ಕೃಷಿಭೂಮಿ ಸದ್ಬಳಕೆಯಾಗಲಿ -ಷರತ್ತುಗಳೊಂದಿಗೆ ಸುಧಾರಣೆ ಜಾರಿ ಅವಶ್ಯ

ಕರ್ನಾಟಕ ಭೂಸುಧಾರಣಾ ಕಾಯಿದೆ-1974ನ್ನು ತಿದ್ದುಪಡಿ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು, ಸಂಪುಟ ಸಭೆ ಈ ಕುರಿತು ತೀರ್ಮಾನ ಕೈಗೊಂಡಿದೆ. ಇದರ ಮುಖ್ಯಾಂಶವೆಂದರೆ, ಕೃಷಿಕರಲ್ಲದವರೂ ಇನ್ನು ಮುಂದೆ ಕೃಷಿ ಭೂಮಿ ಖರೀದಿಸಬಹುದು. ಇದುವರೆಗೆ ಕೃಷಿಕ ಕುಟುಂಬದ ಹಿನ್ನೆಲೆ ಹೊಂದಿದವರು ಮಾತ್ರ ಕೃಷಿಭೂಮಿ ಖರೀದಿಸುವ ಅವಕಾಶವಿತ್ತು. ಈಗ ಕೃಷಿಯಲ್ಲಿ ಆಸಕ್ತಿ ಹೊಂದಿರುವ, ಆದರೆ ಕೃಷಿಭೂಮಿ ದಾಖಲೆಗಳನ್ನು ಹೊಂದಿಲ್ಲದವರು ಕೂಡ ಜಮೀನು ಖರೀದಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಮತ್ತು ಉದ್ಯಮಿಗಳೂ ಖರೀದಿಸಬಹುದು ಎಂಬುದು ಈ ಕಾಯಿದೆಯ ಅತ್ಯಂತ ಧನಾತ್ಮಕ ಅಂಶ. ಯಾಕೆಂದರೆ, […]

Read More

ಆತ್ಮನಿರ್ಭರತೆಯ ದಾರಿ ದೀರ್ಘವಿದೆ!

– ವಿನುತಾ ಗೌಡ. ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದರು ಆತ್ಮನಿರ್ಭರತೆಯ ಬಗೆಗಿನ ವೆಬಿನಾರ್‌ ಒಂದರಲ್ಲಿ ಮಾತನಾಡುತ್ತಾ ಅಪರೂಪದ ಸಂಗತಿಯೊಂದನ್ನು ಪ್ರಸ್ಥಾಪಿಸಿದ್ದರು. ಕೃಷಿ, ಕೈಗಾರಿಕೆ, ಉದ್ದಿಮೆ ಮತ್ತು ರಕ್ಷ ಣಾ ಬಲಗಳಲ್ಲಿ ಆತ್ಮನಿರ್ಭರತೆಯ ಅನುಷ್ಠಾನ ಹೇಗೆ, ಎತ್ತ ಮುಂತಾದ ಚರ್ಚೆಗಳ ನಡುವೆಯೂ ಆತ್ಮನಿರ್ಭರಕ್ಕೆ ಒಂದು ವಿಭಿನ್ನ ದೃಷ್ಟಿಕೋನವಿದೆ ಎಂಬುದನ್ನು ಅವರು ತಿಳಿಸಿದ್ದರು. ಸ್ವಾವಲಂಬನೆ ಮತ್ತು ಆತ್ಮನಿರ್ಭರ ಪದಗಳಿಗಿರುವ ತೀರಾ ಹತ್ತಿರದ ಸಂಬಂಧಗಳನ್ನು ವಿವರಿಸುತ್ತಾ, ‘‘ಆತ್ಮನಿರ್ಭರ- ಸ್ವಾವಲಂಬನೆ ಎನ್ನುವುದು ಕೇವಲ ಆರ್ಥಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಅದಕ್ಕೂ […]

