ಆನ್‌ಲೈನ್‌ನಲ್ಲೇ ಜಪ, ತಪ, ಪೂಜೆ, ಧ್ಯಾನ

ಕೊರೊನಾದಿಂದ ಬದಲಾದ ಟ್ರೆಂಡ್‌: ಯೂಟ್ಯೂಬ್‌ನಲ್ಲೇ ಪೂಜೆ ನೇರ ಪ್ರಸಾರ, ನಿತ್ಯ ಪ್ರವಚನ, ಸತ್ಸಂಗ – ಗೌರಿಪುರ ಚಂದ್ರು ಬೆಂಗಳೂರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಮಠ, ಮಂದಿರಗಳಿಗೆ ಹೋಗುವುದು ನಿಂತಿದೆ. ಆದರೆ ಆನ್‌ಲೈನ್‌ ಮಾರ್ಗದ ಮೂಲಕ ಮನೆಮನೆಗಳಲ್ಲಿ ಭಕ್ತಿ ದಾಸೋಹ ಮುಂದುವರಿದಿದೆ. ಸ್ಕೈಪ್‌, ಫೇಸ್‌ಬುಕ್‌ ಪೇಜ್‌ ಹಾಗೂ ವಿಡಿಯೊ ಚಾಟಿಂಗ್‌ ಮೂಲಕ ವೇದ, ಉಪನಿಷತ್‌, ಸುಧಾಮಂಗಳ ಪಾಠ ಕಲಿಯುವವರ ಸಂಖ್ಯೆ ಹೆಚ್ಚಿದೆ. ಪ್ರವಚನ ಪ್ರಿಯರು, ಅಧ್ಯಾತ್ಮ ಆಸಕ್ತರು ಯೂಟ್ಯೂಬ್‌ ಮೊರೆ ಹೋಗುತ್ತಿದ್ದಾರೆ. ಫೇಸ್‌ಬುಕ್‌ನಲ್ಲೂ ಸ್ಪಿರಿಚುಯಲ್‌ ಉಪನ್ಯಾಸಗಳು ನಿತ್ಯ ಬಿತ್ತರವಾಗುತ್ತಿವೆ. ಉತ್ತರಾದಿಮಠದ […]

Read More

ಕೊರೊನಾ ಜತೆಗೇ ನಡೆಯಲಿ ಜೀವನ – ವೈರಾಣುವಿಗೆ ಹೆದರಿ ಕೂರಲಾಗದು, ಎದುರಿಸಿ ನಿಲ್ಲುವ ದೈಹಿಕ, ಮಾನಸಿಕ ಶಕ್ತಿಯೊಂದೇ ದಿವ್ಯಾಸ್ತ್ರ

– ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ Yes, the show must go on… ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್ಯಕ್ಕೆ ಈ ಕೊರೊನಾಗೆ ಪರಿಹಾರವಿಲ್ಲ. ಇರುವ ಪರಿಹಾರ ಮಾರ್ಗಗಳನ್ನು ಅಳವಡಿಸಿ, ಬಳಸಿ ನೋಡಿದ್ದಾಯಿತು. ಈ ಅನುಭವ ಹಾಗೂ ಈ ಹಿಂದಿನ ರೋಗಗಳ ಇತಿಹಾಸದ ಹಿನ್ನೆಲೆಯಲ್ಲಿ ನಾವೀಗ ಕಂಡುಕೊಳ್ಳಬೇಕಾಗಿರುವ ಸತ್ಯ; ನಮ್ಮ ಬದುಕು ಇನ್ನೇನಿದ್ದರೂ ಕೊರೊನಾ ಜೊತೆಗೇ ನಡೆಯಬೇಕು. ಆದರೆ, ಅದಕ್ಕೊಂದು ಕ್ರಮ ವಿಧಿಸಿಕೊಳ್ಳಬೇಕಷ್ಟೇ. ಕೊರೊನಾ ವೈರಸ್‌ಗಿಂತಲೂ ಮಿಗಿಲಾದ, ಅತಿಭಯಂಕರ ವೈರಸ್‌ಗಳನ್ನು ಈ […]

