
ನಟ ಪ್ರಕಾಶ್ ರೈ ಮುಂದಿಡುತ್ತಿರುವ ವಾದಗಳ ಕುರಿತು ತದನಂತರದಲ್ಲಿ ಚರ್ಚೆ ಮಾಡೋಣ. ಅದಕ್ಕೂ ಮೊದಲು ಗಮನಿಸಲೇಬೇಕಾದ ಕೆಲ ಸಂಗತಿಗಳಿವೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗ್ರಪ್ರಾಶಸ್ತ್ಯ ಇರುವುದು ನಿಜ. ಆದರೆ ಅದರ ಅರ್ಥ ಯಾರು ಬೇಕಾದರೂ, ಯಾರ ವಿರುದ್ಧ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ಅಂತಲ್ಲ. ಬಾಯಿಗೆ ಬಂದಂತೆ ಮಾತನಾಡಿದರೆ ಟಿವಿ ಚಾನೆಲ್ಗಳಿಗೆ ಆಹಾರ ಆಗಬಹುದೇ ಹೊರತು ಆಡಿದವನ ವ್ಯಕ್ತಿತ್ವವೇನೂ ಅರೆಕ್ಷಣದಲ್ಲಿ ಹಿಮಾಲಯದ ಎತ್ತರಕ್ಕೆ ಏರುವುದಿಲ್ಲ. ಇತಿಹಾಸ, ಪರಂಪರೆ ಬದಲಾಗಿಹೋಗುವುದಿಲ್ಲ. ಜನರು ನಂಬಿ ಅನುಸರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು […]