ಮುಂದಿನ ನೇರ ಹಣಾಹಣಿಗೆ ಉಪಸಮರ ದಿಕ್ಸೂಚಿ

ಹಾನಗಲ್ ಸೋಲು ಸಿಎಂ ಬೊಮ್ಮಾಯಿಗೆ ಆಘಾತ | ಪರಾಭವಗೊಂಡ ಜೆಡಿಎಸ್ ತ್ರಿಕೋನ ಸ್ಪರ್ಧೆಯಿಂದಲೂ ಔಟ್? ಸಿಂದಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಚ್ಚರಿ ಅಲ್ಲ, ಆದರೆ ಅದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ೩೦ ಸಾವಿರಕ್ಕೂ ಅಕ ಮತಗಳ ಅಂತರದಿಂದ ಗೆದ್ದಿರುವುದು ಅನಿರೀಕ್ಷಿತ ಮತ್ತು ಬಿಜೆಪಿ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಸಹಜವಾಗಿ ಕಾರಣವಾಗಿದೆ. ಆದರೆ, ಪ್ರತಿಷ್ಠಿತ ಹಾನಗಲ್ ಕ್ಷೇತ್ರದ ಸೋಲು ಬಿಜೆಪಿ ಪಾಳಯದಲ್ಲಿ ಸಿಂದಗಿ ಕ್ಷೇತ್ರದ ಅಭೂತಪೂರ್ವ ಗೆಲುವಿನ […]

Read More

ಸಾಂಸ್ಕೃತಿಕ ಅರಿವಿನಿಂದಲೇ ಪಕ್ಷ ಗಳ ಸಮಸ್ಯೆಗೆ ಪರಿಹಾರ

ಸಂಸ್ಕೃತಿಯ ಬೇರುಗಳಿಂದ ದೂರವಾದ ಕಾಂಗ್ರೆಸ್‌; ವೈಚಾರಿಕ ಹಿನ್ನೆಲೆಯ ಗೈರುಹಾಜರಿಯ ಬಿಜೆಪಿ ಇತ್ತೀಚಿನ ವರ್ಷದಲ್ಲಿ ಆಗಿರುವ ರಾಜಕೀಯ ಪಲ್ಲಟಗಳ ಅವಲೋಕನ ಆಸಕ್ತಿಕರವಾಗಿದೆ. ಹಾಗೆ ನೋಡಿದರೆ ಭಾರತದ ಮಟ್ಟಿಗಂತೂ ಚುನಾವಣಾ ರಾಜಕಾರಣ ಎನ್ನುವುದು ಕಳೆದ 75 ವರ್ಷದಿಂದಲೂ ತುಸು ರೋಚಕ ಹಾಗೂ ಅಧ್ಯಯನ ಯೋಗ್ಯ,ಪ್ರತಿ ಬಾರಿ ಚುನಾವಣೆಗಳು ಎದುರಾದಾಗಲೂ ಹೊಸ ಭರವಸೆಗಳು ಎದ್ದು ನಿಲ್ಲುತ್ತವೆ. ಅಲ್ಲಿಯವರೆಗೆ, ದೇಶದ ಭವಿಷ್ಯ ಎಂದುಕೊಂಡಿದ್ದವರು, ಫಲಿತಾಂಶ ಹೊರಬಂದ ಮರುದಿನದಿಂದ ಯಾರಿಗೂ ಬೇಡದವರಾಗುತ್ತಾರೆ. ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸದೇ, ಮತ್ತೆ ಅದೇ ಭರವಸೆಯನ್ನು ಹೊಸ […]

Read More

ಈ ಚುನಾವಣೆಗಳು ನಿರ್ಣಾಯಕವಲ್ಲ, ಆದರೂ ಮಹತ್ವಪೂರ್ಣಕರ್ನಾಟಕದಲ್ಲಿ ಕಾಂಗ್ರೆಸ್‌ ಅಸ್ತಿತ್ವದ ಪ್ರದರ್ಶನ, ಬಿಹಾರದಲ್ಲಿ ಬಿಜೆಪಿಗೆ ಮೈತ್ರಿಯ ಪ್ರಶ್ನೆ