Read More

ಬೆಲೆ ಏರಿಕೆ ಎರಡಲಗಿನ ಕತ್ತಿ – ರೈತರಿಗೂ ಗ್ರಾಹಕರಿಗೂ ಭರವಸೆ ತುಂಬಬೇಕು

ಲಾಕ್‌ಡೌನ್‌ ಬಹುತೇಕ ತೆರವಾಗಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳಲು ಕಾತರಿಸುತ್ತಿದೆ. ಸಹಜ ಸ್ಥಿತಿಗೆ ಬರಬೇಕೆಂದರೆ ಬದುಕಲು ಅಗತ್ಯವಾದ ದಿನಸಿ ವಸ್ತುಗಳ ಬೆಲೆ ಸಹಜ ಸ್ವರೂಪಕ್ಕೆ ಬರಬೇಕು. ಹಾಗೆಯೇ ರೈತರ ಉತ್ಪನ್ನಗಳು ಲಾಭಕರ ಬೆಲೆಗೆ ಮಾರಾಟವಾಗಬೇಕು, ಅವರೂ ಕೂಡ ಅಗತ್ಯ ವಸ್ತುಗಳಿಗೆ ವೆಚ್ಚ ಮಾಡಲು ಸಾಧ್ಯವಾಗಬೇಕು. ಆದರೆ ಲಾಕ್‌ಡೌನ್‌ ತೆರವಾಗುತ್ತಿರುವಂತೆ ಮಾರುಕಟ್ಟೆಯಲ್ಲಿ ಕಾಣಿಸುತ್ತಿರುವ ಸ್ಥಿತಿ ಭಿನ್ನವಾಗಿದೆ.  ಸಿಮೆಂಟ್, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳು, ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ಬೆಲೆಗಳು ಹೆಚ್ಚಿವೆ. ಕಟ್ಟಡ ಸಾಮಗ್ರಿಗಳ ಬೆಲೆ ಬಹುತೇಕ ದುಪ್ಪಟ್ಟು […]

Read More

ಇಲ್ಲಿ ನೆಮ್ಮದಿ, ಅಲ್ಲಿ ದುಡ್ಡು: ಮುಂದೇನು?

– ಕಾರ್ಮಿಕರ ಪುನರ್ ವಲಸೆ ಅನಿವಾರ್ಯ – ಕಾರ್ಮಿಕರ ಪುನರ್ ವಲಸೆ ಅನಿವಾರ್ಯ – ಗ್ರಾಮೀಣ ಉದ್ಯೋಗದ ಘೋಷಣೆ ಬೇರೆ, ವಾಸ್ತವವೇ ಬೇರೆ! ರಾಜ್ಯದಲ್ಲಿ ಲಕ್ಷಾಂತರ ಕಾರ್ಮಿಕರು ತವರಿನತ್ತ ವಲಸೆ ಹೋಗಿದ್ದಾರೆ. ಇವರ ಮಹಾ ವಲಸೆಯಿಂದ ಕೈಗಾರಿಕೆ, ಉದ್ಯಮ, ಮೂಲಸೌಕರ್ಯ ಕಾಮಗಾರಿ ವಲಯಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಗ್ರಾಮೀಣ ಕರ್ನಾಟಕದಲ್ಲೂ ಸಾಮಾಜಿಕ ಏರುಪೇರು ಉಂಟಾಗಲಿದೆ. ಈ ಕುರಿತ ಸಮಗ್ರ ಅವಲೋಕನ. ನಗರಗಳಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಹಳ್ಳಿಗಳಲ್ಲಿ ಉಳಿದರೆ ಪ್ರೀತಿ-ವಿಶ್ವಾಸದಿಂದ ಮನಸ್ಸು ತುಂಬಬಹುದೇ ಹೊರತು ಹೊಟ್ಟೆ ತುಂಬುವುದಿಲ್ಲ ಸರ್. ಕಲಿತಿರುವ ಕೌಶಲಕ್ಕೆ […]

Read More

ರೈತರಿಗೆ ಕೊಟ್ಟ ಭರವಸೆ ಈಡೇರಿಸಿ – ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಲಿ

ಲಾಕ್‌ಡೌನ್‌ನಿಂದ ಕೃಷಿಕರಿಗೆ ಸಂಕಷ್ಟವಾದ ಸಂದರ್ಭದಲ್ಲಿ, ಕೃಷಿಕರಿಗೆ ಕೃಷಿ ಚಟುವಟಿಕೆಗಳಿಗೆ ಹಾಗೂ ತಾವು ಬೆಳೆದ ಬೆಳೆಗಳ ಮಾರಾಟಕ್ಕೆ ಮುಕ್ತ ವಾತಾವರಣ ಕಲ್ಪಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಈ ಭರವಸೆ ಸಕಾಲದಲ್ಲಿ ಈಡೇರದೆ ಇರುವುದರಿಂದ ರೈತರು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಮತ್ತು ಮಾರಾಟ ವ್ಯವಸ್ಥೆ ಸಿಗದೆ ಕೃಷಿಕರ ಸಂಕಟ ಮುಂದುವರಿದಿದೆ. ಸಾವಿರಾರು ರೈತರು ಸರಿಯಾದ ಬೆಲೆ ಇಲ್ಲ ಎಂಬ ಕಾರಣದಿಂದ ನಿಂಬೆ ಹಣ್ಣು, ಕಲ್ಲಂಗಡಿ ಸೇರಿದಂತೆ ಹಲವು ಬೆಳೆಗಳನ್ನು ಗದ್ದೆಯಲ್ಲೇ ಬಿಟ್ಟಿದ್ದಾರೆ. ಈರುಳ್ಳಿ […]

