ಕಳೆದ ಐವತ್ತು ವರ್ಷಗಳ ಈಚೆಗೆ ಪ್ರಪಂಚದಲ್ಲಿ ಸುಮಾರು ಏಳು ಸಾವಿರ ಭಾಷೆಗಳು ಅವುಗಳ ಬಳಕೆ ಕಡಿಮೆಯಾಗಿ ಅವಸಾನಗೊಂಡಿವೆ ಇನ್ನು ಅಷ್ಟೇ ಪ್ರಮಾಣದಲ್ಲಿ ಸ್ಥಳಿಯ ಭಾಷೆಗಳು ಆಗಲೋಈಗಲೋ ಅದೇ ಸ್ಥಿತಿಯನ್ನು ತಲುಪುವುದರಲ್ಲಿವೆ. ಖುಷಿಯ ಬೆನ್ನಲ್ಲೇ ಕಳವಳವೂ ಆವರಿಸಿಕೊಳ್ಳುವಂಥ ವಿಷಯ ಇದು. ನಮ್ಮಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುವ ಕೈಗಳಿಗೆ ಮತ್ತು ಮನಸ್ಸುಗಳಿಗೇನೂ ಕಡಿಮೆಯಿಲ್ಲ. ಸಾಲುಸಾಲು ಕನ್ನಡ ಸಂಘಗಳು, ಸಂಘಟನೆಗಳ ಹೆಸರಿನ ಮೆರವಣಿಗೆ ಕಣ್ಣಮುಂದೆ ಹೊಂಟಾಗ ಎಷ್ಟೊಂದು ಸಂತಸ, ಸಮಾಧಾನವಾಗುತ್ತದೆ ನೋಡಿ. ಕನ್ನಡ ಸಾರಸ್ವತ ಲೋಕದ ಆಶಯಗಳ ಸಾಕ್ಷಿಪ್ರಜ್ಞೆಯಂತಿರುವ ಕನ್ನಡ ಸಾಹಿತ್ಯ […]