ಪಂಜಾಬ್‌ ಮೇಲೆ ಪಾಪಿ ಪಾಕ್‌ ಕಣ್ಣು

ಐಎಸ್‌ಐ ಮೂಲಕ ಖಲಿಸ್ತಾನ್‌ ಭಯೋತ್ಪಾದನೆಗೆ ಮರುಜೀವ. ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಟ್ಟೆಚ್ಚರದಿಂದ ವಿಚಲಿತವಾಗಿರುವ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ, ಭಾರತದಲ್ಲಿ ಹೇಗಾದರೂ ಭಯ ಸೃಷ್ಟಿಸುವ ಯತ್ನದಲ್ಲಿ ಪಂಜಾಬ್‌ನ ಖಲಿಸ್ತಾನ್‌ ಭಯೋತ್ಪಾದನೆಗೆ ಜೀವ ತುಂಬಲು ಯತ್ನಿಸುತ್ತಿದ್ದಾರೆ. ಅವರ ಯೋಜನೆಗಳೇನು, ಎಲ್ಲಿಂದ ಅನುಷ್ಠಾನಗೊಳ್ಳುತ್ತಿದೆ ಎಂಬ ವಿವರಗಳು ಇಲ್ಲಿವೆ. ಪಂಜಾಬ್‌ನಲ್ಲಿ ಬಹುತೇಕ ಅಳಿದೇ ಹೋಗಿದ್ದ ಖಲಿಸ್ತಾನ್‌ ಚಳವಳಿ ಹಾಗೂ ಭಯೋತ್ಪಾದನೆಗೆ ಮತ್ತೆ ಮರುಜೀವ ಬಂದಿದೆ. ಪಂಜಾಬ್‌ನ ಅಲ್ಲಲ್ಲಿ ಬಾಂಬ್‌ ಸ್ಫೋಟ, ಗುಂಡಿನ ದಾಳಿ ನಡೆಸಲು ಉಗ್ರರು ಸಂಚು ನಡೆಸುತ್ತಿದ್ದು, ಇದು […]

Read More

ಡ್ರೋನ್‌ ಹಾರುಯಂತ್ರದಿಂದ ಮಿಡತೆ ಹಾವಳಿ ನಿಯಂತ್ರಣ – ಬಳಸಿದಷ್ಟೂ ವಿಸ್ತಾರವಾಗುತ್ತಿದೆ ಡ್ರೋನ್‌ಗಳ ಬಳಕೆಯ ಸಾಧ್ಯತೆ

– ಸುಧೀಂದ್ರ ಹಾಲ್ದೊಡ್ಡೇರಿ.  ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗದ್ವಿಖ್ಯಾತ ವಿದ್ಯಾಸಂಸ್ಥೆ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ನಿಮಗೆ ಗೊತ್ತು. ನವೀನ ವಿಜ್ಞಾನ-ತಂತ್ರಜ್ಞಾನ ಕನಸುಗಳನ್ನು ಹೊತ್ತಯುವ ಪ್ರತಿಭಾವಂತರಿಗೆ ಅಗತ್ಯ ಸಂಪನ್ಮೂಲಗಳನ್ನು, ಸಾಧನ-ಸಲಕರಣೆಗಳನ್ನು ಹಾಗೂ ವಿದ್ವಜ್ಜನರ ಮಾರ್ಗದರ್ಶನವನ್ನು ನೀಡಿ, ಸಾರ್ವತ್ರಿಕ ಒಳಿತಿಗೆ ಬಳಕೆಯಾಗಬಲ್ಲ ಉತ್ಪನ್ನಗಳ ಅಭಿವೃದ್ಧಿಗೆ ನೆರವಾಗುವಉದ್ದಿಶ್ಯ ಇಲ್ಲಿನ ‘ಸೊಸೈಟಿ ಫಾರ್‌ ಇನ್ನೋವೇಶನ್‌ ಆ್ಯಂಡ್‌ ಡೆವಲಪ್‌ಮೆಂಟ್‌’ ಒಕ್ಕೂಟದ್ದು. ಕೆಲ ವರ್ಷಗಳ ಹಿಂದೆ ವೈಮಾಂತರಿಕ್ಷ ಕ್ಷೇತ್ರದ ಉತ್ಸಾಹಿ ಸಮೂಹವೊಂದು ದೇಶದ ಹೆಮ್ಮೆಯ ಲಘು ಯುದ್ಧ ವಿಮಾನ ‘ತೇಜಸ್‌’ನ ವಿನ್ಯಾಸಗಾರ ಡಾ.ಕೋಟಾ ಹರಿನಾರಾಯಣ ಅವರ […]

