
– ಅಪಾರ ಬಲವಿದ್ದರೂ ಸ್ವಭಾವತಃ ಸೌಮ್ಯವಾದ ಆನೆ ದೇವರಿಗೆ ಭಾರತೀಯರ ಹೃದಯದಲ್ಲಿ ಅನನ್ಯ ಸ್ಥಾನ. – ಡಾ. ವಿ.ಬಿ. ಆರತೀ. ಕೇರಳದಲ್ಲಿ ಇತ್ತೀಚೆಗೆ, ಗರ್ಭಿಣಿ ಆನೆಗೆ ಬಾಂಬ್ ಹೊಂದಿದ ಹಣ್ಣನ್ನು ತಿನ್ನಿಸಿ, ಸಾಯಿಸಿದ ದುಷ್ಕೃತ್ಯವನ್ನು ದೇಶಕ್ಕೆ ದೇಶವೇ ಖಂಡಿಸಿತು. ಯಾವುದೇ ಪ್ರಾಣಿಯನ್ನು ಇಷ್ಟು ಕ್ರೂರವಾಗಿ ಕೊಂದರೆ ಸಜ್ಜನ ಮನಸ್ಸು ನೊಂದುಕೊಳ್ಳುತ್ತದೆ. ಕಾಡುಗಳ್ಳರ ಪೈಕಿ ವೀರಪ್ಪನ್ ಬಗ್ಗೆ ಹೆಚ್ಚು ಆಕ್ರೋಶವಿದ್ದದ್ದೂ ಆತ ಹಂತಕನೆಂದೇ ಅಲ್ಲವೆ? ಭಾರತೀಯ ಮನದಲ್ಲಿ, ಧರ್ಮ- ಸಂಸ್ಕೃತಿ- ರಾಜಪರಂಪರೆಗಳಲ್ಲಿ ಆನೆಗೆ ಇರುವ ಸ್ನೇಹಾದರಗಳೂ ಪ್ರಾಶಸ್ತ್ಯವೂ ಅಂತಹದ್ದು! […]