ಒಂದುವೇಳೆ ಪೂಜೆ ಮತ್ತು ಪ್ರಾರ್ಥನೆಯನ್ನೂ ಇಂಗ್ಲಿಷ್ನಲ್ಲಿ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋದರೆ ಆಫ್ರಿಕಾ ಖಂಡದ ದೇಶಗಳಲ್ಲಾದಂತೆ ಭಾರತದಲ್ಲೂ ಸ್ಥಳೀಯ ಭಾಷೆಗಳು ನಾಶಹೊಂದುವುದರಲ್ಲಿ ಅನುಮಾನ ಬೇಡ! ಕನ್ನಡ ಭಾಷೆ ಈಗ ಎದುರಿಸುತ್ತಿರುವ ಸಂಕಷ್ಟ, ಸವಾಲುಗಳಿಗೆ ಸಂಬಂಧಿಸಿ ನಾವು ಕೇವಲ ಕರ್ನಾಟಕವನ್ನಷ್ಟೇ ದೃಷ್ಟಿಯಲ್ಲಿರಿಸಿಕೊಂಡು ಆಲೋಚನೆ ಮಾಡಿದರೆ ಸಾಕೇ? ಸ್ಥಳೀಯ ಭಾಷೆಗಳ ಅವಸಾನ ಎಂಬುದು ಈಗ ಜಾಗತಿಕ ಸಮಸ್ಯೆ. ಈ ಮಾತು ಸರಿಯಾಗಿ ಅರ್ಥವಾಗಬೇಕಾದರೆ ನಾವು ಯೂರೋಪ್, ಆಫ್ರಿಕಾ ಖಂಡದ ದೇಶಗಳ ಜೊತೆಗೆ ಏಷ್ಯಾದ ಕೆಲ ದೇಶಗಳ ಸ್ಥಳೀಯ ಭಾಷೆಗಳ ಅವಸಾನದ […]