ಕೊರೊನೋತ್ತರ ಆರ್ಥಿಕ ಮೇಲಾಟದಲ್ಲಿ ನಾವೇ ವಿಜಯಿ

– ಸದ್ಗುರು ಶ್ರೀ ಜಗ್ಗೀ ವಾಸುದೇವ.  ಕೊರೊನಾ ವೈರಸ್ ಪರಿಸ್ಥಿತಿಯಿಂದ ಖಚಿತವಾಗಿ ಯಾವಾಗ ಹೊರಬರುತ್ತೇವೆಂದು ಹೇಳಲು ದುರದೃಷ್ಟವಷಾತ್ ನಮಗಿನ್ನೂ ಸಾಧ್ಯವಾಗಿಲ್ಲ. ಕೈಗಾರಿಕೆ ಮತ್ತು ವ್ಯಾಪಾರಗಳ ದೃಷ್ಟಿಯಲ್ಲಿ ನೋಡುವುದಾದರೆ, ಅದು ನಮ್ಮನ್ನು ಒಂದು ಸಂದಿಗ್ಧ ಸ್ಥಿತಿಗೆ ತಲುಪಿಸಿದೆ. ಜನರು, ಸಂಸ್ಥೆಗಳು, ಸಣ್ಣ ಮತ್ತು ದೊಡ್ಡ ವ್ಯಾಪಾರಗಳಿಗೆ ಹೊಡೆತ ಬಿದ್ದಿರುವುದರಲ್ಲಿ ಸಂಶಯವಿಲ್ಲ ಮತ್ತು ಹತ್ತಿರದ ಭವಿಷ್ಯದಲ್ಲಿ, ಅತೀವ ಸಂಕಟಗಳು ಕಾದಿವೆ. ಅನೇಕ ವ್ಯಾಪಾರೋದ್ಯಮಗಳು ಮತ್ತೊಮ್ಮೆ ಮೊದಲಿನಿಂದ ಪ್ರಾರಂಭಿಸಬೇಕು. ಅವು ಹೇಗೆ ಕಾರ್ಯಾಚರಿಸಬೇಕು ಎನ್ನುವುದನ್ನು ಮರುಪರಿಶೀಲಿಸಬೇಕಾಗಿದೆ. ಮೊದಲು ಹೇಗೆ ಕೆಲಸ ಮಾಡುತ್ತಿದ್ದವೋ […]

Read More

ಉತ್ತರ ಭಾರತದಲ್ಲಿ ಈಗ ಮಿಡತೆ ಮಾರುತ – ನಿಯಂತ್ರಣಕ್ಕೆ ಸಹಕರಿಸದ ಪಾಕಿಸ್ತಾನ

ಭಾರತದ ಮೂರು ರಾಜ್ಯಗಳಲ್ಲಿ ಮಿಡತೆಗಳ ದಾಳಿ ಭಾರಿ ಹಾವಳಿ ಎಬ್ಬಿಸಿದೆ. ಚಂಡಮಾರುತದಂತೆ ಬೀಸಿ ಬರುವ ಮಿಡತೆಗಳು ಕ್ಷಣಾರ್ಧದಲ್ಲಿ ಬೆಳೆದು ನಿಂತ ಬೆಳೆಯನ್ನು ಖಾಲಿ ಮಾಡುತ್ತಿವೆ. ಇವು ಎಲ್ಲಿಂದ ಬಂದವು? ಇವುಗಳಿಂದ ಏನು ನಷ್ಟ? ಒಂದು ಚಿತ್ರಣ ಇಲ್ಲಿದೆ. ರಾಜಸ್ಥಾನದಲ್ಲಿ ಮಿಡತೆಗಳು ಬಿರುಗಾಳಿಯಂತೆ ದಾಳಿ ಮಾಡಿವೆ. ಈ ಬಾರಿ ಗ್ರಾಮೀಣ ಪ್ರದೇಶದ ಹೊಲಗಳನ್ನೆಲ್ಲ ಮುಕ್ಕಿ ಮುಗಿಸಿ, ರಾಜಧಾನಿ ಜೈಪುರಕ್ಕೂ ದಾಳಿ ಮಾಡಿದ್ದು, ವಸತಿ ಪ್ರದೇಶಗಳಲ್ಲಿ ದೂಳಿನ ಮೋಡಗಳಂತೆ ಗುಂಪಾಗಿ ನೆರೆದಿರುವ ಚಿತ್ರಗಳು, ವಿಡಿಯೋಗಳನ್ನು ಅಲ್ಲಿನ ನಿವಾಸಿಗಳು ಹಂಚಿಕೊಳ್ಳುತ್ತಿದ್ದಾರೆ. ಅಕ್ಕಪಕ್ಕದ […]

Read More

ಅಮೆರಿಕ ಚೀನಾ ಶೀತಲ ಸಮರ ಆರಂಭವೇ?

