ಇತರ ಕಡೆಗಳ ಆಸ್ಪತ್ರೆಗಳೂ ಇದೇ ಮಾದರಿಯನ್ನು ಅನುಸರಿಸಲಾರಂಭಿಸಿವೆ. ಶುಲ್ಕದ ಮಾತು, ಪರೀಕ್ಷೆ ನಂತರ; ರೋಗಿಯ ಪ್ರಾಣ ಉಳಿಸುವ ಹೊಣೆಯನ್ನು ಮೊದಲು ಹೊರಬೇಕಾದ ಆಸ್ಪತ್ರೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ. ಇದರಿಂದಾಗಿ ಕಳೆದ ಒಂದು ತಿಂಗಳಿನಲ್ಲಿ ಹತ್ತಾರು ರೋಗಿಗಳು ಆಸ್ಪತ್ರೆಗಳಿಗೆ […]

Read More

ಮನೋಬಲವೇ ಮಹಾಬಲ

– ಕೊರೊನಾಗಿಂತಲೂ ಆತಂಕ, ಆಘಾತದಿಂದಲೇ ಹೆಚ್ಚುತ್ತಿದೆ ಸಾವು – ವೈರಸ್ ಎದುರಿಸಲು ಬೇಕಿರುವುದು ಬರೀ ಆಸ್ಪತ್ರೆಗಳಲ್ಲ, ಮಾನಸಿಕ ದೃಢತೆ ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯದಲ್ಲಿ ಕೊರೊನಾಗಿಂತಲೂ ಅದರ ಕುರಿತ ಭಯವೇ ಹೆಚ್ಚು ಹೆಚ್ಚು ಸಾವಿಗೆ ಕಾರಣವಾಗುತ್ತಿದೆ. ಸಣ್ಣಗೆ ಜ್ವರ ಬಂದರೂ ಕೊರೊನಾ ಇರಬಹುದು ಎಂಬ ಭಯ, ಸ್ವಾಬ್ ಟೆಸ್ಟ್‌ನ ಫಲಿತಾಂಶದ ನಿರೀಕ್ಷೆಯಲ್ಲೇ ಹೆಚ್ಚುವ ಆತಂಕ, ಪಾಸಿಟಿವ್ ಎಂದು ಪ್ರಕಟಿಸಿದ ಬಳಿಕದ ಉದ್ವೇಗಗಳಿಂದ ರಾಜ್ಯದಲ್ಲಿ ಈಗಾಗಲೇ 20ಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. 10ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. […]

Read More

ಪ್ಲಾಸ್ಮಾ ದಾನಕ್ಕೆ 5 ಸಾವಿರ ರೂ. ಪ್ರೋತ್ಸಾಹ ಧನ

ಬೆಂಗಳೂರು: ಕೋವಿಡ್‌ನಿಂದ ಗುಣಮುಖರಾದವರು ಪ್ಲಾಸ್ಮಾ ಚಿಕಿತ್ಸೆಗೆ ರಕ್ತದಾನ ಮಾಡಿದರೆ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಬುಧವಾರ ಮಾತನಾಡಿದ ವೈದ್ಯ ಶಿಕ್ಷ ಣ ಸಚಿವ ಡಾ.ಕೆ.ಸುಧಾಕರ್, ‘‘ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದಕ್ಕಾಗಿ ಈ ಮೊದಲು ಕೊರೊನಾ ಸೋಂಕು ಪೀಡಿತರಾಗಿ ಸಂಪೂರ್ಣ ಗುಣಮುಖರಾದವರ ರಕ್ತವನ್ನು ನೀಡಬೇಕಾಗುತ್ತದೆ,’’ ಎಂದರು. ಡಿಕ್ಟೇಟ್ ಮಾಡಬೇಡಿ ಕೋವಿಡ್ ಟೆಸ್ಟ್ ಮಾಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಖಾಸಗಿಯವರು ಸರಕಾರಕ್ಕೆ […]