Read More

ಕೊರೊನೋತ್ತರ ಸುರಕ್ಷಿತ ಬದುಕಿಗೆ 16 ಸೂತ್ರಗಳು

– ಭವಿಷ್ಯದ ದಿನಗಳಲ್ಲಿ ನಮ್ಮ ಜೀವನ, ಚಿಂತನೆಗಳಲ್ಲೇ ಬಹುದೊಡ್ಡ ಬದಲಾವಣೆ ಆಗಬೇಕಿದೆ – ಹರಿಪ್ರಕಾಶ್ ಕೋಣೆಮನೆ. ಮಹಾಯುದ್ಧ ನಡೆದರೆ ಇಲ್ಲವೇ ಪ್ರಕೃತಿ ವಿಕೋಪದಿಂದ ರಾಷ್ಟ್ರದ ಭೌತಿಕ ಬದುಕು ಧ್ವಂಸವಾದರೆ ಮತ್ತೆ ಅಂಥ ರಾಷ್ಟ್ರಗಳು ಮರುನಿರ್ಮಾಣವಾಗಿರುವ ಕಥೆಗಳು ಇತಿಹಾಸದಲ್ಲಿ ಸಿಗುತ್ತವೆ. ಹಿರೋಷಿಮಾ, ನಾಗಸಾಕಿ ದುರಂತದಿಂದ ನಾಶವಾದ ಜಪಾನ್‌ನಿಂದ ಹಿಡಿದು, ತೀರಾ ಇತ್ತೀಚಿಗೆ ಭೂಕಂಪದಿಂದ ಸಂಪೂರ್ಣ ನೆಲಕಚ್ಚಿ ಹೋಗಿದ್ದ ನೇಪಾಳದಂಥ ರಾಷ್ಟ್ರಗಳು ಮತ್ತೆ ಎಲೆ ಎತ್ತಿ ನಿಂತಿರುವ ಬಗೆಯನ್ನು ಓದಿದ್ದೀರಿ, ಕಂಡಿದ್ದೀರಿ. ಆದರೆ, ಕೊರೊನಾ ಎಂಬ ಅಣುಗಾತ್ರದ ಅಗೋಚರ ಶತ್ರುವೊಬ್ಬ […]

Read More

ಕ್ವಾರಂಟೈನ್‌ ಒಪ್ಪದೆ ದಾಂಧಲೆ- ಪಾದರಾಯನಪುರದಲ್ಲಿ ಪೊಲೀಸ್‌ ಕ್ಯಾಂಪ್‌, ಅಧಿಕಾರಿಗಳ ಮೇಲೆ ಕಿಡಿಗೇಡಿಗಳ ದಾಳಿ

– ಬ್ಯಾರಿಕೇಡ್‌ ಕಿತ್ತೆಸೆದು ಅಟ್ಟಹಾಸ ಮೆರೆದ 200 ಜನರ ತಂಡ, ಸೋಂಕು ತಡೆಗೆ ಅಸಹಕಾರ ಬೆಂಗಳೂರು: ಸೀಲ್‌ಡೌನ್‌ ಆದ ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ನೂರಾರು ಕಿಡಿಗೇಡಿಗಳು ಬ್ಯಾರಿಕೇಡ್‌ ಹಾಗೂ ಕಬ್ಬಿಣದ ತಗಡುಗಳನ್ನು ಕಿತ್ತೆಸೆದು ದಾಂಧಲೆ ನಡೆಸಿದ್ದಾರೆ. ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 58 ಶಂಕಿತರನ್ನು ಕ್ವಾರಂಟೈನ್‌ನಲ್ಲಿಡಲು ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ಭಾನುವಾರ ಸ್ಥಳಕ್ಕೆ ತೆರಳಿದ ವೇಳೆ ಉದ್ರಿಕ್ತ ಗುಂಪು ಪೊಲೀಸರಿಗೇ ಸವಾಲು ಹಾಕಿ ಅಟ್ಟಹಾಸ ಮಾಡಿದೆ. ಈಗಾಗಲೇ ವಾರ್ಡ್‌ನಲ್ಲಿ11 ಮಂದಿ ಕೋವಿಡ್‌-19 ಸೋಂಕಿತರಿದ್ದು, ಅವರೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದ […]

