(ಇಂದು ಅಪ್ಪನ ದಿನ) ಅಪ್ಪ ಎಂದರೆ ಅಗಾಧ ಅವಕಾಶ ತೋರುವ ಆಕಾಶ. ಸದಾ ನೆರಳಾಗುವ ವಿಶಾಲ ಹೆಮ್ಮರ. ಆತ್ಮೀಯ ಗೆಳೆಯ, ದಾರಿ ತೋರುವ ಗುರು, ಶಿಸ್ತಿನ ರಿಂಗ್ ಮಾಸ್ಟರ್, ಆಪ್ತ ಸಮಾಲೋಚಕ ಹೀಗೆ ಮಕ್ಕಳ ಪಾಲಿಗೆ ಅಪ್ಪ ಬಹುಪಾತ್ರಧಾರಿ. ಇಂಥ ಅಪ್ಪನ ಜೊತೆಗಿನ ಭಾವನಾತ್ಮಕ ಸನ್ನಿವೇಶಗಳನ್ನು ಅಪ್ಪನ ದಿನಕ್ಕೆ ಹಂಚಿಕೊಳ್ಳುವಂತೆ ವಿಜಯ ಕರ್ನಾಟಕ ನೀಡಿದ ಕರೆಗೆ ಸಾವಿರಾರು ಓದುಗರು ಪ್ರತಿಕ್ರಿಯಿಸಿದ್ದಾರೆ. ಅಪ್ಪನ ಒಡನಾಟ, ಅಪ್ಪನ ಸೂರ್ತಿ, ಪ್ರೇರಣೆ, ಹೃದಯಸ್ಪರ್ಶಿ ಸನ್ನಿವೇಶ… ಹೀಗೆ ಅನೇಕ ಸಂಗತಿಗಳನ್ನು ಹೊರ ಹಾಕಿದ್ದಾರೆ. […]