
– ಕೋವಿಡ್‌ಗೆ ಬಲಿಯಾದವರ ಅಂತ್ಯಕ್ರಿಯೆಗೆ ಕೊಡಗಿನಲ್ಲಿ ಸ್ವಯಂಸೇವಕರ ಟೀಮ್ ರೆಡಿ – ಕೊಡಗು ಜಿಲ್ಲಾಡಳಿತದಿಂದ ತರಬೇತಿ. ಸುನಿಲ್ ಪೊನ್ನೇಟಿ, ಮಡಿಕೇರಿ. ಕೊರೊನಾ ಶಂಕೆ ಕಂಡುಬಂದರೂ ಸಾಕು ಅಂತಹವರನ್ನು ಅಸ್ಪೃಶ್ಯರಂತೆ ನೋಡಲಾಗುತ್ತದೆ. ಸೋಂಕಿನಿಂದ ಮೃತಪಟ್ಟರಂತೂ ಸಂಬಂಧಿಗಳೇ ಅಂತ್ಯಸಂಸ್ಕಾರದಿಂದ ದೂರ ಸರಿಯುವ ಸುದ್ದಿಗಳು ಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಗೌರವಯುತವಾಗಿ ಮೋಕ್ಷ ಕೊಡಲು ಸ್ವಯಂ ಸೇವಕರ ತಂಡಗಳು ಜಿಲ್ಲೆಯಲ್ಲಿ ಸಿದ್ಧವಾಗಿದೆ. ಇವರಿಗೆ ಜಿಲ್ಲಾಡಳಿತವೇ ತರಬೇತಿ ನೀಡಿದೆ. ಶನಿವಾರ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಕುಶಾಲನಗರದ ದಂಡಿನಪೇಟೆಯ 58 ವರ್ಷದ […]