Read More

ಬನ್ನಿ, ನಮಗಿದು ಯೋಧರಾಗುವ ಯೋಗ

ಇಡೀ ಮಾನವ ಕುಲಕ್ಕೆ ಕಂಟಕವಾಗುತ್ತಿರುವ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಬಹಳಷ್ಟು ವೈದ್ಯರು ತಮ್ಮ ಕುಟುಂಬ, ಪ್ರೀತಿ ಪಾತ್ರರನ್ನು ತೊರೆದು ನಾಲ್ಕು ತಿಂಗಳಿಂದ ರೋಗಿಗಳ ಆರೈಕೆಯಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಭಯಗ್ರಸ್ಥ ಸೋಂಕಿತರಲ್ಲಿ ಧೈರ್ಯ ತುಂಬಿ, ಆತ್ಮಸ್ಥೈರ್ಯವನ್ನೇ ಮದ್ದಾಗಿಸುತ್ತಿದ್ದಾರೆ. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಕಾಲಿಟ್ಟಿರೆ ಇವರ ಮನದಲ್ಲಿ ಸಾರ್ಥಕ್ಯದ ಭಾವ. ಸ್ವತಃ ಸೋಂಕಿಗೆ ತೆರೆದುಕೊಳ್ಳುವ ಅಪಾಯವಿದ್ದರೂ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸೇವಾ ಮನೋಭಾವ, ಕಾರ್ಯತತ್ವರತೆ ನಾಡಿನ ಎಲ್ಲವೈದ್ಯ ಸಮೂಹಕ್ಕೆ ಸ್ಫೂರ್ತಿಯಾಗಲಿ… ಟೆಲಿ ಮೆಡಿಸಿನ್ […]

Read More

ಕೊರೊನಾ ಯೋಧರ ಕೊರತೆ – ವೈದ್ಯರೇ, ಸಮಾಜ ನಿಮ್ಮನ್ನೇ ನಂಬಿದೆ

ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಕೆಯಿಂದ ಆಗಿರುವ ಹಲವು ದುಷ್ಪರಿಣಾಮಗಳ ನಡುವೆ, ವೈದ್ಯರ ಕೊರತೆಯೂ ಒಂದು ಹಾಗೂ ಹೆಚ್ಚು ಗಂಭೀರವಾದುದು. ಸರಕಾರಿ ಆಸ್ಪತ್ರೆಗಳಲ್ಲಿ ಮೊದಲೇ ವೈದ್ಯರ ಕೊರತೆಯಿದೆ. ನಿಗದಿತ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೇವೆ ಕಡ್ಡಾಯಗೊಂಡಿರುವ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಒಂದು ವಾರ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಎರಡು ವಾರ ಐಸೋಲೇಶನ್‌ ಆಗಬೇಕಿರುವುದರಿಂದ ವೈದ್ಯರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗುತ್ತದೆ. ಅದರಲ್ಲೂ ಕೆಲವು ವೈದ್ಯರಿಗೆ ಸೋಂಕು ತಗುಲಿರುವುದರಿಂದ ಕ್ವಾರಂಟೈನ್‌ ಆಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವೇ ಆಸ್ಪತ್ರೆಗಳು ಮಾತ್ರ […]

