ಮಂದಿರವೆಂಬುದು ಸ್ಥಾವರವಲ್ಲ, ಮೌಲ್ಯಗಳ ಪ್ರತೀಕ

ಪ್ರತಿಪಕ್ಷದಲ್ಲೂ ಕೇಳಿಬಂತು ರಾಮನೇ ರಾಷ್ಟ್ರೀಯ ಏಕತೆಯ ಸಂಕೇತ ಎಂಬ ಒಕ್ಕೊರಲ ದನಿ – ಹರಿಪ್ರಕಾಶ್‌ ಕೋಣೆಮನೆ. ‘‘ಶ್ರೀ ರಾಮನ ಗುಣಸಂಪನ್ನತೆಯು ಇಡೀ ಭರತ ಖಂಡಕ್ಕೆ ಏಕತೆಯ ಸಂದೇಶವನ್ನು ಸಾರಿತ್ತು. ಭಾರತವಷ್ಟೇ ಏಕೆ, ಇಡೀ ವಿಶ್ವದ ನಾಗರಿಕತೆಯಲ್ಲಿ ರಾಮನ ಹೆಜ್ಜೆಗುರುತುಗಳನ್ನು ಅಳಿಸಲಾಗದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತ ಮರ್ಯಾದಾ ಪುರುಷೋತ್ತಮನೇ ಹೌದು…,’’ -ಕಾಂಗ್ರೆಸ್‌ನ ವರಿಷ್ಠ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಮಭಜನೆ ಮಾಡುತ್ತಿರುವ ಪರಿ ಇದು. ನಿಸ್ಸಂದೇಹವಾಗಿ ಇದೊಂದು ಒಳ್ಳೆಯ ಬೆಳವಣಿಗೆ. ಅಜಮಾಸು ಮೂವತ್ತು ವರ್ಷಗಳ ನಂತರ ಕಾಂಗ್ರೆಸ್‌ನ […]

Read More

ಮೌನ ಮುರಿದ ಕುಮಾರಸ್ವಾಮಿ – ಮುಂದಿನ ಚುನಾವಣೆಗಾಗಿ ಅಸ್ತಿತ್ವದ ಹುಡುಕಾಟಕ್ಕಿಳಿದ ಮಾಜಿ ಸಿಎಂ

– ಶಶಿಧರ ಹೆಗಡೆ. ಮೌನಕ್ಕೆ ಅಪೂರ್ವವಾದ ಶಕ್ತಿಯಿದೆ. ಮೌನ ವ್ರತಧಾರಣೆ ಮಾಡಿದವ ದಿವ್ಯಾನುಭೂತಿಗೆ ಒಳಗಾಗುತ್ತಾನೆ. ಮೌನ ಹೃದಯದ ಭಾಷೆ. ಅದು ಮರ್ಕಟ ಮನಸ್ಸನ್ನು ನಿಯಂತ್ರಿಸುತ್ತದೆ ಎನ್ನುವ ಹಾಗೆ ವ್ಯಾಖ್ಯಾನಗಳಿವೆ. ಮೌನವಾಗಿದ್ದು ಆತ್ಮಾವಲೋಕನ ಮಾಡಿಕೊಂಡವರ ಎದುರು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಹಿಂದಿನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ದೊರಕುತ್ತದೆ. ಮೌನದ ಗವಿಯಿಂದ ಹೊರಬಂದು ಆಡುವ ಮಾತುಗಳಿಗೂ ಅಷ್ಟೇ ಮಹತ್ವವಿರುತ್ತದೆ. ಚತುರರಾದವರು ಮೌನ ಮತ್ತು ಮೌನೋತ್ತರ ಸಂದರ್ಭವನ್ನು ಭವಿಷ್ಯದ ದಾರಿ ಸುಗಮಗೊಳಿಸಲು ಬಳಸುತ್ತಾರೆ. ಅದರಲ್ಲೂ ರಾಜಕಾರಣಿಗಳಿಗೆ ತಂತ್ರಗಾರಿಕೆಯೇ ಜೀವದ್ರವ್ಯ. ರಾಜಕೀಯದ ಜಂಜಾಟದಲ್ಲಿ […]

