ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲು ನಿರ್ಧಾರ

ಅತಿಥಿಗಳ ಕಷ್ಟಕ್ಕೆ ಕಾಯಂ ಉಪನ್ಯಾಸಕರ ಸ್ಪಂದನೆ. ವಿಕ ಸುದ್ದಿಲೋಕ ಬೆಳಗಾವಿ. ಕೊರೊನಾ ಹೊಡೆತಕ್ಕೆ ದುಡಿಮೆ ಕಳೆದುಕೊಂಡು ಅತಂತ್ರರಾಗಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ನೆರವಿಗೆ ಕಾಯಂ ಉಪನ್ಯಾಸಕರು ಧಾವಿಸಿದ್ದಾರೆ. ತಮ್ಮ ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡುವುದಾಗಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಪ್ರಕಟಿಸಿದೆ. ಕೆಲ ಉಪನ್ಯಾಸಕರು ಮೂರು ತಿಂಗಳು ತಲಾ ಒಂದು ದಿನದ ವೇತನ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಕೈ […]

Read More

ಹಾಲು ಮಾರಾಟಕ್ಕೂ ಕೊರೊನಾ ಎಫೆಕ್ಟ್

-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಶಾಲೆ, ಹೋಟೆಲ್‌ಗಳಿಂದ ಡಿಮಾಂಡಿಲ್ಲ. ಸಂತೋಷ್‌ ಕಾಚಿನಕಟ್ಟೆ ಶಿವಮೊಗ್ಗ. ರಾಜ್ಯದೆಲ್ಲೆಡೆ ಜನತೆಗೆ ಕ್ಷೀರಾಮೃತ ಉಣಿಸುವ, ರೈತರು ಮತ್ತು ಹೈನುಗಾರಿಕೆ ಪಾಲಿನ ಜೀವಾಳ ಎನಿಸಿದ ರಾಜ್ಯ ಸಹಕಾರ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್‌)ಕ್ಕೂ ಕೊರೊನಾ ಸಂಕಷ್ಟ ತಂದಿಟ್ಟಿದೆ. ರೈತರಿಂದ ಹಾಲನ್ನು ಸಂಗ್ರಹಿಸಿ ಪೇಟೆ, ಪಟ್ಟಣಗಳಲ್ಲಿನ ಗ್ರಾಹಕರಿಗೆ ತಲುಪಿಸುವ ಸೇತುವೆಯಾಗಿ ಕೆಲಸ ಮಾಡುವ ಹಾಲು ಒಕ್ಕೂಟಕ್ಕೆ ಕೊರೊನಾ ಆರ್ಥಿಕ ಪೆಟ್ಟು ನೀಡಿದೆ. ಒಂದೆಡೆ ಹಾಲಿನ ಉತ್ಪಾದನೆ ಹೆಚ್ಚಾದ ಸಂತಸ ಮೂಡಿಸಿದರೆ, ಮತ್ತೊಂದು ಕಡೆ ಉತ್ಪಾದನೆಯಾದ […]

Read More

ಆನ್‌ಲೈನ್‌ ಸೇವೆ ಉಳಿಯಲಿ – ಹಿಂದಿನ ಅವ್ಯವಸ್ಥೆ ಮರುಕಳಿಸದಿರಲಿ

ಸೇವೆಗಳನ್ನು ಎಲ್ಲರೂ ಡಿಜಿಟಲೀಕರಣ ಮಾಡುತ್ತ ಕಾಲದಲ್ಲಿ ಮುಂದೆ ಹೋಗುತ್ತಿದ್ದರೆ, ಕರ್ನಾಟಕ ರಾಜ್ಯ ಸರಕಾರ ಮಾತ್ರ ಹಿಂದಕ್ಕೆ ಹೋಗಲು ಹೊರಟಿದೆ! ಕಂದಾಯ ದಾಖಲೆಗಳನ್ನು ಆನ್‌ಲೈನ್‌ ಮೂಲಕ ನೀಡುತ್ತಿದ್ದ ‘ಕಾವೇರಿ’ ಸೇವೆಯನ್ನು ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಋುಣಭಾರ ಪ್ರಮಾಣ ಪತ್ರ (ಇಸಿ) ಹಾಗೂ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು(ಆರ್‌ಟಿಸಿ)ಗಳನ್ನು ಈ ಕಾವೇರಿ ಸೇವೆಯ ಮೂಲಕವೇ ಹೆಚ್ಚಿನ ಗ್ರಾಹಕರು ಸುಲಭವಾಗಿ ಪಡೆಯುತ್ತಿದ್ದರು. ಹಲವೊಮ್ಮೆ ಇದು ಸರ್ವರ್‌ ಡೌನ್‌ ಸಮಸ್ಯೆಯಿಂದ ಬಳಲುತ್ತಿತ್ತು. ನೆಗಡಿಯಾದರೆ ಮೂಗು ಕೊಯ್ದರು ಎಂಬಂತೆ, ಆನ್‌ಲೈನ್‌ ಸೇವೆಯನ್ನೇ ನಿಲ್ಲಿಸುವುದು ಸರಿಯಲ್ಲ. […]