Read More

ಠೇವಣಿ ಬಡ್ಡಿ ಇಳಿಯದಿರಲಿ: ಸಂಕಷ್ಟದ ದಿನಗಳಲ್ಲಿ ಉಳಿತಾಯವೇ ಆಸರೆ

ಲಾಕ್‌ಡೌನ್‌ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಒಟ್ಟು 1 ಲಕ್ಷ ಕೋಟಿ ರೂ.ಗಳ ನಾನಾ ನೆರವಿನ ಪ್ಯಾಕೇಜ್‌ ಅನ್ನು ಶುಕ್ರವಾರ ಘೋಷಿಸಿದೆ. ಇದರ ಪರಿಣಾಮ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹೆಚ್ಚಿನ ಸಾಲ ವಿತರಿಸಲು ಹಣಕಾಸು ಸಿಗಲಿದೆ. ರೈತರು, ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರಿಗೆ ಬ್ಯಾಂಕ್‌ ಸಾಲ ಸೌಲಭ್ಯ ಹೆಚ್ಚಲಿದೆ. ವಿಶೇಷ ಹಣಕಾಸು ಸಂಸ್ಥೆಗಳಿಗೂ ಹಣ ನೀಡಲಾಗಿದ್ದು, ಕಾಮಗಾರಿಗಳಿಗೆ ನೆರವಾಗಲಿದೆ. ಇದು ಶ್ಲಾಘನೀಯ ಕ್ರಮ. ಇಂಥದೊಂದು ನೆರವಿನ ನಿರೀಕ್ಷೆಯಲ್ಲಿ ದೇಶದ […]

Read More

ಇರೋಣ ಮನೆಯಲ್ಲಿ ಬೆಚ್ಚಗೆ, ತೋರೋಣ ಸೇನಾನಿಗಳಿಗೆ ಮೆಚ್ಚುಗೆ

ಲಾಕ್‌ಡೌನ್‌ನಿಂದ ಕಲಿತ ಪಾಠಗಳನ್ನು ಜೀವಮಾನ ಪರ್ಯಂತ ಅಳವಡಿಸಿಕೊಂಡರೆ ಅಪಾಯ ದೂರ.  ಕೊರೊನಾ ಲಾಕ್‌ಡೌನ್‌ ಏಪ್ರಿಲ್‌ 14ಕ್ಕೆ ಅಂತ್ಯ ಕಾಣುವುದೇ ಅಥವಾ ಮುಂದುವರಿಯುವುದೇ ಎಂಬ ಒಂದು ಪ್ರಶ್ನೆ ಭಾರತದ ಕೋಟಿ ಕೋಟಿ ಜನರನ್ನು ಮೂರು ದಿನಗಳ ಹಿಂದಿನವರೆಗೂ ಕಾಡುತ್ತಿತ್ತು. ಅದನ್ನು ಎಲ್ಲರೂ ತಮ್ಮೊಳಗೆ ತಾವು ಕೇಳಿಕೊಳ್ಳುತ್ತಿದ್ದರು. ಆದರೆ, ಈಗ ಲಾಕ್‌ಡೌನ್‌ ಮೇ 3ರವರೆಗೆ ಅಧಿಕೃತವಾಗಿ ವಿಸ್ತರಣೆಯಾಗಿರುವುದರಿಂದ 14ರ ಕುತೂಹಲಕ್ಕೆ ತೆರೆ ಬಿದ್ದಾಗಿದೆ. ಬೆನ್ನಲ್ಲಿಯೇ ಏಪ್ರಿಲ್‌ 20ರ ಬಳಿಕ ಈಗ ಜಾರಿಯಲ್ಲಿರುವ ಲಾಕ್‌ಡೌನ್‌-2ರ ಬಿಗಿ ಏನಾದರೂ ಸಡಿಲ ಆಗುವುದೇ? ಮೇ […]

Read More

ಈ ರೀತಿಯ‌ ಅಪಪ್ರಚಾರ, ಕಿರುಕುಳ ಸರಿಯೆ?