ಕಳೆದ ಶತಮಾನದ ಕೊನೆಯಲ್ಲಿ, ಸುಮಾರು ಐವತ್ತು ವರ್ಷಗಳ ಕಾಲ ಜಗತ್ತು ಅಮೆರಿಕ- ಸೋವಿಯತ್‌ ರಷ್ಯದ ಶೀತಲ ಸಮರದಿಂದ ಬಳಲಿತ್ತು. ಈಗ ಮತ್ತೊಮ್ಮೆ ಚೀನಾ ಹಾಗೂ ಅಮೆರಿಕದ ನಡುವೆ ತಿಕ್ಕಾಟ ಉಲ್ಬಣಕ್ಕೆ ಹೋಗುತ್ತಿದ್ದು, ಇನ್ನೊಂದು ಶೀತಲ ಸಮರ ಆರಂಭವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಶೀತಲ ಸಮರ ಅಂದರೇನು? ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ, ಅಂದರೆ ಸುಮಾರು 1947ರಲ್ಲಿ ಎರಡನೇ ಮಹಾಯುದ್ಧ ನಿಂತ ಬಳಿಕ, ಅಮೆರಿಕ ಹಾಗೂ ಸೋವಿಯತ್‌ ರಷ್ಯಗಳ ನಡುವೆ ರಾಜಕೀಯ- ಆರ್ಥಿಕ ತಿಕ್ಕಾಟ ಆರಂಭವಾಯಿತು. ಮಹಾಯುದ್ಧದ ವೇಳೆ […]

Read More

ಕೊರೊನಾ ಕಾಲದ ರಾಜಧರ್ಮ

– ತರುಣ್ ವಿಜಯ್. ಈ ಅಂಕಣವನ್ನು ಬರೆಯುತ್ತಿರುವಾಗ ನನ್ನ ಕಂಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಬರೆಯುವುದಕ್ಕೆ ಕಾಣುತ್ತಿಲ್ಲ ಹಾಗೂ ಕೈ ಚಲಿಸುತ್ತಿಲ್ಲ. ಒಬ್ಬಳು ವಲಸೆ ಕಾರ್ಮಿಕಳ ಚಿತ್ರ ನನ್ನ ಕಣ್ಣಿನಲ್ಲಿದೆ. ಈಕೆ ತುಂಬು ಗರ್ಭಿಣಿ, ಲಾಕ್‌ಡೌನ್‌ ಪರಿಣಾಮ ಉಂಟಾದ ಕೋಲಾಹಲದಲ್ಲಿ ತನ್ನ ಹಳ್ಳಿಗೆ ಮರಳುತ್ತಿದ್ದಳು. ದಾರಿಯಲ್ಲೇ ಹೆರಿಗೆಯಾಯಿತು. ನವಜಾತ ಶಿಶುವಿನ ರಕ್ತವು ಆಕೆಯ ಕಣ್ಣೀರಿನಲ್ಲಿ ಮರೆಯಾಗಿದ್ದಿರಬೇಕು. ಆಕೆ ಕಣ್ಣೀರಿಡುತ್ತಲೇ ತನ್ನ ನೂರ ಅರುವತ್ತು ಕಿಲೋಮೀಟರ್‌ ಪ್ರಯಾಣವನ್ನು ನಡೆದು ಪೂರೈಸಿದಳು. ನಾನು ನೋಡಿದ ಇನ್ನೊಂದು ಚಿತ್ರ ಎಂದರೆ ಎತ್ತಿನ ಬಂಡಿ […]

Read More

ಪರಾವಲಂಬಿ ಕೊರೊನಾ ವೈರಸ್ ಸೋಲಿಸಲು ಸ್ವಾವಲಂಬಿ ಭಾರತ!

-ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ.   2019 ರ ಡಿಸೆಂಬರ್ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ ಕೊರೊನಾ ವೈರಾಣುವಿನ ಹಾವಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಮ್ಯುನಿಸ್ಟ್ ಸರಕಾರ ಸುತ್ತಮುತ್ತಲಿನ ಐದು ನಗರಗಳಲ್ಲಿರುವ 5 ಕೋಟಿ ಜನರಿಗೆ ಊರು ಬಿಟ್ಟು ಹೋಗದಂತೆ ನಿಷೇಧಾಜ್ಞೆ ಹೊರಡಿಸಿತು. ಮನೆ ಬಿಟ್ಟು ಬರದಂತೆ ಕಟ್ಟೆಚ್ಚರ ವಹಿಸಿ, ಅವರ ಮನೆಗಳನ್ನೇ ಹೊರಗಡೆಯಿಂದ ಸೀಲ್ ಮಾಡಿ ಮುಚ್ಚಲಾಯಿತು. ಮನೆಯೊಳಗೆ ಸಿಲುಕಿದವರು ಹೊಟ್ಟೆಗೆ ತಿಂದರೋ ಬಿಟ್ಟರೂ ಲೆಕ್ಕಿಸದೆ ಊರಿಗೆ ಊರನ್ನೇ ನಿರ್ಮಲಗೊಳಿಸಲು 560 ಟನ್ ಸೋಂಕು ನಿವಾರಕ ಕಳಿಸಿ, ವುಹಾನ್‌ನಲ್ಲಿ ವೈರಾಣು ಪಸರಿಸದಂತೆ […]

Read More

ಧ್ವನಿವರ್ಧಕ ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ

– ಡಾ. ಮಲ್ಲಿಕಾರ್ಜುನ ಗುಮ್ಮಗೋಳ. ಅನ್ಯರಿಗೆ ಇರಸುಮುರಸು ಆಗುವ ಧ್ವನಿವರ್ಧಕ ಬಳಕೆಯನ್ನು ಮಸೀದಿಗಳು ನಿಲ್ಲಿಸಬೇಕು ಎಂದು ಲೇಖಕ, ಚಿತ್ರ ಸಾಹಿತಿ ಜಾವೇದ್ ಅಕ್ತರ್ ಟ್ವೀಟ್ ಮಾಡಿದ್ದಾರೆ. ‘‘ಯಾವ ಧರ್ಮವೂ ಧ್ವನಿವರ್ಧಕದ ಮೂಲಕ ಪ್ರಾರ್ಥನೆ ಮಾಡಬೇಕೆಂದು ಪ್ರತಿಪಾದಿಸುವುದಿಲ್ಲ. ಆದ್ದರಿಂದ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಬೇಕು,’’ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೆ ಬಂದಿರುವ ಈ ಟ್ವೀಟ್‌ಗೆ ಹೆಚ್ಚಿನ ಮಹತ್ವವಿದೆ. ಅದೇ ಸಮುದಾಯದ ಮತಧರ್ಮದ ಬಗ್ಗೆ ಹೆಚ್ಚು ತಿಳಿದುಕೊಂಡ ವ್ಯಕ್ತಿ, ಈ ಆಚರಣೆಗಳಲ್ಲಿ ಅರ್ಥವಿಲ್ಲ ಎಂದು ಹೇಳುವುದರಲ್ಲಿ ಅರ್ಥವಿದೆ. ಧಾರ್ಮಿಕ […]

Read More

ದೇಶ ಬಿಡುಗಡೆಗೆ ಹುತಾತ್ಮರಾದ ಚಾಪೇಕರ್

– ಡಾ.ರೋಹಿಣಾಕ್ಷ ಶಿರ್ಲಾಲು.  I am a thorough patriot.I shall relinquish all happiness and sacrifice my life for my country ಎಂದು ತನ್ನ ಬದುಕನ್ನು ರಾಷ್ಟ್ರ ಸಮರ್ಪಿಸಿದ ಧೀರ ದಾಮೋದರ್ ಹರಿ ಚಾಪೇಕರ್. ಒಂದೇ ತಾಯಿಯ ಮೂವರು ಮಕ್ಕಳು ಮಾತೃಭೂಮಿಯ ದಾಸ್ಯ ಮುಕ್ತಿಗಾಗಿ ನಡೆಸಿದ ಕ್ರಾಂತಿಯಜ್ಞಕ್ಕೆ ತಮ್ಮನ್ನು ತಾವೇ ಆಹುತಿ ನೀಡಿದ ಹುತಾತ್ಮರೆಂದರೆ ದಾಮೋದರ್ ಹರಿ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ ಚಾಪೇಕರ್. 1898-1899 ರ ಅವಧಿಯೊಳಗೆ ಮೂರು ಜನ […]