ಕೊರೊನಾ ಕಾಲದ ಅತಿದೊಡ್ಡ ಚುನಾವಣೆ ಎನ್ನಬಹುದಾದ ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಾಗೂ ಕರ್ನಾಟಕ, ಮಧ್ಯಪ್ರದೇಶ ಉಪ ಚುನಾವಣೆಗಳ ಬಗ್ಗೆಯೇ ರಾಜಕೀಯ ಆಸಕ್ತರ ನಡುವೆ ಮಾತು-ಕತೆ, ಚರ್ಚೆ ನಡೆಯುತ್ತಿದೆ. ಕೋವಿಡ್‌ ಸಂತ್ರಸ್ತರಿಗೂ ಮತ ಚಲಾಯಿಸುವ ಹಕ್ಕು ನೀಡಿಕೆ, ಚುನಾವಣಾ ಪ್ರಚಾರ ಶೈಲಿಯನ್ನು ತುಸು ಬದಲಿಸಿರುವುದು ಸೇರಿದಂತೆ 10 ಪ್ರಮುಖ ಬದಲಾವಣೆಗಳೊಂದಿಗೆ ಚುನಾವಣೆಯನ್ನು ನಡೆಸಲು ಗಟ್ಟಿ ನಿರ್ಧಾರವನ್ನು ಮಾಡಿದ್ದ ಕೇಂದ್ರ ಚುನಾವಣಾ ಆಯೋಗ, ಆ ಪ್ರಯತ್ನದಲ್ಲಿ ಒಂದು ಹೆಜ್ಜೆಯನ್ನು ಈಗಾಗಲೇ ದಿಟ್ಟವಾಗಿಯೇ ಇಟ್ಟಿದೆ. ಕೊರೊನಾ ಆತಂಕದ ನಡುವೆಯೂ ಬಿಹಾರದಲ್ಲಿ […]

Read More

ಅತ್ಯಾಚಾರ ಪ್ರಕರಣಗಳ ತನಿಖೆಗೆ ಕೇಂದ್ರ ಸರಕಾರದ ಹೊಸ ಕಾರ್ಯಸೂಚಿ ಏನು?

  ವಿದ್ಯಾಗಮ ಬಂದ್ ಮಾಡೋದಕ್ಕೆ ಹೊರಟಿರುವ ರಾಜ್ಯಸರಕಾರಕ್ಕೆ ಶಿಕ್ಷಣ ತಜ್ಞರ ಕಿವಿಮಾತು! ವಿಕ ವರದಿ ಪರಿಣಾಮ ಬಾಕ್ಸೈಟ್ ಅದಿರು ಅಕ್ರಮ ತಡೆಗೆ ಕ್ರಮ ಕಟ್ಟುನಿಟ್ಟು ನೀವು 30 ಲಕ್ಷ ರೂ.ಗೂ ಹೆಚ್ಚು ಗೃಹ ಸಾಲ ಹೊಂದಿದೀರಾ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇದೆ! ರಾಜ್ಯ ರಾಜಕೀಯದ ಇತಿಹಾಸ,ವರ್ತಮಾನ,ಭವಿಷ್ಯದ ಅವಲೋಕನದ ರಾಜ್ಯಕಾರಣ ಓದಲೇಬೇಕು ಸಾಹಿತ್ಯದ ನೊಬೆಲ್ ಪಡೆದ ಕವಯಿತ್ರಿ ಲೂಯಿಸ ಗ್ಲಕ್ ಬಗ್ಗೆ ತಿಳೀಬೇಕಾ? ಭಾರತದ ಸೇನಾಬತ್ತಳಿಕೆ ಭರ್ತಿ ಮಾಡುತ್ತಿರುವ ಕ್ಷಿಪಣಿ ಶಕ್ತಿ ಬಗ್ಗೆ ತಿಳೀಲೇಬೇಕು ಅಪ್ಪನ ದುಡ್ಡುಲಪಟಾಯಿಸೋದಕ್ಕೆ […]