Read More

ವೈದ್ಯ ಯೋಧರೇ ಜೀವ ಉಳಿಸಿ

– ಸೇನಾನಿಗಳ ಕೈಯಲ್ಲಿದೆ ಕೊರೊನಾ ಮಣಿಸುವ ತಾಕತ್ತು | ಗಡಿ ಮೀರದಂತೆ ತಡೆಯಿರಿ – ಆತಂಕ, ಭಯ, ಬೇಡಿಕೆಗಳನ್ನು ಬದಿಗಿಡಿ | ನಿಮ್ಮನ್ನೇ ನಂಬಿದವರನ್ನು ಮೊದಲು ಕಾಪಾಡಿ. ವಿಕ ಸುದ್ದಿಲೋಕ ಬೆಂಗಳೂರು. ಭಾರತೀಯ ಯೋಧರು ಪಾಕಿಸ್ತಾನ, ಚೀನಾ ಗಡಿಯಲ್ಲಿ ಕೆಚ್ಚೆದೆಯ ಹೋರಾಟದ ಮೂಲಕ ವೈರಿಗಳನ್ನು ಹಿಮ್ಮೆಟ್ಟಿಸಿ ದೇಶದ ಜನರ ಹೃದಯ ಗೆಲ್ಲುತ್ತಿದ್ದಾರೆ. ಇತ್ತ ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಿಯ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ನಿಂತ ವೈದ್ಯಲೋಕವನ್ನೂ ಜನ ವೀರ ಯೋಧರಂತೆ ಕಾಣುತ್ತಿದ್ದಾರೆ, ಕೈ ಮುಗಿಯುತ್ತಿದ್ದಾರೆ… ಸರ್ವ […]

Read More

ವೈದ್ಯರು ಬೇಕಾಗಿದ್ದಾರೆ

– ಆರೋಗ್ಯ ಇಲಾಖೆಯಲ್ಲಿ 30% ಹುದ್ದೆ ಖಾಲಿ, ಖಾಸಗಿಯಲ್ಲೂ ಸಮಸ್ಯೆ – ಹೆಲ್ತ್ ಯೋಧರಿಗೂ ಸೋಂಕು | ಗುತ್ತಿಗೆ ವೈದ್ಯರ ಪದತ್ಯಾಗ ಬೆದರಿಕೆ. ಕಾರ್ತಿಕ್ ಯು.ಎಚ್. ಬೆಂಗಳೂರು : ಕೊರೊನಾ ವಿರುದ್ಧದ ಹೋರಾಟದಲ್ಲಿ ಸೇನಾನಿಗಳಂತೆ ಹೋರಾಡುವ ವೈದ್ಯ ಸಿಬ್ಬಂದಿಗಳ ಕೊರತೆ ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೇ ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. ಇದರ ಜತೆಗೆ ಹಲವಾರು ವೈದ್ಯರು, ಸಿಬ್ಬಂದಿ ಸೋಂಕು, ಭೀತಿ ಮತ್ತಿತರ ಕಾರಣಗಳಿಗಾಗಿ ಗೈರುಹಾಜರಾಗುತ್ತಿದ್ದಾರೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ […]

Read More

ಮನೆ ಆರೈಕೆ ಉಪಕ್ರಮ – ಗಂಭೀರ ರೋಗಿಗಳಿಗೆ ಹಾಸಿಗೆ ಉಳಿಸೋಣ

ರಾಜ್ಯದಲ್ಲಿ ಕೊರೊನಾ ಸೋಂಕಿತರಾಗಿ ಸಣ್ಣಪುಟ್ಟ ಲಕ್ಷಣಗಳಿಂದ ಗುಣಮುಖರಾಗುವ ಹಾಗೂ ಪಾಸಿಟಿವ್‌ ಆಗಿದ್ದೂ ಯಾವುದೇ ಲಕ್ಷಣಗಳನ್ನು ತೋರಿಸದ ರೋಗಿಗಳು ಸಾಕಷ್ಟಿದ್ದಾರೆ. ಇಂಥವರನ್ನೂ ಪತ್ತೆ ಹಚ್ಚಿ ಈಗ ನಿಗದಿತ ಸರಕಾರಿ ಕೋವಿಡ್‌ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಎಲ್ಲ ಕಡೆಯೂ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿವೆ ಹಾಗೂ ವೈದ್ಯ ಸಿಬ್ಬಂದಿಯ ಸಂಖ್ಯೆಯೂ ಸಾಕಷ್ಟಿಲ್ಲ. ಇದರಿಂದಾಗಿ, ಕೋವಿಡ್‌ ರೋಗಿಗಳ ಪರಿಸ್ಥಿತಿ ಉಲ್ಬಣಗೊಂಡರೆ ಗತಿಯೇನು ಎಂಬ ಆತಂಕ ಆ ರೋಗಿಗಳನ್ನೂ, ಅವರ ಸಂಬಂಧಿಕರನ್ನೂ ಹಾಗೂ ಇತರರನ್ನೂ ಕಾಡುತ್ತಿದೆ. ಇದನ್ನು […]

