ಸಿಎಂ ಚಾಟಿಗೆ ಸಾವಿರ ಹಾಸಿಗೆ, 50 ಆ್ಯಂಬುಲೆನ್ಸ್ – ಬಿಬಿಎಂಪಿ ವೈಫಲ್ಯದ ವಿಕ ವಿಸ್ತೃತ ವರದಿಗೆ ಎಚ್ಚೆತ್ತ ರಾಜ್ಯ ಸರಕಾರ

ವಿಕ ಸುದ್ದಿಲೋಕ ಬೆಂಗಳೂರು. ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದಿರುವುದು ಮತ್ತು ಆ್ಯಂಬುಲೆನ್ಸ್‌ಗಳಿಲ್ಲದೆ ರೋಗಿಗಳು ಪರದಾಡುತ್ತಿರುವ ದೂರುಗಳು ಕೇಳಿಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಕೋವಿಡ್ ನಿರ್ವಹಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಟಿ ಬೀಸಿದ್ದರು. ಹೀಗಾಗಿ, ಸೋಂಕಿತರ ಚಿಕಿತ್ಸೆಗೆ ಹಾಸಿಗೆ ವ್ಯವಸ್ಥೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲು ಅಗತ್ಯವಿರುವ ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಮೃತಪಟ್ಟ ಸೋಂಕಿತರನ್ನು ಚಿತಾಗಾರಗಳಿಗೆ ಸಾಗಿಸಲು ವಾಹನಗಳನ್ನು ನಿಯೋಜಿಸಲಾಗಿದೆ. ನಗರದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ […]

Read More

ಬೆಂಗಳೂರು ಹೈ ಅಲರ್ಟ್

6 ಕಡೆ ಸೀಲ್ಡೌನ್ | ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ. ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್ ನಿಯಂತ್ರಣ ಸಂಬಂಧದಲ್ಲಿ ಬಿಬಿಎಂಪಿ ಪ್ರಮಾದವೆಸಗಿದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಬೆಂಗಳೂರಿನ ಕೆಆರ್ ಮಾರ್ಕೆಟ್, ವಿವಿ ಪುರ, ಸಿದ್ದಾಪುರ, ಕಲಾಸಿಪಾಳ್ಯ, ಚಾಮರಾಜಪೇಟೆ, ಚಿಕ್ಕಪೇಟೆ ಸೇರಿದಂತೆ ಕೊರೊನಾ ವಿಪರೀತವಾಗಿ ಪ್ರಸರಣವಾಗುತ್ತಿರುವ ಪ್ರದೇಶದಲ್ಲಿ ಸೀಲ್‌ಡೌನ್‌ ಮಾಡಲು ಆದೇಶಿಸಿದೆ. ಹಾಗೆಯೇ ಕೊರೊನಾ ವ್ಯಾಪಿಸುತ್ತಿರುವ ಕಡೆ ಲಾಕ್‌ಡೌನ್‌ ಕ್ರಮ ಅನುಸರಿಸಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ […]

Read More

ಕೊರೊನಾ ಟೆಸ್ಟ್ ರಾಜಧಾನಿ ಫೇಲ್

– ಸರಕಾರದ ಶಕ್ತಿ ಕೇಂದ್ರದಲ್ಲೇ ವೈಫಲ್ಯ | ಸೋಂಕಿತರ ನರಳಾಟ | ಇತರ ಜಿಲ್ಲಾಡಳಿತಗಳೇ ಬೆಸ್ಟ್ – ಇಲಾಖೆ, ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ| ಹೊಣೆ ಮರೆತ ಬಿಬಿಎಂಪಿ ಆಯುಕ್ತ ವಿಕ ಸುದ್ದಿಲೋಕ ಬೆಂಗಳೂರು. ರಾಜಧಾನಿಯಲ್ಲಿ ಕೊರೊನಾ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕೊರೊನಾ ನಿಯಂತ್ರಣದಲ್ಲಿ ದೇಶದಲ್ಲೇ ಬೆಸ್ಟ್ ಎಂಬ ಹೆಗ್ಗಳಿಕೆ ಪಡೆದ ಕರ್ನಾಟಕ ತನ್ನ ಶಕ್ತಿ ಕೇಂದ್ರದಲ್ಲೇ ಸೋಂಕಿಗೆ ಕಡಿವಾಣ ಹಾಕಲು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವಿಫಲವಾಗುತ್ತಿದೆ. ಸುಸಜ್ಜಿತ ಆಸ್ಪತ್ರೆಗಳು, ಮುಖ್ಯಮಂತ್ರಿಯೂ ಸೇರಿದಂತೆ ಇಡೀ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top