Read More

ಇಂದಿನ ಪಾಡ್ ಕಾಸ್ಟ್ ಗಿಂಡೀಪಂಡಿತರಿಗೆ ಅರ್ಪಣೆ…

ಕಾಂಗ್ರೆಸ್ಸಿಗಂಟಿದ ಹೈಕಮಾಂಡ್ ಸಂಸ್ಕೃತಿಯಿಂದ ಬಿಜೆಪಿಯೂ ಬಳಲ್ತಾ ಇದೆಯಾ? ಡೊನಾಲ್ಡ್ ಟ್ರಂಪ್ ಭಾನಗಡಿ,ಪೀಕಲಾಟಕ್ಕೆ ಕೊನೆಯೇ ಇಲ್ಲ! ಕಡಿಮೆ ಆಗಿರೋದು ದಂಡದ ಮೊತ್ತ ಮಾತ್ರ,ಕೊರೊನಾ ಅಲ್ಲ.ಎಚ್ಚರಿಕೆಯಿಂದ ಇರೋಣ. ಮೋದಿ ಅಧಿಕಾರ ರಾಜಕಾರಣಕ್ಕೆ ಎಷ್ಟು ವರ್ಷ ಆಯ್ತು ಗೊತ್ತಾ? ಇನ್ಮೇಲೆ ರಸ್ತೆಮೇಲೆ ಇಲೆಕ್ಟ್ರಿಕ್ ವಾಹನಗಳು ಮಾತ್ರ ಇರತ್ವಂತೆ.. ಕೊರೊನಾ ಕಾಲದಲ್ಲಿ ಬೆಳಗಾವಿ ಮಹಿಳಾ ತಂಡದ ಕೆಲಸಕ್ಕೆ ಸೈ ಎನ್ನಲೇಬೇಕು ಗಿಂಡೀಪಂಡಿತರ ಬಗ್ಗೆ ತಳೀಬೇಕಾ..?

Read More

ಮಾಜಿ‌ ಸಿಎಂ ಗುಂಡೂರಾಯರ ಕುರಿತು ತಿಳಿಯೋದು ಎಷ್ಟಿದೆ ಗೊತ್ತಾ?

ಫಸಲ್ ಬೀಮಾ ಯೋಜನೆ ರೈತರ ಹಿತ ಕಾಯೋ ಬದಲು,ಖಾಸಗಿ ವಿಮಾ ಕಂಪೆನಿಗಳ ಹೊಟ್ಟೆತುಂಬ್ತಾ ಇದೆ. ರಾಷ್ಟ್ರೀಯ ಬಿಜೆಪಿಯಲ್ಲಿ ಕರ್ನಾಟಕದ ಪಾರುಪತ್ಯ! ಕೋರ್ಟ್ ಶುಲ್ಕ ಕಟ್ಟೋದಕ್ಕೆ ಮನೆಯಲ್ಲಿದ್ದ ಒಡವೇನೆಲ್ಲಾ ಮಾರೀದೀನಿ ಅಂತ ಹೇಳಿದ ಉದ್ಯಮಿ ಯಾರು? ಮಾಜಿದೋಸ್ತಿಗಳ ಪುನರಪಿ ಭೇಟಿ ಒಳಸುಳಿ ಏನು?

Read More

ರಾಮಮಂದಿರ ನಿರ್ಮಾಣಕ್ಕೆ ಸ್ವಾಗತದ ಧ್ವನಿ – ಸಾಂಸ್ಕೃತಿಕ ರಾಜಕಾರಣಕ್ಕೆ ಎಂಟ್ರಿ ಪಡೆಯಿತಾ ಕಾಂಗ್ರೆಸ್‌?

– ಶಶಿಧರ ಹೆಗಡೆ. ಸೋಮನಾಥ ಮಂದಿರದ ಜೀರ್ಣೋದ್ಧಾರದ ವೇಳೆ ಕಾಂಗ್ರೆಸ್‌ ಹೇಗೆ ನಡೆದುಕೊಂಡಿತು ಎನ್ನುವುದು ದೇಶದ ಚರಿತ್ರೆಯ ಪುಟಗಳಲ್ಲಿ ದಾಖಲಾಗಿ ಹೋಗಿದೆ. ಭಾರತದ ಸಾಂಸ್ಕೃತಿಕ ಪರಂಪರೆಯ ಅಭಿಮಾನದ ಪ್ರತೀಕವಾದ ಸೋಮನಾಥ ದೇಗುಲ ಪುನರುತ್ಥಾನಗೊಂಡು ಸುಮಾರು ಏಳು ದಶಕಗಳೇ ಉರುಳಿದೆ. ಇದೀಗ ಭಾರತೀಯರ ಸಂಸ್ಕೃತಿ, ತತ್ತ್ವಾದರ್ಶದ ಮೇಲ್ಮೆಯನ್ನು ಪ್ರತಿಬಿಂಬಿಸುವ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಗಿದೆ. ಜಗನ್ನಾಥನಾದ ರಾಮನ ಮಂದಿರದ ಭೂಮಿ ಪೂಜೆಯ ಶುಭಾವಸರದಲ್ಲಿ ಕಾಂಗ್ರೆಸ್‌ನ ಸ್ಪಂದನೆ ಮಾತ್ರ ಅನಿರೀಕ್ಷಿತ. ಯಾಕೆಂದರೆ ಮಂದಿರ ನಿರ್ಮಾಣವನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ಪ್ರಾರಂಭದಿಂದಲೂ ರಾಮ […]

