ಕೊರೊನಾ ವೈರಸ್‌ನಿಂದಾಗಿ ನಾವೀಗ ಒಂದು ರೀತಿಯ ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ. ಕಣ್ಣಿಗೆ ಕಾಣುವ ವೈರಿಯ ವಿರುದ್ಧದ ಹೋರಾಟ ಸುಲಭ. ಆದರೆ, ಅದೃಶ್ಯ ವೈರಿ ವಿರುದ್ಧದ ಹೋರಾಟ ಕಷ್ಟ. ಹಾಗಂತ, ಮೈಮರೆತು ಕೂರುವಂತಿಲ್ಲ. ಇಡೀ ಮನುಕುಲಕ್ಕೆ ಕಂಟಕವಾಗುತ್ತಿರುವ ಈ ಕೊರೊನಾ ವಿರುದ್ಧ ಸರಕಾರಗಳ ಜೊತೆಗೆ ಕೈಜೋಡಿಸುತ್ತಲೇ ನಮ್ಮ ನೆಲೆಯಲ್ಲಿನಾವು ಮಾಡಬೇಕಾದ ಕರ್ತವ್ಯಗಳನ್ನು ಚಾಚೂ ತಪ್ಪದೆ ನೆರವೇರಿಸಬೇಕಿದೆ. ಸೋಂಕು ಮತ್ತಷ್ಟು ವಿಸ್ತರಿಸದಂತೆ ನೋಡಿಕೊಳ್ಳಬೇಕಿದೆ. ಕೊರೊನಾ ವೈರಾಣು ಸೃಷ್ಟಿಸಿರುವ ಈ ಸಂದಿಗ್ಧ ಪರಿಸ್ಥಿತಿಯು ನಮ್ಮ ಶಿಸ್ತು, ಸಂಯಮ, ಸ್ವಯಂ ನಿಯಂತ್ರಣ, ಸಾಮಾಜಿಕ ಕಾಳಜಿ, […]