
– ಬಿ.ರಾಘವೇಂದ್ರ ಶೆಣೈ. ಕಳೆದ ವರ್ಷ (2019) ‘ಹವಾಮಾನಕ್ಕಾಗಿ ಕ್ರಿಯಾಶೀಲತೆ’ ಎಂಬ ಥೀಮ್‌ನಡಿ ವಿಶ್ವಾದ್ಯಂತ ಯೋಗ ದಿನ ಆಚರಿಸಲಾಗಿತ್ತು. ಈ ವರ್ಷದ ಥೀಮ್ ‘ಮನೆಯಲ್ಲೇ ಯೋಗ’. ಸಾಂಕ್ರಾಮಿಕ ಕಾಯಿಲೆ ಕೊರೊನಾ ಇಡಿ ಜಗತ್ತನ್ನು ಕಾಡುತ್ತಿರುವ ಹೊತ್ತಿನಲ್ಲಿ, ಪ್ರಾಚೀನ ಭಾರತೀಯ ಸೌಖ್ಯ ಪರಂಪರೆಯಾದ ಯೋಗಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಖ್ಯಾತ ಯೋಗಗುರುವೊಬ್ಬರು ಮನೆಯಲ್ಲೇ ಇರುವ ಉಪಕರಣಗಳನ್ನು ಉಪಯೋಗಿಸಿ ಸುಲಭವಾಗಿ ಮಾಡಬಹುದಾದ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಯೋಗಾಸನಗಳನ್ನು ಹೇಳಿಕೊಟ್ಟಿದ್ದಾರೆ. ಯೋಗವೆಂಬುದು ಸಮುದ್ರ. ಇಲ್ಲಿ ಮೇಲ್ನೋಟಕ್ಕೆ ಹೆದ್ದೆರೆಗಳ ವೈಭವ. ಆದರೆ ಆಳಕ್ಕೆ […]