Read More

ಪ್ರಮಾದಗಳ ಸುಳಿಯಲ್ಲಿ ಕಾಂಗ್ರೆಸ್

– ಇಂದಿರಾ-ನೆಹರು ಕುಟುಂಬದ ಪ್ರಭುತ್ವವನ್ನು ಧಿಕ್ಕರಿಸುವ ಧೈರ್ಯ ಮೂಡಿದಾಗ ಮಾತ್ರ ಕಾಂಗ್ರೆಸಿಗೆ ಭವಿಷ್ಯ. – ಮಹದೇವ್ ಪ್ರಕಾಶ್. ಎಪ್ಪತ್ತರ ದಶಕದಲ್ಲಿಅ ಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೇವಕಾಂತ ಬರುವಾ, ‘ಕಾಂಗ್ರೆಸ್ ಎಂದರೆ ಇಂದಿರಾ, ಇಂದಿರಾ ಎಂದರೆ ಕಾಂಗ್ರೆಸ್’ ಎಂದಿದ್ದರು. ಇಂತಹ ಭಟ್ಟಂಗಿಗಳ ಉದ್ಘೋಷಗಳು ನಿರಂತರವಾಗಿ ಮುಂದುವರಿದ ಕಾರಣ ಕಾಂಗ್ರೆಸಿನಲ್ಲಿ ವಂಶ ಪಾರಂಪರ್ಯ ಆಡಳಿತ ಬಲವಾಗಿ ಬೇರೂರಿತು. ದೇವಕಾಂತ ಬರುವಾ ಅವರಂತಹ ಭಟ್ಟಂಗಿಗಳು ಕಾಂಗ್ರೆಸ್ ಎಂದರೆ ರಾಹುಲ್ ಗಾಂಧಿ, ರಾಹುಲ್ ಗಾಂಧಿ ಎಂದರೆ ಕಾಂಗ್ರೆಸ್ ಎಂದು ಈಗಲೂ ಜಪ […]

Read More

ರಾಜಸ್ಥಾನದಲ್ಲೂ ಅನರ್ಹತೆ ಅಸ್ತ್ರ?

– ವಿಶ್ವಾಸಮತ ಯಾಚನೆಗೆ ಗೆಹ್ಲೋಟ್ ನಿರ್ಧಾರ | ಸರಕಾರ ಉಳಿಸಿಕೊಳ್ಳುವುದೇ ತಕ್ಷಣದ ಆದ್ಯತೆ | ಗುರುವಾರ ಸಂಪುಟ ವಿಸ್ತರಣೆ ಸಾಧ್ಯತೆ ಜೈಪುರ: ಸಚಿನ್ ಪೈಲಟ್ ಬಂಡಾಯದ ನಡುವೆಯೂ ರಾಜಸ್ಥಾನದಲ್ಲಿ ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ. ಅದರ ಭಾಗವಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶ್ವಾಸಮತ ಯಾಚನೆಗೆ ನಿರ್ಧರಿಸಿದ್ದಾರೆ. ಜತೆಗೆ, ಪೈಲಟ್ ಬಣದಲ್ಲಿರುವ ಶಾಸಕರನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಯುತ್ತಿದೆ. ಸದನದಲ್ಲಿ ಒಮ್ಮೆ ವಿಶ್ವಾಸಮತ ಸಾಬೀತುಪಡಿಸಿದರೆ ಆರು ತಿಂಗಳ ಸರಕಾರಕ್ಕೆ ಯಾವ ಆತಂಕವೂ ಇಲ್ಲ. ಹೀಗಾಗಿ ವಿಶ್ವಾಸಮತ […]

Read More

ಅಂಚೆ ಮತದಾನ ಜನತಂತ್ರ ವಿರೋಧಿ

– ಕೆ.ದಿವಾಕರ್‌.  ಚುನಾವಣೆಗಳು ಭಾರತದ ಜನತಂತ್ರವನ್ನು ಶಕ್ತಿಶಾಲಿಯಾಗಿ ಇಟ್ಟಿರುವ ಒಂದು ಪ್ರಮುಖ ಪ್ರಕ್ರಿಯೆ. ಒಬ್ಬನಿಗೆ ಒಂದೇ ಓಟು, ಎಲ್ಲರಿಗೂ ಅದರ ಹಕ್ಕು ಎಂಬುದು ಕೂಡಾ ಶಕ್ತಿಶಾಲಿಯಾಗಿರುವ ಆದರ್ಶ. ಎಲ್ಲ ದೋಷಗಳ ನಡುವೆಯೂ ಇದೊಂದು ಜನರ ಕೈಯಲ್ಲಿರುವ ಆಯುಧ. ಜನಸಂಖ್ಯೆಯ ಎಲ್ಲ ಜಾತಿ, ಪಂಥ, ಧರ್ಮ, ವಿದ್ಯಾವಂತರು, ನಿರಕ್ಷರಿಗಳೂ ಒಂದು ಪ್ರಜಾತಂತ್ರದ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸುತ್ತಿರುವುದು, ಅವಿದ್ಯಾವಂತರು ಹಾಗೂ ಗ್ರಾಮೀಣ ಪ್ರದೇಶದ ಜನ ನಗರದ ಮತದಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವ ಪ್ರಕ್ರಿಯೆಗೆ ಭಾರತದಲ್ಲಿ ಬಿಬಿಸಿಯ ಪ್ರತಿನಿಧಿಯಾಗಿದ್ದ ಖ್ಯಾತ […]