Read More

ರೈತರಿಗೆ ಟೋಲ್‌ ಹೊರೆ: ಕೃಷಿ ಉತ್ಪನ್ನ ಸಾಗಣೆಗೆ ಸದ್ಯ ಸುಂಕ ವಿಧಿಸದಂತೆ ರೈತರ ಮೊರೆ

– ಆರ್‌. ತುಳಸಿಕುಮಾರ್‌, ಬೆಂಗಳೂರು / ಸುನೀಲ್‌ ಕುಮಾರ್,‌ ಕೋಲಾರ. ವಿಕ ವಿಶೇಷ: ದರ ಕುಸಿತದಿಂದ ಕಂಗಾಲಾಗಿರುವ ರೈತರೀಗ ಟೋಲ್‌ ಹೊಡೆತದಿಂದ ಕಂಗೆಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ವಾಹನಗಳ ಅಭಾವವಿರುವುದರ ನಡುವೆಯೇ, ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಪಾವತಿಸುವ ಹೊರೆ ಬಿದ್ದಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಯಾಗದಂತೆ ಕೇಂದ್ರ ಸರಕಾರವು ಟೋಲ್‌ ಸಂಗ್ರಹಕ್ಕೆ ತಾತ್ಕಾಲಿಕ ತಡೆಯೊಡ್ಡಿತ್ತು. ಇದು ರೈತರಿಗೆ ಅನುಕೂಲ ಮಾಡಿಕೊಟ್ಟಿತ್ತು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಮತ್ತಿತರ […]

Read More

ಕಠಿಣ ಕ್ರಮಗಳು ಅಗತ್ಯ – ಆದಾಯ ಹೆಚ್ಚಿಸಲು ಪರ್ಯಾಯ ಮಾರ್ಗ ಅಗತ್ಯ

ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಹೇರಲಾಗಿರುವ ‘ಲಾಕ್ಡೌನ್’ ನಿಂದಾಗಿ ಆರ್ಥಿಕ ಚಟುವಟಿಕೆಗಳೆಲ್ಲವೂ ಸ್ಥಗಿತವಾಗಿವೆ. ಪರಿಣಾಮ ಸರಕಾರದ ಬೊಕ್ಕಸವೂ ಬರಿದಾಗುತ್ತಿದೆ. ಇದು ಅನಿರೀಕ್ಷಿತವೇನಲ್ಲ. ಆದರೆ, ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳು ಯಾವ ರೀತಿ ಪರಿಣಾಮ ಬೀರಲಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಖಜಾನೆ ಖಾಲಿಯಾಗುತ್ತಿದೆ ಎಂದು ಹೇಳುತ್ತ ಕೂರುವುದರಲ್ಲೂ ಯಾವುದೇ ಅರ್ಥವಿಲ್ಲ. ದೀರ್ಘಕಾಲೀನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತ ನಿರ್ಧಾರಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಗೊಳ್ಳಬೇಕು ಮತ್ತು ಅವುಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜನರ […]

Read More

ರೈತರೇ ನಿಮಗೆ ನ್ಯಾಯಸಿಗಬೇಕು ಆದರೆ ಈ ಸಂದರ್ಭದಲ್ಲಿ‌ ತುಸು ತಾಳ್ಮೆಯೂ ಬೇಕು!

ರೈತರನ್ನು ಕಾಡದಿರಲಿ ಲಾಕ್‌ಡೌನ್‌: ಬೆಲೆ ರೈತನಿಗೆ, ಬೆಳೆ ಗ್ರಾಹಕನಿಗೆ ತಲುಪಲಿ ದೇಶಾದ್ಯಂತ ಕೊರೊನಾ ಲಾಕ್‌ಡೌನ್‌ನಿಂದ ಕೃಷಿಕರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರಲು ಪಟ್ಟಣಗಳನ್ನು, ಮಾರುಕಟ್ಟೆಗಳನ್ನು ಅವಲಂಬಿಸಿದ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಹೆಚ್ಚಿನ ಸಂಕಟ ಅನುಭವಿಸುತ್ತಿರುವವರು ಹಣ್ಣುಗಳು ಹಾಗೂ ತರಕಾರಿಯಂಥ ಬೇಗನೆ ಹಾಳಾಗಬಲ್ಲ ಪದಾರ್ಥಗಳನ್ನು ಬೆಳೆದ ತೋಟಗಾರಿಕೆ ರೈತರು. ಕಲ್ಲಂಗಡಿ ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು, ಕೆಲವು ರೈತರು ಕಲ್ಲಂಗಡಿ, ದ್ರಾಕ್ಷಿ , ಟೊಮೇಟೊ ಮುಂತಾದ ಬೆಳೆಗಳನ್ನು ರಸ್ತೆಯಲ್ಲಿ ಸುರಿದು ಹೋಗಿರುವುದು ಪರಿಸ್ಥಿತಿಯ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top