ಕೊರೊನಾ ವೈರಾಣು ಹಾಗೂ ಅದನ್ನು ತಡೆಯಲು ಜಗತ್ತಿನಾದ್ಯಂತ ಹೇರಲಾದ ಲಾಕ್‌ಡೌನ್‌ಗಳ ಪರಿಣಾಮ ಕೋಟ್ಯಂತರ ಮಕ್ಕಳು ವಿಚಿತ್ರ ರೀತಿಯ ಬವಣೆ ಅನುಭವಿಸುತ್ತಿದ್ದಾರೆ. ಎಷ್ಟು ಮಕ್ಕಳು, ಏನೇನು ಸಂಕಷ್ಟ ಅನುಭವಿಸುತ್ತಿದ್ದಾರೆ? ಒಂದು ನೋಟ ಇಲ್ಲಿದೆ. ಆಟ ಹಾಗೂ ಪಾಠಗಳಲ್ಲಿ ಮಗ್ನರಾಗಿರಬೇಕಿದ್ದ ಮಕ್ಕಳು ಸುಮ್ಮನೆ ಮನೆಗಳಲ್ಲಿ ಬಂಧಿಯಾಗಿರುವುದನ್ನು ನೋಡುವುದೇ ಒಂದು ಹಿಂಸೆ. ಕೊರೊನಾ ವೈರಸ್ ತಡೆಯಲು ತೆಗೆದುಕೊಳ್ಳಲಾದ ಕ್ರಮಗಳ ಪರಿಣಾಮ ಪ್ರಪಂಚದಾದ್ಯಂತ ಸುಮಾರು 160 ಕೋಟಿ ಮಕ್ಕಳು ಶಾಲೆಯಿಂದ ಆಚೆ ಬಿದ್ದಿದ್ದಾರೆ. ಇವರಲ್ಲಿ ಕೆಲವೇ ಮಕ್ಕಳು ಮಾತ್ರ ಮನೆಯಲ್ಲೂ ಅಧ್ಯಯನ ಮುಂದುವರಿಸಬಹುದಾದ […]