ಭಾರತೀಯರಲ್ಲಿ ಸುಮಾರು 18 ಕೋಟಿ ಮಂದಿ ಈಗಾಗಲೇ ಕೋವಿಡ್‌ಗೆ ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆಯೇ? ಹೌದು ಎನ್ನುತ್ತಿದೆ ಒಂದು ಅಧ್ಯಯನ. ಇದರಲ್ಲಿ ಬೆಂಗಳೂರಿನಲ್ಲಿ ನಡೆಸಿದ ಅಧ್ಯಯನದಲ್ಲಿ ಅತಿ ಹೆಚ್ಚಿನ ಪ್ರತಿಕಾಯ(ಆ್ಯಂಟಿಬಾಡಿ)ಗಳು ಕಂಡುಬಂದಿವೆ. ಪ್ರತಿಕಾಯಗಳೆಂದರೇನು? ಯಾವುದೇ ಕಾಯಿಲೆಯ ವೈರಸ್ ಅಥವಾ ಬ್ಯಾಕ್ಟೀರಿಯಾ ಮನುಷ್ಯನೊಳಗೆ ಪ್ರವೇಶಿಸಿದಾಗ, ಅದನ್ನು ಪ್ರತಿರೋಧಿಸುವ ಜೀವಕಣಗಳನ್ನು ದೇಹವೇ ಉತ್ಪತ್ತಿ ಮಾಡುತ್ತದೆ. ಇದನ್ನೇ ಪ್ರತಿಕಾಯ(ಆ್ಯಂಟಿಬಾಡಿ) ಎನ್ನುತ್ತಾರೆ. ಈ ಪ್ರತಿಕಾಯಗಳು ದೇಹದಲ್ಲಿದ್ದರೆ, ಈಗಾಗಲೇ ಆಯಾ ನಿರ್ದಿಷ್ಟ ಕಾಯಿಲೆಗೆ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ತೆರೆದುಕೊಂಡಿದ್ದಾನೆ ಎಂದೇ ಅರ್ಥ. ಆ್ಯಂಟಿಬಾಡಿ ಟೆಸ್ಟ್‌ನಲ್ಲಿ […]