Read More

ಹಿಂದೂಗಳ ಅಸ್ಮಿತೆ ಬಡಿದೆಬ್ಬಿಸಿದ ಚಳವಳಿ

– ಲಾಲ್‌ಕೃಷ್ಣ ಆಡ್ವಾಣಿ. ದೇಶಾದ್ಯಂತ ರಥಯಾತ್ರೆ ಮಾಡಿ ರಾಮ ಜನ್ಮಭೂಮಿ ಆಂದೋಲನ ಬಿರುಗಾಳಿಯಂತೆ ವ್ಯಾಪಿಸುವಂತೆ ಮಾಡಿದವರು ಬಿಜೆಪಿಯ ಹಿರಿಯ ಮುಖಂಡ ಲಾಲ್‌ಕೃಷ್ಣ ಆಡ್ವಾಣಿ. ಜನ್ಮಭೂಮಿ ಸಂಘರ್ಷದ ವೃತ್ತಾಂತ, ರಥಯಾತ್ರೆಯ ಆ ದಿನಗಳು- ಎಲ್ಲದರ ಕುರಿತು ಆಡ್ವಾಣಿಯವರು ತಮ್ಮ ಆತ್ಮಕತೆ ‘ಮೈ ಕಂಟ್ರಿ, ಮೈ ಲೈಫ್‌’ನಲ್ಲಿ ಬರೆದುದರ ಆಯ್ದ ಭಾಗ ಇಲ್ಲಿದೆ. ದೇಶಾದ್ಯಂತ ಸುಂಟರಗಾಳಿ ಎಬ್ಬಿಸಿದ ಅಯೋಧ್ಯೆ ಮಹಾ ಆಂದೋಲನವು ನನ್ನ ರಾಜಕೀಯ ಜೀವನದ ಅತ್ಯಂತ ಕ್ಲಿಷ್ಟಕರ ಮತ್ತು ಸ್ಥಿತ್ಯಂತರದ ವಿದ್ಯಮಾನ. ನಮ್ಮ ಸಮಾಜ ಮತ್ತು ರಾಜಕೀಯ ಸ್ಥಿತಿಗತಿಯ […]

Read More

ಅತೃಪ್ತಿ, ಗೊಂದಲ ಸಲ್ಲ – ಅಸಮಾಧಾನಕ್ಕೆ ಕಾರಣವಾದ ನಿಗಮ/ಮಂಡಳಿ ನೇಮಕ

ವಿಚಿತ್ರ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು, ಇದೀಗ ಒಂದು ಸಂವತ್ಸರವನ್ನು ಪೂರೈಸಿ, ಮುನ್ನಡೆಯುತ್ತಿದೆ. ಅನಿರೀಕ್ಷಿತ ಸನ್ನಿವೇಶದಲ್ಲಿ ಅಧಿಕಾರಕ್ಕೆ ಬಂದ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮುಂದಡಿ ಇಡುತ್ತಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರ್ನಾಟಕದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಯಿತು. ಅನೇಕರು ಮನೆ ಮಠಗಳನ್ನು ಕಳೆದುಕೊಂಡು ನಿರ್ಗತಿಕರಾದರು. ರಾಜಕೀಯ ಕಾರಣಕ್ಕೆ ಸಂಪುಟ ವಿಸ್ತರಣೆಯಾಗುವುದು ವಿಳಂಬವಾದಾಗ ಸಿಎಂ ಏಕಾಂಗಿಯಾಗಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top