Read More

ಕಾಂಗ್ರೆಸ್‌ಗೊಂದು ಕರ್ನಾಟಕ ಮಾದರಿ

ಡಿಕೆಶಿ ಪಟ್ಟಾಭಿಷೇಕದ ಹುರುಪು, ರಾಷ್ಟ್ರೀಯ ಕಾಂಗ್ರೆಸ್‌ನಲ್ಲೂ ಪುನಶ್ಚೇತನದ ಮಿಂಚು. – ಶಶಿಧರ ಹೆಗಡೆ. ‘ಕೃಷ್ಣ ಸಾರಥ್ಯ’ದೊಂದಿಗೆ 1999ರ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ವರಿಷ್ಠ ಮಂಡಳಿಯಲ್ಲಿ ಸಹಮತ ಮೂಡಿತ್ತು. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರೂ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್‌.ಎಂ.ಕೃಷ್ಣ) ಅವರಿಗೊಂದು ಅವಕಾಶ ನೀಡಲು ಒಲವು ತೋರಿದ್ದರು. ಆದರೆ, ಕೃಷ್ಣ ಹೆಸರು ಪ್ರಕಟವಾಗುವ ಹಂತದಲ್ಲಿ ಯಾರೋ ಪಿನ್‌ ಇಟ್ಟಿದ್ದರು. ಅಖಾಡದ ರಾಜಕಾರಣ ಕೃಷ್ಣ ಅವರಿಗೆ ಒಗ್ಗಿ ಬರುವುದಿಲ್ಲ. ಅವರದ್ದು ಹೈಫೈ ಶೈಲಿ. ಸದಾ ಟೆನ್ನಿಸ್‌ ಆಡುತ್ತ […]

Read More

ಕೈ ಬಲವರ್ಧನೆ ಪ್ರತಿಜ್ಞೆ

– ಕೇಡರ್ ಬೇಸ್ ಆಗಿ ಪಕ್ಷ ಕಟ್ಟಿ ಬಿಜೆಪಿಗೆ ಸಡ್ಡು ಹೊಡೆಯುವ ಪಣ – ಕೆಪಿಸಿಸಿ ಸಾರಥಿಯಾಗಿ ಡಿಕೆಶಿ | ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ. ವಿಕ ಸುದ್ದಿಲೋಕ ಬೆಂಗಳೂರು. ಕಾರ್ಯಕರ್ತರನ್ನೇ ಆಧಾರವಾಗಿಟ್ಟುಕೊಂಡು ಪಕ್ಷ ಕಟ್ಟುವ ಪ್ರತಿಜ್ಞೆಯೊಂದಿಗೆ ಡಿ.ಕೆ. ಶಿವಕುಮಾರ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವ ಅವರ ಪಣಕ್ಕೆ ಇಡೀ ಕಾಂಗ್ರೆಸ್ ಪಕ್ಷ ಒಮ್ಮತದ ಬೆಂಬಲದ ಭರವಸೆ ನೀಡಿದೆ. ಕೆಪಿಸಿಸಿ ನೂತನ ಕಚೇರಿಯಲ್ಲಿ ಗುರುವಾರ ಡಿ.ಕೆ.ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಸತೀಶ್ […]