Read More

ಗಿಲ್ಗಿಟ್-ಬಾಲ್ಟಿಸ್ತಾನ್ ಪಾಕ್ ಆಟಕ್ಕೆ, ಭಾರತ ಪಾಠ

ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಪಾಕಿಸ್ತಾನದ ಕ್ರಮಕ್ಕೆ ಭಾರತ ತೀವ್ರ ವಿರೋಧ ಒಡ್ಡಿದೆ. ಆಕ್ರಮಿತ ಪ್ರದೇಶವನ್ನು ತಕ್ಷಣವೇ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಭಾರತ ಇಷ್ಟು ನೇರ ಸಂದೇಶ ನೀಡಿರುವುದು ಇದೇ ಮೊದಲು. ಇತ್ತೀಚೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿ, ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಬಹುದು ಎಂದು 2018ರಲ್ಲಿ ಸರಕಾರ ಮಾಡಿದ್ದ ಸಂವಿಧಾನ ತಿದ್ದುಪಡಿಯನ್ನು ಅನುಮೋದಿಸಿದೆ. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗಿಲ್ಗಿಟ್ […]

Read More

ಸೈಯದ್‌ ಅಕ್ಬರುದ್ದೀನ್‌ ದಿ ಗ್ರೇಟ್‌…

– ರಮೇಶ್‌ ಕುಮಾರ್‌ ನಾಯಕ್‌. ವಿದೇಶಾಂಗ ಇಲಾಖೆಯ ವಕ್ತಾರ ಮತ್ತು ವಿಶ್ವಸಂಸ್ಥೆಯಲ್ಲಿ ಕಾಯಂ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದ ಸೈಯದ್‌ ಅಕ್ಬರುದ್ದೀನ್‌ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ದೇಶದ ಹಿತಾಸಕ್ತಿ ರಕ್ಷ ಣೆಯಲ್ಲಿ ಅವರಿಗಿದ್ದ ಬದ್ಧತೆ ಯುವ ಅಧಿಕಾರಿಗಳಿಗೆ ಮಾದರಿ. ಅದು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರದ ಮೋದಿ ಸರಕಾರ ಕಿತ್ತು ಬಿಸಾಕಿದ ಹೊತ್ತು. ಸುದೀರ್ಘ ಕಾಲದಿಂದ ಚರ್ಚೆಯಲ್ಲಿದ್ದ 370ನೇ ವಿಧಿ ರದ್ದತಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಬೆಳವಣಿಗೆ ಗಡಿಯಾಚೆಗಿನ ಪುಂಡ ದೇಶ ಪಾಕಿಸ್ತಾನದ ಮರ್ಮಾಂಗದ […]

Read More

ಜ್ಞಾನಸೂರ್ಯ, ಅದ್ವಿತೀಯ ಸಂತ ಶಂಕರ

ಇಂದು ಶ್ರೀ ಶಂಕರಾಚಾರ್ಯ ಜಯಂತಿ. – ಸ್ವಾಮಿ ವೀರೇಶಾನಂದ ಸರಸ್ವತೀ, ಅಧ್ಯಕ್ಷರು, ರಾಮಕೃಷ್ಣ-ವಿವೇಕಾನಂದ ಆಶ್ರಮ, ತುಮಕೂರು.  ಭಗವಾನ್‌ ಶ್ರೀ ರಾಮಕೃಷ್ಣರು ಹೇಳುತ್ತಾರೆ: ”ಲೋಕ ಶಿಕ್ಷಣ ಕಾರ್ಯವು ಯಾರೆಂದರೆ ಅವರಿಂದ ಸಾಧ್ಯವಿಲ್ಲ. ಅದಕ್ಕೆ ಜಗನ್ಮಾತೆಯ ಲೈಸೆನ್ಸ್‌ ಬೇಕು. ಅವಳು ಹಿಂದೆ ಶುಕದೇವನಿಗೆ, ನಾರದರಿಗೆ, ಶ್ರೀ ಶಂಕರಾಚಾರ್ಯರಿಗೆ ಲೋಕಶಿಕ್ಷಣಕ್ಕೆ ಲೈಸೆನ್ಸ್‌ ನೀಡಿದ್ದಳು. ಈಗ ನರೇಂದ್ರ(ಮುಂದೆ ಸ್ವಾಮಿ ವಿವೇಕಾನಂದರು)ನಿಗೆ ನೀಡಿದ್ದಾಳೆ…” ಭಾರತೀಯ ದಾರ್ಶನಿಕರಲ್ಲಿ ಮುಕುಟಪ್ರಾಯರು, ವಿಶ್ವದ ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲೊಬ್ಬರೆನಿಸಿದ ಶಂಕರರು ಅನುಭಾವಿ ಸಂತ, ತತ್ತ್ವಜ್ಞಾನಿ, ಭಕ್ತ, ಸಮಾಜ ಸುಧಾರಕ, ಅದ್ಭುತ ಬರಹಗಾರ, […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top