Read More

ಕೊರೊನಾ ಮನೋಲೋಕ

– ರಮೇಶ್‌ ಪೋಖ್ರಿಯಾಲ್‌ ‘ನಿಶಾಂಕ್‌’ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು. ಪರೀಕ್ಷಾ ಪೆ ಚರ್ಚಾ 3.0ರಲ್ಲಿ ಪ್ರಧಾನಿಯವರು ಒತ್ತಡ, ಆತಂಕ ಮತ್ತು ಅವುಗಳನ್ನು ನಿಭಾಯಿಸುವ ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸುತ್ತಿರುವಾಗ, ‘‘ನಮ್ಮ ಮಾನಸಿಕ ಸ್ಥಿತಿ ಹೇಗಿರಬೇಕೆಂದರೆ, ನಾವು ಒಮ್ಮೆ ವಿಫಲವಾದರೂ, ಮತ್ತೆ ಪ್ರಯತ್ನಿಸಬೇಕು. ಜೀವನದಲ್ಲಿ ಈ ಮನೋಭಾವವು ಪ್ರತಿ ವಿದ್ಯಾರ್ಥಿಗೂ ಇರಬೇಕು,’’ ಎಂದು ಹೇಳಿದ್ದರು. ಕೋವಿಡ್‌-19 ಸಾಂಕ್ರಾಮಿಕ ರೋಗವು ವಿದ್ಯಾರ್ಥಿಗಳು ಮತ್ತು ಇತರರ ಮೇಲೆ ಪರಿಣಾಮ ಬೀರಿದೆ. ಪರಿಣಾಮವಾಗಿ ಎಲ್ಲಾ ಕಡೆಯೂ ಒತ್ತಡದ ಸಂದರ್ಭಗಳು ಸೃಷ್ಟಿಯಾಗಿವೆ. […]

Read More

ಸಮರ್ಪಕ ಜಾರಿ ಅಗತ್ಯ – ಹಲ್ಲೆ ತಪ್ಪಿಸಲು ಕೇಂದ್ರ, ರಾಜ್ಯದಿಂದ ಸುಗ್ರೀವಾಜ್ಞೆ

ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ತೊಡಗಿಸಿಕೊಂಡಿದ್ದಾರೆ. ಆದರೆ, ಕರ್ನಾಟಕವೂ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಈ ‘ಕೊರೊನಾ ವಾರಿಯರ್ಸ್’ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಇಂಥ ಸಂದರ್ಭವನ್ನು ಎದುರಿಸುವ ಸಮರ್ಪಕ ಕಾನೂನು ಬಲ ನಮ್ಮ ಸರಕಾರಗಳಿಗೆ ಇರಲಿಲ್ಲ. ಆ ಕೊರತೆಯನ್ನು ಕೇಂದ್ರ ಮತ್ತು ಕರ್ನಾಟಕ ಸರಕಾರಗಳು ಸುಗ್ರೀವಾಜ್ಞೆಗಳ ಮೂಲಕ ತುಂಬಿಕೊಳ್ಳುತ್ತಿವೆ. ಕೊರೊನಾ ಸೇನಾನಿಗಳ ಮೇಲೆ ಹಲ್ಲೆ ಮಾಡುವವರನ್ನು ಹೆಡೆಮುರಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top