Read More

ಕೋವಿಡ್‌ ಕರಾಳತೆಯ ಬಳಿಕ…

ಭಾರತದಲ್ಲಿ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸಲು ಆರಂಭಿಸಿದೆ. ಲಾಕ್‌ಡೌನ್‌ನ ಸಂದರ್ಭದಲ್ಲಿ ಇದ್ದುದಕ್ಕೂ ಈಗಿನ ಸನ್ನಿವೇಶಕ್ಕೂ ವ್ಯತ್ಯಾಸ ಎದ್ದು ಕಾಣುತ್ತಿದೆ. ದಿಲ್ಲಿ ಹಾಗೂ ಮಹಾರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿಭಾಯಿಸಲು ಸಾಧ್ಯವಾಗದೆ ಖಾಸಗಿ ವ್ಯವಸ್ಥೆಯ ಮೊರೆ ಹೋಗಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ತೀವ್ರ ಸೋಂಕಿತರಿಗೆ ಐಸಿಯುಗಳು ಸಿಗುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಇತರ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ? ಅಲ್ಲೂ ಕೊರೊನಾ ಕೇಸುಗಳಲ್ಲಿ ಏರುಮುಖವಿದೆಯೇ ಅಥವಾ ಇಳಿಮುಖವಾಗುತ್ತಿದೆಯೇ? ಅಲ್ಲಿನ ಲಾಕ್‌ಡೌನ್‌ ನಂತರದ ಸಾಮಾಜಿಕ- ಆರ್ಥಿಕ ಸನ್ನಿವೇಶಗಳು ಹೇಗಿವೆ? ಒಂದು ನೋಟ ಇಲ್ಲಿದೆ. […]

Read More

ಗಿಲ್ಗಿಟ್‌ ವಿಚಾರದಲ್ಲಿ ಭಾರತದ ನಿಲುಮೆಗೆ ಚೀನಾ ಗಿರಗಿಟ್ಲೆ

ಸ್ವಾವಲಂಬನೆಯ ಮೂಲಕ ವ್ಯಾಪಾರ ವಹಿವಾಟಿನಲ್ಲೂ ಚೀನಾವನ್ನು ಮಣಿಸಬೇಕು. – ಹರಿಪ್ರಕಾಶ್‌ ಕೋಣೆಮನೆ. ಚೀನಾದ ವುಹಾನ್‌ ಪ್ರಾಂತ್ಯದಿಂದ ಹರಡಿದ ಕೊರೊನಾ ಎಂಬ ವೈರಸ್‌ ಇಡೀ ಜಗತ್ತಿನ ತಲ್ಲಣಕ್ಕೆ ಕಾರಣವಾಗಿದೆ. ಇಡೀ ಮನುಕುಲಕ್ಕೆ ವೈರಸ್‌ ಹರಡಲು ಕಾರಣವಾದ ಅದೇ ಚೀನಾ ಭಾರತಕ್ಕೆ ಸದಾ ಮಗ್ಗಲು ಮುಳ್ಳು. ಈಗ ಕೊರೊನಾ ಕಾಟದ ಜತೆಗೆ ಮಿಲಿಟರಿ ಬೆದರಿಕೆ ಒಡ್ಡುತ್ತಿದೆ. ಇದಕ್ಕೆ ಭಾರತವೇನು ಹೆದರಿಲ್ಲ. ಈಗಂತೂ ಗಟ್ಟಿ ನಾಯಕತ್ವವೇ ಇರುವುದರಿಂದ, ಹೆದರಿಸುವ ಸ್ಥಾನದಲ್ಲೂ ಇದೆ. ಹಾಗೆ ಸುಮ್ಮನೇ 2017ರ ಸನ್ನಿವೇಶವನ್ನು ಒಮ್ಮೆ ನೆನಪಿಸಿಕೊಳ್ಳೋಣ. ಭಾರತ- […]

Read More

ಬರಲಿವೆ ಕಿಲ್ಲರ್‌ ರೋಬಾಟ್‌!

ಅಮೆರಿಕ ಹಾಗೂ ಚೀನಾಗಳು ಸದ್ದಿಲ್ಲದೆ ಕಿಲ್ಲರ್‌ ರೋಬಾಟ್‌ಗಳನ್ನು ತಯಾರಿಸುತ್ತಿವೆ ಎಂಬ ಗುಸುಗುಸು ಮಿಲಿಟರಿ ವಲಯದಲ್ಲೇ ಇದೆ. ಇವುಗಳನ್ನು ನಿಷೇಧಿಸಬೇಕು ಎಂಬ ಕೂಗು ಎದ್ದಿದೆ. ಏನಿದು ಕೊಲೆಗಾರ ಯಂತ್ರ? ಅವುಗಳಿಂದ ಏನು ಅಪಾಯ? ಯುದ್ಧರಂಗದಲ್ಲಿ ಮಾನವರಿಲ್ಲದೆ ಬರೀ ಯಂತ್ರಗಳು ಹೊಡೆದಾಡುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಮುಂದುವರಿದ ದೇಶವೊಂದರ ದೈತ್ಯ ರೋಬಾಟ್‌ಗಳು ಪಕ್ಕದ ಬಲಹೀನ ದೇಶದ ಗಡಿಯೊಳಗೆ ನುಗ್ಗಿ ಸೈನಿಕರನ್ನು ಹುಳಗಳಂತೆ ಜಜ್ಜಿಹಾಕುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಇದ್ದಕ್ಕಿದ್ದಂತೆ ಆಕಾಶದಿಂದ ಸಾವಿರಾರು ಡ್ರೋನ್‌ಗಳು ಇದ್ದಕ್ಕಿದ್ದಂತೆ ಬೆಂಕಿಯ ಮಳೆ ಸುರಿಸುವುದನ್ನು ಊಹಿಸಿಕೊಳ್ಳಿ. ಮಿಲಿಟರಿಯಲ್ಲಿ ಕೊಲೆಗಾರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top