Read More

ಕಳವಾಗಿದ್ದ ಬೈಕ್ ಮನೆಗೆ ಪಾರ್ಸೆಲ್ ಬಂದಾಗ!

– 15 ದಿನದ ಬಳಿಕ ಮಾಲೀಕನಿಗೆ ಹಿಂದಿರುಗಿಸಿದ ಕಳ್ಳ – ಕೊಯಮತ್ತೂರಿನಲ್ಲೊಂದು ಅಪರೂಪದ ಘಟನೆ ಕೊಯಮತ್ತೂರು: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಹೊಸದು ಸಂಪಾದಿಸುವುದಿರಲಿ, ಇರುವುದನ್ನು ಉಳಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ಬಹುತೇಕ ಜನರದ್ದು. ಅಂಥದ್ದರಲ್ಲಿ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಮಾಯವಾದರೆ ಮಾಲೀಕನ ಸ್ಥಿತಿ ಹೇಗಿರಬಹುದು? ಆದರೆ 15 ದಿನದಲ್ಲೇ ಆ ಬೈಕ್ ಮನೆಗೆ ಪಾರ್ಸಲ್ ಬಂದರೆ ಆತನಿಗೆ ಹೇಗಾಗಬಹುದು? ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂಥದ್ದೇ ಅಪರೂಪದ ಘಟನೆ ನಡೆದಿದೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಊರಿಗೆ ಮರಳಲು ವಾಹನವಿಲ್ಲದೆ ಬೈಕ್ […]

Read More

ಪರ್ಯಾಯ ಕೀಟನಾಶಕಗಳು ಬೇಕು

ಆಯ್ದ ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧಾರ ಮಾಡಿದ್ದು, ಈ ಕುರಿತ ಕರಡು ಪ್ರಸ್ತಾವನೆಯನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಿದೆ. ಸರಕಾರದ ಒಲವು ಇವುಗಳ ನಿಷೇಧದತ್ತಲೇ ಇರುವಂತಿದೆ. ಇಲ್ಲಿ ಆತಂಕಕ್ಕೆ ಕಾರಣವಾಗಿರುವುದು, ಪ್ರಸ್ತಾವಿತ 27 ಕೀಟನಾಶಕಗಳು ಹಲವು ದಶಕಗಳಿಂದ ರೈತರು ಹೆಚ್ಚಾಗಿ ಬಳಸುತ್ತಿರುವ, ಕಡಿಮೆ ಅಪಾಯಕಾರಿಯಾಗಿರುವ, ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ ಹಾಗೂ ಅಗ್ಗದ ಜನರಿಕ್‌ ಕೀಟನಾಶಕಗಳಾಗಿವೆ. ಒಂದೆಡೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ, ಕೊರೊನಾ ಕಾಲದ ಲಾಕ್‌ಡೌನ್‌ ಮತ್ತು ‘ಕೃಷಿ ಒಳಸುರಿ’ಗಳ ಬೆಲೆಯೇರಿಕೆಗಳಿಂದ ಹೈರಾಣಾಗಿರುವ ರೈತರು ಪರ್ಯಾಯ […]

