ಚೀನಾಗೆ ಸಿಂಹಸ್ವಪ್ನ ಬಿಹಾರ ರೆಜಿಮೆಂಟ್

ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯ ಸೈನ್ಯದ ಬಿಹಾರ್ ರೆಜಿಮೆಂಟ್‌ನ ಯೋಧರ ದಿಟ್ಟತನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿಹಾರ್ ರೆಜಿಮೆಂಟ್‌ನ ಇತಿಹಾಸ, ಅದು ಮಾಡಿದ ಸಾಧನೆಗಳನ್ನು ತಿಳಿಯೋಣ ಬನ್ನಿ. ಗಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ಸೈನಿಕರ ನಡುವೆ ನಡೆದ ತಿಕ್ಕಾಟದ ವೇಳೆ ಅಲ್ಲಿದ್ದ ಭಾರತದ ಕಡೆಯ ಸೇನಾಯೋಧರು ಪ್ರದರ್ಶಿಸಿದ್ದು ಬರಿಯ ಧೈರ್ಯ, ಹೋರಾಟದ ಕೆಚ್ಚೆದೆ ಮಾತ್ರವಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ದುಶ್ಶಾಸನನ ಎದೆ ಸೀಳಿದ ಸಂದರ್ಭದಲ್ಲಿ ಭೀಮಸೇನ ಪ್ರದರ್ಶಿಸಿದಂಥ ಭೀಭತ್ಸ ಸನ್ನಿವೇಶವನ್ನೇ ನಮ್ಮ ಯೋಧರು ಅಲ್ಲಿ ಸೃಷ್ಟಿಸಿದ್ದರು […]

Read More

ಮಕ್ಕಳ ಲೋಕದಲ್ಲಿ ಕೊರೊನಾ ಕೋಲಾಹಲ

ಕೊರೊನಾ ವೈರಾಣು ಹಾಗೂ ಅದನ್ನು ತಡೆಯಲು ಜಗತ್ತಿನಾದ್ಯಂತ ಹೇರಲಾದ ಲಾಕ್‌ಡೌನ್‌ಗಳ ಪರಿಣಾಮ ಕೋಟ್ಯಂತರ ಮಕ್ಕಳು ವಿಚಿತ್ರ ರೀತಿಯ ಬವಣೆ ಅನುಭವಿಸುತ್ತಿದ್ದಾರೆ. ಎಷ್ಟು ಮಕ್ಕಳು, ಏನೇನು ಸಂಕಷ್ಟ ಅನುಭವಿಸುತ್ತಿದ್ದಾರೆ? ಒಂದು ನೋಟ ಇಲ್ಲಿದೆ. ಆಟ ಹಾಗೂ ಪಾಠಗಳಲ್ಲಿ ಮಗ್ನರಾಗಿರಬೇಕಿದ್ದ ಮಕ್ಕಳು ಸುಮ್ಮನೆ ಮನೆಗಳಲ್ಲಿ ಬಂಧಿಯಾಗಿರುವುದನ್ನು ನೋಡುವುದೇ ಒಂದು ಹಿಂಸೆ. ಕೊರೊನಾ ವೈರಸ್‌ ತಡೆಯಲು ತೆಗೆದುಕೊಳ್ಳಲಾದ ಕ್ರಮಗಳ ಪರಿಣಾಮ ಪ್ರಪಂಚದಾದ್ಯಂತ ಸುಮಾರು 160 ಕೋಟಿ ಮಕ್ಕಳು ಶಾಲೆಯಿಂದ ಆಚೆ ಬಿದ್ದಿದ್ದಾರೆ. ಇವರಲ್ಲಿ ಕೆಲವೇ ಮಕ್ಕಳು ಮಾತ್ರ ಮನೆಯಲ್ಲೂ ಅಧ್ಯಯನ ಮುಂದುವರಿಸಬಹುದಾದ […]

Read More

ಕೊರೊನಾ ಮೆಟ್ಟಿ ನಿಂತ ಕೇರಳ!

