ಚುನಾವಣಾ ಆಯೋಗಕ್ಕೆ ಖದರು ತಂದ ಖಡಕ್ ಶೇಷನ್

ಓರ್ವ ಟಿ.ಎನ್. ಶೇಷನ್ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಇಷ್ಟು ಅಗಾಧ ಬದಲಾವಣೆ ಮಾಡಬಲ್ಲರಾದರೆ ನಾವು ಕರ್ನಾಟಕದ ಆರು ಕೋಟಿ ಜನರು/ದೇಶದ ನೂರಿಪ್ಪತ್ತೈದು ಕೋಟಿ ಜನರು ಇನ್ನೇನೆಲ್ಲ ಮಾಡಬಹುದು! ಆಲೋಚಿಸುವುದು ಬೇಡವೇ? ಕರ್ನಾಟಕ ವಿಧಾನಸಭಾ ಚುನಾವಣೆ ಇದಕ್ಕೆ ವೇದಿಕೆಯಾಗಲಿ. ಚುನಾವಣಾ ಆಯೋಗಕ್ಕೆ ಎಂಥ ತಾಕತ್ತಿದೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಮಾಜಿ ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ತಮ್ಮ ಕೊನೇ ದಿನಗಳನ್ನು ಎಲ್ಲಿ ಮತ್ತು ಹೇಗೆ ಕಳೆಯುತ್ತಿದ್ದಾರೆ ಎಂಬುದರ ಕುರಿತು ದಿನಂಪ್ರತಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಶೇಷನ್ ಮಾತ್ರವಲ್ಲ, ಒಂದುಕಾಲಕ್ಕೆ […]

Read More

ಹಿಂದುತ್ವವಲ್ಲ ದ್ವಂದ್ವತ್ವದತ್ತ ಕಾಂಗ್ರೆಸ್ ರಾಗಾ!

ನಟ ಪ್ರಕಾಶ್ ರೈ ಮುಂದಿಡುತ್ತಿರುವ ವಾದಗಳ ಕುರಿತು ತದನಂತರದಲ್ಲಿ ಚರ್ಚೆ ಮಾಡೋಣ. ಅದಕ್ಕೂ ಮೊದಲು ಗಮನಿಸಲೇಬೇಕಾದ ಕೆಲ ಸಂಗತಿಗಳಿವೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗ್ರಪ್ರಾಶಸ್ತ್ಯ ಇರುವುದು ನಿಜ. ಆದರೆ ಅದರ ಅರ್ಥ ಯಾರು ಬೇಕಾದರೂ, ಯಾರ ವಿರುದ್ಧ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ಅಂತಲ್ಲ. ಬಾಯಿಗೆ ಬಂದಂತೆ ಮಾತನಾಡಿದರೆ ಟಿವಿ ಚಾನೆಲ್​ಗಳಿಗೆ ಆಹಾರ ಆಗಬಹುದೇ ಹೊರತು ಆಡಿದವನ ವ್ಯಕ್ತಿತ್ವವೇನೂ ಅರೆಕ್ಷಣದಲ್ಲಿ ಹಿಮಾಲಯದ ಎತ್ತರಕ್ಕೆ ಏರುವುದಿಲ್ಲ. ಇತಿಹಾಸ, ಪರಂಪರೆ ಬದಲಾಗಿಹೋಗುವುದಿಲ್ಲ. ಜನರು ನಂಬಿ ಅನುಸರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು […]

Read More

ಕಾಂಗ್ರೆಸ್ ಗೆ ಹೊಡೆತ ನೀಡಿದ ಮೋದಿ ಸರ್ಕಾರದ ಕಠಿಣ ನಿರ್ಧಾರಗಳು

ಬಹುನಿರೀಕ್ಷಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಿಮಾಚಲದಲ್ಲಿ ಗರಿಷ್ಠ ಸ್ಥಾನ ಗಳಿಸಿ, ಗುಜರಾತಿನಲ್ಲಿ ಪ್ರಯಾಸ ಪಟ್ಟು ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಇಲ್ಲಿ ಆರಂಭವಾಗುವ ಮೊದಲ ಲೆಕ್ಕಾಚಾರ ಈ ಜಿದ್ದಾಜಿದ್ದಿನಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದು.   ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನಗಳನ್ನು ಗೆದ್ದು ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದು ನಿಜ. ಆದರೂ ಶತಾಯಗತಾಯ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ತನ್ನೆಲ್ಲ ಪ್ರತಿಷ್ಠೆಯನ್ನು ಪಣಕ್ಕಿಟ್ಟು, ತರಹೇವಾರಿ ಹೊಂದಾಣಿಕೆಗಳನ್ನು ಮಾಡಿಕೊಂಡು ಸೆಣೆಸಿದರೂ ಅಧಿಕಾರದ ಕನಸು ಕೈಗೂಡಲಿಲ್ಲ ಎಂಬುದೂ […]

