
– ಶಶಿಧರ ಹೆಗಡೆ. ಮಹಾ ಸಮರ್ಥ ಸರ್ವಸೇನಾಧ್ಯಕ್ಷನೇ ಇರಲಿ. ಅಂಥವನನ್ನೂ ಅಂಕೆಯಲ್ಲಿ ಇರಿಸಿಕೊಳ್ಳಲು ಬೆದರುಗೊಂಬೆಯನ್ನು ಎದುರು ಬಿಡುವುದು ರಾಜಕಾರಣದ ತಂತ್ರಗಾರಿಕೆಯ ಭಾಗ. ಸೇನಾಪತಿಯನ್ನು ಪ್ರಶ್ನಿಸುವ, ಛೇಡಿಸುವ ಜಾಯಮಾನದವರು ಬೀದಿಗೊಬ್ಬರು ಸಿಗಬಹುದು. ಆದರೆ, ಅದಕ್ಕೆ ತೂಕವಿರುವುದಿಲ್ಲ. ಪರಿಣಾಮವೂ ಶೂನ್ಯ. ಹಾಗಾಗಿ ಸೇನಾಧ್ಯಕ್ಷನಿಗೆ ಅಂಕುಶ ಹಾಕಬೇಕೆನಿಸಿದಾಗ ಅಳೆದೂ ತೂಗಿ ಅದೇ ಪಕ್ಷ ದ ರಥಿಕರನ್ನೇ ಪಕ್ಕಕ್ಕೆ ಕರೆತಂದು ನಿಲ್ಲಿಸಲಾಗುತ್ತದೆ. ಪ್ರಭುತ್ವವು ಇತಿಹಾಸದುದ್ದಕ್ಕೂ ಇದೇ ನೀತಿ ಅನುಸರಿಸಿರುವುದನ್ನು ಇಣುಕಿ ನೋಡಬಹುದು. ವಾನರ ಸೇನೆಯ ಬಲದೊಂದಿಗೆ ಸೀತಾನ್ವೇಷಣೆಗಾಗಿ ಲಂಕೆಗೆ ಹೊರಟ ಶ್ರೀರಾಮಚಂದ್ರನ ರಣನೀತಿಯೂ […]