ಲೋಕಾಯುಕ್ತ ಮಾತ್ರವಲ್ಲ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಎಲ್ಲರೂ ತಪ್ಪು ಮಾಡಿ ದಕ್ಕಿಸಿಕೊಳ್ಳುವುದು ಪಕ್ಕಕ್ಕಿರಲಿ, ಅಪವಾದ, ಅನುಮಾನಗಳಿಗೆ ಆಸ್ಪದವೇ ಇರದಂತೆ ನಡೆದುಕೊಳ್ಳುವುದು ಹೊಣೆಗಾರಿಕೆಯ ಲಕ್ಷಣ. ಜವಾಬ್ದಾರಿ ಸ್ಥಾನಗಳಲ್ಲಿರುವವರಿಂದ ಜನ ಅದನ್ನು ನಿರೀಕ್ಷಿಸಬಹುದೇ? ನಮ್ಮ ಲೋಕಾಯುಕ್ತದ ಅಣ್ಣ ಲೋಕಪಾಲ ಅನ್ನುವುದು ಈಗಲೂ ಕಣ್ಣಿಗೆ ಕಾಣಿಸದ ‘ಗುಡ್ಡದ ಭೂತ’ವೆ. ಹೀಗೆ ಹೇಳುವುದಕ್ಕೂ ಕಾರಣವಿದೆ. ಲೋಕಪಾಲ ವ್ಯವಸ್ಥೆಯೊಂದು ಜಾರಿಗೆ ಬಂದರೆ ಈ ದೇಶದಲ್ಲಿ ಎಲ್ಲವೂ ಸರಿಯಾಗಿಬಿಡುತ್ತದೆ ಎಂಬ ಹುಸಿನಂಬಿಕೆಯೊಂದು ಬೆಳೆದುಬಿಟ್ಟಿದೆ. ಅದೊಂದಾದರೆ ಸಾಕು, ವ್ಯವಸ್ಥೆಯಲ್ಲಿ […]