Read More

ರೆಪೊ ದರ ಇಳಿಕೆ ಯಾರಿಗೆ ಲಾಭ? – ಗ್ರಾಹಕನಿಗೆ ಲಾಭವಿಲ್ಲದ ಬಡ್ಡಿದರ ವ್ಯರ್ಥ

ಕೊರೊನಾ ಹಾವಳಿ ಮತ್ತು ಲಾಕ್‌ಡೌನ್‌ನ ಪರಿಣಾಮ ಕಳೆದ ಎರಡು ತಿಂಗಳಿನಿಂದ ನಿಶ್ಚೇತನಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಲ್ಪಾವಧಿಯ ಸಾಲದ ಬಡ್ಡಿ ದರವನ್ನು (ರೆಪೊ) ಶೇ.4.4ರಿಂದ ಶೇ.4ಕ್ಕೆ ಕಡಿತಗೊಳಿಸಿದೆ. ಮಾರ್ಚ್‌ನಲ್ಲೂ ರೆಪೊ ದರ ಕಡಿತಗೊಳಿಸಲಾಗಿತ್ತು. 2019 ಮತ್ತು ಈ ವರ್ಷದ ಅವಧಿಯಲ್ಲಿ ಒಟ್ಟಾರೆ ಎಂಟಕ್ಕೂ ಅಧಿಕ ಬಾರಿ ರೆಪೊ ದರ ಇಳಿಸಲಾಗಿದೆ. ಇದರ ಜೊತೆಗೆ ಸಾಲ ಕಂತು ಪಾವತಿಯ ಮುಂದೂಡಿಕೆಯ ಐಚ್ಛಿಕ ಸೌಲಭ್ಯವನ್ನೂ ಆರ್‌ಬಿಐ ವಿಸ್ತರಿಸಿದೆ. ರೆಪೊ ದರ ಇಳಿಕೆಯ […]

Read More

ಜನಜೀವನ ಟೇಕಾಫ್

– ಲಾಕ್‌ಡೌನ್‌ ಮತ್ತಷ್ಟು ಸಡಿಲ | ಮೇ 25 ರಿಂದ ದೇಶೀಯ ವಿಮಾನ ಹಾರಾಟ – ಕೈಗಾರಿಕೆಗಳಿಗೆ 9.25% ಬಡ್ಡಿಯಲ್ಲಿ ಸಾಲ | ವಯೋವಂದನಾ ವಿಸ್ತರಣೆ. ಹೊಸದಿಲ್ಲಿ: ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆಯ ಭಾಗವಾಗಿ ಸರಕಾರ ಮತ್ತಷ್ಟು ಉಪಕ್ರಮಗಳನ್ನು ಪ್ರಕಟಿಸಿದೆ. ಇದರ ಭಾಗವಾಗಿ ಸೋಮವಾರದಿಂದ (ಮೇ 25) ದೇಶಾದ್ಯಂತ ದೇಶೀಯ ವಿಮಾನಗಳ ಸೇವೆ ಆರಂಭವಾಗಲಿದೆ. ‘‘ಹಂತ ಹಂತವಾಗಿ ವಿಮಾನಯಾನ ಆರಂಭವಾಗಲಿದೆ. ಈ ಬಗ್ಗೆ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಏರ್‌ಪೋರ್ಟ್‌ಗಳಿಗೆ ಮಾಹಿತಿ ನೀಡಿ, ಸೋಮವಾರದ ವೇಳೆಗೆ ಹಾರಾಟಕ್ಕೆ […]

Read More

ಸ್ವದೇಶಿ ಭಾರತಕ್ಕೆ ಕೊರೊನಾ ಪ್ರೇರಣೆಯಾಗಲಿ

– ನಾ. ತಿಪ್ಪೇಸ್ವಾಮಿ. ಕೊರೊನಾ ಮಹಾಮಾರಿಯಿಂದಾಗಿ ಅಮೆರಿಕ, ರಷ್ಯಾ, ಚೀನಾ, ಸ್ಪೇನ್ ಮುಂತಾದ ಶ್ರೀಮಂತ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಅತ್ಯಧಿಕ ಸಂಖ್ಯೆಯಲ್ಲಿಸಾವು ನೋವುಗಳು ಸಂಭವಿಸಿವೆ. ಈ ವೈರಸ್ ಭಾರತದಲ್ಲಿಯೂ ಹರಡಿದೆ. ಆದರೆ ಅಷ್ಟೊಂದು ದೊಡ್ಡ ಪ್ರಮಾಣದ ಪ್ರಾಣಹಾನಿಯನ್ನು ಮಾಡಲಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತದ ನಾಯಕತ್ವ ತೆಗೆದುಕೊಂಡ ನಿರ್ಣಯಗಳು ಹಾಗೂ ಈ ದೇಶದಲ್ಲಿಆಚರಣೆಯಲ್ಲಿರುವ ರೀತಿ ನೀತಿಗಳು. ಪ್ರಧಾನಿ ಮೋದಿ ಮಾ.22ರಂದು 21ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದರು. ಇದು ಅನೇಕರನ್ನು ದಿಗ್ಭ್ರಮೆಗೊಳಿಸಿತು. 130 ಕೋಟಿ ಜನರಿರುವ ಭಾರತದಲ್ಲಿ ಅನೇಕ […]