Read More

ರಾಜಕಾರಣದಲ್ಲೂ ಟ್ರೆಂಡ್ ಸೆಟಿಂಗ್ ಸಾಧ್ಯವೇ, ಅದ್ಹೇಗೆ?

ಗುಜರಾತ್ ಇರಲಿ, ಹಿಮಾಚಲವಿರಲಿ ಅಥವಾ ಕರ್ನಾಟಕವೇ ಇರಲಿ, ರಾಷ್ಟ್ರ ರಾಜಕಾರಣದ ಟ್ರೆಂಡ್ ಬಿಟ್ಟು ಫಲಿತಾಂಶ ಬೇರೆ ಆಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಸಮರ್ಥ ಪರ್ಯಾಯವನ್ನು ಬಿಂಬಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅದು ಮುಂದುವರಿಯುತ್ತಲೇ ಇರುತ್ತದೆ.  ಕಳೆದೊಂದು ವರ್ಷದಿಂದ ಕಾಡುತ್ತಿದ್ದ ಗುಜರಾತ್ ಚುನಾವಣೆ ಎಂಬ ಗುಮ್ಮ ಕರಗಿ ಮೂವತ್ತಾರು ಗಂಟೆ ಕಳೆದಿದೆ. ಚುನಾವಣಾಪೂರ್ವ ಸಮೀಕ್ಷೆ, ಮತಗಟ್ಟೆ ಸಮೀಕ್ಷೆಗಳೆಂಬ ಅಬ್ಬರಗಳೂ ತಣ್ಣಗಾಗಿ ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗುವ ಖಚಿತ ಟ್ರೆಂಡ್​ನ ಧ್ಯಾನದಲ್ಲಿ ಎಲ್ಲರೂ ಮುಳುಗಿದ್ದಾರೆ. ಈ ಹೊತ್ತಿನಲ್ಲಿ ನಮ್ಮ ಮನದಲ್ಲಿ ಮೂಡಬಹುದಾದ ಆಲೋಚನೆಗಳೇನು […]

Read More

ಭಾರತದ ರಾಜಕಾರಣದ ದೆಸೆಯೇ ಹಾಗೆ!

ರಾಹುಲ್ ಗಾಂಧಿ ಬ್ರಾಹ್ಮಣರೋ, ಹಿಂದುವೋ, ಅಹಿಂದುವೋ, ರೋಮನ್ ಕ್ಯಾಥೋಲಿಕ್ ಕ್ರೖೆಸ್ತರೋ ಎಂಬ ಚರ್ಚೆ ಗೊತ್ತು. ಆದರೆ ಎಡಪಂಥೀಯ ವಿಚಾರಧಾರೆಯ ಜಾತ್ಯತೀತ ನಿಲುವಿನ ನೆಹರು ಇಂದಿರಾ ಪತಿ ಫಿರೋಜ್​ರಿಗೆ ಬ್ರಾಹ್ಮಣ್ಯದ ದೀಕ್ಷೆ ಕೊಟ್ಟಿದ್ದು ಗೊತ್ತೇ? ಇಲ್ಲಿ ಕೆಲವೊಮ್ಮೆ ವಿಷಯವೇ ಅಲ್ಲದ ವಿಷಯಗಳು ಮುಖ್ಯಭೂಮಿಕೆಗೆ ಬಂದು ಒಂದು ಸಾರ್ವತ್ರಿಕ ಚುನಾವಣೆಯ ದಿಕ್ಕು ಮತ್ತು ಭವಿಷ್ಯವನ್ನೇ ಬದಲಿಸಿಬಿಡುತ್ತವೆ. ಇದು ಇಂದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಿ. ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಅದೇ […]

Read More

ಅಮ್ಮನಿಂದ ಮಗನಿಗೆ ಹಸ್ತಾಂತರ, ನಂತರ…?

ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ದಿನಗಳು ಸಮೀಪಿಸುತ್ತಿವೆ. ಅವರ ಉತ್ತರಾಧಿಕಾರಿಯಾಗಿ ರಾಹುಲ್ ಗಾಂಧಿ ನೇಮಕ ಆಗುವುದೂ ನಿಚ್ಚಳವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇವೆರಡೂ ಘಟನೆಗಳು ಜರುಗಲು ಹೆಚ್ಚು ಕಾಲ ಹಿಡಿಯುವುದಿಲ್ಲ. ಸೋನಿಯಾ ನಿರ್ಗಮನ ಮತ್ತು ರಾಹುಲ್ ಆಗಮನ ಕ್ಷಣಗಳಿಗೆ ಬೆಂಗಳೂರಲ್ಲಿ ನಡೆಯುವ ಎಐಸಿಸಿ ಅಧಿವೇಶನವೇ ವೇದಿಕೆಯಾಗಲಿದೆ ಎಂಬುದು ಮತ್ತೊಂದು ವಿಶೇಷ. ಇದು ಕಾಕತಾಳೀಯವೋ ಏನೋ ಗೊತ್ತಿಲ್ಲ, ಸೋನಿಯಾ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೂ ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿತ್ತು. ಈಗ ಅವರು ನಿರ್ಗಮಿಸುವ […]

Read More

ಆಲೋಚನೆ, ಆಚರಣೆಯಲ್ಲಿ ಭ್ರಷ್ಟತೆಯೇ ತುಂಬಿರುವಾಗ…

ಪಿಒಕೆ ಗಡಿದಾಟಿ ಹೋಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ದಿಟ್ಟಕ್ರಮದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಮೆಚ್ಚುಗೆ ಮೂಡಿತ್ತು. ಇದೀಗ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ದಾಳಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇದು ವಿಪಕ್ಷಗಳವರ ನಿದ್ದೆಗಡಿಸಿದೆ ಎಂಬುದು ಸ್ಪಷ್ಟ. ಭ್ರಷ್ಟಾಚಾರ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಅದರ ಸ್ವರೂಪಗಳೂ ಹಲವು. ಆದರೆ ಕಾಲಾಂತರದಲ್ಲಿ ಅದು ಲಂಚಸ್ವೀಕಾರಕ್ಕೆ ಸೀಮಿತವಾಗಿಬಿಟ್ಟಿದೆ ಅಷ್ಟೆ. ವಾಸ್ತವದಲ್ಲಿ ಭ್ರಷ್ಟಾಚಾರ ಎನ್ನುವುದು ಮನುಷ್ಯನ ಮಾನಸಿಕತೆಗೆ […]

Read More

ಉರಿ ದಾಳಿಗೆ ಪ್ರತೀಕಾರ, ಭಾರತದ ರಾಜತಾಂತ್ರಿಕ ಚಮತ್ಕಾರ

ಪಾಕಿಸ್ತಾನ ಇನ್ನೆಂದೂ ಬುದ್ಧಿ ಕಲಿತು ತನ್ನ ತಪ್ಪನ್ನು ತಿದ್ದಿಕೊಳ್ಳಲು ಮನಸ್ಸು ಮಾಡುವುದಿಲ್ಲ ಎಂಬುದಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ದಾಳಿಯನ್ನೇ ಮಾಡಿಲ್ಲ, ಗಡಿಯಾಚೆಗಿನಿಂದ ಅಪ್ರಚೋದಿತವಾಗಿ ಗುಂಡಿನ ದಾಳಿಯನ್ನಷ್ಟೇ ಮಾಡಲಾಗಿದೆ. ನಮ್ಮ ಕಡೆ ಇಬ್ಬರೇ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂಬ ಆತ್ಮವಂಚನೆಯ, ಹೇಡಿತನದ ಹೇಳಿಕೆಯೇ ಸಾಕು! ಒಂದೇ ಮಾತಲ್ಲಿ ಹೇಳುವುದಾದರೆ ‘ಭಯೋತ್ಪಾದನೆ ಮತ್ತು ಮತಾಂಧತೆಯ ಉಪಟಳದ ವಿಚಾರದಲ್ಲಿ ಭಾರತ ಮಾತ್ರವಲ್ಲ, ಇಡೀ ಜಗತ್ತಿನ ದೇಶಗಳ ಸಹನೆಯ ಕಟ್ಟೆ ಒಡೆದಿತ್ತು, ಉಗ್ರವಾದಿಗಳನ್ನು ಸಾಕಿ ಸಲಹುತ್ತಲೇ ಬಂದ ಪಾಕಿಸ್ತಾನದ ಪಾಪದ ಕೊಡ […]

Read More

ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವ ದಾರಿ ಯಾವುದಯ್ಯ?

