ಕನ್ನಡಿಗರೇ ವೃತ್ತಿ ನೈಪುಣ್ಯ ಪ್ರದರ್ಶಿಸಿ

ರಾ.ನಂ. ಚಂದ್ರಶೇಖರ್.   ಹೊರ ರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ತಮ್ಮ ಊರುಗಳಿಗೆ ಮರಳಿದ್ದಾರೆ. ಕಾರ್ಖಾನೆಗಳು, ಕಟ್ಟಡ ನಿರ್ಮಾಣ, ಗ್ರಾನೈಟ್‌ ಉದ್ಯಮ ಸೇರಿ ನಿರ್ಮಾಣ ಕಾರ್ಯಗಳಲ್ಲಿ ಇವರ ಪಾಲು ದೊಡ್ಡದಾಗಿತ್ತು. ಜೊತೆಗೆ ಸೆಕ್ಯುರಿಟಿ, ಹೋಟೆಲ್‌, ಮಾಲ್‌ಗಳು ಸೇರಿದಂತೆ ಹಲವು ಕ್ಷೇತ್ರಗಳಿಗೂ ವ್ಯಾಪಿಸಿದ್ದರು. ಸಹಜವಾಗಿ ಈ ಎಲ್ಲ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಕಾಡಲಿದೆ. ಇಂತಹ ಪರಿಸ್ಥಿತಿ ಉದ್ಭವಿಸಿರುವುದು ಇದೇ ಮೊದಲಲ್ಲ. ಈ ಪರಿಸ್ಥಿತಿಯನ್ನು ರಾಜ್ಯ ಸರಕಾರ ಮತ್ತು ಕನ್ನಡಿಗರು ಸರಿಯಾಗಿ ಬಳಸಿಕೊಂಡರೆ ವರದಾನವಾಗಲಿದೆ. 1991ರಲ್ಲಿ ಪ್ರಕಟವಾದ ಕಾವೇರಿ […]

Read More

ದುರಂತಗಳ ಸರಣಿ ತಪ್ಪಲಿ – ಕಾರ್ಮಿಕರ ಬದುಕಿಗೆ ಬೇಕು ಮಾನವೀಯ ಸ್ಪರ್ಶ

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ರೈಲ್ವೆ ಹಳಿಯ ಹಾದಿ ಹಿಡಿದು ಕಾಲ್ನಡಿಗೆಯಲ್ಲಿ ತಮ್ಮೂರಿಗೆ ವಾಪಸ್ ಹೊರಟಿದ್ದ ವಲಸೆ ಕಾರ್ಮಿಕರಲ್ಲಿ 16 ಮಂದಿ, ರೈಲಿಗೆ ಸಿಕ್ಕಿ ಸತ್ತು ಹೋಗಿದ್ದಾರೆ. ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡ ಕಾರ್ಮಿಕರು ಔರಂಗಾಬಾದ್ ಜಿಲ್ಲೆಯ ಜಲ್ನಾದಿಂದ ತಮ್ಮ ತವರು ರಾಜ್ಯ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದರು. ನಡೆದು ದಣಿದು ರೈಲು ಹಳಿಗೆ ತಲೆ ಆನಿಸಿ ಮಲಗಿದ್ದವರು ರೈಲು ಹರಿದು ಸತ್ತಿದ್ದಾರೆ. ವಿಪರ್ಯಾಸ ಎಂದರೆ, ಇವರು ರಸ್ತೆಯ ಮೂಲಕ ನಡೆದು ಹೋದರೆ ಪೊಲೀಸರು ತಡೆಯುತ್ತಾರೆಂಬ ಭಯದಿಂದ ರೈಲು ಹಳಿಯಲ್ಲಿ […]

Read More

ಕೈಗಾರಿಕಾ ವಿಕೇಂದ್ರೀಕರಣವೇ ಮದ್ದು

16 ಕಾರ್ಮಿಕರ ಬದುಕು ರೈಲಿನಡಿ ಸಿಲುಕಿ ಅಪ್ಪಚ್ಚಿ – ಕಾಲ್ನಡಿಗೆಯಲ್ಲಿ ತವರಿಗೆ ಸಾಗುತ್ತಿದ್ದ ವಲಸಿಗರು ಔರಂಗಾಬಾದ್: ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಹತಾಶರಾಗಿ ಹೇಗಾದರೂ ಮಾಡಿ ತವರು ಸೇರಿಕೊಳ್ಳುವ ಪ್ರಯತ್ನವಾಗಿ ಕಾಲ್ನಡಿಗೆಯಲ್ಲಿ ಹೊರಟಿದ್ದ 16 ವಲಸೆ ಕಾರ್ಮಿಕರ ಬದುಕು ದಾರುಣ ಅಂತ್ಯ ಕಂಡಿದೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಜಲ್ನಾದಲ್ಲಿ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಮಧ್ಯಪ್ರದೇಶಕ್ಕೆ ಸಾಗುತ್ತಿದ್ದಾಗ ಗುರುವಾರ ರಾತ್ರಿ ಔರಂಗಾಬಾದ್‌ನ ಭುಸವಾಲ್‌ನ ಕಾರ್ಮಾಡ್ ಎಂಬಲ್ಲಿ ಸುಸ್ತಾಯಿತು ಎಂದು ರೈಲು ಹಳಿಗೆ ತಲೆಯಾನಿಸಿ ಮಲಗಿದ್ದರು. ಈ ವೇಳೆ ಬೆಳಗ್ಗೆ […]

