ಯಾರೇ ಭೇಟಿ ಕೊಟ್ಟು ವಿಚಾರಿಸಿದರೂ ಯೋಧ ಹನುಮಂತಪ್ಪ ಬದುಕಿ ಬರುವುದು ಕಷ್ಟದ ಮಾತೇ ಆಗಿತ್ತು. ಆದರೆ ಹಾಗೆ ಮಾಡಿದ್ದರೆ ದೇಶ ಕಾಯುವ ಸೈನಿಕ ಸಮುದಾಯದಲ್ಲಿ ಕನಿಷ್ಠ ವಿಶ್ವಾಸ ತುಂಬುವ ಕೆಲಸ ಮಾಡಿದಂತಾಗುತ್ತಿತ್ತು. ರಾಹುಲ್ರಂಥ ನಾಯಕರು ಅದನ್ನು ಮಾಡಲಿಲ್ಲ ಎಂಬುದೇ ಬೇಸರದ ಸಂಗತಿ. ಯೋಧರು, ಸೇನೆ, ಸಮರ್ಪಣೆ ಅಂದರೇನೆ ಹಾಗೆ. ಅದಕ್ಕೆ ಜಾತಿ, ಧರ್ಮ, ಪ್ರದೇಶದ ಎಲ್ಲೆಗಳು ಇರುವುದಿಲ್ಲ. ಅದಿಲ್ಲ ಅಂದಿದ್ದರೆ ಎಲ್ಲಿಯ ಹುಬ್ಬಳ್ಳಿಯ ಬೆಟದೂರು? ಎಲ್ಲಿಯ ಸಿಯಾಚಿನ್? ಎಲ್ಲಿಯ ದೆಹಲಿ? ಹಿಮಗಡ್ಡೆಯ ಅಡಿಯಿಂದ ಎದ್ದುಬಂದು ಆಸ್ಪತ್ರೆ ಸೇರಿದ […]