ದುಡ್ಡಿದ್ದವರಿಗೆ ಖಾಸಗಿ ಆಸ್ಪತ್ರೆ, ಬಡವರಿಗೆ ಸರಕಾರಿ ಆಸ್ಪತ್ರೆ ಎಂಬ ಸಮೀಕರಣ ಇದುವರೆಗೂ ನಮ್ಮ ದೇಶದಲ್ಲಿತ್ತು. ಯಾವಾಗ ಕೊರೊನಾ ಬಂದು ಎಲ್ಲ ಕಡೆಯೂ ಹಬ್ಬಿ ರೋಗಿಗಳ ಸಂಖ್ಯೆ ಊಹಿಸಲಾಗದಷ್ಟು ಹೆಚ್ಚಾಯಿತೋ, ಆಗ ಸರಕಾರಿ ಆಸ್ಪತ್ರೆಗಳ ಮಹತ್ವ ಮತ್ತು ಕಾರ್ಯಭಾರ ಎಲ್ಲರಿಗೆ ಅರ್ಥವಾಗತೊಡಗಿದೆ. ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿ ರಾಜಧಾನಿಯ ದೊಡ್ಡ ಸರಕಾರಿ ಆಸ್ಪತ್ರೆಗಳು ತುಂಬಿವೆ; ಜಿಲ್ಲಾಸ್ಪತ್ರೆಗಳೂ ತುಂಬಿ ತುಳುಕುತ್ತಿವೆ. ಸರಕಾರ ಎಷ್ಟೇ ಕಾಯಿದೆ ಕಾನೂನು ರೂಪಿಸಿದರೂ ಎಚ್ಚರಿಕೆ ನೀಡಿದರೂ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿವೆ. ಹತ್ತಾರು […]