
ಭಾರತ ಜತೆ ನೇರವಾಗಿ ಮುಖಾಮುಖಿಯಾಗದ ಚೀನಾ ದೇಶವು ನೇಪಾಳ, ಪಾಕಿಸ್ತಾನಗಳ ಮೂಲಕ ಗಡಿಯಲ್ಲಿ ತಂಟೆಯನ್ನು ಜೀವಂತವಾಗಿಟ್ಟಿರುತ್ತದೆ. ಭಾರತದಲ್ಲಿರುವ ಗಡಿಗಳನ್ನು ತನ್ನದೆಂದು ನೇಪಾಳ ಹೊಸ ನಕಾಶೆಯನ್ನು ಬಿಡುಗಡೆ ಮಾಡಿದ್ದು, ಈ ನಡೆಯ ಹಿಂದೆ ಚೀನಾದ ಕುಮ್ಮಕ್ಕಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಭಾರತದ ಗಡಿಯಲ್ಲಿರುವ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರಾ ಪ್ರದೇಶಗಳನ್ನು ತನ್ನದೆಂದು ಸಾಬೀತುಪಡಿಸಲು ಈ ಪ್ರದೇಶಗಳನ್ನು ಒಳಗೊಂಡ ಹೊಸ ರಾಜಕೀಯ ನಕಾಶೆಯನ್ನು ನೇಪಾಳ ಬಿಡುಗಡೆ ಮಾಡಿದೆ. ಈ ಮೂಲಕ ಭಾರತ ಮತ್ತು ನೇಪಾಳ ಮಧ್ಯೆ ಗಡಿ ಸಮಸ್ಯೆ ತಲೆದೋರಿದೆ. […]