ಕೆಲ ಸಂದರ್ಭಗಳಲ್ಲಿ ವಿನಾಕಾರಣ ಕಿರಿಕಿರಿ,‌ ತೊಂದರೆ ಅನುಭವಿಸಬೇಕಾಗಿ ಬರುತ್ತದೆ. ಕೆಲ ವರ್ಷಗಳ ಹಿಂದಿನ ಅನುಭವ. ಈ ಹಿಂದೆ ನಾನು ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಂಪಾದಕನಾಗಿದ್ದಾಗ ರಮಜಾನ್ ಹಬ್ಬದಂದು ಓರ್ವ ಪ್ರಬುದ್ಧ ಲೇಖಕರು ಬರೆದ ಉತ್ತಮ ಲೇಖನ ಪ್ರಕಟಿಸಿದ್ದೆವು. ಪುಟ ವಿನ್ಯಾಸ ಮಾಡುವಾಗ ಲೇಖನ ಗಮನ ಸೆಳೆಯುವಂತೆ ಮಾಡಲು,‌ ಪುಟದ ಅಂದ ಹೆಚ್ಚಿಸಲು ನನ್ನ ಆಗಿನ ಸಹೋದ್ಯೋಗಿಗಳು ಒಂದು ಸಾಂದರ್ಭಿಕ ಚಿತ್ರ ಬಳಸಿದ್ದರು. ಹಾಗೆ ದೇವರ ಚಿತ್ರ ಬಳಸುವುದು ನಿಷಿದ್ಧ ಎಂಬ ಮಾಹಿತಿ ಕೊರತೆ ನಮ್ಮ‌ ಸಹೋದ್ಯೋಗಿಗಳಿಗೆ ಇತ್ತು. […]

Read More

ಕುಡಿಯುವ ನೀರಿನ ಆತಂಕ: ಸಾಂಕ್ರಾಮಿಕಗಳ ತಡೆಗೆ ಶುದ್ಧ ನೀರು ಅಗತ್ಯ

ಕೊರೊನಾ ಸೋಂಕನ್ನು ಎದುರಿಸಲು ರಾಜ್ಯಾಡಳಿತ ಸಮರೋಪಾದಿಯಲ್ಲಿ ಸಜ್ಜಾಗಿದೆ. ಸರಕಾರದ ಈ ಸನ್ನದ್ಧತೆಯನ್ನು ನಾವು ಶ್ಲಾಘಿಸಲೇಬೇಕು. ಆರೋಗ್ಯ ಸೇವೆ, ಗೃಹ ಸಚಿವಾಲಯ ಎಲ್ಲವೂ ಕೊರೊನಾ ಸೋಂಕಿನ ಹಿಂದೆ ಬಿದ್ದಿವೆ. ಒಟ್ಟಾರೆ ಆಡಳಿತವೇ ಕೋವಿಡ್‌ ಕೇಂದ್ರಿತವಾಗಿದೆ ಎಂದರೂ ತಪ್ಪಿಲ್ಲ. ಈ ಮಧ್ಯೆ ಇನ್ನೊಂದು ಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ – ಕುಡಿಯುವ ನೀರು. ಪ್ರತಿಬಾರಿ ಬೇಸಿಗೆ ಬಂದಾಗಲೂ ಈ ವಿಚಾರ ಮುನ್ನೆಲೆಗೆ ಬರುತ್ತದೆ. ಯಾಕೆಂದರೆ ಸಮಸ್ಯೆ ಬಿಗಡಾಯಿಸುವುದೇ ಆಗ. ಈ ಬಾರಿ ಪೂರ್ವಸಿದ್ಧತೆ ಇಲ್ಲದ ಕಾರಣ ಬಿರುಬೇಸಿಗೆಯ ಕುಡಿಯುವ ನೀರಿನ […]

Read More

ಇದೊಂದು ಇರ್ಲಿಲ್ಲಾ ಅಂದ್ರೆ ಭಾರತ ಸೇಫಾಗಿತ್ತು..