Read More

ಗಡಿ ಮೀರಿದರೆ ಅವಘಡ

– ಲಾಕ್ ಸಡಿಲಿಕೆಯಿಂದ ಜಿಲ್ಲಾಡಳಿತಗಳಿಗೆ ಎದುರಾಗಿದೆ ಅಗ್ನಿ ಪರೀಕ್ಷೆ – ರಾಜ್ಯ, ಅಂತರ್ಜಿಲ್ಲಾ ಗಡಿ ಪ್ರವೇಶದ ಮೇಲೆ ಕಣ್ಣಿಡದಿದ್ರೆ ಡೇಂಜರ್ ವಿಕ ಬ್ಯೂರೊ ಬೆಂಗಳೂರು: ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಮೇ 4ರಿಂದ ಜನ ಮತ್ತು ವಾಹನ ಸಂಚಾರ ನಿರ್ಬಂಧ ಸಡಿಲಗೊಳ್ಳುವುದರಿಂದ ಜನರು ಸ್ವಲ್ಪ ನಿರಾಳರಾಗಬಹುದು. ಆದರೆ, ಇದರೊಂದಿಗೆ ಅಂತಾರಾಜ್ಯ ಮತ್ತು ಅಂತರ್ಜಿಲ್ಲಾ ಸಂಚಾರಕ್ಕೂ ಅವಕಾಶ ಸಿಗುವುದರಿಂದ ಸ್ವಲ್ಪವೇ ಮೈಮರೆತರೂ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಲಾಕ್‌ಡೌನ್‌ನ ಕಠಿಣ ನಿರ್ಬಂಧಗಳಿದ್ದ ಸಮಯದಲ್ಲೇ ಮಂಡ್ಯ ಜಿಲ್ಲೆಯೊಂದಕ್ಕೇ ಮಹಾರಾಷ್ಟ್ರದಿಂದ ಸಾವಿರಗಟ್ಟಲೆ […]

Read More

ಸಾಮೂಹಿಕ ಥಳಿತ, ಹತ್ಯೆ ನಿಲ್ಲಲಿ – ಪಾಲ್ಘರ್ ಘಟನೆಯ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡಚಿಂಚಲೆಯಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಕಾರು ಚಾಲಕನನ್ನು ಸಾಮೂಹಿಕವಾಗಿ ಥಳಿಸಿ, ಭೀಕರವಾಗಿ ಕೊಲೆ ಮಾಡಿದ ಘಟನೆ ಮತ್ತೆ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಘಟನೆ ಸಂಬಂಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿ, ಉನ್ನತ ತನಿಖೆಗೆ ಆದೇಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ […]

Read More

ಪಕ್ಷಗಳನ್ನು ಕಾಡುವ ಕಾಯಿಲೆಗೆ ಪರಿಹಾರ ಏನು ಎಂದರೆ…

ಈಗ ಬೇಕಿರುವುದು ಜಾತಿ, ಮತ, ಪಂಥವನ್ನು ಮೀರಿದ ಸ್ಮಾರ್ಟ್ ನಾಯಕತ್ವ ಮತ್ತು ‘ರೋಟಿ, ಕಪಡಾ ಔರ್ ಮಕಾನ್’ ಘೊಷಣೆಯನ್ನು ಯಥಾರ್ಥದಲ್ಲಿ ಜಾರಿಗೊಳಿಸುವ ಸಮಗ್ರ ವಿಕಾಸದ ರಾಜಕೀಯ ಸಿದ್ಧಾಂತ. ಸೆಕ್ಯುಲರ್ ಅಥವಾ ಕಮ್ಯೂನಲ್ವಾದದ ಚರ್ಚೆಗೆ ಈಗ ಎಲ್ಲಿಯ ಜಾಗ…  ಕೆಲವೊಮ್ಮೆ ನಿರೀಕ್ಷೆಗಳೆಲ್ಲ ತಲೆಕೆಳಗಾಗಿಬಿಡುತ್ತವೆ! ಈಗ ಸುಮಾರು ಹತ್ತು ಹನ್ನೆರಡು ದಿನಗಳ ಹಿಂದಿನ ಮಾತು. ಮಹಾರಾಷ್ಟ್ರದ ಹತ್ತು ಪಾಲಿಕೆಗಳಿಗೆ ನಡೆದ ಚುನಾವಣೆ ಫಲಿತಾಂಶ ಹೊರಬರಲು ಕ್ಷಣಗಣನೆ ಶುರುವಾಗಿತ್ತು. ಆ ವೇಳೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಮಾಧ್ಯಮದವರೊಂದಿಗೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter

[subscribe2 hide="unsubscribe"]
 

Back To Top