ನಮ್ಮ ನೆರೆಯ ಕೇರಳ ರಾಜ್ಯವು ಕೊರೊನಾ ಸೋಂಕು ನಿಯಂತ್ರಣದಲ್ಲೀಗ ಮುಂದಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಪೀಡಿತರ ಗ್ರಾಫ್‌ ಏರುಮುಖದಲ್ಲಿದ್ದರೆ, ಕೇರಳದಲ್ಲಿ ಅದು ಮಟ್ಟಸವಾಗಿದೆ. ಜೊತೆಗೆ, ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವ ಪ್ರಮಾಣವೂ ಹೆಚ್ಚಿದೆ. ಹಾಗಾದರೆ, ಕೇರಳ ಈ ನಿಯಂತ್ರಣ ಕಂಡುಕೊಂಡಿದ್ದು ಹೇಗೆ ಎಂಬುದು ನೋಡೋಣ ಬನ್ನಿ. ಇಡೀ ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದ್ದು ‘ದೇವರ ನಾಡು’ ಕೇರಳದಲ್ಲಿ. ಅದೇ ಕೇರಳ ಇದೀಗ ಕೊರೊನಾ ಹಿಮ್ಮೆಟಿಸುವ ವ್ಯವಸ್ಥೆಗೆ ಇಡೀ ದೇಶಕ್ಕೆ ಮಾದರಿಯಾಗುತ್ತಿದೆ. ನೆರೆಯ ಬಾಂಗ್ಲಾದೇಶ ಕೂಡ […]

Read More

ಎಚ್‌ಸಿಕ್ಯೂ ಬಾಪ್‌ರೇ! – ಬಿಸಿಪಿಎಲ್‌ ದೇಶದ ಮೊದಲ ಫಾರ್ಮಾಸ್ಯುಟಿಕಲ್‌ ಕಂಪನಿ

ಹೈಡ್ರಾಕ್ಸಿಕ್ಲೋರೋಕ್ವಿನ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ವಲಯದ ದೇಶದ ಏಕೈಕ ಡ್ರಗ್ಸ್‌ ಕಂಪನಿ ‘ಬೆಂಗಾಲ್‌ ಕೆಮಿಕಲ್ಸ್‌ ಆ್ಯಂಡ್‌ ಫಾರ್ಮಾಸ್ಯುಟಿಕಲ್ಸ್‌ ಲಿ.(ಬಿಸಿಪಿಎಲ್‌) ಹಾಗೂ ಅದರ ಸ್ಥಾಪಕ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರು ಮುನ್ನಲೆಗೆ ಬಂದಿದ್ದಾರೆ. ಈ ಕಂಪನಿಯು ಆ್ಯಂಟಿ ಮಲೇರಿಯಾ ಔಷಧ, ಆ್ಯಂಟಿ ಸ್ನೇಕ್‌ ವೆನಮ್‌ ಸೀರಮ್‌ ಉತ್ಪಾದಿಸುತ್ತಿದೆ. ಸಂಸ್ಥಾಪಕ ರೇ ಅವರ ಬಗ್ಗೆ ಇಲ್ಲಿದೆ ಮಾಹಿತಿ. ಇಡೀ ಜಗತ್ತಿಗೆ ಕಂಟವಾಗಿರುವ ಕೊರೊನಾ ವೈರಸ್‌ಗೆ ಭಾರತ ಸಮೃದ್ಧವಾಗಿ ಉತ್ಪಾದಿಸುವ ಆ್ಯಂಟಿ ಮಲೇರಿಯಾ ಡ್ರಗ್ಸ್‌ ರಾಮಬಾಣ ಎಂದು ಗೊತ್ತಾಗುತ್ತಿದ್ದಂತೆ ಎಲ್ಲದೇಶಗಳು ಭಾರತಕ್ಕೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top