ಅತೃಪ್ತಿ, ಗೊಂದಲ ಸಲ್ಲ – ಅಸಮಾಧಾನಕ್ಕೆ ಕಾರಣವಾದ ನಿಗಮ/ಮಂಡಳಿ ನೇಮಕ

ವಿಚಿತ್ರ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು, ಇದೀಗ ಒಂದು ಸಂವತ್ಸರವನ್ನು ಪೂರೈಸಿ, ಮುನ್ನಡೆಯುತ್ತಿದೆ. ಅನಿರೀಕ್ಷಿತ ಸನ್ನಿವೇಶದಲ್ಲಿ ಅಧಿಕಾರಕ್ಕೆ ಬಂದ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮುಂದಡಿ ಇಡುತ್ತಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರ್ನಾಟಕದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಯಿತು. ಅನೇಕರು ಮನೆ ಮಠಗಳನ್ನು ಕಳೆದುಕೊಂಡು ನಿರ್ಗತಿಕರಾದರು. ರಾಜಕೀಯ ಕಾರಣಕ್ಕೆ ಸಂಪುಟ ವಿಸ್ತರಣೆಯಾಗುವುದು ವಿಳಂಬವಾದಾಗ ಸಿಎಂ ಏಕಾಂಗಿಯಾಗಿ […]

Read More

ಸಂಕಷ್ಟಗಳ ಸರಮಾಲೆ ನಡುವೆ ಸಾಧನೆಯ ಒಂದು ವರುಷ

– ಗೋವಿಂದ ಎಂ. ಕಾರಜೋಳ. ಮಾನ್ಯ ಬಿ.ಎಸ್‌. ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇದೇ ಜುಲೈ 26ಕ್ಕೆ ಒಂದು ವರುಷವಾಗುತ್ತದೆ. ಆಡಳಿತವನ್ನು ಕನ್ನಡ ನಾಡಿನ ಜನಮೆಚ್ಚುವಂತೆ ನಿರ್ವಹಿಸುವುದು ಸುಲಭವಲ್ಲ. ದಕ್ಷ ಮತ್ತು ಪಾರದರ್ಶಕ ಆಡಳಿತಕ್ಕೆ ನಮ್ಮ ನಾಡು ಭಾರತದಲ್ಲೇ ಹೆಸರುವಾಸಿಯಾಗಿದೆ. ಖ್ಯಾತನಾಮರಾದ ಜನನಾಯಕರಲ್ಲಿ ಇಂದಿನ ಮುಖ್ಯಮಂತ್ರಿಗಳು ಮುಂಚೂಣಿಯಲ್ಲಿ ನಿಂತಿದ್ದಾರೆ. ಈ ಕಾಲಾವಧಿಯ ವಿಶೇಷತೆಯೆಂದರೆ ಹಿಂದೆಂದೂ ಕಂಡರಿಯದಷ್ಟು, ಕೇಳರಿಯದಷ್ಟು ಕಷ್ಟ ಸಂಕೋಲೆಗಳನ್ನು ಕರ್ನಾಟಕ ಈ ಒಂದು ವರುಷದ ಅವಧಿಯಲ್ಲಿ ಕಂಡಿದೆ. ಬರ, ಅತಿವೃಷ್ಟಿ, ಪ್ರವಾಹ, ಪ್ರಕೃತಿವಿಕೋಪ […]

Read More

ಆರೋಗ್ಯ ಸೇವೆಯೇ ಗಂಭೀರ – ತುರ್ತುಸ್ಥಿತಿ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗಲಿ

ಹಿಂದೆಂದೂ ವೈದ್ಯಲೋಕ ಇಂಥದೊಂದು ಕಠೋರ, ನಿರ್ದಯಿ ವ್ಯವಸ್ಥೆಗೆ ಸಾಕ್ಷಿಯಾಗಿರಲಿಲ್ಲ. ಬೆಂಗಳೂರಿನಲ್ಲಿ ಈಗ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಹೊತ್ತುಕೊಂಡು ಆಸ್ಪತ್ರೆಗೆ ಹೋದರೂ, ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬನ್ನಿ, ಇಲ್ಲವೇ ಸಾಯಿರಿ ಎಂಬರ್ಥದ ಉತ್ತರಗಳೇ ಸಿಗುತ್ತಿವೆ. ರಾಜ್ಯದ ಇತರ ಕಡೆಗಳ ಆಸ್ಪತ್ರೆಗಳೂ ಇದೇ ಮಾದರಿಯನ್ನು ಅನುಸರಿಸಲಾರಂಭಿಸಿವೆ. ಶುಲ್ಕದ ಮಾತು, ಪರೀಕ್ಷೆ ನಂತರ; ರೋಗಿಯ ಪ್ರಾಣ ಉಳಿಸುವ ಹೊಣೆಯನ್ನು ಮೊದಲು ಹೊರಬೇಕಾದ ಆಸ್ಪತ್ರೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ. ಇದರಿಂದಾಗಿ ಕಳೆದ ಒಂದು ತಿಂಗಳಿನಲ್ಲಿ ಹತ್ತಾರು ರೋಗಿಗಳು ಆಸ್ಪತ್ರೆಗಳಿಗೆ […]

Read More

ಉಪನ್ಯಾಸಕರ ನೇಮಕ ನಿರಾಳ – ಸಿಎಂ ಅಸ್ತು | 2 ದಿನದಲ್ಲಿ ಕೌನ್ಸೆಲಿಂಗ್ ದಿನಾಂಕ ಪ್ರಕಟ

ವಿಕ ಸುದ್ದಿಲೋಕ ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕೌನ್ಸೆಲಿಂಗ್ ನಡೆಸಲು ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಇನ್ನು ಎರಡು ದಿನದ ಒಳಗೆ ಕೌನ್ಸೆಲಿಂಗ್ ದಿನಾಂಕ ಘೋಷಿಸಲಾಗುತ್ತದೆ ಎಂದು ಸಿಎಂ ಅವರ ಕಚೇರಿ ಮೂಲಗಳು ಖಚಿತ ಪಡಿಸಿವೆ. ಉಪನ್ಯಾಸಕರ ಸ್ಥಳ ನಿಯುಕ್ತಿಗಾಗಿ ಕೌನ್ಸೆಲಿಂಗ್ ನಡೆಸಲು ಆರ್ಥಿಕ ಇಲಾಖೆಧಿಯಿಂದಲೂ ಹಸಿರು ನಿಶಾನೆ ದೊರೆತಿದೆ. ಇದರೊಂದಿಗೆ ಉಪನ್ಯಾಸಕರ ಹುದ್ದೆ ಭರ್ತಿಗೆ ಹಿಡಿದಿದ್ದ ಗ್ರಹಣ ಸರಿಯುವ ಕಾಲ ಸನ್ನಿಹಿತವಾಗಿದೆ. ಇದರೊಂದಿಗೆ […]

Read More

ವೈದ್ಯರು ಬೇಕಾಗಿದ್ದಾರೆ

– ಆರೋಗ್ಯ ಇಲಾಖೆಯಲ್ಲಿ 30% ಹುದ್ದೆ ಖಾಲಿ, ಖಾಸಗಿಯಲ್ಲೂ ಸಮಸ್ಯೆ – ಹೆಲ್ತ್ ಯೋಧರಿಗೂ ಸೋಂಕು | ಗುತ್ತಿಗೆ ವೈದ್ಯರ ಪದತ್ಯಾಗ ಬೆದರಿಕೆ. ಕಾರ್ತಿಕ್ ಯು.ಎಚ್. ಬೆಂಗಳೂರು : ಕೊರೊನಾ ವಿರುದ್ಧದ ಹೋರಾಟದಲ್ಲಿ ಸೇನಾನಿಗಳಂತೆ ಹೋರಾಡುವ ವೈದ್ಯ ಸಿಬ್ಬಂದಿಗಳ ಕೊರತೆ ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೇ ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. ಇದರ ಜತೆಗೆ ಹಲವಾರು ವೈದ್ಯರು, ಸಿಬ್ಬಂದಿ ಸೋಂಕು, ಭೀತಿ ಮತ್ತಿತರ ಕಾರಣಗಳಿಗಾಗಿ ಗೈರುಹಾಜರಾಗುತ್ತಿದ್ದಾರೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top