Read More

ರಾಜ್ಯ ಕಾಂಗ್ರೆಸ್‌ನಲ್ಲಿ ಅಸಲಿ ಯುದ್ಧ ಆರಂಭ

– ಶಶಿಧರ ಹೆಗಡೆ.   ಮಹಾ ಸಮರ್ಥ ಸರ್ವಸೇನಾಧ್ಯಕ್ಷನೇ ಇರಲಿ. ಅಂಥವನನ್ನೂ ಅಂಕೆಯಲ್ಲಿ ಇರಿಸಿಕೊಳ್ಳಲು ಬೆದರುಗೊಂಬೆಯನ್ನು ಎದುರು ಬಿಡುವುದು ರಾಜಕಾರಣದ ತಂತ್ರಗಾರಿಕೆಯ ಭಾಗ. ಸೇನಾಪತಿಯನ್ನು ಪ್ರಶ್ನಿಸುವ, ಛೇಡಿಸುವ ಜಾಯಮಾನದವರು ಬೀದಿಗೊಬ್ಬರು ಸಿಗಬಹುದು. ಆದರೆ, ಅದಕ್ಕೆ ತೂಕವಿರುವುದಿಲ್ಲ. ಪರಿಣಾಮವೂ ಶೂನ್ಯ. ಹಾಗಾಗಿ ಸೇನಾಧ್ಯಕ್ಷನಿಗೆ ಅಂಕುಶ ಹಾಕಬೇಕೆನಿಸಿದಾಗ ಅಳೆದೂ ತೂಗಿ ಅದೇ ಪಕ್ಷ ದ ರಥಿಕರನ್ನೇ ಪಕ್ಕಕ್ಕೆ ಕರೆತಂದು ನಿಲ್ಲಿಸಲಾಗುತ್ತದೆ. ಪ್ರಭುತ್ವವು ಇತಿಹಾಸದುದ್ದಕ್ಕೂ ಇದೇ ನೀತಿ ಅನುಸರಿಸಿರುವುದನ್ನು ಇಣುಕಿ ನೋಡಬಹುದು. ವಾನರ ಸೇನೆಯ ಬಲದೊಂದಿಗೆ ಸೀತಾನ್ವೇಷಣೆಗಾಗಿ ಲಂಕೆಗೆ ಹೊರಟ ಶ್ರೀರಾಮಚಂದ್ರನ ರಣನೀತಿಯೂ […]

Read More

ಮೌಲ್ಯಗಳಿಗೆ ಬಿಜೆಪಿ ಮಣೆ ನಿಷ್ಠೆ, ಸೇವೆಯೇ ಆದರ್ಶ ಎಂದ ಹೈಕಮಾಂಡ್

ರಾಜ್ಯದಿಂದ ತೆರವಾಗಿರುವ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮಗೊಂಡಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಎಚ್‌.ಡಿ.ದೇವೇಗೌಡರು ಅಭ್ಯರ್ಥಿಗಳಾಗಿರುವುದರಲ್ಲಿ ಏನೂ ಅಚ್ಚರಿಯಿಲ್ಲ. ಈಗಾಗಲೇ ಇವರ ಪ್ರಾತಿನಿಧ್ಯವನ್ನು ಜನ ದಶಕಗಳಿಂದ ಕಂಡಿದ್ದಾರೆ. ಬಿಜೆಪಿಯಿಂದಲೂ ಬಲಾಢ್ಯರಾದ ಹಲವು ವ್ಯಕ್ತಿಗಳ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು. ಆದರೆ ಅಚ್ಚರಿ ಎನ್ನುವಂತೆ ಅನಾಮಿಕರಾದ ಇಬ್ಬರ ಆಯ್ಕೆಯಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸಿ ಬಿಜೆಪಿ […]

Read More

ರಾಜ್ಯಸಭೆ ಚುನಾವಣೆ ನೆಪದಲ್ಲಿ ಕಣ್‌ಕಣ್ಣ ಸಲಿಗೆ – ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮರು ಮೈತ್ರಿಗಿದು ಮೇಲ್ಮನೆಯ ರಹದಾರಿಯೇ?

– ಶಶಿಧರ ಹೆಗಡೆ.  ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ’ ಎನ್ನುವ ಮಾತಿಗೆ ಪದೇ ಪದೆ ಮೌಲ್ಯ ದೊರಕುತ್ತದೆ. ಈ ಮೌಲ್ಯವರ್ಧನೆಯ ಕೀರ್ತಿಯೂ ರಾಜಕಾರಣಿಗಳಿಗೇ ಸಲ್ಲಬೇಕು. ರಾಜಕಾರಣಿಗಳು ಮನಸ್ಸು ಮಾಡಿದರೆ ಹಳೆಯ ಅಂಗಿ ಕಳಚಿಟ್ಟು ಹೊಸ ಶರ್ಟ್ ಧರಿಸಿದಷ್ಟೇ ಸುಲಭವಾಗಿ ಪಕ್ಷ ಬದಲಿಸುತ್ತಾರೆ. ಚುನಾವಣಾ ಅಖಾಡದಲ್ಲಿ ಶರಂಪರ ಜಗಳವಾಡಿಕೊಂಡವರು ‘ಅಧಿಕಾರದ ಅನಿವಾರ್ಯತೆ’ ಬಂದೊದಗಿದಾಗ ಗಾಢಾಲಿಂಗನ ಮಾಡಿಕೊಳ್ಳಬಲ್ಲರು. ಅಧಿಕಾರದ ಮೋಹ ಪಾಶದ ಬಲೆಗೆ ಸಿಲುಕಿದವರು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರೂ ರಭಸದಿಂದ ಬಂದು ಒಂದೇ ಬಿಂದುವಿನಲ್ಲಿ ಸಂಧಿಸಬಲ್ಲರು. ಅಂತರಂಗದ ರಾಗ, ದ್ವೇಷವನ್ನು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top