ತಬ್ಲಿಘಿ ನಂಜೇ ಸಾವಿರ! – 17 ರಾಜ್ಯಗಳಲ್ಲಿನ 1023 ಕೇಸಿಗೆ ನಿಜಾಮುದ್ದೀನ್‌ ನಂಟು – 22 ಸಾವಿರ ಜನರು ಕ್ವಾರಂಟೈನ್‌ – ಶತಕದ ಬಾಗಿಲಿಗೆ ಬಂದ ಸಾವಿನ ಸಂಖ್ಯೆ – ರಾಜ್ಯದಲ್ಲೂ16 ಹೊಸ ಕೇಸ್‌ ಪತ್ತೆ ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮೂರು ಸಾವಿರದ ಗಡಿ ದಾಟಿದೆ. ಆದರೆ, ಸೋಂಕಿನ ಪ್ರಮಾಣದಲ್ಲಿ ಸಿಂಹಪಾಲು ಪ್ರಕರಣಗಳು ನೇರವಾಗಿ ದಿಲ್ಲಿಯಲ್ಲಿ ನಡೆದ ತಬ್ಲಿಘಿ ಸಮಾವೇಶದೊಂದಿಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ, ತಮಿಳುನಾಡು, […]

Read More

ವೈದ್ಯರ ಮೇಲೆ ಹಲ್ಲೆ ಖಂಡನೀಯ: ಸಮುದಾಯಕ್ಕೆ ಹಾನಿ ಮಾಡಲಿರುವ ವರ್ತನೆ

ಕೊರೊನಾ ವೈರಸ್ ಶಂಕಿತರ ಆರೋಗ್ಯ ತಪಾಸಣೆಗಾಗಿ ತೆರಳುತ್ತಿರುವ ವೈದ್ಯಕೀಯ ಸಿಬ್ಬಂದಿಯ ಮೇಲೆ ಕೆಲವರು ಗುಂಪುಗೂಡಿ ಹಲ್ಲೆ ನಡೆಸುತ್ತಿರುವ ಘಟನೆ ದೇಶದ ಕೆಲವು ಕಡೆಗಳಲ್ಲಿ ವರದಿಯಾಗಿದೆ. ಬೆಂಗಳೂರಿನ ಒಂದು ಬಡಾವಣೆಯಲ್ಲಿ ವೈದ್ಯಕೀಯ ತಪಾಸಣೆಗೆ ಹೋದ ಆಶಾ ಕಾರ್ಯಕರ್ತರ ಮೇಲೆ ಸ್ಥಳೀಯ ನಿವಾಸಿಗಳ ಗುಂಪು ಹಲ್ಲೆ ನಡೆಸಿದೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಿವಾಸಿಗಳ ತಪಾಸಣೆಗೆ ಬಂದಿದ್ದ ಆರೋಗ್ಯ ಸೇವೆ ಸಿಬ್ಬಂದಿಯನ್ನು ಸ್ಥಳೀಯರ ಗುಂಪು ಹಿಗ್ಗಾಮುಗ್ಗಾ ಥಳಿಸಿ ಓಡಿಸಿದೆ. ಮಧ್ಯಪ್ರದೇಶದ ಸಿಲಾವತ್‌ಪುರದಲ್ಲಿ, ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ, ಉತ್ತರ ಪ್ರದೇಶದ ಮೀರತ್‌ನಲ್ಲೂ ಹೀಗೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top