Read More

ಪರದೇಶಕ್ಕಿಂತ ನಮ್ಮೂರೇ ಸಾಕಪ್ಪ: ಇಂಗ್ಲೆಂಡ್‌ನಿಂದ ವಾಪಸಾದ ಸೌಂದರ್ಯ ಜಯಮಾಲಾ ಅನಿಸಿಕೆ!

– ಜಯಂತ್‌ ಗಂಗವಾಡಿ ಬೆಂಗಳೂರು.  ನಾನು ಬೆಂಗಳೂರಿಗೆ ವಾಪಸ್‌ ಬರುತ್ತೇನೆ ಅನ್ನೋ ನಂಬಿಕೆಯೇ ಹೊರಟು ಹೋಗಿತ್ತು. ಮೇ 10ರ ಸಂಜೆ 5 ಗಂಟೆ ಸುಮಾರಿಗೆ ‘ಲಂಡನ್‌ನಿಂದ ಬೆಂಗಳೂರಿಗೆ ರಾತ್ರಿ 9.45ಕ್ಕೆ ವಿಮಾನ ಹೊರಡಲಿದೆ’ ಎಂದು ‘ಏರ್‌ ಇಂಡಿಯಾ’ ಕಚೇರಿಯಿಂದ ಫೋನ್‌ ಕರೆ ಬಂದಾಕ್ಷಣ ನಂಬಲು ಸಾಧ್ಯವಾಗದೆ ಜೋರಾಗಿ ಅತ್ತು ಬಿಟ್ಟೆ. ನಟಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಇಂಗ್ಲೆಂಡ್‌ನಲ್ಲಿ ಅನುಭವಿಸಿದ ಲಾಕ್‌ಡೌನ್‌ ನೋವಿನ ಕತೆಯನ್ನು ‘ವಿಜಯ ಕರ್ನಾಟಕ’ದ ಮುಂದೆ ತೆರೆದಿಟ್ಟದ್ದು ಹೀಗೆ. […]

Read More

ದಾದಿ ಸೇವೆಯ ಆದಿ

ಕಣ್ಣೆದುರೇ ಮಗು ಇದ್ದರೂ ಮುದ್ದಾಡಲು ಆಗದ ಸ್ಥಿತಿ… ಹೆರಿಗೆ ದಿನಾಂಕ ಹತ್ತಿರವೇ ಇದ್ದರೂ ಕರ್ತವ್ಯದ ಕರೆಯೇ ಮೇಲು… ಅಮ್ಮಾ, ನಿನ್ನ ನೋಡಬೇಕು ಎನ್ನುವ ಒಡಲ ಕುಡಿಗಳ ಅಳಲು… ಎಂಥದ್ದೇ ಪರಿಸ್ಥಿತಿಯಲ್ಲೂ ರೋಗಿಗಳ ಆರೈಕೆ ಮಾಡಬೇಕೆಂಬ ವೃತ್ತಿಪ್ರಜ್ಞೆ… ಕೊರೊನಾ ಸಂದರ್ಭದಲ್ಲಿ ಆರೈಕೆ ಮಾಡುತ್ತಿರುವ ದಾದಿಯರ ಬಿಡಿ ಬಿಡಿ ಭಾವಗಳಿವು. ಅಂತರಾಷ್ಟ್ರೀಯ ದಾದಿಯರ ದಿನದ ನೆಪದಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸುಯೋಗ ನಮಗೆಲ್ಲರಿಗೂ ದೊರೆತಿದೆ. ನಾವಿಲ್ಲಿ ಕೆಲವು ದಾದಿಯರ ಸೇವೆಯ ಕತೆಯನ್ನು ನಿಮ್ಮ ಮುಂದೆ ಹರವಿಟ್ಟಿದ್ದೇವೆ. ಓದಿಕೊಳ್ಳಿ. ಹೆರಿಗೆಗೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top