ಬಂಗಾಳದಲ್ಲಿ ನೂರಾರು ಕಾಂಗ್ರೆಸ್ಸಿಗರನ್ನು ಕೊಲೆ ಮಾಡಿದ ಕಮ್ಯುನಿಸ್ಟರು, ಮೇವು ಹಗರಣದ ಲಾಲೂ, 2-ಜಿ ಹಗರಣದ ಅಪಖ್ಯಾತಿಯ ಎ.ರಾಜಾ, ರಾಜೀವ್ ಹತ್ಯೆಯ ಕಳಂಕದ ಡಿಎಂಕೆ ಇಂಥವರ ಸಹವಾಸ, ಸ್ನೇಹಕ್ಕೆ ಕೈಚಾಚುವ ಕಾಂಗ್ರೆಸ್ಸನ್ನು ಆ ಭಗವಂತನೂ ಕಾಪಾಡಲಾರನೇನೋ! ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಬಹಳ ಅರ್ಥಪೂರ್ಣ ಅನಿಸಿತು. ಮೊದಲನೆಯದು ‘ಈ ಫಲಿತಾಂಶ ನಿರೀಕ್ಷಿತ’. ಎರಡನೆಯದು ‘ಇದರಿಂದ ಕರ್ನಾಟಕದ ಸರ್ಕಾರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗುವುದಿಲ್ಲ’. ಅವರು ಯೋಚನೆ ಮಾಡಿ ಮಾತನಾಡಿದರೋ ಅಥವಾ ತಕ್ಷಣಕ್ಕೆ ತೋಚಿದ್ದನ್ನು […]

Read More

ನಾಯಕರಾದವರು ಹೆಗಲ ಮೇಲಿನ ಹೊಣೆ ಮರೆತರೆ…

ಯಾರೇ ಭೇಟಿ ಕೊಟ್ಟು ವಿಚಾರಿಸಿದರೂ ಯೋಧ ಹನುಮಂತಪ್ಪ ಬದುಕಿ ಬರುವುದು ಕಷ್ಟದ ಮಾತೇ ಆಗಿತ್ತು. ಆದರೆ ಹಾಗೆ ಮಾಡಿದ್ದರೆ ದೇಶ ಕಾಯುವ ಸೈನಿಕ ಸಮುದಾಯದಲ್ಲಿ ಕನಿಷ್ಠ ವಿಶ್ವಾಸ ತುಂಬುವ ಕೆಲಸ ಮಾಡಿದಂತಾಗುತ್ತಿತ್ತು. ರಾಹುಲ್‌ರಂಥ ನಾಯಕರು ಅದನ್ನು ಮಾಡಲಿಲ್ಲ ಎಂಬುದೇ ಬೇಸರದ ಸಂಗತಿ. ಯೋಧರು, ಸೇನೆ, ಸಮರ್ಪಣೆ ಅಂದರೇನೆ ಹಾಗೆ. ಅದಕ್ಕೆ ಜಾತಿ, ಧರ್ಮ, ಪ್ರದೇಶದ ಎಲ್ಲೆಗಳು ಇರುವುದಿಲ್ಲ. ಅದಿಲ್ಲ ಅಂದಿದ್ದರೆ ಎಲ್ಲಿಯ ಹುಬ್ಬಳ್ಳಿಯ ಬೆಟದೂರು? ಎಲ್ಲಿಯ ಸಿಯಾಚಿನ್? ಎಲ್ಲಿಯ ದೆಹಲಿ? ಹಿಮಗಡ್ಡೆಯ ಅಡಿಯಿಂದ ಎದ್ದುಬಂದು ಆಸ್ಪತ್ರೆ ಸೇರಿದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top